ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಸರ್ಕಾರ ಪರಿಚಯಿಸಿದೆ. ರೈತರ ಕೃಷಿ ಚಟುವಟಿಕೆ (agriculture activities) ಯನ್ನು ಉತ್ತೇಜಿಸಲು ಹಾಗೂ ಅವರು ಉತ್ತಮ ರೀತಿಯಲ್ಲಿ ಆದಾಯ ಗಳಿಸಿಕೊಳ್ಳಲು ಅನುಕೂಲವಾಗುವಂತಹ ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ರಾಜ್ಯಗಳಿಗೆ ಸಂಬಂಧ ಪಟ್ಟ ಹಾಗೆ ಕೃಷಿ ಯೋಜನೆಗಳು ಕೂಡ ವಿಭಿನ್ನವಾಗಿರುತ್ತದೆ, ಪ್ರತಿಯೊಂದು ರಾಜ್ಯವು ತಮ್ಮ ರಾಜ್ಯದಲ್ಲಿ ಇರುವ ಕೃಷಿಕರಿಗಾಗಿ ವಿಶೇಷ ಸೌಲಭ್ಯವನ್ನು ಒದಗಿಸಿ ಕೊಡುತ್ತಾರೆ, ಇದರಲ್ಲಿ ಕರ್ನಾಟಕ ಕೂಡ ಹಿಂದೆ ಬಿದ್ದಿಲ್ಲ.
ಕೃಷಿ ಚಟುವಟಿಕೆಯಲ್ಲಿ ತೊಡಗಿರುವ 5 ಎಕರೆಗಿಂತ ಕಡಿಮೆ ಭೂಮಿ (Land) ಹೊಂದಿರುವವರಿಗೆ ಇದೀಗ ಕೇಂದ್ರ ಸರ್ಕಾರದ ಮಾಹಿತಿಯ ಅನ್ವಯ 25,000 ಗಳನ್ನ ಕೊಡಲಾಗುವುದು. ಹಾಗಾದ್ರೆ ಈ ಯೋಜನೆ ಯಾವುದು, ಹೇಗೆ ಪ್ರಯೋಜನ ಪಡೆದುಕೊಳ್ಳಬಹುದು ನೋಡೋಣ!
ಕೇಂದ್ರದ ಬಂಪರ್ ಕೊಡುಗೆ! ಇಂತಹವರಿಗೆ ವಾರ್ಷಿಕ 36,000 ನೇರವಾಗಿ ಖಾತೆಗೆ ಜಮಾ
ಕಿಸಾನ್ ಆಶೀರ್ವಾದ ಯೋಜನೆ! (Kisan Aashirwad scheme)
ಕೇಂದ್ರ ಸರ್ಕಾರ ಈಗಾಗಲೇ ಕಿಸಾನ್ ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಮೂಲಕ ಪ್ರತಿ ವರ್ಷ 6,000ಗಳನ್ನ ರೈತರು ಉಚಿತವಾಗಿ ಪಡೆದುಕೊಳ್ಳಲು ಸಾಧ್ಯವಾಗಿದೆ. ಆಶೀರ್ವಾದ ಯೋಜನೆಯ ಅಡಿಯಲ್ಲಿ 5 ಎಕರೆ ಜಮೀನು ಹೊಂದಿರುವವರಿಗೆ 25000ಗಳನ್ನು ವಾರ್ಷಿಕವಾಗಿ ನೀಡಲಾಗುವುದು.
ಅದೇ ರೀತಿ 2 ಎಕರೆ ಜಮೀನು ಹೊಂದಿದ್ರೆ ಐದರಿಂದ ಹತ್ತು ಸಾವಿರ ರೂಪಾಯಿಗಳನ್ನು ಒದಗಿಸಲಾಗುವುದು. ನಾಲ್ಕು ಎಕರೆ ಜಮೀನು ಹೊಂದಿರುವವರಿಗೆ 20 ಸಾವಿರ ರೂಪಾಯಿಗಳು ಸಿಗುತ್ತವೆ.
ಅದೇ ರೀತಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ (pradhanmantri Kisan Samman Nidhi Yojana) ಅಡಿಯಲ್ಲಿ ವಾರ್ಷಿಕ 6,000 ಸಿಗುತ್ತವೆ. ಒಟ್ಟಾರೆಯಾಗಿ 31 ಸಾವಿರ ರೂಪಾಯಿಗಳನ್ನು ಕೃಷಿಕರು ಸರ್ಕಾರದಿಂದ ಉಚಿತವಾಗಿ ಪಡೆದುಕೊಳ್ಳಲು ಸಾಧ್ಯವಿದೆ.
ಇನ್ಮುಂದೆ ಕೃಷಿ ಭೂಮಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಬೇಕು ಪರ್ಮಿಷನ್! ಹೊಸ ನಿಯಮ
ಎಲ್ಲಿ ಜಾರಿಯಲ್ಲಿ ಇದೆ ಕಿಸಾನ್ ಆಶೀರ್ವಾದ ಯೋಜನೆ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಡಿಯಲ್ಲಿ ದೇಶಾದ್ಯಂತ ಪ್ರತಿಯೊಬ್ಬ ರೈತರು ಕೂಡ ವಾರ್ಷಿಕವಾಗಿ 6,000ಗಳನ್ನು ಪಡೆದುಕೊಳ್ಳಬಹುದು. ಪ್ರತಿಕಂತಿಗೆ 2000 ಗಳಂತೆ ಮೂರು ಕಂತುಗಳಲ್ಲಿ ಈ ಹಣ ವಿತರಣೆ ಮಾಡಲಾಗುತ್ತದೆ.
ಇದೀಗ ಜಾರ್ಖಂಡ್ (Jharkhand) ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಈ ಹಣದ ಜೊತೆಗೆ 25,000ಗಳನ್ನು ಹೆಚ್ಚುವರಿಯಾಗಿ ತಮ್ಮ ರಾಜ್ಯದ ರೈತರಿಗೆ ಒದಗಿಸಲು ಮುಂದಾಗಿದೆ. ಹಾಗಾಗಿ ಜಾರ್ಖಂಡ್ ರಾಜ್ಯದ ರೈತರು ಪ್ರತಿ ವರ್ಷ 31 ಸಾವಿರ ರೂಪಾಯಿಗಳನ್ನು ಸರ್ಕಾರದ ಕಡೆಯಿಂದ ಪಡೆದುಕೊಳ್ಳಬಹುದು.
ಕೇವಲ 4% ಬಡ್ಡಿ ದರಕ್ಕೆ ಸಿಗುತ್ತೆ ಕೇಂದ್ರ ಸರ್ಕಾರದ ಸಾಲ; ರೈತರಿಗೆ ಬಂಪರ್ ಯೋಜನೆ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
* ರೈತರ ಭೂಮಿಯ ದಾಖಲೆ ಅಥವಾ ಪಹಣಿ
* ಆಧಾರ್ ಕಾರ್ಡ್.
* ವಿಳಾಸದ ಪುರಾವೆ
* ಬ್ಯಾಂಕ ಖಾತೆಯ ವಿವರ
* ಕಂದಾಯ ಇಲಾಖೆಯ ಪ್ರಮಾಣ ಪತ್ರ
* ಮೊಬೈಲ್ ಸಂಖ್ಯೆ (ಆಧಾರ್ ಲಿಂಕ್ ಆಗಿರಬೇಕು)
ಈ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಬಹುದು. ಕಿಸಾನ್ ಆಶೀರ್ವಾದ ಯೋಜನೆ ಸದ್ಯ ಜಾರ್ಖಂಡ ರಾಜ್ಯದಲ್ಲಿ ಜಾರಿಯಲ್ಲಿದ್ದು ಸದ್ಯದಲ್ಲೇ ಕರ್ನಾಟಕಕ್ಕೂ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಕೃಷಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕೊಡುವ ಈ ಹಣ ರೈತರಿಗೆ ಹೆಚ್ಚು ಉಪಯುಕ್ತವಾಗಬಹುದು.
Good news for farmers who have less than 5 acres of agricultural land
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.