18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನಿಯಮದಲ್ಲಿ ಭಾರೀ ಬದಲಾವಣೆ!

Aadhaar Card Rules : ಆಧಾರ್ ಕಾರ್ಡ್ ಗೂ ಬಂತು ಪಾಸ್ಪೋರ್ಟ್ ರೀತಿ ವೆರಿಫಿಕೇಶನ್; ಆಧಾರ್ ನಿಯಮದಲ್ಲಿ ಭಾರೀ ಬದಲಾವಣೆ

Aadhaar Card Rules : ನಮ್ಮ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ಒಂದಿಷ್ಟ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅದರ ಆಧಾರದ ಮೇಲೆಯೇ ಆ ವ್ಯಕ್ತಿಯನ್ನು ನಮ್ಮ ದೇಶದ ಪ್ರಜೆ ಎಂದು ಗುರುತಿಸಲಾಗುತ್ತದೆ.

ನಮ್ಮ ದೇಶದಲ್ಲಿ ಓಟರ್ ಐಡಿ (voter ID), ಪಾಸ್ಪೋರ್ಟ್ (passport), ಪಾನ್ ಕಾರ್ಡ್ (PAN card), ಪಡಿತರ ಚೀಟಿ ಪ್ರಮುಖ ದಾಖಲೆಯಾಗಿದೆ. ಇವೆಲ್ಲವುಗಳಿಗಿಂತ ಆಧಾರ್ ಕಾರ್ಡ್ (Aadhaar card) ಇಂದಿನ ದಿನದಲ್ಲಿ ಮಹತ್ವದ ದಾಖಲೆಯಾಗಿದೆ. ಇದು ಇಲ್ಲದೆ ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ.

ಈ ಪೋಸ್ಟ್ ಆಫೀಸ್ ಹೂಡಿಕೆಯಲ್ಲಿ ಸಿಗುತ್ತೆ ಪ್ರತಿ ತಿಂಗಳು 9250 ರೂಪಾಯಿ; ಇಂದೇ ಆರಂಭಿಸಿ

18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನಿಯಮದಲ್ಲಿ ಭಾರೀ ಬದಲಾವಣೆ! - Kannada News

ಹಾಗಾಗಿ ಪ್ರತಿಯೊಬ್ಬರು ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕ. ಇದೀಗ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಹೊಸದಾಗಿ ಆಧಾರ್ ಮಾಡಿಸುವವರಿಗೆ ಹೊಸ ಆದೇಶ ನೀಡಿದೆ. ಅದರ ಪ್ರಕಾರ ಪಾಸ್ಪೋರ್ಟ್ ಮಾದರಿಯಲ್ಲಿ ವೆರಿಫಿಕೇಶನ್ ಮಾಡಲಾಗುತ್ತದೆ.

ಈಗಾಗಲೇ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಆಧಾರ್ ಅಪ್ಡೇಟ್ (Aadhaar update) ಮಾಡುವಂತೆ ಸೂಚನೆ ನೀಡಿದೆ. 10 ವರ್ಷಕ್ಕೂ ಮೇಲ್ಪಟ್ಟ ಎಲ್ಲ ಆಧಾರ್ ಕಾರ್ಡ್ಗಳನ್ನು ಅಪ್ಡೇಟ್ ಮಾಡಬೇಕಾಗಿದೆ. ಅಲ್ಲದೆ ಈ ಪ್ರಾಧಿಕಾರವು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ.

ಆಧಾರ್ ವೆರಿಫಿಕೇಶನ್ ನಿಯಮದಲ್ಲಿ ಬದಲಾವಣೆ: (Aadhar verification)

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಆಧಾರ್ ವೆರಿಫಿಕೇಶನ್ನಲ್ಲಿ ಬದಲಾವಣೆ ಮಾಡಿದೆ. ಈ ನಿಯಮವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಆಧಾರ್ ವೆರಿಫಿಕೇಶನ್ನಲ್ಲಿ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಇನ್ಮುಂದೆ ಪಾಸ್ಪೋರ್ಟ್ ಯಾವ ರೀತಿ ವೆರಿಫಿಕೇಶನ್ ಮಾಡಲಾಗುತ್ತದೆಯೋ ಅದೇ ರೀತಿ ಆಧಾರ್ ವೆರಿಫಿಕೇಶನ್ (Aadhaar verification) ಮಾಡಲಾಗುತ್ತದೆ.

ಸ್ವಂತ ಮನೆ ಕಟ್ಟಿಕೊಳ್ಳಲು ಮಹಿಳೆಯರಿಗೆ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ ಹೋಂ ಲೋನ್

Aadhaar Cardಆಧಾರ್ ಕಾರ್ಡ್ ನಿಯಮದಲ್ಲೂ ಬದಲಾವಣೆ

ಈಗಾಗಲೇ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಆಧಾರ್ ಗೆ ಸಂಬಂಧಪಟ್ಟಂತೆ ಹಲವು ನಿಯಮಗಳನ್ನು ಜಾರಿ ಮಾಡಿದೆ. ಅದು ನೀಡಿದ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು. ಆಧಾರ್ ಕಾರ್ಡ್ ಹೊಂದಲು ವಯಸ್ಸಿನ ಮಿತಿ ಇಲ್ಲ. ಯಾರು ಬೇಕಾದರೂ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬಹುದು. 18 ವರ್ಷದ ಒಳಗಿನವರಿಗೆ ಬಾಲ ಆಧಾರ್ ಕಾರ್ಡ್ ನೀಡಿದರೆ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನೀಡಲಾಗುತ್ತದೆ. ಸದ್ಯ 18 ವರ್ಷ ಮೇಲ್ಪಟ್ಟವರಿಗಾಗಿ ಹೊಸ ನಿಮಯವನ್ನು ತರಲಾಗಿದೆ.

37 ವರ್ಷಗಳ ಹಿಂದೆ ಬುಲೆಟ್ ಬೈಕ್ ಬೆಲೆ ಎಷ್ಟಿತ್ತು ಗೊತ್ತಾ? ಇಲ್ಲಿದೆ ವೈರಲ್ ಆದ ಹಳೆಯ ಬಿಲ್

ಪಾಸ್ಪೋರ್ಟ್ ಮಾದರಿ ತಪಾಸಣೆ:

Aadhaar Card
Image Source: Mint

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು 18 ವರ್ಷ ಮೇಲ್ಪಟ್ಟವರು ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುವುದಾದರೆ ಭೌತಿಕ ಪರಿಶೀಲನೆ ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಹಾಗಾಗಿ 18 ವರ್ಷ ಮೇಲ್ಪಟ್ಟವರು ಹೊಸದಾಗಿ ಆಧಾರ್ ಕಾರ್ಡ್ ಬೇಕು ಎಂದು ಅರ್ಜಿ ಸಲ್ಲಿಸಿದರೆ ಅವರಿಗೆ ಪಾಸ್ಪೋರ್ಟ್ ಮಾದರಿ ವೆರಿಫಿಕೇಶನ್ ಇರುತ್ತದೆ.

ಅರ್ಜಿ ಸಲ್ಲಿಸಿದ ಬಳಿಕ ಡೇಟಾ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ 180 ದಿನದಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಆಧಾರ್ ಕಾರ್ಡ್ ನೀಡಲಾಗುತ್ತದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಗುಡ್ ನ್ಯೂಸ್, 38 ಸಾವಿರ ರಿಯಾಯಿತಿ!

ಆಧಾರ್ ಕಾರ್ಡ್ ಭೌತಿಕ ಪರಿಶೀಲನೆಗಾಗಿ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಇವರು ನೀವು ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿಯನ್ನು ಕುಲಂಕೂಷವಾಗಿ ಪರಿಶೀಲನೆ ನಡೆಸುತ್ತಾರೆ. ಯಾವುದೇ ಸಣ್ಣ ತಪ್ಪು ಇದ್ದರೂ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳಿಂದಾಗಿ ಆಧಾರ್ ಇನ್ನು ಮುಂದೆ ಮೊದಲಿನಷ್ಟು ಬೇಗ ನಿಮ್ಮ ಕೈ ಸೇರುವುದಿಲ್ಲ. ಇದಕ್ಕೆ ಹೆಚ್ಚು ದಿನ ಕಾಯಬೇಕು.

Big change in Aadhaar card rules for those above 18 years

Follow us On

FaceBook Google News

Big change in Aadhaar card rules for those above 18 years