ನಿಮ್ಮ ಬ್ಯಾಂಕ್ ಅಕೌಂಟ್ಗೆ ಗ್ಯಾಸ್ ಸಬ್ಸಿಡಿ ಹಣ ಬಂತಾ? ಈ ರೀತಿ ಮೊಬೈಲ್ನಲ್ಲೆ ಚೆಕ್ ಮಾಡಿಕೊಳ್ಳಿ
ಈಗಾಗಲೇ ಸರ್ಕಾರ ಪ್ರತಿ ಮನೆಗಳಲ್ಲಿ ಬಳಸುವ ವಸ್ತು ಗ್ಯಾಸ್ ಸಿಲಿಂಡರ್ ಆಗಿರುವ ಕಾರಣ, ಇವುಗಳ ಬೆಲೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇರುವ ಕಾರಣ, ಸಬ್ಸಿಡಿ (Gas Cylinder Subsidy) ನೀಡುವುದಾಗಿ ತಿಳಿಸಿತ್ತು.
ಈಗ ಎಲ್ಲರ ಮನೆಯಲ್ಲೂ ಅಡುಗೆ ಮಾಡುವುದಕ್ಕಾಗಿ LPG ಸಿಲಿಂಡರ್ (LPG Cylinder) ಬಳಸುತ್ತಾರೆ. ಹಳ್ಳಿಗಳಲ್ಲಿ ಕೂಡ ಅಡುಗೆ ಮಾಡುವುದಕ್ಕೆ LPG ಸಿಲಿಂಡರ್ ಗಳನ್ನೇ ಬಳಸಲಾಗುತ್ತಿದೆ.
ದಿನಬಳಕೆಯ ವಸ್ತು ಆಗಿದ್ದರು ಕೂಡ ಇವುಗಳ ಬೆಲೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ ಹೊರತು ಕಡಿಮೆ ಮಾತ್ರ ಆಗಿಲ್ಲ. ಜನಸಾಮಾನ್ಯರು ಗ್ಯಾಸ್ ಸಿಲಿಂಡರ್ ಕೊಂಡುಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಸಮಸ್ಯೆಗೆ ಸರ್ಕಾರವೇ ಒಂದು ಪರಿಹಾರ ನೀಡಿದೆ.
ಈಗಾಗಲೇ ಸರ್ಕಾರ ಪ್ರತಿ ಮನೆಗಳಲ್ಲಿ ಬಳಸುವ ವಸ್ತು ಗ್ಯಾಸ್ ಸಿಲಿಂಡರ್ ಆಗಿರುವ ಕಾರಣ, ಇವುಗಳ ಬೆಲೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇರುವ ಕಾರಣ, ಸಬ್ಸಿಡಿ (Gas Cylinder Subsidy) ನೀಡುವುದಾಗಿ ತಿಳಿಸಿತ್ತು.
ಮನೆಯಲ್ಲಿ 10 ಗ್ರಾಂ ಗಿಂತ ಹೆಚ್ಚು ಚಿನ್ನಾಭರಣ ಇಟ್ಟಿರುವ ಎಲ್ಲರಿಗೂ ಮಹತ್ವದ ಮಾಹಿತಿ! ತಪ್ಪದೆ ತಿಳಿಯಿರಿ
ಜನರಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೆ ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ 200 ರೂಪಾಯಿ ಸಬ್ಸಿಡಿ ನೀಡುವುದಾಗಿ ತಿಳಿಸಿದೆ. ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಿಲಿಂಡರ್ ಪಡೆದಿರುವವರಿಗೆ ಈಗಾಗಲೇ 200 ರೂಪಾಯಿ ಸಿಗುತ್ತಿದ್ದು, ಒಟ್ಟಾರೆಯಾಗಿ 400 ರೂಪಾಯಿ ಸರ್ಕಾರದಿಂದ ಸಬ್ಸಿಡಿ ಸಿಗಲಿದೆ.
ಸರ್ಕಾರ ಈ ಸಬ್ಸಿಡಿ ಹಣವನ್ನು ಕೊಡುವುದಕ್ಕೆ ಮುಂದಾಗಿದೆ, ಈ ಹಣ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಬಂದಿದೆಯೋ ಇಲ್ಲವೋ ಎನ್ನುವುದನ್ನು ನೀವು ಚೆಕ್ ಮಾಡಬೇಕು ಎಂದರೆ ನೀವು ಬ್ಯಾಂಕ್ ಗೆ ಹೋಗಿ ಅಕೌಂಟ್ ಚೆಕ್ ಮಾಡಿ ನೋಡುವ ಅಗತ್ಯವಿಲ್ಲ.
ಅದರ ಬದಲಾಗಿ ಮನೆಯಲ್ಲೇ ನಿಮ್ಮ ಮೊಬೈಲ್ ಇಂದಲೇ ಅಕೌಂಟ್ ಗೆ ಹಣ ಬಂದಿದ್ಯಾ ಎಂದು ಚೆಕ್ ಮಾಡಬಹುದು. ಇದನ್ನು ಚೆಕ್ ಮಾಡಲು https://www.mylpg.in ಈ ಲಿಂಕ್ ಓಪನ್ ಮಾಡಿ, ಹೋಮ್ ಪೇಜ್ ನಲ್ಲಿ ಎಲ್ಲಾ LPG ಸಿಲಿಂಡರ್ ಕಂಪನಿಗಳ (Cylinder Company) ಲಿಸ್ಟ್ ನೋಡುತ್ತೀರಿ.
ಅದರಲ್ಲಿ ನಿಮ್ಮ ಮನೆಯಲ್ಲಿ ಯಾವ ಕಂಪನಿಯ ಸಿಲಿಂಡರ್ ಇದೆ ಅದನ್ನು ಸೆಲೆಕ್ಟ್ ಮಾಡಿ. ಬಳಿಕ ಅಲ್ಲಿ ನಿಮಗೆ ಭಾಷೆಯ ಆಯ್ಕೆಯನ್ನು ಕೇಳುತ್ತದೆ. ಅದರಲ್ಲಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಯಾವುದೇ ಜಾಗದಲ್ಲಿ ಹೊಸ ಮನೆ ಖರೀದಿಸುವವರಿಗೆ ವಿಶೇಷ ಸೂಚನೆ! ಮನೆ ಖರೀದಿಗೂ ಮುನ್ನವೇ ತಿಳಿಯಿರಿ
ಹಾಗೆಯೇ ನೀವು ಹೊಸ ಬಳಕೆದಾರರಾದರೆ ಆ ಪ್ರಶ್ನೆಯನ್ನು ಕೇಳುತ್ತದೆ, ಅದನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು. ನಂತರ ನಿಮ್ಮ LPG ಸಿಲಿಂಡರ್ ಗ್ರಾಹಕರ ಸಂಖ್ಯೆ ಮತ್ತು ಮೊಬೈಲ್ ನಂಬರ್ (Mobile Number) ಎರಡನ್ನು ಕೇಳುತ್ತದೆ, ಅದೆರಡನ್ನು ಎಂಟ್ರಿ ಮಾಡಿ. ಬಳಿಕ Click here to get OTP ಆಯ್ಕೆ ಬರುತ್ತದೆ ಅದನ್ನು ಸೆಲೆಕ್ಟ್ ಮಾಡಿ..
ಈಗ ನಿಮ್ಮ ಮೊಬೈಲ್ ಗೆ OTP ಬರುತ್ತದೆ. ಅದನ್ನು ಎಂಟ್ರಿ ಮಾಡಿ. ನಂತರ ಗ್ರಾಹಕರ ID ಮತ್ತು ಪಾಸ್ ವರ್ಡ್ ಕ್ರಿಯೇಟ್ ಮಾಡುವ ಆಯ್ಕೆ ಬರುತ್ತದೆ, ಅದನ್ನು ಪೂರ್ತಿ ಮಾಡಿ. ಬಳಿಕ ID ಮತ್ತು ಪಾಸ್ ವರ್ಡ್ ಇಂದ ಲಾಗಿನ್ ಮಾಡಿ..
ಲಾಗಿನ್ ಆದಾಗ ಸಿಲಿಂಡರ್ ಬುಕಿಂಗ್ ಹಿಸ್ಟರಿ ಎನ್ನುವ ಆಯ್ಕೆ ಸಿಗುತ್ತದೆ. ಅದನ್ನು ಸೆಲೆಕ್ಟ್ ಮಾಡಿದರೆ, ನೀವು ಸಿಲಿಂಡರ್ ಬುಕ್ ಮಾಡಿದ ದಿನಾಂಕ, ಅದಕ್ಕಾಗಿ ಬಂದಿರುವ ಸಬ್ಸಿಡಿ ಹಣದ ಮಾಹಿತಿ, ಯಾವ ಅಕೌಂಟ್ ಗೆ ಸಬ್ಸಿಡಿ ಬಂದಿದೆ ಇದೆಲ್ಲವನ್ನು ತೋರಿಸುತ್ತದೆ. ಈ ಮೂಲಕ ಮೊಬೈಲ್ (Mobile) ಇಂದ ಎಲ್ಲಾ ಮಾಹಿತಿ ಮಾಹಿತಿ ಪಡೆಯಬಹುದು.
Check the gas subsidy amount Credited to your bank account by your mobile