Business News

Property Tax: ಪ್ರಾಪರ್ಟಿ ಟ್ಯಾಕ್ಸ್ ಕಟ್ಟದೇ ಇರೋರಿಗೆ ಬಿಗ್ ಅಲರ್ಟ್! ಹೊಸ ನಿಯಮ

  • ಪ್ರಾಪರ್ಟಿ ಟ್ಯಾಕ್ಸ್ ಕಟ್ಟದವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ.
  • ಆಸ್ತಿ ತೆರಿಗೆ ಪಾವತಿಯ ಕುರಿತಂತೆ ಹೊಸ ನಿಯಮ ಜಾರಿಗೆ ತಂದ ಸರ್ಕಾರ.
  • ತೆರಿಗೆ ಪಾವತಿ ಮಾಡದೆ ಇರುವವರ ಆಸ್ತಿ ಹರಾಜು ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ.

Property Tax: ಒಂದು ವೇಳೆ ನೀವು ಪ್ರಾಪರ್ಟಿ ಟ್ಯಾಕ್ಸ್ ಕಟ್ಟಿಲ್ಲ ಅಂದ್ರೆ ಖಂಡಿತವಾಗಿ ನೀವು ಈ ವಿಚಾರವನ್ನು ಅರ್ಥ ಮಾಡಿಕೊಳ್ಳಲೇಬೇಕು, ಯಾಕೆಂದರೆ ಅಂಥವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸರ್ಕಾರ ಸಿದ್ಧವಾಗಿದೆ.

ಹಾಗಿದ್ರೆ ಇದಕ್ಕಾಗಿ ಸರ್ಕಾರ ಯಾವೆಲ್ಲಾ ನಿಯಮಗಳನ್ನು ರೂಪಿಸಿದೆ ಅನ್ನೋದನ್ನ ಇವತ್ತಿನ ಲೇಖನದ ಮೂಲಕ ತಿಳಿಯೋಣ.

Property Tax: ಪ್ರಾಪರ್ಟಿ ಟ್ಯಾಕ್ಸ್ ಕಟ್ಟದೇ ಇರೋರಿಗೆ ಬಿಗ್ ಅಲರ್ಟ್! ಹೊಸ ನಿಯಮ

ಪ್ರಾಪರ್ಟಿ ಟ್ಯಾಕ್ಸ್ ಗಳನ್ನು ಹೊಸ ನಿಯಮಗಳಲ್ಲಿ ಪರಿಷ್ಕರಿಸಿ, ಅನಧಿಕೃತವಾಗಿರುವಂತಹ ಆಸ್ತಿಗಳನ್ನು ಕೂಡ ತೆರಿಗೆ ವ್ಯಾಪ್ತಿಗೆ ತಂದಾಗ ಮಾತ್ರವೇ ಎಲ್ಲಾ ಪೌರ ಸಂಸ್ಥೆಗಳು ಸಶಕ್ತ ವಾಗುತ್ತವೆ ಎಂಬುದಾಗಿ ಪ್ರತಿಪಾದಿಸಲಾಗಿದೆ. ನಗರ ಹಾಗೂ ಪಟ್ಟಣಗಳಿಗೆ ಬೇಕಾಗಿರುವಂತಹ ಮೂಲಸೌಕರ್ಯಗಳನ್ನು ಈ ಮೂಲಕ ಒದಗಿಸಬಹುದಾಗಿದೆ.

70 ಲಕ್ಷ ಹೋಮ್ ಲೋನ್ ಪಡೆದರೆ 25 ವರ್ಷಗಳಿಗೆ ಆಗುವ ಬಡ್ಡಿ ಎಷ್ಟು? ಇಲ್ಲಿದೆ ಲೆಕ್ಕಾಚಾರ

ಒಂದು ವೇಳೆ ಆಸ್ತಿಯ ಮೇಲಿನ ತೆರಿಗೆ ಪಾವತಿ ಮಾಡದೆ ಹೋದಲ್ಲಿ ಅವರನ್ನು ಬಾಕಿದಾರ ಎಂಬುದಾಗಿ ಪರಿಗಣಿಸಲಾಗುತ್ತದೆ ಎಂದು ಘೋಷಿಸಲಾಗಿದೆ. ಶೋಕಾಸ್ ನೋಟಿಸ್ ನೀಡಿದ ನಂತರ ಅವರ ಆಸ್ತಿಯನ್ನು ಪರಿಶೀಲನೆ ಮಾಡಲಾಗುತ್ತದೆ. ಇದಕ್ಕಾಗಿ ಅಲ್ಲಿನ ಮುಖ್ಯ ಅಧಿಕಾರಿಗಳು ಪ್ರಮುಖವಾಗಿ ನೋಟಿಸ್ ನೀಡುತ್ತಾರೆ.

ನೋಟಿಸ್ ವಿರುದ್ಧ ಮೇಲ್ಮನವಿ ಪ್ರಾಧಿಕಾರಗಳ ಮುಂದೆ ಹೋಗುವುದಕ್ಕೆ 50% ತಿರುಗಿ ಪಾವತಿ ಕಡ್ಡಾಯ ಆಗಿದೆ ಎಂಬುದನ್ನು ಕೂಡ ಇಲ್ಲಿ ತಿಳಿಸಲಾಗಿದೆ. ಜಪ್ತಿ ಮಾಡಲಾಗಿರುವಂತಹ ಆಸ್ತಿಯನ್ನು ಹರಾಜು ಮಾಡುವ ಅಧಿಕಾರವನ್ನು ಕೂಡ ಇಲ್ಲಿ ಸಂಸ್ಥೆ ಹೊಂದಿರುತ್ತದೆ.

ಬೆಂಗಳೂರಿನಲ್ಲಿ ಭೂಮಿಯ ಬೆಲೆ ಹೆಚ್ಚಾಗ್ತಿದೆ

ಬೆಂಗಳೂರಿನ (Bengaluru) ಸಾಕಷ್ಟು ಪ್ರದೇಶಗಳಲ್ಲಿ ಭೂಮಿಯ ಬೆಲೆ ಹಾಗೂ ಬಾಡಿಗೆಯ ಬೆಲೆ ಕೂಡ ಗಗನಕ್ಕೆ ಏರುತ್ತಿದೆ. ರೆಸಿಡೆನ್ಸಿಯಲ್ ಕಟ್ಟಡಗಳಿಂದ ಹಿಡಿದು ಐ ಟಿ ಕಾರಿಡಾರ್ಗಳು ಕೂಡ ಇಲ್ಲಿ ದೊಡ್ಡಮಟ್ಟದಲ್ಲಿ ನಿರ್ಮಾಣವಾಗಿದೆ.

ಈ ಭಾಗದಲ್ಲಿ ಕಾಸ್ಮೋ ಪಾಲಿಟಿನ್ ಕಲ್ಚರ್ ಜೋರಾಗಿ ಬೆಳಿತಿದೆ. ಎಚ್ಎಸ್ಆರ್ ಲೇಔಟ್, ಕೋರಮಂಗಲ, ಇಂದ್ರ ನಗರ, ಸರ್ಜಾಪುರ್ ರೋಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್ ಸಂಸ್ಥೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ, ಹೀಗಾಗಿ ಎಲ್ಲರೂ ಕೂಡ ಇಲ್ಲೇ ನೆಲೆಯೂರುವುದಕ್ಕೆ ಬರ್ತಾ ಇದ್ದಾರೆ.

5 ಲಕ್ಷ ಹೂಡಿಕೆ ಮಾಡಿದ್ರೆ ಸಿಗುತ್ತೆ 15 ಲಕ್ಷ ರೂಪಾಯಿ; ಈ ಯೋಜನೆ ಮಿಸ್ ಮಾಡ್ಕೋಬೇಡಿ

ಹೀಗಾಗಿ ಕಟ್ಟಡಗಳ ನಿರ್ಮಾಣ ಸಂಖ್ಯೆ ಹೆಚ್ಚಾಗ್ತಾ ಇದೆ ಹಾಗೂ ಅವುಗಳ ಟ್ಯಾಕ್ಸ್ ವಿಚಾರದಲ್ಲಿ ಕೂಡ ಸಾಕಷ್ಟು ಸಮಸ್ಯೆಗಳು ಕಂಡುಬರುತ್ತಿವೆ. ಹೀಗಾಗಿ ಒಂದು ವೇಳೆ ನೀವು ನಿಗದಿತ ಸಮಯದಲ್ಲಿ ಪ್ರಾಪರ್ಟಿ ಟ್ಯಾಕ್ಸ್ ಕಟ್ಟದೆ ಹೋದಲ್ಲಿ ನಿಮಗೆ ಸಂಬಂಧಪಟ್ಟಂತಹ ಆ ಪ್ರಾಪರ್ಟಿ ಹರಾಜಾಗುವಂತಹ ಸಾಧ್ಯತೆ ಕೂಡ ಹೆಚ್ಚಾಗಿದೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬೇಕಾಗಿರುವ ಅಗತ್ಯವಿದೆ.

Big Alert for Those Not Paying Property Tax, New Rule Announced

Our Whatsapp Channel is Live Now 👇

Whatsapp Channel

Related Stories