ಹೊಸ ಮನೆ ಕಟ್ಟುತ್ತಿರುವವರಿಗೆ ಈ ಬ್ಯಾಂಕುಗಳಲ್ಲಿ ಸಿಗುತ್ತಿದೆ ಕಡಿಮೆ ಬಡ್ಡಿಗೆ ಹೋಮ್ ಲೋನ್

Story Highlights

Home Loan : ಹೊಸದಾಗಿ ಮನೆ ಕಟ್ಟಬೇಕು ಅಂತಿದ್ದೀರಾ? ಹಾಗಾದರೆ ಈ ಬ್ಯಾಂಕ್ ನೀಡುತ್ತೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ!

Home Loan : ಸ್ವಂತ ಮನೆ ನಿರ್ಮಾಣ (own house) ಮಾಡಿಕೊಳ್ಳೋದು ಸಾಕಷ್ಟು ಜನರ ಕನಸು, ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ದುಡಿಯುವುದಕ್ಕಾಗಿ ಕೆಲಸಕ್ಕಾಗಿ ಹಳ್ಳಿಯಿಂದ ಪೇಟೆಗಳಿಗೆ ವಲಸೆ ಬರುತ್ತಾರೆ ಹಾಗೂ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುತ್ತಾರೆ.

ಸಾಕಷ್ಟು ವರ್ಷಗಳಿಂದ ಬಾಡಿಗೆ ಮನೆಯಲ್ಲಿಯೇ (Rent House) ಇದ್ದರೆ ಬಾಡಿಗೆ ದರವೂ ಕೂಡ ಜಾಸ್ತಿ ಆಗುತ್ತದೆ. ಹೀಗಾಗಿ ಯಾರಿಗೆ ಪ್ರತಿ ತಿಂಗಳು ಬಾಡಿಗೆ ಕಟ್ಟುವ ತಾಪತ್ರೆಯ ಬದಲು ಒಂದು ಸ್ವಂತ ಮನೆ ಇದ್ದರೆ ಚೆನ್ನಾಗಿರುತ್ತೆ ಅಲ್ವಾ.. ಅಂತ ಭಾವಿಸುವುದು ಸಹಜ.

ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ 2 ಉಚಿತ ಗ್ಯಾಸ್ ಸಿಲಿಂಡರ್! ಅರ್ಜಿ ಸಲ್ಲಿಸಿ

ಮನೆ ಕಟ್ಟುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಬಂಡವಾಳ, ನಮ್ಮ ಬಳಿ ಹಣ ಇಲ್ದೆ ಇದ್ರೆ ಮನೆಯ ವೆಚ್ಚ ಸರಿದೂಗಿಸಲು ಸಾಧ್ಯವಿಲ್ಲ. ಆದರೆ ಇದಕ್ಕಾಗಿ ನಾವು ಬ್ಯಾಂಕ್ ಮೂಲಕ ಲೋನ್ (bank loan) ತೆಗೆದುಕೊಂಡು ನಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು.

ಬ್ಯಾಂಕ್ ಅಂದ ತಕ್ಷಣ ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿ (low interest) ದರದಲ್ಲಿ ಸಾಲ ಸಿಗುತ್ತೆ ಅಂತ ಯೋಚನೆ ಶುರುವಾಗುತ್ತೆ, ನಿಮ್ಮ ಈ ಯೋಚನೆಗೆ ಇಲ್ಲಿದೆ ಉತ್ತರ.

ಈ ಬ್ಯಾಂಕುಗಳಲ್ಲಿ ಗೃಹ ಸಾಲ ಪಡೆದರೆ ಕಡಿಮೆ ಬಡ್ಡಿದರ – Home Loan

ಬ್ಯಾಂಕ್ ಆಫ್ ಬರೋಡ: (Bank of Baroda)

ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತದೆ 8.40% ನಿಂದ 10.65% ವರೆಗೆ ಬಡ್ಡಿ ವಿಧಿಸಲಾಗುವುದು. 30 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ ಈ ಬಡ್ಡಿ ವಿಧಿಸಿದರೆ, 75 ಲಕ್ಷಗಳ ಸಾಲಕ್ಕೆ 10.90% ವರೆಗೂ ಕೂಡ ಬಡ್ಡಿ ವಿಧಿಸಲಾಗುವುದು.

ಕೇಂದ್ರದ ಬಂಪರ್ ಕೊಡುಗೆ! ಇಂತಹವರಿಗೆ ವಾರ್ಷಿಕ 36,000 ನೇರವಾಗಿ ಖಾತೆಗೆ ಜಮಾ

ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank)

ಅತಿ ಹೆಚ್ಚು ಮೊತ್ತದ ಗೃಹ ಸಾಲವನ್ನು ಈ ಬ್ಯಾಂಕ್ ನಲ್ಲಿ ನೀವು ಪಡೆಯಬಹುದು 30 ಲಕ್ಷ ರೂಪಾಯಿಗಳ ವರೆಗೆ ಸಾಲ ಮಾಡಿದರೆ 8.40% ನಿಂದ 10.25%. ಬಡ್ಡಿ ನಿಗದಿಪಡಿಸಲಾಗುವುದು. 30 ಲಕ್ಷ ಮೇಲ್ಪಟ್ಟು 75 ಲಕ್ಷ ರೂಪಾಯಿಗಳ ವರೆಗಿನ ಸಾಲಕ್ಕೆ 8.40% ನಿಂದ 10.15% ವರೆಗೆ ಬಡ್ಡಿ ಇರುತ್ತದೆ. 75 ಲಕ್ಷ ರೂಪಾಯಿಗಳ ಗೃಹ ಸಾಲಕ್ಕೆ 10.15%ವರೆಗೆ ಬಡ್ಡಿ ವಿಧಿಸಲಾಗುವುದು.

Home Loanಯೂನಿಯನ್ ಬ್ಯಾಂಕ್ (union Bank)

ಈ ಬ್ಯಾಂಕ್ ನಲ್ಲಿ ಗೃಹ ಸಾಲದ ಬಡ್ಡಿದರ ಆರಂಭವಾಗುವುದು ಶೇಕಡ 8.35% ನಿಂದ. ಮತ್ತು 10.75% ವರೆಗೆ ಬಡ್ಡಿದರ ಇರುತ್ತದೆ. 30 ಲಕ್ಷ ರೂಪಾಯಿಗಳ ಸಾಲಕ್ಕೆ ಈ ಬಡ್ಡಿದರ ವಿಧಿಸಲಾಗುವುದು ಮತ್ತು 30 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಗೃಹ ಸಾಲ ತೆಗೆದುಕೊಂಡರೆ 10.90% ವರೆಗೂ ಬಡ್ಡಿದರ ವಿಧಿಸಲಾಗುವುದು.

ಇನ್ಮುಂದೆ ಕೃಷಿ ಭೂಮಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಬೇಕು ಪರ್ಮಿಷನ್! ಹೊಸ ನಿಯಮ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ನಲ್ಲಿ ಗೃಹ ಸಾಲ ತೆಗೆದುಕೊಂಡರೆ ಬಡ್ಡಿದರ 8.40% ಇಂದ ಆರಂಭವಾಗುತ್ತದೆ. 30 ಲಕ್ಷಕ್ಕಿಂತ ಹೆಚ್ಚು 75 ಲಕ್ಷಗಳ ವರೆಗಿನ ಸಾಲಕ್ಕೆ 10.05% ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.

ಬ್ಯಾಂಕ್ ಆಫ್ ಇಂಡಿಯಾ (Bank of India)

ಈ ಬ್ಯಾಂಕ್ ನಲ್ಲಿ ಉಳಿದ ಬ್ಯಾಂಕುಗಳಿಗೆ ಹೋಲಿಸಿದರೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಸಿಗುತ್ತದೆ ಎನ್ನಬಹುದು. ಇಲ್ಲಿನ ಗೃಹ ಸಾಲದ ಬಡ್ಡಿ ದರದ ಮೊತ್ತ 8.30% ನಿಂದ ಆರಂಭವಾಗುತ್ತದೆ.

ಬ್ಯಾಂಕ್ ಗಳಲ್ಲಿ ಸಾಲ ಪಡೆದುಕೊಳ್ಳುವಾಗ ಮುಖ್ಯವಾಗಿ ಗಮನಿಸುವ ಅಂಶ ನಿಮ್ಮ ಕ್ರೆಡಿಟ್ ಸ್ಕೋರ್ (Credit Score). ನೀವು ಯಾವುದೇ ಆಸ್ತಿ ಪತ್ರ ಅಡಮಾನ ಇಟ್ಟರೂ ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ರೆ ಬಡ್ಡಿ ದರವು ಕಡಿಮೆಯಾಗುತ್ತದೆ, ಇಲ್ಲವಾದರೆ ಹೆಚ್ಚಿನ ಬಡ್ಡಿದರ ವಿಧಿಸಲಾಗುತ್ತದೆ.

ಕೇವಲ 4% ಬಡ್ಡಿ ದರಕ್ಕೆ ಸಿಗುತ್ತೆ ಕೇಂದ್ರ ಸರ್ಕಾರದ ಸಾಲ; ರೈತರಿಗೆ ಬಂಪರ್ ಯೋಜನೆ

ಹೀಗಾಗಿ ನೀವು ಈಗ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಬಯಸಿದರೆ ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ದರ ಇದೆ ಅನ್ನುವ ಸಣ್ಣ ಮಾಹಿತಿ ಲಭ್ಯವಾಗಿರುತ್ತದೆ, ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಆಯಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.

These banks are offering low interest home loan for Build Your Own House

Related Stories