ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿರುವವರಿಗೆ ಬಿಗ್ ರಿಲೀಫ್! ಆರ್‌ಬಿಐ ಹೊಸ ರೂಲ್ಸ್

ಬ್ಯಾಂಕುಗಳಲ್ಲಿ ಸಾಲ (bank loan) ಪಡೆದುಕೊಳ್ಳುವ ಅನಿವಾರ್ಯತೆ ಸಾಕಷ್ಟು ಸಮಯದಲ್ಲಿ ನಮಗೆ ಎದುರಾಗುತ್ತದೆ. ಆದರೆ ಸರಿಯಾದ ಸಮಯಕ್ಕೆ ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡುವುದು ಬಹಳ ಮುಖ್ಯ

ಒಂದು ವೇಳೆ ಸಾಲ ಮರುಪಾವತಿ ಮಾಡದೆ ಇದ್ದಾಗ ಬ್ಯಾಂಕಿನವರು ನಿಮ್ಮನ್ನು ಪ್ರಶ್ನೆ ಮಾಡಬಹುದು. ಹಾಗೂ ಇದರಿಂದ ಕೆಲವು ಸಮಸ್ಯೆಗಳು ಕೂಡ ಉಂಟಾಗಬಹುದು. ಬ್ಯಾಂಕ್ ಸಾಲ ಮರುಪಾವತಿ ಮಾಡುವುದು ಕಡ್ಡಾಯ, ಆದರೆ ಇದಕ್ಕೆ ಸಂಬಂಧ ಪಟ್ಟ ಹಾಗೆ ಕೆಲವೊಂದಿಷ್ಟು ನಿಯಮಗಳಲ್ಲಿ ಬದಲಾವಣೆ ಮಾಡಿರುವ ಆರ್ಬಿಐ (Reserve Bank of India) ಜನರಿಗೆ ಸ್ವಲ್ಪ ರಿಲೀಫ್ ನೀಡಿದೆ.

ಹಾಗಾದ್ರೆ ಆರ್ ಬಿ ಐ ನ ಹೊಸ ನಿಯಮ ಏನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಈ ಬ್ಯಾಂಕಿನಲ್ಲಿ ಕ್ಷಣಮಾತ್ರದಲ್ಲಿ ಸಿಗಲಿದೆ ಕಡಿಮೆ ಬಡ್ಡಿಗೆ 10 ಲಕ್ಷ ಪರ್ಸನಲ್ ಲೋನ್!

ರಿಕವರಿ ಏಜೆಂಟ್ ಗಳ ಕಾಟ ಇನ್ನು ಇರಲ್ಲ!

ಬ್ಯಾಂಕುಗಳಲ್ಲಿ ಸಾಲ (Bank Loan) ಮಾಡಿ ಅದನ್ನು ಸಕಾಲಕ್ಕೆ ಮರುಪಾವತಿ (Loan Re Payment) ಮಾಡದೇ ಇದ್ದರೆ ಬ್ಯಾಂಕ್ ಸಿಬ್ಬಂದಿಗಳು ಕರೆ ಮಾಡಿ ಅಥವಾ ನಿಮಗೆ ನೋಟಿಸ್ ಕಳುಹಿಸಿ ಸಾಲ ವಸೂಲಾತಿ ಮಾಡಿಸಿಕೊಳ್ಳುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ನೇಮಿಸಿಕೊಳ್ಳುವ ರಿಕವರಿ ಏಜೆಂಟ್ ಗಳಿಂದ ಗ್ರಾಹಕರಿಗೆ ತೊಂದರೆ ಆಗುತ್ತಿದೆ ಎನ್ನುವುದನ್ನು ಕೇಂದ್ರ ಬ್ಯಾಂಕ್ ಗಮನಿಸಿದೆ.

ಹೊತ್ತಿಲ್ಲದ ಹೊತ್ತಲ್ಲಿ ರಿಕವರಿ ಏಜೆಂಟ್ ಗಳು ಗ್ರಾಹಕರಿಗೆ ಕಾಲ್ ಮಾಡುವುದು ಅಥವಾ ಮನೆ ಹತ್ತಿರ ಬರುವುದು, ಸ್ನೇಹಿತರು ಸಂಬಂಧಿಗಳ ಜೊತೆಗೆ ಇವರ ಸಾಲದ ಬಗ್ಗೆ ಮಾಹಿತಿ ನೀಡುವುದು, ಹೀಗೆ ಹಲವಾರು ತಪ್ಪು ಮಾರ್ಗಗಳನ್ನು ಅನುಸರಿಸಿ ಸಾಲ ಮರುಪಾವತಿ ಮಾಡದೇ ಇರುವವರ ಬಳಿ ಹಣ ಮರು ವಸುಲಾತಿಗಾಗಿ ಪ್ರಯತ್ನಿಸುತ್ತಿದ್ದರು. ಆದರೆ ಆರ್ ಬಿ ಐ ಇದಕ್ಕೆಲ್ಲ ಕಡಿವಾಣ ಹಾಕಿದ್ದು, ಹಣ ವಸುಲಾತಿ ವಿಚಾರದಲ್ಲಿ ಹೊಸ ಗೈಡ್ ಲೈನ್ಸ್ ನೀಡಿದೆ.

ಹೊಸ ಮನೆ ಕಟ್ಟುತ್ತಿರುವವರಿಗೆ ಈ ಬ್ಯಾಂಕುಗಳಲ್ಲಿ ಸಿಗುತ್ತಿದೆ ಕಡಿಮೆ ಬಡ್ಡಿಗೆ ಹೋಮ್ ಲೋನ್

Loanಆರ್ ಬಿ ಐ ಹೊಸ ನಿಯಮ ಏನು?

* ಬ್ಯಾಂಕ್ ಸಿಬ್ಬಂದಿಗಳಾಗಿರಲಿ ಅಥವಾ ರಿಕವರಿ ಏಜೆಂಟ್ (recovery agent) ಗಳಾಗಿರಲಿ ಸಂಜೆ 7 ಗಂಟೆಯ ನಂತರ ಹಾಗೂ ಬೆಳಗ್ಗೆ ಎಂಟು ಗಂಟೆಯ ಒಳಗೆ ಗ್ರಾಹಕರಿಗೆ ಕರೆ ಮಾಡಿ ತೊಂದರೆ ಕೊಡುವಂತಿಲ್ಲ.

* ಸಂಜೆ 6 ಗಂಟೆಯ ನಂತರ ಮನೆ ಬಾಗಿಲಿಗೆ ಹೋಗಿ ಸಾಲ ವಸೂಲಿ ಮಾಡುವಂತಿಲ್ಲ

* ಯಾವುದೇ ರೀತಿಯ ದೌರ್ಜನ್ಯ ನಡೆಸುವುದು ಮಹಿಳೆಯರ ಮೇಲೆ ಜಬರ್ದಸ್ತ್ ಆಗಿ ವಾರ್ನಿಂಗ್ ಮಾಡುವುದು ಇಂಥವುಗಳನ್ನು ಮಾಡುವಂತಿಲ್ಲ.

* ಬ್ಯಾಂಕ್ ಸಾಲ ಮರುಪಾವತಿ ಮಾಡಿಸಿಕೊಳ್ಳುವುದಕ್ಕೆ ಮೊದಲು ನೋಟಿಫಿಕೇಶನ್ ಕಳುಹಿಸಬೇಕು ಅದಕ್ಕೆ ಉತ್ತರ ಬಾರದೆ ಇದ್ದಲ್ಲಿ ಮತ್ತೆ ನೋಟಿಫಿಕೇಶನ್ ಕಳುಹಿಸಬೇಕು. ಆಗಲು ಗ್ರಾಹಕರಿಂದ ಉತ್ತರಬಾರದೆ ಇದ್ದಲ್ಲಿ ಆಗ ಅವರಿಂದ ಹಣ ವಾಸುಲಾತಿಗಾಗಿ ಕರೆ ಮಾಡಬಹುದು.

ಇನ್ಮುಂದೆ ಕೃಷಿ ಭೂಮಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಬೇಕು ಪರ್ಮಿಷನ್! ಹೊಸ ನಿಯಮ

ಸಿಬಿಲ್ ಸ್ಕೋರ್ ಬಗ್ಗೆ ಹೊಸ ನಿಯಮ!

ಬ್ಯಾಂಕುಗಳಲ್ಲಿ ನೀವು ಯಾವುದೇ ರೀತಿಯ ಸಾಲ ಸೌಲಭ್ಯ ಪಡೆದುಕೊಳ್ಳುತ್ತಿದ್ದರು, ಸಿಬಿಲ್ ಸ್ಕೋರ್ (CIBIL Score) ಅಥವಾ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯವಾಗಿರುತ್ತದೆ. ಇದು ಉತ್ತಮವಾಗಿದ್ದರೆ ಮಾತ್ರ ಬ್ಯಾಂಕ್ನಿಂದ ಸುಲಭ ಸಾಲ ಪಡೆಯಬಹುದು.

ಸಿಬಿಲ್ ಸ್ಕೋರ್ ವಿಚಾರದಲ್ಲಿಯೂ ಗ್ರಾಹಕರಿಗೆ ರಿಲೀಫ್ ನೀಡಿರುವ ಕೇಂದ್ರ ಬ್ಯಾಂಕ್, ಯಾವುದೇ ಸಿಬಿಲ್ ಸ್ಕೋರ್ ಪ್ರಕಟಿಸುವ ಕಂಪನಿ ಅಥವಾ ಬ್ಯಾಂಕ್ 6 ತಿಂಗಳ ನಂತರ ಸಿಬಿಲ್ ಸ್ಕೋರ್ ಪರಿಶೀಲನೆ ಮಾಡಬೇಕು.

ಏಕಾ ಏಕಿ ಗ್ರಾಹಕರ ಸಿಬಿಲ್ ಸ್ಕೋರ್ ಪಾಯಿಂಟ್ ಕಡಿಮೆ ಮಾಡುವಂತಿಲ್ಲ. ಹಾಗೂ ಒಂದೆರಡು ಭಾರಿ ಸಾಲ ಮರುಪಾವತಿ ಮಾಡಲು ತಡವಾಗಿದ್ದರೆ ಅದಕ್ಕಾಗಿ ಸಿಬಿಲ್ ಸ್ಕೋರ್ ಪಾಯಿಂಟ್ ಕಡಿಮೆ ಮಾಡುವಂತಿಲ್ಲ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.

Big relief for those who have Loan borrowed from any bank

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories