ಪೈಸಾ ವಸೂಲ್! ಕೇವಲ 198ಕ್ಕೆ 40 ದಿನಗಳ ವ್ಯಾಲಿಡಿಟಿ ಮತ್ತು ಪ್ರತಿದಿನ 2GB ಡೇಟಾ - Recharge Plans
ಜಿಯೋ, ಏರ್‌ಟೆಲ್, ವಿಐ ಮತ್ತು ಬಿಎಸ್‌ಎನ್‌ಎಲ್‌ನ 2GB ಡೇಟಾ ಪ್ಲಾನ್‌ಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಕೆಲ ಪ್ಯಾಕ್‌ಗಳು 40 ದಿನಗಳ ವಾಲಿಡಿಟಿ ಹೊಂದಿದ್ದು ಸಂಪೂರ್ಣ ಪೈಸಾ ವಸೂಲ್ ಯೋಜನೆಗಳಾಗಿವೆ
- ಜಿಯೋ ₹198 ರಿಚಾರ್ಜ್ ಪ್ಲಾನ್‌ಗೆ 2GB ಡೇಟಾ
- ಬಿಎಸ್‌ಎನ್‌ಎಲ್ ಪ್ಲಾನ್‌ಗೆ 40 ದಿನಗಳ ವಾಲಿಡಿಟಿ
- ಏರ್‌ಟೆಲ್, ವಿಐ 5G ಡೇಟಾ, OTT ಹಾಗೂ AI ಸಬ್ಸ್ಕ್ರಿಪ್ಶನ್
Recharge Plans: ಡೇಟಾ ಉಪಯೋಗ ಹೆಚ್ಚಾದ ಈ ಕಾಲದಲ್ಲಿ ಪ್ರತಿದಿನವೂ 2GB ಡೇಟಾ ಬೇಕಾದವರಿಗಾಗಿ ಜಿಯೋ, ಏರ್‌ಟೆಲ್, ವಿಐ ಮತ್ತು ಬಿಎಸ್‌ಎನ್‌ಎಲ್ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಪ್ಲಾನ್‌ಗಳನ್ನು (Prepaid Recharge) ನೀಡುತ್ತಿವೆ. ₹200 ರ ಒಳಗಿನ ಪ್ಲಾನ್ ಕೂಡ ಇದರಲ್ಲಿ ಇದೆ.
BSNL : ಬಿಎಸ್‌ಎನ್‌ಎಲ್ ₹198 ಪ್ಲಾನ್ ಅತ್ಯಂತ ಮಿತ ಖರ್ಚಿನ ಪ್ಲಾನ್ ಆಗಿದ್ದು, ಇದು ಪೂರ್ಣ 40 ದಿನಗಳ ವಾಲಿಡಿಟಿ ಹೊಂದಿದೆ. ಇದೊಂದು ಡೇಟಾ ಪ್ಲಾನ್ ಆಗಿದ್ದು, ವಾಯ್ಸ್ ಕಾಲ್ ಅಥವಾ SMS ಸೌಲಭ್ಯ ಇಲ್ಲ. ದಿನದ 2GB ಲಿಮಿಟ್ ಮುಗಿದ ನಂತರವೂ 40Kbps ವೇಗದಲ್ಲಿ ಡೇಟಾ ಬಳಸಬಹುದು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಸ್ಕೀಮ್, ತಿಂಗಳಿಗೆ ₹5000 ಪೆನ್ಷನ್! ನೀವೂ ಕೂಡ ಅಪ್ಲೈ ಮಾಡಿ
Jio : ಜಿಯೋ ₹198 ಪ್ಯಾಕ್ 14 ದಿನಗಳ ವಾಲಿಡಿಟಿಯೊಂದಿಗೆ ಬರುತ್ತದೆ. ದಿನಕ್ಕೆ 2GB ಡೇಟಾ, 100 SMS ಹಾಗೂ ಅನ್‌ಲಿಮಿಟೆಡ್ ಕಾಲ್ ಸೌಲಭ್ಯ ಇದೆ. ಜೊತೆಗೆ ಜಿಯೋ ಟಿವಿ, ಕ್ಲೌಡ್ ಮತ್ತು 5G ಡೇಟಾ ಕೂಡ ಲಭ್ಯ.
Vodafone : ವೋಡಾಫೋನ್ ಐಡಿಯಾ (Vi) ₹365 ಪ್ಲಾನ್‌ನ್ನು 28 ದಿನಗಳ ವಾಲಿಡಿಟಿಗೆ ನೀಡುತ್ತಿದೆ. 2GB ಡೇಟಾ ಜೊತೆಗೆ, ವಾರಾಂತ್ಯ ಡೇಟಾ ರೋಲ್ಓವರ್, ಹಾಫ್ ಡೇ ಅನ್‌ಲಿಮಿಟೆಡ್ ಡೇಟಾ ಮತ್ತು ಡೇಟಾ ಡಿಲೈಟ್ ಆಯ್ಕೆಗಳು ಇವೆ.
ವಿಐ ₹379 ಪ್ಲಾನ್ 1 ತಿಂಗಳ ವಾಲಿಡಿಟಿಯೊಂದಿಗೆ ಬರುತ್ತದೆ. ಹೀಗೇ ಎಲ್ಲಾ ಅನ್‌ಲಿಮಿಟೆಡ್ ಸೌಲಭ್ಯಗಳೊಂದಿಗೆ ಇದು ಇನ್ನೊಂದು ಉತ್ತಮ ಆಯ್ಕೆ.
ಜಿಯೋ ₹349 ಪ್ಲಾನ್ ಕೂಡ 2GB ಡೇಟಾ ಪ್ಲಾನ್ ಆಗಿದ್ದು, 28 ದಿನಗಳ ವಾಲಿಡಿಟಿ ಇದೆ. ಜಿಯೋ ಟಿವಿ, ಹಾಟ್‌ಸ್ಟಾರ್, ಕ್ಲೌಡ್ ಸೇವೆಗಳು ಮತ್ತು 5G ಡೇಟಾ ಕೂಡ ಇದರಲ್ಲಿ ಲಭ್ಯ.
ಇದನ್ನೂ ಓದಿ: 500 ರೂಪಾಯಿ ನೋಟುಗಳು ರದ್ದಾಗುತ್ತಾ? ಸರ್ಕಾರದಿಂದ ಮಹತ್ವದ ಅಪ್‌ಡೇಟ್
Airtel : ಏರ್‌ಟೆಲ್ ₹379 ರಿಚಾರ್ಜ್ ಪ್ಲಾನ್‌ನೊಂದಿಗೆ 2GB ಡೇಟಾ, 100 SMS ಪ್ರತಿದಿನ, ಅನ್‌ಲಿಮಿಟೆಡ್ ಕಾಲಿಂಗ್ ಹಾಗೂ ಹಲವಾರು ಬೋನಸ್ ಸೌಲಭ್ಯಗಳಿವೆ. ಇದರಲ್ಲಿ AI ಸಬ್ಸ್ಕ್ರಿಪ್ಶನ್, ಸ್ಪ್ಯಾಮ್ SMS ಅಲರ್ಟ್, ಎಕ್ಸ್‌ಟ್ರೀಮ್ ಆ್ಯಪ್ ಆಕ್ಸೆಸ್, ಫ್ರೀ ಟ್ಯೂನ್‌ಗಳು ಇವೆ.
ಇನ್ನು ₹398 ಏರ್‌ಟೆಲ್ ಪ್ಲಾನ್‌ನಲ್ಲಿ ಕೂಡ 28 ದಿನಗಳವರೆಗೆ ಡೇಟಾ, SMS, ಹಾಟ್‌ಸ್ಟಾರ್, 5G, AI ಪ್ಲಸ್ ಟ್ಯೂನ್‌ಗಳು ಲಭ್ಯವಿವೆ. ಖರ್ಚು ಕಡಿಮೆ, ಬದ್ಲಾಗಿ ಲಾಭ ಹೆಚ್ಚಾಗೋಂತಹ ಈ ಪ್ಲಾನ್‌ಗಳು ಎಲ್ಲರಿಗೂ ಉಪಯುಕ್ತ.
ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.
Best Daily 2GB Data Recharge Plans



