ಗ್ಯಾಸ್ ಸಿಲಿಂಡರ್ ಬಳಕೆ ಮಾಡೋರಿಗೆ ಕೇಂದ್ರದ ಬಿಗ್ ಅಪ್ಡೇಟ್! ನಕಲಿ ಬುಕ್ಕಿಂಗ್‌ಗೆ ಬೀಳಲಿದೆ ಬ್ರೇಕ್

Story Highlights

E-kyc ಆಗಿದ್ರೆ ಸಿಲಿಂಡರ್ ಗಾಗಿ ಕ್ಯೂ ನಿಲ್ಲಬೇಕಾದ ಪ್ರಮೇಯ ಬರುವುದೇ ಇಲ್ಲ. ಬಹಳ ಸುಲಭವಾಗಿ ಸಿಲಿಂಡರ್ (LPG Gas Cylinder) ಪಡೆಯಬಹುದು

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ಅಡುಗೆ ಮಾಡುವುದಕ್ಕಾಗಿ ಗ್ಯಾಸ್ ಸಿಲಿಂಡರ್ ಗಳನ್ನು (Gas Cylinder) ಬಳಕೆ ಮಾಡುತ್ತಾರೆ. ಗ್ಯಾಸ್ ಸಿಲಿಂಡರ್ ನ ಬೆಲೆ ಏರಿಕೆ ಇಂದ ಜನರಿಗೆ ಕೂಡ ಬೇಸರವಾಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರದ ಕಡೆಯಿಂದ ಗ್ಯಾಸ್ ಸಿಲಿಂಡರ್ ಗೆ ಸಂಬಂಧಿಸಿದ ಹಾಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವ ಆಗಿರುವ ಹರ್ದೀಪ್ ಸಿಂಗ್ ಪುರಿ ಅವರ ಕಡೆಯಿಂದ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು ಇದನ್ನು ನೀವೆಲ್ಲರೂ ತಿಳಿದುಕೊಳ್ಳಬೇಕು..

ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಕೂಡ ಜನರು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ ಎನ್ನುವ ವಿಷಯ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಒಂದೇ ಮನೆಯವರು ಸುಳ್ಳು ದಾಖಲೆಗಳನ್ನು ನೀಡಿ, ಸರ್ಕಾರಿ ಯೋಜನೆಗಳ ಮೂಲಕ ಗ್ಯಾಸ್ ಸಿಲಿಂಡರ್ ಪಡೆಯುತ್ತಿದ್ದಾರೆ.

ತವರಿನ ಆಸ್ತಿಯಲ್ಲಿ ಪಾಲು ಕೇಳೋ ಮಹಿಳೆಯರಿಗೆ ಹೊಸ ರೂಲ್ಸ್! ಇಂತಹ ಸಮಯದಲ್ಲಿ ಆಸ್ತಿ ಸಿಗೋದಿಲ್ಲ

ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಎಲ್ಲರೂ ಕೂಡ kyc ಮಾಡಿಸಬೇಕು ಎನ್ನುವ ನಿಯಮವನ್ನು ಜಾರಿಗೆ ತರಲಾಗಿತ್ತು. ಜೊತೆಗೆ kyc ಮಾಡಿಸಲು ದಿನಾಂಕವನ್ನು ನಿಗದಿ ಪಡಿಸಲಾಗಿತ್ತು.

ಆದರೆ ಇದೀಗ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, kyc ಮಾಡಿಸಲು ನಿಗದಿಯಾಗಿದ್ದ ಸಮಯದ ಮಿತಿಯನ್ನು ತೆಗೆದು ಹಾಕಲಾಗಿದೆ, ಜನರು ಯಾವಾಗ ಬೇಕಾದರೂ kyc ಮಾಡಿಸಬಹುದು.

ಆದರೆ ಆದಷ್ಟು ಬೇಗ ಮಾಡಿಸುವುದು ಉತ್ತಮ ಎನ್ನುವುದು ಸರ್ಕಾರದ ಅಭಿಪ್ರಾಯ ಆಗಿದೆ. ಹಾಗಾಗಿ kyc ವಿಚಾರಕ್ಕೆ ಸಂಬಂಧಿಸಿದ ಹಾಗೆ ಇನ್ನುಮುಂದೆ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಸಚಿವರು ಈ ಬಗ್ಗೆ ಸ್ಪಶ್ಟನೆ ನೀಡಿದ್ದಾರೆ.

1934ರ ಸೈಕಲ್ ಬಿಲ್ ವೈರಲ್! ಆಗ ಬೆಲೆ ಎಷ್ಟಿತ್ತು ಗೊತ್ತಾ? ಆಗಿನ ಕಾಲವೇ ಚೆನ್ನಾಗಿತ್ತು ಅಂತೀರ!

Gas Cylinderಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಲು, kyc ಮಾಡಿಸುವ ಪ್ರಕ್ರಿಯೆಯನ್ನು ತೈಲ ಕಂಪನಿಗಳು ಜಾರಿಗೆ ತಂದು, ಅದನ್ನು ಕಡ್ಡಾಯಗೊಳಿಸಿದೆ ಎಂದು ತಿಳಿಸಿದ್ದಾರೆ. Kyc ಇಂದ ನಕಲಿ ಬುಕಿಂಗ್ (Gas Booking) ಸಮಸ್ಯೆಗಳು ಕಡಿಮೆ ಆಗುತ್ತದೆ ಎಂದು ತಿಳಿಸಿದ್ದಾರೆ.

E-kyc ಆಗಿದ್ರೆ ಸಿಲಿಂಡರ್ ಗಾಗಿ ಕ್ಯೂ ನಿಲ್ಲಬೇಕಾದ ಪ್ರಮೇಯ ಬರುವುದೇ ಇಲ್ಲ. ಬಹಳ ಸುಲಭವಾಗಿ ಸಿಲಿಂಡರ್ (LPG Gas Cylinder) ಪಡೆಯಬಹುದು ಎಂದು ಮಾಹಿತಿ ಸಿಕ್ಕಿದ್ದು, ಜನರಿಗೆ ಬೇಕಾಗಿರುವುದು ಕೂಡ ಇದೇ ಆಗಿದೆ.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಹೌದು, ಇಲ್ಲಿದೆ ಟಿಪ್ಸ್, ಈ ರೀತಿ ಟ್ರೈ ಮಾಡಿ

Ekyc ಗಾಗಿ ನಿಮ್ಮ ಹೆಸರು, ಆಧಾರ್ ಕಾರ್ಡ್ ನಂಬರ್, ಅಡ್ರೆಸ್, ಫೋನ್ ನಂಬರ್ ಈ ಎಲ್ಲಾ ಮಾಹಿತಿಗಳನ್ನು ಸಹ ಕೇಳಲಾಗುತ್ತಿದೆ. ಈ ರೀತಿಯಾಗಿ ನಿಮ್ಮ ಬಗೆಗಿನ ಮಾಹಿತಿಗಳನ್ನು ಈ ರೀತಿಯಾಗಿ ಅಪ್ಡೇಟ್ ಮಾಡಿದ ಹಾಗೆ ಆಗುತ್ತದೆ. Ekyc ಯನ್ನು ಎರಡು ರೀತಿ ಮಾಡಬಹುದು, ಒಂದು ನಿಮ್ಮ LPG ಗ್ಯಾಸ್ ಸಿಲಿಂಡರ್ ಆಫೀಸ್ ಗೆ ಹೋಗಿ, ಅಲ್ಲಿಯೇ ekyc ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಅಥವಾ ಕಂಪನಿಯ ಅಧಿಕಾರಿಗಳು ತಮ್ಮ ಫೋನ್ ಇಂದಲೇ ಈ ಪ್ರಕ್ರಿಯೆ ಮುಗಿಸಬಹುದು.

ಅವರು ಫೋನ್ ಇಂದ ನಿಮ್ಮ ಎಲ್ಲಾ ಮಾಹಿತಿಗಳನ್ನು ಪಡೆದು, ವೆರಿಫೈ ಮಾಡಿ, ನಿಮ್ಮ ಫೋನ್ ನಂಬರ್ ಗೆ ಓಟಿಪಿ ಕಳಿಸುತ್ತಾರೆ. ಅದನ್ನು ನಮೂದಿಸಿದ ಬಳಿಕ ಓಟಿಪಿ ಪ್ರಕ್ರಿಯೆ ಪೂರ್ತಿಯಾಗುತ್ತದೆ. ಈ ರೀತಿಯಾಗಿ ನೀವು kyc ಮುಗಿಸಿಕೊಳ್ಳಬಹುದು. ಈಗ kyc ಗೆ ಕೊನೆಯ ದಿನಾಂಕ ಇಲ್ಲದ ಕಾರಣ, ಯಾರೆಲ್ಲಾ ಇನ್ನು ಈ ಕೆಲಸ ಮಾಡಿಲ್ಲವೋ, ಅವರೆಲ್ಲರೂ ಆದಷ್ಟು ಬೇಗ ಸುಲಭವಾಗಿ ಮಾಡಿಸಿಕೊಳ್ಳಬಹುದು.

Big update from the center for LPG gas cylinder users

Related Stories