Business News

ಈ ಬ್ಯಾಂಕಿನಲ್ಲಿ ಕ್ಷಣಮಾತ್ರದಲ್ಲಿ ಸಿಗಲಿದೆ ಕಡಿಮೆ ಬಡ್ಡಿಗೆ 10 ಲಕ್ಷ ಪರ್ಸನಲ್ ಲೋನ್!

Personal Loan : ಯಾವಾಗ ಯಾವ ಸಮಯದಲ್ಲಿ ಹಣದ ಅನಿವಾರ್ಯತೆ (financial emergency) ಬರುತ್ತೆ ಅಂತ ಯಾರಿಗೂ ಊಹಿಸಲು ಕೂಡ ಸಾಧ್ಯವಿಲ್ಲ. ಹಾಗಂದ ಮಾತ್ರಕ್ಕೆ ನಮಗೆ ಹಣದ ಅಗತ್ಯ ಇದ್ದಾಗ ಸ್ನೇಹಿತರು ಸಂಬಂಧಿಗಳು ಪ್ರತಿ ಬಾರಿ ಸಹಾಯಕ್ಕೂ ಬರಲ್ಲ.

ಇಂತಹ ಸಂದರ್ಭದಲ್ಲಿ ಸುಲಭವಾಗಿ ಹಣ ಸಿಗಬೇಕು ಅಂತ ಅಂದ್ರೆ ಏನು ಮಾಡಬೇಕು? ಹೌದು ಬ್ಯಾಂಕುಗಳಲ್ಲಿ ವೈಯಕ್ತಿಕ ಸಾಲ (personal loan) ವನ್ನು ತೆಗೆದುಕೊಳ್ಳಬಹುದು.

10 lakh loan is available in this subsidy scheme

ಯಾರಿಗೆ ಯಾವುದೇ ಪರಿಸ್ಥಿತಿಯಲ್ಲಿ ಅನಿವಾರ್ಯತೆಯ ಸಂದರ್ಭದಲ್ಲಿ ಹಣದ ಅವಶ್ಯಕತೆ ಇದ್ದಾಗ ಬ್ಯಾಂಕ್ನಿಂದ ಸಾಲ ಸೌಲಭ್ಯ ಪಡೆಯಬಹುದು. ಆದರೆ ವೈಯಕ್ತಿಕ ಸಾಲವನ್ನ ನೀವು ಎಲ್ಲಾ ಬ್ಯಾಂಕಿನಲ್ಲಿಯೂ ತೆಗೆದುಕೊಳ್ಳಲು ಸಾಧ್ಯವಿಲ್ಲ, ಯಾಕೆಂದರೆ ವೈಯಕ್ತಿಕ ಸಾಲಕ್ಕೆ ಬಡ್ಡಿ ದರ ಜಾಸ್ತಿ.

ಇಂತಹ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ವಯಕ್ತಿಕ ಸಾಲ (Bank of Baroda personal loan) ತೆಗೆದುಕೊಳ್ಳುವವರಿಗೆ ಹೆಚ್ಚಿನ ಸೌಲಭ್ಯ ಒದಗಿಸುತ್ತಿದೆ, ಜೊತೆಗೆ ಬಡ್ಡಿ ದರ ಕೂಡ ಕಡಿಮೆ.

ಹೊಸ ಮನೆ ಕಟ್ಟುತ್ತಿರುವವರಿಗೆ ಈ ಬ್ಯಾಂಕುಗಳಲ್ಲಿ ಸಿಗುತ್ತಿದೆ ಕಡಿಮೆ ಬಡ್ಡಿಗೆ ಹೋಮ್ ಲೋನ್

ಬ್ಯಾಂಕ್ ಆಫ್ ಬರೋಡ ವೈಯಕ್ತಿಕ ಸಾಲ! (Get personal Loan by Bank of Baroda)

ಬ್ಯಾಂಕ್ ಆಫ್ ಬರೋಡ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿದ್ದು, ನಂಬಿಕಾರ್ಹ ಬ್ಯಾಂಕ್ ಎನಿಸಿಕೊಂಡಿದೆ. ನೀವು 10 ಲಕ್ಷ ರೂಪಾಯಿಗಳ ವರೆಗೂ ವೈಯಕ್ತಿಕ ಸಾಲ ಪಡೆದುಕೊಳ್ಳಲು ಅವಕಾಶವಿದೆ.

ಬ್ಯಾಂಕ್ ಆಫ್ ಬರೋಡದಲ್ಲಿ 10 ರಿಂದ 16% ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡಲಾಗುವುದು. ಬ್ಯಾಂಕ್ ಆಫ್ ಬರೋಡದಲ್ಲಿ ಸಾಲ ಪಡೆದುಕೊಳ್ಳಲು ಯಾರು ಅರ್ಹರು ಎಂಬುದನ್ನು ನೋಡೋಣ.

ಈ ಅರ್ಹತೆ ಇದ್ರೆ ನಿಮಗೆ ಸಿಗುತ್ತೆ BOB ಸಾಲ!

* 18 ವರ್ಷ ಮೀರಿರಬೇಕು
* ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ಹೊಂದಿದ್ದು ಕನಿಷ್ಠ ಆರು ತಿಂಗಳು ಕಳೆದಿರಬೇಕು.
* ನೀವು ಗುರುತಿನ ಪುರಾವೆಯಾಗಿ ಒದಗಿಸುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರಬೇಕು.
* ಯಾವುದೇ ಹಳೆಯ ಸಾಲ ಮರುಪಾವತಿ ಮಾಡದೆ ಡಿಫಾಲ್ಟರ್ ಎನಿಸಿಕೊಂಡಿರಬಾರದು.
* ವೈಯಕ್ತಿಕ ಸಾಲ ಪಡೆದುಕೊಳ್ಳಲು ಕನಿಷ್ಠ 25,000 ಮಾಸಿಕ ವೇತನ ಹೊಂದಿರಬೇಕು.
* ಐಟಿಆರ್ ಸಲ್ಲಿಸಿದ ದಾಖಲೆ ಇರಬೇಕು.

ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ 2 ಉಚಿತ ಗ್ಯಾಸ್ ಸಿಲಿಂಡರ್! ಅರ್ಜಿ ಸಲ್ಲಿಸಿ

Personal Loanಬ್ಯಾಂಕ್ ಆಫ್ ಬರೋಡದ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? (How to apply for personal loan)

ನೀವು ವೈಯಕ್ತಿಕ ಸಾಲ ಪಡೆದುಕೊಳ್ಳಲು ಬ್ಯಾಂಕ್ ಗೆ ಹೋಗಿ ಕಾಗದ ಮೂಲಕ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ ಅದರ ಬದಲು ಡಿಜಿಟಲ್ ಸಾಲವನ್ನ ಬ್ಯಾಂಕ್ ನೀಡುತ್ತದೆ.

ಮೊದಲು ಬ್ಯಾಂಕ್ ಆಫ್ ಬರೋಡದ mConnect ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ನಂತರ ಅದರಲ್ಲಿ borrow ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. Apply loan ಅನುವಾಯಿಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಬೇಕಾಗಿರುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಇನ್ಮುಂದೆ ಕೃಷಿ ಭೂಮಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಬೇಕು ಪರ್ಮಿಷನ್! ಹೊಸ ನಿಯಮ

ಯಾವುದೇ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ತೆಗೆದುಕೊಳ್ಳುವುದಿದ್ದರೆ ಮುಖ್ಯವಾಗಿ ನಿಮ್ಮ ಸಿಬಿಲ್ ಸ್ಕೋರ್ (CIBIL score) ನೋಡಲಾಗುತ್ತದೆ. ವೈಯಕ್ತಿಕ ಸಾಲ ಅನ್ ಸೆಕ್ಯೂರ್ಡ್ ಲೋನ್ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ಅಡಮಾನವನ್ನು ಇಟ್ಟುಕೊಳ್ಳದೆ ಸಾಲ ನೀಡಲಾಗುತ್ತದೆ ಹಾಗೂ ನಿಮ್ಮ ವೈಯಕ್ತಿಕ credit score ಚೆನ್ನಾಗಿದ್ದಾಗ ಮಾತ್ರ ನೀವು ಸುಲಭವಾಗಿ ಸಾಲ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಆಫ್ ಬರೋಡದ ವೆಬ್ಸೈಟ್ ಗೆ ಭೇಟಿ ನೀಡಿ.

Get 10 lakhs personal loan instantly from this bank

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories