ನಮ್ಮದಲ್ಲ ಅಂತ ಕೇವಲ ಸಾವಿರ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ ಭರ್ಜರಿ ಪಿಂಚಣಿ; ಸರ್ಕಾರದ ಹೊಸ ಯೋಜನೆ

ಹಿರಿಯ ನಾಗರಿಕರು (Senior Citizen) ತಮ್ಮ ವೃದ್ಧಾಪ್ಯ ಜೀವನವನ್ನು ಆರ್ಥಿಕವಾಗಿ ಸದೃಢವಾಗಿಸಿಕೊಳ್ಳಬೇಕು ಎಂದು ಸರ್ಕಾರ ಹಲವಾರು ಯೋಜನೆಗಳನ್ನು (Government Scheme) ಜಾರಿಗೆ ತರುತ್ತಿದೆ.

ಅಂತಹ ಯೋಜನೆಗಳಲ್ಲಿ ಪಿಂಚಣಿ ಯೋಜನೆ (Pension Scheme) ಕೂಡ ಒಂದು. ಕೆಲವೊಂದು ಯೋಜನೆಗಳಿಗೆ ಹೂಡಿಕೆ ಮಾಡುವುದು ಬೇಡ ಹಾಗೆಯೇ ಪಿಂಚಣಿ ಸಿಗುತ್ತದೆ.

ಇನ್ನು ಕೆಲವು ಯೋಜನೆಗಳು ಅತಿ ಕಡಿಮೆ ಹೂಡಿಕೆಯಿಂದ ಹೆಚ್ಚು ಪಿಂಚಣಿ ಸಿಗುವಂತೆ ಮಾಡುತ್ತವೆ. ಅಂತಹ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ಸಹಾಯಕವಾಗುವಂತಹ ಕೆಲವು ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಬರೋಬ್ಬರಿ 34km ಮೈಲೇಜ್ ಕೊಡುವ ಈ ಕಾರ್ ಗೆ ಭಾರಿ ಡಿಮ್ಯಾಂಡ್! ಷೋರೂಮ್ ಮುಂದೆ ಜನಸಂದಣಿ

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಸಣ್ಣ ಉಳಿತಾಯ (Small Investment) ಯೋಜನೆಯಲ್ಲಿ ಹೂಡಿಕೆ ಮಾಡಬಹುದು ನೀವು ಎಷ್ಟು ಹಣ ಹೂಡಿಕೆ ಮಾಡುತ್ತೀರಿ ಎನ್ನುವುದರ ಮೇಲೆ ನಿಯಮಿತ ಬಡ್ಡಿಯನ್ನು ಕೂಡ ನೀಡಲಾಗುತ್ತದೆ.

ಈ ಹೂಡಿಕೆ ಮಾರ್ಚ್ 31, ಜೂನ್ 30, ಸೆಪ್ಟೆಂಬರ್ 30 ಹಾಗೂ ಡಿಸೆಂಬರ್ 31 ಈ ರೀತಿ ತ್ರೈಮಾಸಿಕವಾಗಿ ಬಡ್ಡಿ ಅನ್ವಯವಾಗುತ್ತದೆ, ಐದು ವರ್ಷಗಳ ವರೆಗೆ ನೀವು ಇದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು.

ಕನಿಷ್ಠ ಸಾವಿರ ರೂಪಾಯಿಗಳನ್ನು ಠೇವಣಿ ಇಡಬಹುದು. ಗರಿಷ್ಠ ಮಿತಿ 30 ಲಕ್ಷ ರೂಪಾಯಿಗಳು. ಹಿರಿಯ ನಾಗರಿಕರು ತನ್ನ ಸಂಗಾತಿಯ ಜೊತೆಗೆ ಜಂಟಿಯಾಗಿ ಖಾತೆ (Joint Account) ತೆರೆಯಬಹುದು.

ರಾಕೆಟ್ ವೇಗದಲ್ಲಿ ಚಿನ್ನದ ಬೆಲೆ ಇಳಿಕೆ, ಹಬ್ಬಕ್ಕೆ ಖರೀದಿ ಜೋರು! ತಗ್ಗಿದ ಚಿನ್ನ ಮತ್ತು ಬೆಳ್ಳಿ ಬೆಲೆ

ಒಂದು ಲಕ್ಷಕ್ಕಿಂತ ಹೆಚ್ಚು ಠೇವಣಿ ಇಟ್ಟರೆ ಚೆಕ್ ಮೂಲಕ ಬ್ಯಾಂಕ್ ನಲ್ಲಿ ನಿಮ್ಮ ಡೆಪಾಸಿಟ್ (Deposit) ತೆಗೆದುಕೊಳ್ಳಲಾಗುತ್ತದೆ. ಯೋಜನೆ ಮೆಚೂರ್ ಆದ ನಂತರ ಉತ್ತಮ ಪಿಂಚಣಿ ಮೊತ್ತ ಪಡೆಯಬಹುದು, ಅಷ್ಟೇ ಅಲ್ಲದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಈ ಯೋಜನೆಯಲ್ಲಿ ಲಭ್ಯ.

ಪೋಸ್ಟ್ ಆಫೀಸ್ನ ಮಾಸಿಕ ಆದಾಯ ಯೋಜನೆ (POMIS)

Best Monthly Pension Schemes for Senior Citizen from Post Office to Fixed Depositಇದು ಕೂಡ ಸಣ್ಣ ಉಳಿತಾಯ ಯೋಜನೆ ಆಗಿದ್ದು ಪೋಸ್ಟ್ ಆಫೀಸ್ನಲ್ಲಿ (Post Office Scheme) ನೀವು ಗರಿಷ್ಠ 9 ಲಕ್ಷದವರೆಗೂ ಕೂಡ ಹೂಡಿಕೆ ಮಾಡಬಹುದು, ಇಲ್ಲಿ ಹೂಡಿಕೆ (Investment) ಮಾಡಿದರೆ ನಿಮಗೆ ಪ್ರತಿ ತಿಂಗಳು ಪಿಂಚಣಿ ಲೆಕ್ಕದಲ್ಲಿ ಹಣ ಪಡೆದುಕೊಳ್ಳಬಹುದು.

ಉತ್ತಮ ಬಡ್ಡಿ (Interest) ನೀಡಲಾಗುತ್ತದೆ. ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಸಿಗುವ ಬಡ್ಡಿಯ ಮೊತ್ತಕ್ಕೆ ತೆರಿಗೆ ಪಾವತಿಸಬೇಕು ಆದರೆ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಲು ಇದು ಅತ್ಯುತ್ತಮವಾದ ಆಯ್ಕೆ ಆಗಿದೆ. ಹೂಡಿಕೆ ಮಾಡಬಹುದು ಈಗ ಮೊತ್ತವನ್ನು 15 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ.

ಇಂತಹವರ ಬ್ಯಾಂಕ್ ಖಾತೆ ಶಾಶ್ವತವಾಗಿ ನಿಷ್ಕ್ರಿಯ, ಈ ಕೂಡಲೇ ಈ ಕೆಲಸ ಮಾಡಿ! ಹೊಸ ಆದೇಶ ಜಾರಿ

ಸ್ಥಿರ ಠೇವಣಿ (Fixed Deposit)

ಹಿರಿಯ ನಾಗರಿಕರು ತಾವು ದುಡಿದ ಹಣವನ್ನು ಸ್ಥಿರ ಠೇವಣಿಯ (Fixed Deposit) ಮೇಲೆ ಹೂಡಿಕೆ ಮಾಡಬಹುದು, ಇದರಿಂದ ಉತ್ತಮ ಬಡ್ಡಿ ಕೂಡ ಸಿಗುತ್ತದೆ ಮಾಸಿಕ, ತ್ರೈಮಾಸಿಕ, ಅರ್ದ ವಾರ್ಷಿಕ ಹಾಗೂ ವಾರ್ಷಿಕ ಬಡ್ಡಿ ದರ ನಿಗದಿಯಾಗುತ್ತದೆ.

ಹಿರಿಯ ನಾಗರಿಕರು 9% ವರೆಗೂ ಎಫ್ ಡಿ ಮೇಲೆ ಬಡ್ಡಿ ಪಡೆದುಕೊಳ್ಳಬಹುದು. ಐದು ವರ್ಷಗಳಿಗೆ ಮುಕ್ತಾಯವಾಗುವ ಈ ಯೋಜನೆಯಲ್ಲಿ ಗರಿಷ್ಠ ಎಷ್ಟು ಹಣವನ್ನು ಬೇಕಾದರೂ ಹೂಡಿಕೆ ಮಾಡಬಹುದು

ನೀವೇ ವಿದ್ಯುತ್ ತಯಾರಿಸಿ, ಬೆಸ್ಕಾಂಗೆ ಮಾರಿ ಹಣವನ್ನೂ ಗಳಿಸಿ! ಜೊತೆಗೆ ಸರ್ಕಾರದಿಂದ ಫುಲ್ ಸಬ್ಸಿಡಿ

ಅಂದರೆ ನಿಮ್ಮ ಹೂಡಿಕೆ ಹಣಕ್ಕೆ ಮಿತಿ ಇರುವುದಿಲ್ಲ, ಎಷ್ಟು ಹಣ ಸಾಧ್ಯವಿದೆಯೋ ಅಷ್ಟು ಹೂಡಿಕೆ ಮಾಡಬಹುದು. ಇದು ಅತ್ಯಂತ ಸುರಕ್ಷಿತ ಹಾಗೂ ವಿಶ್ವಾಸಾರ್ಹ ಆದಾಯದ ಮೂಲವಾಗಿದ್ದು ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಬೇರೆ ಬೇರೆ ಬ್ಯಾಂಕ್ ನಲ್ಲಿ ಬೇರೆ ಬೇರೆ ರೀತಿಯ ಬಡ್ಡಿದರ ನಿಗದಿಪಡಿಸಲಾಗುತ್ತದೆ. ಇದರ ಜೊತೆಗೆ ಸ್ಥಿರ ಠೇವಣಿಯ ಕೆಲವು ಯೋಜನೆಗಳಲ್ಲಿ ತೆರಿಗೆ ವಿನಾಯಿತಿ ಕೂಡ ಪಡೆದುಕೊಳ್ಳಬಹುದು.

Best Monthly Pension Schemes for Senior Citizen from Post Office to Fixed Deposit

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories