ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು ತಲಾ 5,000 ರೂಪಾಯಿ ಪಿಂಚಣಿ

ಮ್ಯೂಚುವಲ್ ಫಂಡ್ (mutual fund) ಅಂತ ಹೂಡಿಕೆ (investment) ಗಳ ಮೇಲೆ ನಂಬಿಕೆ ಇಲ್ಲದಿದ್ದರೆ ಹೆಚ್ಚು ಸೇಫ್ ಆಗಿರುವ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ

ನೀವು ನಿಮ್ಮ ನಿವೃತ್ತಿ (retirement) ನಂತರದ ಜೀವನವನ್ನು ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಸುಲಭವಾಗಿ ಕಳೆಯಬೇಕಾ? ಯಾರ ಮುಂದೆಯೂ ಒಂದು ರೂಪಾಯಿಗಾಗಿ ಕೈ ಚಾಚಿದೆ ಸ್ವಾವಲಂಬಿಯಾಗಿ ಜೀವನ ನಡೆಸಬೇಕಾ? ಹಾಗಾದ್ರೆ ತಕ್ಷಣ ಈ ಕೆಲಸ ಮಾಡಿ.

ನಾವು ನಮ್ಮ ಬಳಿ ಇರುವ ಹಣವನ್ನು ಹೂಡಿಕೆ (investment ) ಮಾಡಿದರೆ ಭವಿಷ್ಯಕ್ಕೆ ಅದು ಬಹಳ ಪ್ರಮುಖವಾಗಿರುವ ಆಸ್ತಿ ಎನಿಸಿಕೊಳ್ಳುತ್ತದೆ. ಕಾಸಿದ್ರೆ ಕೈಲಾಸ ಎನ್ನುವಂತೆ, ನಾವು ಯಾವುದೇ ವಯಸ್ಸಿನಲ್ಲಿ ಇರುವಾಗಲೂ ಕೂಡ ನಿತ್ಯದ ಅವಶ್ಯಕತೆಗಳಿಗಾಗಿ ಹಣ ಬೇಕೇ ಬೇಕು.

ಎಲ್ಲಾ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಪಿಂಚಣಿ (pension) ಲಭ್ಯವಿರುವುದಿಲ್ಲ. ಹಾಗಾಗಿ ವೃದ್ಧಾಪ್ಯದ ನಂತರ ಪಿಂಚಣಿ ಅಗತ್ಯ ಇದ್ದರೆ ತಕ್ಷಣ ಹೂಡಿಕೆ ಮಾಡುವುದು ಒಳ್ಳೆಯದು.

ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು ತಲಾ 5,000 ರೂಪಾಯಿ ಪಿಂಚಣಿ - Kannada News

ನಿಮ್ಮ ಬ್ಯಾಂಕ್ ಖಾತೆ ನೀವು ಬಳಸದೇ ಇದ್ದರೆ ಆ ಹಣ ಯಾರ ಪಾಲಾಗುತ್ತೆ ಗೊತ್ತಾ?

ಅಟಲ್ ಪಿಂಚಣಿ ಯೋಜನೆ! (Atal pension scheme)

ಮ್ಯೂಚುವಲ್ ಫಂಡ್ (mutual fund) ಅಂತ ಹೂಡಿಕೆ (investment) ಗಳ ಮೇಲೆ ನಂಬಿಕೆ ಇಲ್ಲದಿದ್ದರೆ ಹೆಚ್ಚು ಸೇಫ್ ಆಗಿರುವ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ. ಹಾಗಾಗಿ ಗಂಡ ಹೆಂಡತಿ ಜಂಟಿ ಖಾತೆ ತೆರೆದು, ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ (invest in Atal pension scheme)

ಅಸಂಘಟಿತ ಕಾರ್ಮಿಕ ವಲಯದಲ್ಲಿ ದುಡಿಯುವ ಕಾರ್ಮಿಕರಿಗಾಗಿ ಅಟಲ್ ಪಿಂಚಣಿ ಯೋಜನೆಯನ್ನು 2015ರಲ್ಲಿ ಆರಂಭಿಸಲಾಗಿತ್ತು. ಈ ಯೋಜನೆಯಲ್ಲಿ 18ರಿಂದ 40 ವರ್ಷ ವಯಸ್ಸಿನವರು ಹೂಡಿಕೆ ಮಾಡಬಹುದು.

ವಿಶೇಷ ಅಂದ್ರೆ ಪತಿ ಪತ್ನಿ ಜಂಟಿ ಖಾತೆಯನ್ನು ಆರಂಭಿಸಿದರೆ 60 ವರ್ಷದ ಬಳಿಕ ಪ್ರತಿ ತಿಂಗಳು ತಲಾ 5,000 ಗಳಂತೆ ಸಾವಿರ ರೂಪಾಯಿಗಳ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.

ಚಿನ್ನದ ಬೆಲೆ ನಿರಂತರ ಇಳಿಕೆ, ಚಿನ್ನಾಭರಣ ಖರೀದಿಗೆ ಅಂಗಡಿ ಮುಂದೆ ಜನವೋ ಜನ

Pension Schemeಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಆರಂಭಿಸುತ್ತೀರಿ. ಅದರ ಆಧಾರದ ಮೇಲೆ ಪಿಂಚಣಿ ನಿರ್ಧಾರವಾಗುತ್ತದೆ. ಅದೇ ರೀತಿ ಕನಿಷ್ಠ ದಿನಕ್ಕೆ 7 ರೂಪಾಯಿಗಳಿಂದ, ತಿಂಗಳಿಗೆ 210 ಗಳು ವರೆಗೆ ಹೂಡಿಕೆ ಮಾಡಬಹುದು.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ಶಿಪ್; ಅಪ್ಲೈ ಮಾಡಲು ಇಲ್ಲಿದೆ ಡೈರೆಕ್ಟ್ ಲಿಂಕ್

ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ?

*18 ವರ್ಷದಲ್ಲಿ ಹೂಡಿಕೆ ಆರಂಭಿಸಿದ್ರೆ 5,000 ಪಿಂಚಣಿಗೆ ತಿಂಗಳಿಗೆ 210 ರೂಪಾಯಿ ಹೂಡಿಕೆ

*25 ವರ್ಷದಲ್ಲಿ ಹೂಡಿಕೆ ಆರಂಭಿಸಿದ್ರೆ 5,000 ಪಿಂಚಣಿಗೆ ತಿಂಗಳಿಗೆ 376 ರೂಪಾಯಿ ಹೂಡಿಕೆ

*30 ವರ್ಷದಲ್ಲಿ ಹೂಡಿಕೆ ಆರಂಭಿಸಿದ್ರೆ 5,000 ಪಿಂಚಣಿಗೆ ತಿಂಗಳಿಗೆ 577 ರೂಪಾಯಿ ಹೂಡಿಕೆ

*35 ವರ್ಷದಲ್ಲಿ ಹೂಡಿಕೆ ಆರಂಭಿಸಿದ್ರೆ 5,000 ಪಿಂಚಣಿಗೆ ತಿಂಗಳಿಗೆ 902 ರೂಪಾಯಿ ಹೂಡಿಕೆ ಮಾಡಬೇಕು.

ಅಟಲ್ ಪಿಂಚಣಿ ಯೋಜನೆ 20 ವರ್ಷಗಳ ಅವಧಿಯದಾಗಿದ್ದು ನೀವು ಒಮ್ಮೆ ಹೂಡಿಕೆ ಆರಂಭಿಸಿದರೆ, ಮತ್ತೆ ಹಣವನ್ನು ಮಧ್ಯದಲ್ಲಿ ಹಿಂಪಡೆಯಲು ಸಾಧ್ಯವಿಲ್ಲ. ಸಂಪೂರ್ಣವಾಗಿ ಇಪ್ಪತ್ತು ವರ್ಷದ ನಂತರವಷ್ಟೇ ಪಿಂಚಣಿಯಾಗಿ ಹಣವನ್ನು ಹಿಂಪಡೆಯಬಹುದು.

2022 ಅಕ್ಟೋಬರ್ 1ರ ನಂತರ ಆದಾಯ ತೆರಿಗೆ ಪಾವತಿ ಮಾಡುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ನೀವು ಯಾವುದೇ ಹತ್ತಿರದ ಬ್ಯಾಂಕ್ (Bank) ಅಥವಾ ಪೋಸ್ಟ್ ಆಫೀಸ್ ನಲ್ಲಿ (Post Office) ಅಟಲ್ ಪಿಂಚಣಿ ಯೋಜನೆಯ ಹೂಡಿಕೆ ಆರಂಭಿಸಬಹುದು.

ಸ್ವಂತ ವ್ಯಾಪಾರಕ್ಕೆ ಸರ್ಕಾರವೇ ನೀಡುತ್ತೆ 50 ಲಕ್ಷದ ತನಕ ಸಾಲ! ಅಪ್ಲೈ ಮಾಡಿ

Both husband and wife get a pension of Rs 5,000 each per month

Follow us On

FaceBook Google News

Both husband and wife get a pension of Rs 5,000 each per month