ಹಳ್ಳಿಯಲ್ಲೇ ಇದ್ದುಕೊಂಡು ಈ ಬ್ಯುಸಿನೆಸ್ ಶುರು ಮಾಡಿ! ಸೂಪರ್ ಲಾಭ ಗಳಿಸೋ ಬ್ಯುಸಿನೆಸ್ ಇದು

ಉತ್ತಮವಾದ ಲಾಭ ಗಳಿಸುವಂಥ ಬ್ಯುಸಿನೆಸ್ ಐಡಿಯಾಗಳನ್ನು ಇಂದು ತಿಳಿಸಿಕೊಡುತ್ತೇವೆ, ಈ ಬ್ಯುಸಿನೆಸ್ ಅನ್ನು ನೀವಿರುವ ಹಳ್ಳಿಗಳಲ್ಲಿ ಶುರು ಮಾಡಿದರೆ, ಸೂಪರ್ ಲಾಭ ಗಳಿಸೋದು ಗ್ಯಾರೆಂಟಿ

Bengaluru, Karnataka, India
Edited By: Satish Raj Goravigere

Business Idea : ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಲು ಬಯಸದ ಜನರು ತಮ್ಮದೇ ಆದ ಸ್ವಂತ ಉದ್ಯಮ ಶುರು ಮಾಡುವ ಕನಸು ಹೊಂದಿರುತ್ತಾರೆ. ಹಲವರು ಬ್ಯುಸಿನೆಸ್ ನಲ್ಲಿ ಲಾಭ ಮಾಡಲು ಸಿಟಿಯಲ್ಲಿ ಶುರು ಮಾಡಿದರೆ ಒಳ್ಳೆಯದು ಎಂದುಕೊಳ್ಳುತ್ತಾರೆ.

ಆದರೆ ನೀವು ಹಳ್ಳಿಯಲ್ಲೇ ಇದ್ದುಕೊಂಡು, ಬ್ಯುಸಿನೆಸ್ ಶುರು (Own Business) ಮಾಡಿ, ಉತ್ತಮವಾದ ಲಾಭ ಗಳಿಸುವಂಥ ಬ್ಯುಸಿನೆಸ್ ಐಡಿಯಾಗಳನ್ನು ಇಂದು ತಿಳಿಸಿಕೊಡುತ್ತೇವೆ, ಈ ಬ್ಯುಸಿನೆಸ್ ಅನ್ನು ನೀವಿರುವ ಹಳ್ಳಿಗಳಲ್ಲಿ ಶುರು ಮಾಡಿದರೆ, ಸೂಪರ್ ಲಾಭ ಗಳಿಸೋದು ಗ್ಯಾರೆಂಟಿ..

Best business plans that can earn good profits

1. ಚಹಾ ಅಂಗಡಿ ಬ್ಯುಸಿನೆಸ್: ಇದೊಂದು ರೀತಿ ಎವರ್ ಗ್ರೀನ್ ಬ್ಯುಸಿನೆಸ್ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಟೀ ಕಾಫಿ ಕುಡಿಯುವ ಅಭ್ಯಾಸ ಇರುವ ಬಹಳಷ್ಟು ಜನರು ಹಳ್ಳಿಯಲ್ಲಿ ಕೂಡ ಇರುತ್ತಾರೆ.

ಅಂಥವರು ಅಂಗಡಿಗೆ ಯಾವಾಗಲೂ ಬರುತ್ತಾರೆ. ಜನಸಂದಣಿ ಇರುವ ಕಡೆ ಟೀ ಅಂಗಡಿ ಶುರು ಮಾಡಿದರೆ, ಪ್ರತಿದಿನ ಉತ್ತಮವಾಗಿ ಹಣ ಸಂಪಾದನೆ ಮಾಡಬಹುದು. ಇದು ಲಾಭದಾಯಕ ಬ್ಯುಸಿನೆಸ್ ಆಗಿದ್ದು, ಹಳ್ಳಿಗಳಲ್ಲಿ ಕೂಡ ಒಳ್ಳೆಯ ಆಯ್ಕೆ ಆಗಿದೆ.

ಬೇಕರಿ ಬ್ಯುಸಿನೆಸ್ ಪ್ರಾರಂಭ ಮಾಡೋಕೆ ಉತ್ತಮ ಅವಕಾಶ! ಸಿಗಲಿದೆ ತರಬೇತಿ ಜೊತೆಗೆ ಲೋನ್ ಸೌಲಭ್ಯ

2. ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟ ಅಂಗಡಿ: ಹಳ್ಳಿಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಸಿಗುವ ಅಂಗಡಿ ಇರುವುದು ಕಡಿಮೆ, ಹಾಗಾಗಿ ಹಳ್ಳಿಗಳಲ್ಲಿ ಈ ಒಂದು ಬ್ಯುಸಿನೆಸ್ ಶುರು ಮಾಡುವುದು ಕೂಡ ಲಾಭದಾಯಕ.

ಉತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ (Electronics) ಉಪಕರಣಗಳನ್ನು ತಂದು, ಅಂಗಡಿ ಶುರು ಮಾಡಿ, ಮಾರಾಟ ಶುರು ಮಾಡಿದರೆ, ಮನೆಗೆ ಬೇಕಾಗಿರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡುಕೊಳ್ಳಲು ಸಿಟಿಗೆ ಹೋಗುವ ಕೆಲಸ ಜನರಿಗೂ ತಪ್ಪುತ್ತದೆ. ಉತ್ತಮವಾಗಿ ಲಾಭದಾಯಕವಾಗಿ ಹಣ ಸಂಪಾದನೆ ಮಾಡಬಹುದು.

3. ಆನ್ಲೈನ್ ಸರ್ವಿಸ್ ಸೆಂಟರ್: ಹಳ್ಳಿಯ ಜನರು ಅಥವಾ ಹಳ್ಳಿಯಲ್ಲಿರುವ ವಿದ್ಯಾರ್ಥಿಗಳು ಯಾವುದಾದರೂ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಅಥವಾ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದಕ್ಕೆ ಅಲ್ಲಿ ಆನ್ಲೈನ್ ಸರ್ವಿಸ್ ಸೆಂಟರ್ ಗಳು ಇರುವುದಿಲ್ಲ.

ಹಾಗಾಗಿ ಈ ಬ್ಯುಸಿನೆಸ್ ಶುರು (Start Business) ಮಾಡಬಹುದು. ಒಂದು ಅಪ್ಲಿಕೇಶನ್ ಹಾಕಲು 50 ರಿಂದ 100 ರೂಪಾಯಿ ಚಾರ್ಜ್ ಮಾಡಬಹುದು. ನಿಮಗೆ ರೆಗ್ಯುಲರ್ ಆಗಿ ಒಂದಷ್ಟು ಜನ ಗ್ರಾಹಕರು ಸಿಕ್ಕರೆ ತಿಂಗಳಿಗೆ 20 ರಿಂದ 30 ಸಾವಿರ ಸಂಪಾದನೆ ಆಗೋದು ಗ್ಯಾರೆಂಟಿ.

ಕೇವಲ 5 ನಿಮಿಷಗಳಲ್ಲಿ ಸಿಗಲಿದೆ 1 ಲಕ್ಷ ತನಕ ಸಾಲ! ಫೋನ್ ಪೇ ಬಳಕೆದಾರರಿಗೆ ಬಂಪರ್ ಕೊಡುಗೆ

4. ಫಾಸ್ಟ್ ಫುಡ್: ಈಗ ಹಳ್ಳಿಯ ಜನರು ಕೂಡ ಫಾಸ್ಟ್ ಫುಡ್ ಇಷ್ಟಪಡುವುದಕ್ಕೆ ಶುರು ಮಾಡಿದ್ದಾರೆ. ಹಾಗಾಗಿ ಹಳ್ಳಿಯಲ್ಲಿ 5 ರಿಂದ 10 ಸಾವಿರ ಹೂಡಿಕೆ ಮಾಡಿ ಒಂದು ಸಣ್ಣ ಕಾರ್ಟ್ ನಲ್ಲಿ ಫಾಸ್ಟ್ ಫುಡ್ ಬ್ಯುಸಿನೆಸ್ (Fast Food Business) ಶುರು ಮಾಡಬಹುದು.

ಬರ್ಗರ್, ಚೌಮೀನ್, ಮೊಮೋಸ್, ಪಾನಿ ಪುರಿ ಈ ರೀತಿಯ ವಿವಿಧ ತಿನಿಸುಗಳನ್ನು ರುಚಿಕರವಾಗಿ ತಯಾರಿಸಿದರೆ, ಹೆಚ್ಚಿನ ಜನರು ಕೊಂಡುಕೊಳ್ಳುತ್ತಾರೆ. ಹಾಗಾಗಿ ನೀವು ಹಳ್ಳಿಯಲ್ಲಿ ಬ್ಯುಸಿನೆಸ್ ಶುರು ಮಾಡುವುದಕ್ಕೆ ಇದು ಕೂಡ ಒಂದು ಉತ್ತಮವಾದ ಆಯ್ಕೆ ಆಗಿದೆ.

Best business plans that can earn good profits