7 ಲಕ್ಷದೊಳಗಿನ ಅತ್ಯುತ್ತಮ ಸಿಎನ್‌ಜಿ ಕಾರುಗಳು! 34 ಕಿ.ಮೀ ಪಕ್ಕ ಮೈಲೇಜ್
ಬೆಲೆ ಏರುತ್ತಿರುವ ಇಂಧನದ ದರದ ಮಧ್ಯೆ, ಉತ್ತಮ ಮೈಲೆಜ್ ನೀಡುವ ₹7 ಲಕ್ಷದೊಳಗಿನ CNG ಕಾರುಗಳು ನಿಮ್ಮ ಬಜೆಟ್‌ಗೆ ತಕ್ಕಂತೆ ಉತ್ತಮ ಆಯ್ಕೆಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

- CNG ಕಾರುಗಳು ಕಡಿಮೆ ದರದಲ್ಲಿ ಉತ್ತಮ ಮೈಲೇಜ್ ನೀಡುತ್ತವೆ
- ಎಲೆಕ್ಟ್ರಿಕ್ ಕಾರುಗಳಿಗಿಂತ ಸುಲಭವಾಗಿ ಖರೀದಿಸಬಹುದಾದ ಆಯ್ಕೆ
- ₹7 ಲಕ್ಷದೊಳಗೆ ಟಾಟಾ, ಮರುತಿಯಿಂದ ಉತ್ತಮ CNG ಕಾರುಗಳು
budget-friendly CNG Cars : ಇಂಧನ ದರಗಳು ದಿನೇ ದಿನೇ ಏರುತ್ತಿರುವ ಈ ಕಾಲದಲ್ಲಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರು ಬೇಕಾ? CNG ಕಾರುಗಳು ನಿಮಗೊಂದು ಸೂಕ್ತ ಆಯ್ಕೆಯಾಗಬಹುದು.
ಎಲೆಕ್ಟ್ರಿಕ್ ಕಾರುಗಳು ಭಾರಿ ಬೆಲೆಯ ಕಾರಣ ಎಲ್ಲರಿಗೂ ಎಲ್ಲರೂ ಖರೀದಿಸಲು ಸಾಧ್ಯವಿಲ್ಲ. ಆದರೆ, CNG ಕಾರುಗಳು ಸುಲಭ ಬೆಲೆಗೆ ದೊರೆಯುತ್ತವೆ ಮತ್ತು ಪೆಟ್ರೋಲ್, ಡೀಸೆಲ್ ಗೆ ಹೋಲಿಸಿದರೆ ಉತ್ತಮ ಮೈಲೇಜ್ (Best mileage Cars) ನೀಡುತ್ತವೆ.
ಭಾರತದಲ್ಲಿ ಈಗ CNG ಕಾರುಗಳ ಬೇಡಿಕೆ ಹೆಚ್ಚುತ್ತಿದೆ. ಪ್ರತಿದಿನ 50 ಕಿಮೀ ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಸುವವರಿಗೆ ಇದು ಸೂಕ್ತ ಆಯ್ಕೆಯಾಗಲಿದೆ. ಬಜೆಟ್ ಸೆಗ್ಮೆಂಟ್‌ನಿಂದ ಪ್ರೀಮಿಯಂ ಸೆಗ್ಮೆಂಟ್ ವರೆಗೆ ಹಲವು ಆಯ್ಕೆಗಳಿವೆ. ಈ ಲೇಖನದಲ್ಲಿ, ₹7 ಲಕ್ಷದೊಳಗೆ ನೀವು ಖರೀದಿಸಬಹುದಾದ ಮೂರು ಜನಪ್ರಿಯ CNG ಕಾರುಗಳ ಬಗ್ಗೆ ನೋಡೋಣ.
₹7 ಲಕ್ಷದೊಳಗಿನ ಅತ್ಯುತ್ತಮ ಮೈಲೆಜ್ ನೀಡುವ ಕಾರುಗಳಿಗಾಗಿ ಕಾಯುತ್ತಿದ್ದೀರಾ? ಇಲ್ಲಿವೆ ನಿಮ್ಮ ಬಜೆಟ್‌ಗೆ ತಕ್ಕ ಮೂರು ಆಕರ್ಷಕ ಆಯ್ಕೆಗಳು.
ಇದನ್ನೂ ಓದಿ: ಮಿಡಲ್ ಕ್ಲಾಸ್ ಫ್ಯಾಮಿಲಿಗಳಿಗೆ ಇವು ಬೆಸ್ಟ್ ಕಾರುಗಳು, ಬೆಲೆ ಕೂಡ ಕಡಿಮೆ!
ಟಾಟಾ ಟಿಯಾಗೋ CNG:
Tata Tiago CNG : ಟಾಟಾ ಟಿಯಾಗೋ CNG ಉತ್ತಮ ಆಯ್ಕೆಯಾಗಬಹುದು. ಇದು 1.2-ಲೀಟರ್ ಇಂಜಿನ್ ಹೊಂದಿದ್ದು, CNG ಮೋಡ್‌ನಲ್ಲಿ 73 HP ಪವರ್ ಮತ್ತು 95 Nm ಟಾರ್ಕ್ ಉತ್ಪತ್ತಿ ಮಾಡುತ್ತದೆ. 5-ಸ್ಪೀಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಹೊಂದಿರುವ ಈ ಕಾರು, ಪ್ರತಿ ಕೆ.ಜಿ. CNG ಗೆ 27 ಕಿಮೀ ಮೈಲೇಜ್ ನೀಡುತ್ತದೆ. ಇದರ ಎಕ್ಸ್-ಶೋ ರೂಂ ಪ್ರಾರಂಭಿಕ ಬೆಲೆ ₹5.65 ಲಕ್ಷ.
ಮಾರುತಿ ಸೆಲೆರಿಯೊ CNG:
Maruti Celerio CNG : ಇದು 1.0-ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿರುವ ಬಹುಜನಪ್ರಿಯ CNG ಕಾರು. CNG ಮೋಡ್‌ನಲ್ಲಿ ಪ್ರತಿ ಕೆ.ಜಿ. ಗೆ 34.43 ಕಿಮೀ ಮೈಲೇಜ್ ನೀಡುತ್ತದೆ. ಕಾರಿನ ಒಳಾಂಗಣ ವಿಶಾಲವಾಗಿದೆ ಮತ್ತು ಐದು ಮಂದಿ ಸುಲಭವಾಗಿ ಕುಳಿತುಕೊಳ್ಳಬಹುದು. ಸುರಕ್ಷತೆಗೆ ABS, EBD, ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಇದರ ಪ್ರಾರಂಭಿಕ ಬೆಲೆ ₹5.64 ಲಕ್ಷ.
ಇದನ್ನೂ ಓದಿ: ಮಧ್ಯಮ ವರ್ಗದ ಜನರಿಗಾಗಿ ಬಂತು ಬೆಸ್ಟ್ ಬಜೆಟ್ ಬೈಕ್ ಹೋಂಡಾ ಶೈನ್ 125
ಮಾರುತಿ ವ್ಯಾಗನ್‌ಆರ್ CNG:
Maruti WagonR CNG : ಮರುತಿಯ ವ್ಯಾಗನ್‌ಆರ್ ಕಾರು ಎಲ್ಲಾ ಕುಟುಂಬಗಳ ಪ್ರಿಯ ಆಯ್ಕೆ! ದೊಡ್ಡ ಒಳಾಂಗಣ ಹಾಗೂ ಉತ್ತಮ ಮೈಲೇಜ್ ನೀಡುವ ಈ ಕಾರು 1.0-ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದೆ. CNG ಮೋಡ್‌ನಲ್ಲಿ 34 ಕಿಮೀ/ಕೆ.ಜಿ. ಮೈಲೇಜ್ ನೀಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ABS, EBD, ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ. ಇದರ ಪ್ರಾರಂಭಿಕ ಬೆಲೆ ₹6.54 ಲಕ್ಷ.
CNG ಕಾರುಗಳು ಯಾಕೆ ಉತ್ತಮ?
CNG ಕಾರುಗಳು ಪೆಟ್ರೋಲ್, ಡೀಸೆಲ್ ಗೆ ಹೋಲಿಸಿದರೆ ಕಡಿಮೆ ಮಾಲಿನ್ಯ ಉತ್ಪತ್ತಿ ಮಾಡುತ್ತವೆ. ಇದರೊಂದಿಗೆ, ಇಂಧನದಲ್ಲಿ ಉಳಿತಾಯ ಮಾಡಬಹುದು. ದೈನಂದಿನ ಪ್ರಯಾಣಕ್ಕೆ ಪರಿಪೂರ್ಣವಾದ ಈ ಕಾರುಗಳು ಬಜೆಟ್ ಸ್ನೇಹಿಯಾಗಿವೆ.
ಇದನ್ನೂ ಓದಿ: ಕವಾಸಾಕಿ ಸ್ಪೋರ್ಟ್‌ಬೈಕ್ ಮೇಲೆ 45,000 ಭರ್ಜರಿ ಡಿಸ್ಕೌಂಟ್! ಫೆ. 28ಕ್ಕೆ ಆಫರ್ ಕೊನೆ
ದೈನಂದಿನ ಪ್ರಯಾಣ ಹೆಚ್ಚು ಇರುವವರು, ಅಥವಾ ಕಡಿಮೆ ಖರ್ಚಿನಲ್ಲಿ ಹೆಚ್ಚು ಮೈಲೆಜ್ ಬಯಸುವವರು ಈ CNG ಕಾರುಗಳನ್ನು ಪರಿಗಣಿಸಬಹುದು. ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯ ನಡುವೆ, CNG ಕಾರುಗಳು ಪರಿಸರ ಸ್ನೇಹಿ ಆಯ್ಕೆಯೂ ಹೌದು. ಬಜೆಟ್ ಪ್ರಿಯರೇ, ಈ ಕಾರುಗಳಲ್ಲಿ ಒಂದನ್ನು ಮನೆಯತ್ತ ಓಡಿಸೋ ಸಮಯವಾಯ್ತು ಅಲ್ವಾ?
Best CNG Cars Under 7 Lakh with 34 km Mileage






