ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ 2 ಉಚಿತ ಗ್ಯಾಸ್ ಸಿಲಿಂಡರ್! ಅರ್ಜಿ ಸಲ್ಲಿಸಿ

Story Highlights

ಪ್ರತಿಯೊಂದು ಮನೆಗೂ ಕೂಡ ಉಚಿತವಾಗಿ ಗ್ಯಾಸ್ ಕನೆಕ್ಷನ್ (free gas connection) ನೀಡುವ ಯೋಜನೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಆಗಿದೆ

ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ (Central government) ಗಳು ಪರಿಚಯಿಸಿವೆ, ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳು ರೂಪಿತವಾಗಿದ್ದು ಇದಕ್ಕಾಗಿ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುತ್ತದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಆಡಳಿತ ಅವಧಿಯಲ್ಲಿ ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತರಲಾಗಿದೆ, ಅವುಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಕೂಡ ಒಂದು.

5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಇರುವ ರೈತರಿಗೆ ಸಿಹಿ ಸುದ್ದಿ; ಸಿಗಲಿದೆ ಈ ಬೆನಿಫಿಟ್!

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಸಬ್ಸಿಡಿ ಗ್ಯಾಸ್ ಸಿಲಿಂಡರ್

ಸೌದೆ ಒಲೆ ಮೂಲಕ ಅಡುಗೆ ಮಾಡುವ ಕಷ್ಟ ಹೆಣ್ಣು ಮಕ್ಕಳಿಗೆ ಇನ್ನು ಮುಂದೆ ಇಲ್ಲ, ಪ್ರತಿಯೊಂದು ಮನೆಗೂ ಕೂಡ ಉಚಿತವಾಗಿ ಗ್ಯಾಸ್ ಕನೆಕ್ಷನ್ (free gas connection) ನೀಡುವ ಯೋಜನೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಆಗಿದೆ.

ಈ ಯೋಜನೆಯ ಅಡಿಯಲ್ಲಿ ಯಾವ ಮಹಿಳೆಯರು ಇನ್ನೂ ಸಾಂಪ್ರದಾಯಿಕವಾಗಿ ಕಟ್ಟಿಗೆ ಹೊತ್ತಿಸಿ ಅಡುಗೆ ಮಾಡುತ್ತಾರೋ ಅಂತವರಿಗೆ ಸಹಾಯಕವಾಗಲು ಉಚಿತ ಗ್ಯಾಸ್ ಕನೆಕ್ಷನ್ ನೀಡಲಾಗುತ್ತಿದೆ.

ಇತ್ತೀಚಿಗೆ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಮಹಿಳೆಯರಿಗೆ ಮತ್ತೊಂದು ಕೊಡುಗೆ ನೀಡಿದ್ದು, ಇಲ್ಲಿಯವರೆಗೆ ಉಚಿತವಾಗಿ ನೀಡಲಾಗುತ್ತಿದ್ದ ಒಂದು ಗ್ಯಾಸ್ ಸಿಲೆಂಡರ್ ಬದಲಿಗೆ ಎರಡು ಗ್ಲಾಸ್ ಸಿಲಿಂಡರ್ ನೀಡಲು ನಿರ್ಧರಿಸಿದ್ದಾರೆ. ಅಂದರೆ 300 ರೂಪಾಯಿಗಳ ಸಬ್ಸಿಡಿಯನ್ನು ಪ್ರತಿ ಸಿಲಿಂಡರ್ ಮೇಲೆ ಪಡೆಯಬಹುದು.

ಕೇಂದ್ರದ ಬಂಪರ್ ಕೊಡುಗೆ! ಇಂತಹವರಿಗೆ ವಾರ್ಷಿಕ 36,000 ನೇರವಾಗಿ ಖಾತೆಗೆ ಜಮಾ

ಸಿಗುತ್ತೆ 300 ರೂಪಾಯಿ ಸಬ್ಸಿಡಿ! (Subsidy for LPG gas)

ಈ ಮೂಲಕ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಬಳಕೆ ಮಾಡುವವರಿಗಿಂತ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿರುವವರಿಗೆ ಗ್ಯಾಸ್ ದರ ಕಡಿಮೆ ಎನ್ನುಬಹುದು. ಈ ಹಿಂದೆ 200 ರೂಪಾಯಿಗಳಿದ್ದ, ಸಬ್ಸಿಡಿಯನ್ನು ನೂರು ರೂಪಾಯಿ ಹೆಚ್ಚಳ ಮಾಡಿ 300 ಮಾಡಲಾಗಿದೆ.

ಹೀಗಾಗಿ ಪ್ರತಿ ಸಿಲೆಂಡರ್ ಅನ್ನು ಮಹಿಳೆಯರು ಕೇವಲ 603 ರೂಪಾಯಿಗಳಿಗೆ ಖರೀದಿಸಬಹುದು. ಇನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗುತ್ತದೆ. ಜೊತೆಗೆ ವರ್ಷದಲ್ಲಿ 12 ಸಿಲಿಂಡರ್ ಖರೀದಿ ಮಾಡಿದರೆ ಮಾತ್ರ ಈ ಸಬ್ಸಿಡಿ ಅನ್ವಯವಾಗುತ್ತದೆ. ಅದಕ್ಕಿಂತ ಹೆಚ್ಚಿಗೆ ಗ್ಯಾಸ ಸಿಲೆಂಡರ್ ಬಳಕೆ ಮಾಡಿದರೆ ಯಾವುದೇ ರೀತಿಯ ಸಬ್ಸಿಡಿ ಸಿಗುವುದಿಲ್ಲ.

ಇನ್ಮುಂದೆ ಕೃಷಿ ಭೂಮಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಬೇಕು ಪರ್ಮಿಷನ್! ಹೊಸ ನಿಯಮ

Gas Cylinder subsidyಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed to documents)

ಮಹಿಳಾ ಅಭ್ಯರ್ಥಿಯ ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಪಾಸ್ ಪೋರ್ಟ್ ಅಳತೆಯ ಫೋಟೋ
ಬ್ಯಾಂಕ್ ಖಾತೆಯ ವಿವರ.

ಕೇವಲ 4% ಬಡ್ಡಿ ದರಕ್ಕೆ ಸಿಗುತ್ತೆ ಕೇಂದ್ರ ಸರ್ಕಾರದ ಸಾಲ; ರೈತರಿಗೆ ಬಂಪರ್ ಯೋಜನೆ

ಅರ್ಜಿ ಸಲ್ಲಿಸಲು ಅರ್ಹತೆಗಳು!

* 18 ವರ್ಷ ಮೇಲ್ಪಟ್ಟ ಮಹಿಳೆಯರಾಗಿರಬೇಕು
* ಗ್ರಾಮೀಣ ಪ್ರದೇಶದಲ್ಲಿ ಒಂದು ಲಕ್ಷ ರೂಪಾಯಿ ಹಾಗೂ ನಗರ ಪ್ರದೇಶಗಳಲ್ಲಿ ಎರಡು ಲಕ್ಷ ರೂಪಾಯಿಗಳಿಗಿಂತ ಕಡಿಮೆ ವಾರ್ಷಿಕ ವರಮಾನ ಹೊಂದಿರಬೇಕು
* ಈಗ ಕೆಳಗೆ ಕನೆಕ್ಷನ್ ಪಡೆದುಕೊಂಡಿದ್ದರೆ ಮತ್ತೆ ಪಡೆಯಲು ಅವಕಾಶ ಇಲ್ಲ.
* ಒಂದು ಮನೆಗೆ ಒಂದೇ ಗ್ಯಾಸ್ ಕನೆಕ್ಷನ್ ಉಚಿತವಾಗಿ ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಚಾಲ್ತಿಯಲ್ಲಿದ್ದು ಇದಕ್ಕೆ ನೀವು ಅರ್ಜಿ ಸಲ್ಲಿಸುವುದಾದರೆ https://www.pmuy.gov.in/index.aspx ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ. ಅಥವಾ ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ ಕೂಡ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಂತರ ನಿಮಗೆ ಉಚಿತ ಗ್ಯಾಸ್ ಕನೆಕ್ಷನ್ ಮಂಜೂರು ಮಾಡಿಕೊಡುತ್ತಾರೆ.

get 2 free LPG gas cylinders in this scheme

Related Stories