ಅನ್ನದಾತ ರೈತರಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದ ಕೇಂದ್ರ ಸರ್ಕಾರ! ಮಹತ್ವದ ಮಾಹಿತಿ

ಕೇಂದ್ರ ಕೃಷಿ ಸಚಿವಾಲಯ ರೈತರಿಗಾಗಿ AI ಚಾಟ್ ಬಾಟ್ (AI chat bot) ಸೇವೆಯನ್ನು ಇತ್ತೀಚಿಗೆ ಆರಂಭಿಸಿದೆ. ರೈತರು ಹೆಚ್ಚು pm ಕಿಸಾನ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ

ಪಿಎಂ ಕಿಸಾನ್ ಸನ್ಮಾನ ನಿಧಿ (pm Kisan Samman Nidhi) ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಪರಿಹಾರ ನೀಡುವುದಕ್ಕೆ ಕೇಂದ್ರ ಸರ್ಕಾರ (central government) ಮುಂದಾಗಿದೆ.

ಕೇಂದ್ರ ಸರ್ಕಾರ ಈಗಾಗಲೇ ದೇಶದ ಅನ್ನದಾತ ರೈತರಿಗೆ (farmer) ಅನುಕೂಲವಾಗುವ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರಿಗೆ ಅನುಕೂಲ ವಾಗುವ ರೀತಿಯಲ್ಲಿ ಸಹಾಯಧನ ನೀಡುವುದು ಅಥವಾ ಕಡಿಮೆ ಬಡ್ಡಿ ದರಕ್ಕೆ ಸಾಲ ಸೌಲಭ್ಯ (loan) ಒದಗಿಸುವುದು, ವಿಮಾ ಸೌಲಭ್ಯ (Life insurance) ಹೀಗೆ ಮೊದಲಾದ ಪ್ರಯೋಜನಗಳನ್ನು ರೈತರು ಪಡೆದುಕೊಳ್ಳುವಂತೆ ಸರಕಾರದ ಯೋಜನೆಗಳು ಜಾರಿಯಾಗಿದೆ.

ಈ ರೀತಿ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ ಒನ್ ಟು ಡಬಲ್ ಪಿಂಚಣಿ; ಇಂದೇ ಯೋಜನೆಗೆ ಅಪ್ಲೈ ಮಾಡಿ

ಅನ್ನದಾತ ರೈತರಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದ ಕೇಂದ್ರ ಸರ್ಕಾರ! ಮಹತ್ವದ ಮಾಹಿತಿ - Kannada News

ಇದೀಗ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿಯೂ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಸರ್ಕಾರ ಯೋಚಿಸಿದೆ. ಕೃಷಿ ಖಾತೆ ಸಚಿವ ಕೈಲಾಸ ಚೌದರಿ ರೈತರಿಗೆ ನೀಡಲಾಗಿರುವ ಹೊಸ ಸೇವೆಯನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ.

ರೈತರಿಗೆ ಚಾಟ್ ಬಾಟ್ ಸೇವೆ

ಕೇಂದ್ರ ಕೃಷಿ ಸಚಿವಾಲಯ ರೈತರಿಗಾಗಿ AI ಚಾಟ್ ಬಾಟ್ (AI chat bot) ಸೇವೆಯನ್ನು ಇತ್ತೀಚಿಗೆ ಆರಂಭಿಸಿದೆ. ರೈತರು ಹೆಚ್ಚು pm ಕಿಸಾನ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಇಂತಹ ವಿದ್ಯಾರ್ಥಿನಿಯರಿಗೆ ಸಿಗಲಿದೆ ಸ್ಕಾಲರ್ಶಿಪ್; ವರ್ಷಕ್ಕೆ ₹6 ಸಾವಿರ ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸಿ

ಏನಿದು AI ಚಾಟ್ ಬಾಟ್?

AI Chatbot For PM Kisan SchemeAI ಚಾಟ್‌ಬಾಟ್ ಮೂಲಕ PM ಕಿಸಾನ್ ಯೋಜನೆಯ ದಕ್ಷತೆ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶ. ಇದಕ್ಕಾಗಿ ಒಂದು ಪ್ರಮುಖ ಪ್ರಶ್ನೆಯನ್ನು ರೈತರಿಗೆ ಕೇಳಲಾಗುತ್ತದೆ. ಇದರ ಜೊತೆಗೆ ರೈತರು ತಮ್ಮ ಪ್ರಶ್ನೆಗಳನ್ನು ಕೇಳಿ, ತಕ್ಷಣಕ್ಕೆ ನಿಖರವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಸಚಿವಾಲಯ ಮಾಹಿತಿ ನೀಡಿದೆ.

ಎ ಐ ಚಾಟ್ ಅನ್ನು ಎಕ್ಸೆಸ್ಟೆಪ್ ಫೌಂಡೇಶನ್ ಹಾಗೂ ಭಾಷಿಣಿ ತಂತ್ರಜ್ಞಾನದೊಂದಿಗೆ ಅಭಿವೃದ್ಧಿ ಪಡಿಸಲಾಗಿದೆ. ಈ ವ್ಯವಸ್ಥೆಯಿಂದಾಗಿ ರೈತರು ತಮ್ಮ ಯಾವುದೇ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ.

ಬ್ಯಾಂಕ್ ಸಾಲ ಪಡೆದು ತೀರಿಸಲಾಗದ ಗ್ರಾಹಕರಿಗೆ ನೆಮ್ಮದಿಯ ವಿಚಾರ! ಹೊಸ ಗೈಡ್ ಲೈನ್ಸ್ ಬಿಡುಗಡೆ

ಪಿ ಎಂ ಕಿಸಾನ್ ನಿಧಿ ಯೋಜನೆಗೆ ಸಂಬಂಧಪಟ್ಟ ಹಾಗೆ ತಮ್ಮ ಅರ್ಜಿಯ ಸ್ಥಿತಿ, ಹಣ ಮಂಜೂರಾತಿಯ ಬಗ್ಗೆ, ಕಿಸಾನ್ ಯೋಜನೆಯ ನವೀಕರಣದ ಬಗ್ಗೆ ಹಾಗೂ ಇನ್ನಿತರ ಮಾಹಿತಿಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಅಷ್ಟೇ ಅಲ್ಲ ಎಐ ಚಾಟ್ ಬಾಟ್ (AI chat bot) ಮೂಲಕ ಕಿಸಾನ್ ಯೋಜನೆಯ ಅಪ್ಲಿಕೇಶನ್ ಕೂಡ ಪಡೆಯಬಹುದು. ಮೊಬೈಲ್ ಗೆ ಸರ್ಕಾರದ ಅಧಿಕೃತ ಅಪ್ಲಿಕೇಶನ್ (application) ಡೌನ್ಲೋಡ್ ಮಾಡಿಕೊಂಡು ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಸುಧಾರಿತ ತಂತ್ರಜ್ಞಾನದೊಂದಿಗೆ (Technology) ತಯಾರಿಸಲಾಗಿದ್ದು ಇದರ ಮತ್ತೊಂದು ಮುಖ್ಯ ಆಕರ್ಷಣೆ ಅಂದರೆ ಬೇರೆ ಬೇರೆ ಭಾಷೆಗಳಲ್ಲಿ ಲಭ್ಯವಿದೆ ಹಾಗಾಗಿ ಸ್ಥಳೀಯರು ತಮ್ಮ ಅನುಕೂಲಕರ ಭಾಷೆಯಲ್ಲಿಯೇ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಸದ್ಯ ದೇಶದ 22 ಅಧಿಕೃತ ಭಾಷೆಯಲ್ಲಿ ಚಾಟ್ ಲಭ್ಯವಿದೆ. ಹಾಗಾಗಿ ಇನ್ನು ಮುಂದೆ ರೈತರು ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ ಅಡಿಯಲ್ಲಿ ಯಾವುದೇ ರೀತಿಯ ಮಾಹಿತಿಯನ್ನು ನಿಖರವಾಗಿ ಹಾಗೂ ಪಾರದರ್ಶಕವಾಗಿ AI ಚಾಟ್ ಬಾಟ್ ಮೂಲಕ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Central Government Launches AI Chatbot For PM Kisan Scheme

Follow us On

FaceBook Google News

Central Government Launches AI Chatbot For PM Kisan Scheme