ತಂದೆಯ ಪಿಂಚಣಿ ಹಣ ಹೆಂಡತಿ ಬದಲು ಮಗಳು ಪಡೆಯಬಹುದಾ? ನಿಯಮ ಏನಿದೆ
- ಇಂತಹ ಹೆಣ್ಣು ಮಕ್ಕಳಿಗೆ ಪಿಂಚಣಿ ಪಡೆದುಕೊಳ್ಳಲು ಸಾಧ್ಯ ಇಲ್ಲ.
- ಪಿಂಚಣಿ ಹಣ ಹೆಂಡತಿ ಬದಲು ಮಗಳು ಪಡೆಯಬಹುದಾ ತಿಳಿಯಿರಿ.
- ಪೆನ್ಷನ್ ನಲ್ಲಿ ಹೆಣ್ಣು ಮಕ್ಕಳಿಗೆ ಹಣ ಸಿಗುತ್ತಾ ಅನ್ನೋದಕ್ಕೆ ಇಲ್ಲಿದೆ ನೋಡಿ ಉತ್ತರ.
Pension Rule: ಸಮಾಜ ಕಲ್ಯಾಣ ಯೋಜನೆ ಅಡಿಯಲ್ಲಿ ಒಂದಾಗಿ ಕಾಣಿಸಿಕೊಳ್ಳುವಂತಹ ಕೇಂದ್ರ ನಾಗರಿಕ ಸೇವಾ ನಿಯಮ 54 ಅಡಿಯಲ್ಲಿ ಪೆನ್ಷನ್ ಪಡೆದುಕೊಳ್ಳುವಂತಹ ವ್ಯಕ್ತಿಯ ನಂತರ ಆತನಿಗೆ ಸಿಗಬೇಕಾಗಿರುವಂತಹ ಪೆನ್ಷನ್ (Pension) ಅನ್ನು ಆತನ ಜೀವನ ಸಂಗಾತಿ ಅಥವಾ ಮಕ್ಕಳಿಗೆ ನೀಡಲಾಗುತ್ತದೆ ಆದರೆ ಮಗಳು ಪೆನ್ಷನ್ ಪಡೆದುಕೊಳ್ಳುವುದಕ್ಕೆ ಅರ್ಹತೆಯನ್ನು ಹೊಂದಿದ್ದಾಳೆಯೇ ಅನ್ನೋ ಪ್ರಶ್ನೆ ಸಾಕಷ್ಟು ಜನರಿಗೆ ಇದೆ.
ಈ ಲೇಖನದಲ್ಲಿ ಆ ಪ್ರಶ್ನೆಗೆ ಉತ್ತರವನ್ನು ಪಡೆದುಕೊಳ್ಳೋಣ.

ಸಂಬಳ ಕಡಿಮೆ ಅಂತ ಚಿಂತೆ ಬೇಡ, ಈ ಬ್ಯಾಂಕಿನಲ್ಲಿ ನಿಮಗೂ ಸಿಗುತ್ತೆ ಪರ್ಸನಲ್ ಲೋನ್
ಪೆನ್ಷನ್ ಗೆ ನಿಜಕ್ಕೂ ಯಾರು ಅರ್ಹತೆಯನ್ನು ಹೊಂದಿರುತ್ತಾರೆ?
ಪಿಂಚಣಿ ಪಡೆದುಕೊಳ್ಳುತ್ತಿರುವ ವ್ಯಕ್ತಿಯ ನಂತರ ಆತನ ಜೀವನ ಸಂಗಾತಿ, ಮಕ್ಕಳು, ಪೋಷಕರು ಹಾಗೂ ನಂತರ ಅವರ ಅಂಗವಿಕಲರಾಗಿರುವಂತಹ ಒಡಹುಟ್ಟಿದವರು ಪೆನ್ಷನ್ ಪಡೆದುಕೊಳ್ಳುವುದಕ್ಕೆ ಅರ್ಹತೆಯನ್ನು ಹೊಂದಿರುತ್ತಾರೆ.
ಮಗಳು ಪಿಂಚಣಿ ಹಣವನ್ನು ಪಡೆಯಬಹುದಾ?
2021ರ ನಿಯಮದ ಪ್ರಕಾರ ಗಂಡನನ್ನು ಕಳೆದುಕೊಂಡಿರುವಂತಹ ಹೆಣ್ಣು ಮಕ್ಕಳು ಪೆನ್ಷನ್ ಪಡೆದುಕೊಳ್ಳುವುದಕ್ಕೆ ಅರ್ಹತೆಯನ್ನು ಹೊಂದಿರುತ್ತಾರೆ. ಇದಕ್ಕಾಗಿ ಹೆಣ್ಣು ಮಗಳ ವಯಸ್ಸು 25 ವರ್ಷ ಮೀರಿರಬಾರದು.
ಈ ಮೂಲಕ ಪಿಂಚಣಿ ಪಡೆದುಕೊಳ್ಳುವಂತಹ ಕುಟುಂಬದ ಸದಸ್ಯರ ಪಟ್ಟಿಯಲ್ಲಿ ಹೆಣ್ಣು ಮಗಳನ್ನು ಹೊರಗಿಡುವ ಹಾಗಿಲ್ಲ. ಮದುವೆ ಆಗದೆ ಇರುವ ಅಥವಾ ಉದ್ಯೋಗ ಇಲ್ಲದೆ ಇರುವಂತಹ, ವಿಕಲತೆಯನ್ನು ಹೊಂದಿರುವ, ವಿಚ್ಛೇದನ ಹಾಗೂ ವಿಧವೆ ಆಗಿರುವಂತಹ ಹೆಣ್ಣುಮಗಳು ಕೂಡ ಸರ್ಕಾರಿ ಕೆಲಸದಲ್ಲಿದ್ದ ತಂದೆಯ ಪೆನ್ಷನ್ ಪಡೆದುಕೊಳ್ಳುವುದಕ್ಕೆ ಅರ್ಹತೆಯನ್ನು ಹೊಂದಿರುತ್ತಾಳೆ.
ನಿಮಗೆ ಸ್ವಂತ ಮನೆ ಇಲ್ವಾ? ಸರ್ಕಾರದಿಂದ ಸಿಗುತ್ತೆ 2.50 ಲಕ್ಷ ರೂಪಾಯಿ: ಹೀಗೆ ಅಪ್ಲೈ ಮಾಡಿ
ಎಲ್ಲ ಅವಿವಾಹಿತ ಹಾಗೂ ವಿಧವಾ ಹೆಣ್ಣು ಮಕ್ಕಳು ಪಿಂಚಣಿ ಪಡೆದುಕೊಳ್ಳುವುದಕ್ಕೆ ಅರ್ಹತೆಯನ್ನು ಹೊಂದಿದ್ದಾರೆ ಎಂಬುದಾಗಿ ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ. ವಿಚ್ಛೇದನದಲ್ಲಿ ಈಗಾಗಲೇ ತೀರ್ಪು ಬಂದಿದ್ರೆ ಅಂತವರಿಗೂ ಕೂಡ ತಂದೆಯ ಪಿಂಚಣಿಯನ್ನು ಪಡೆದುಕೊಳ್ಳುವ ಹಕ್ಕಿದೆ.
ಮದುವೆ ಆಗದೆ ಇರುವಂತಹ ಅವಿವಾಹಿತ ಹೆಣ್ಣು ಮಕ್ಕಳು ಸ್ವಂತ ಉದ್ಯೋಗವನ್ನು ಪಡೆದುಕೊಳ್ಳುವವರೆಗೂ ಅಥವಾ ಮದುವೆ ಆಗುವವರೆಗೂ ಈ ಅರ್ಹತೆಯನ್ನು ಹೊಂದಿರುತ್ತಾರೆ. ದತ್ತು ಪಡೆದಿರುವಂತಹ ಹೆಣ್ಣು ಮಗು ಪಿಂಚಣಿಯನ್ನು ಪಡೆದುಕೊಳ್ಳುತ್ತಿದ್ದರೆ ಕುಟುಂಬದವರು ಅದನ್ನ ನಿರಾಕರಿಸುವ ಹಕ್ಕನ್ನು ಹೊಂದಿದ್ದಾರೆ.
ಬಂಪರ್ ಅವಕಾಶ! ಈ ಬಿಸಿನೆಸ್ ಮಾಡೋಕೆ ಸರ್ಕಾರವೇ ಕೊಡಲಿದೆ ದುಡ್ಡು
ಮಾನಸಿಕ ವಿಕಲಚೇತನ ಹೆಣ್ಣುಮಕ್ಕಳಿಗೆ ಕೂಡ 25 ವರ್ಷದವರೆಗೆ ಪೆನ್ಷನ್ ನಲ್ಲಿ ಹಣ ಪಡೆದುಕೊಳ್ಳುವ ಅರ್ಹತೆ ಇದೆ. ಒಂದು ವೇಳೆ ಹುಡುಗಿಯ ಪೋಷಕರು ವಿಚ್ಛೇದನವನ್ನು ಪಡೆದುಕೊಂಡಿದ್ದರೆ ಅಥವಾ ಮರಣ ಹೊಂದಿದ್ರೆ ಆಗ ಕೂಡ ಆ ಹೆಣ್ಣು ಮಗು ಪೆನ್ಷನ್ ಪಡೆದುಕೊಳ್ಳುವುದಕ್ಕೆ ಅರ್ಹತೆಯನ್ನು ಹೊಂದಿರುತ್ತಾರೆ.
Can a Daughter Claim Her Father’s Pension Instead of the Wife