ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ₹2000 ರೂಪಾಯಿ ಸಿಗಲಿದೆ! ಪಿಎಂ ಕನ್ಯಾ ಯೋಜನೆ ಬಗ್ಗೆ ಸ್ಪಷ್ಟನೆ
ಕೇಂದ್ರ ಸರಕಾರದಿಂದ ಇಂತಹದೊಂದು ಯೋಜನೆ ಇಲ್ಲವೇ ಇಲ್ಲ, ಪಿಎಂ ಕನ್ಯಾ ಯೋಜನೆ ಬಗ್ಗೆ ಸ್ಪಷ್ಟನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮೂರನೇ ಅವಧಿಯಲ್ಲಿ ಸರಕಾರ ಈಗಾಗಲೇ ಹಳೆ ಯೋಜನೆಗೆ ಮರು ಜನ್ಮ ನೀಡುವ ಜೊತೆಗೆ ಹೊಸ ಯೋಜನೆಗೆ ಕೂಡ ಒತ್ತು ನೀಡುತ್ತಿದೆ.
ಸರಕಾರದ ಅನೇಕ ಯೋಜನೆ ಬಗ್ಗೆ ಶೀಘ್ರ ಮಾಹಿತಿ ರವಾನೆ ಆಗುವುದು ಸಾಮಾಜಿಕ ಜಾಲತಾಣದಿಂದಾಗಿದ್ದು ಅನೇಕ ಸಲ ಸುಳ್ಳು ಮಾಹಿತಿ ಕೂಡ ರವಾನೆ ಆಗಲಿದೆ. ಹೀಗಾಗಿ ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಅವಶ್ಯಕ ಎನ್ನಬಹುದು. ನೀವು ಹಣ ಸಿಗುತ್ತದೆ ಎಂದು ವಾಟ್ಸ್ ಆ್ಯಪ್ , ಫೆಸ್ ಬುಕ್ ನಿಂದ ಹರಿದಾಡಿದ್ದ ಮಾಹಿತಿ ಅನ್ವಯ ಅರ್ಜಿ ಹಾಕಲು ಮುಂದಾದರೆ ನಿಮ್ಮಿಂದಲೇ ಹಣ ಹೋಗುವ ಸಾಧ್ಯತೆ ಇದೆ.
ದೇಶದ ರೈತರಿಗಾಗಿ ಬಂತು ಕ್ರೆಡಿಟ್ ಕಾರ್ಡ್ ಸೌಲಭ್ಯ! ಸಿಗಲಿದೆ ₹50,000 ತನಕ ಸುಲಭ ಸಾಲ
ಹೆಣ್ಣು ಮಕ್ಕಳಿಗಾಗಿ ಯೋಜನೆ
ಹೆಣ್ಣು ಮಕ್ಕಳವಿಕಾಸಕ್ಕಾಗಿ ಸುಕನ್ಯಾ ಸಮೃದ್ಧಿ ಸೇರಿದಂತೆ ವಿವಿಧ ಯೋಜನೆ ಚಿರ ಪರಿಚಿತವಾಗಿದೆ. ಅದರಂತೆ ಇತ್ತೀಚೆಗಷ್ಟೇ ಪಿಎಂ ಕನ್ಯಾ ಆಯುಷ್ ಯೋಜನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಮಾಹಿತಿ ಹರಿದಾಡುತ್ತಿದೆ.
ಅಂತಹ ಸುದ್ದಿಯಲ್ಲಿ ಒಂದಾಗಿ ಪಿಎಂ ಕನ್ಯಾ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾಗಲು ಕೂಡಲೇ ಅರ್ಜಿ ಹಾಕುವಂತೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದ್ದು ಅನೇಕರು ಇದೊಂದು ಫೇಕ್ ಸುದ್ದಿ ಎಂದು ಅಲ್ಲೆಗೆಳೆಯುತ್ತಿದ್ದಾರೆ ಇನ್ನು ಕೆಲವರು ಇದು ಸರಕಾರದಿಂದಲೇ ಬಂದ ಆದೇಶ ಎಂದು ಹೇಳಿದ್ದು ಇದೆ, ಹಾಗಾದರೆ ಯಾವುದು ನಿಜ ಯಾವುದು ಸುಳ್ಳು ಎಂಬ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಸಲಿದ್ದು ಮಾಹಿತಿಯನ್ನು ಕೊನೆ ತನಕ ಓದಿ.
ಪ್ಯಾನ್ ಕಾರ್ಡ್ ಕುರಿತು ಹೊಸ ರೂಲ್ಸ್ ಜಾರಿಗೆ ತಂದ ಕೇಂದ್ರ ಸರ್ಕಾರ; ಇಂದಿನಿಂದಲೇ ಅನ್ವಯ!
ಸಂದೇಶದಲ್ಲಿ ಏನಿದೆ?
ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅವರಿಗಾಗಿ ಈ ಒಂದು ಹೊಸ ಯೋಜನೆ ಇದೆ. ಪ್ರತಿ ತಿಂಗಳು 2000 ರೂಪಾಯಿ ಸಿಗಲಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೆ ತರಲಾಗುತ್ತಿದೆ. ಇದು ಪಿಎಂ ಕನ್ಯಾ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಹೆಣ್ಣು ಮಕ್ಕಳು ಫಲಾನುಭವಿಗಳಾಗುವಂತೆ ಸರಕಾರ ಸೂಚನೆ ನೀಡಿದೆ.
ಈ ಯೋಜನೆಗೆ ಆಧಾರ್ ಕಾರ್ಡ್ ಪ್ರತಿ, ಪಾಸ್ ಬುಕ್ ಪ್ರತಿ, ಇತರ ದಾಖಲೆ ಹೊಂದಿರಬೇಕು. 5 ರಿಂದ 18 ವರ್ಷದ ವಯೋಮಿತಿ ಇರುವ ಹೆಣ್ಷು ಮಕ್ಕಳು ಯೋಜನೆಗೆ ಅರ್ಹರು. ತಂದೆ ತಾಯಿ ವಾರ್ಷಿಕ ಆದಾಯ 2 ಲಕ್ಷ ಮೀರಬಾರದು ಎಂಬ ನಿಯಮ ಇದೆ. ನೀವು ಅರ್ಜಿ ಸಲ್ಲಿಸಲು CSC ಗೆ ಭೇಟಿ ನೀಡಿ ಬಳಿಕ ರಶೀದಿ ಸಿಗಲಿದೆ ಎಂದು ಆ ಒಂದು ಸಂದೇಶ ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿದೆ.
ಪತಿಯ ಮರಣದ ನಂತರ ಹೆಂಡತಿಗೆ ಆತನ ಆಸ್ತಿಯ ಮೇಲೆ ಯಾವುದೇ ಹಕ್ಕು ಇಲ್ಲ! ಹೊಸ ನಿಯಮ
PIB ಸ್ಪಷ್ಟನೆ
ಪ್ರೆಸ್ ಇನ್ ಫಾರ್ಮೇಶನ್ ಬ್ಯೂರೋ (PIB) ಈ ಬಗ್ಗೆ ಇತ್ತೀಚೆಗಷ್ಟೇ ಸ್ಪಷ್ಟನೆ ನೀಡಿದ್ದು ಪಿಎಂ ಕನ್ಯಾ ಆಯುಷ್ ಎಂಬ ಯಾವ ಯೋಜನೆಯನ್ನು ಸರಕಾರ ಆರಂಭ ಮಾಡಿಲ್ಲ. ಇದು ನಕಲಿ ಸಂದೇಶವಾಗಿದ್ದು ಹಣ ಸಿಗುತ್ತದೆ ಎಂದು ಅವರು ನೀಡುವ ಲಿಂಕ್ ಓಪನ್ ಮಾಡಬೇಡಿ. ಅದೆ ಮಾಹಿತಿ ಪಡೆದು ನಿಮ್ಮನ್ನು ವಂಚಿಸುವ ಸಾಧ್ಯತೆ ಇದೆ ಎಂದು PIB ತಿಳಿಸಿದೆ. ಹಾಗಾಗಿ ಹಣ ಸಿಗುತ್ತದೆ ಎಂದು ಯಾರು ಮೋಸ ಹೋಗದೆ ಇರುವಂತೆ ಈ ಮೂಲಕ ಸೂಚಿಸಲಾಗಿದೆ.
Clarification on PM Kanya Yojana which Goes Viral on Social Media