Business News

ದೇಶದ ರೈತರಿಗಾಗಿ ಬಂತು ಕ್ರೆಡಿಟ್ ಕಾರ್ಡ್ ಸೌಲಭ್ಯ! ಸಿಗಲಿದೆ ₹50,000 ತನಕ ಸುಲಭ ಸಾಲ

Kisan Credit Card : ರೈತರನ್ನು ನಮ್ಮ ಪಾಲಿನ ಅನ್ನದಾತರು ಎಂದು ಹೇಳಲಾಗುತ್ತದೆ. ಅಂತಹ ರೈತರ ಪೈಕಿ ಇಂದು ಅನೇಕ ಜನರು ಕೃಷಿ ಜೀವನದಿಂದ ಹಿಂದೆ ಸರಿದು ಬೇರೆ ಬೇರೆ ಸ್ವ ಉದ್ಯೋಗದ ಕಡೆ ಒಲವು ತೋರುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ (Agriculture) ಯುವ ಸಮುದಾಯ ಮತ್ತು ಇತರರನ್ನು ಓಲೈಸುವ ಸಲುವಾಗಿ ಅನೇಕ ಹೊಸ ಹೊಸ ಯೋಜನೆ ಪರಿಚಯಿಸಲಾಗುತ್ತಿದ್ದು ಅಂತಹ ಯೋಜನೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಕೂಡ ಒಂದಾಗಿದೆ.

Kisan Credit Card

ಅನೇಕರು ಈ ಹೆಸರು ಕೇಳಿರಬಹುದು ಆದರೆ ಇದರ ಕಾರ್ಯವಿಧಾನ ಇತರ ಅಂಶದ ಬಗ್ಗೆ ತಿಳಿದಿರಲಾರದು, ಕಿಸಾನ್ ಕ್ರೆಡಿಟ್ ಕಾರ್ಡ್ ಬಗ್ಗೆ ನೀವು ಕೆಲವು ಮಾಹಿತಿ ತಿಳಿಯಲೇ ಬೇಕು ಎಂಬ ಆಸಕ್ತಿ ಇದ್ದರೆ ಈ ಲೇಖನ ಕೊನೆ ತನಕ ಓದಿ.

ಪ್ಯಾನ್ ಕಾರ್ಡ್ ಕುರಿತು ಹೊಸ ರೂಲ್ಸ್ ಜಾರಿಗೆ ತಂದ ಕೇಂದ್ರ ಸರ್ಕಾರ; ಇಂದಿನಿಂದಲೇ ಅನ್ವಯ!

ಯಾಕಾಗಿ ಈ ಯೋಜನೆ ಜಾರಿಗೆ ಬಂದಿದೆ?

ರೈತರಿಗೆ ಅಲ್ಪಾವಧಿಯಲ್ಲಿ ಸಾಲ (Loan) ನೀಡುವ ಉದ್ದೇಶದಿಂದ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಜಾರಿಗೆ ಬಂದಿದ್ದು ಇದು ಈ ಹಿಂದಿನಿಂದಲೇ ಪ್ರಚಲಿತದಲ್ಲಿರುವ ಯೋಜನೆ ಆಗಿದೆ. 1998 ರಿಂದಲೂ ಜಾರಿಯಲ್ಲಿ ಇದ್ದ ಈ ಯೋಜನೆ ಮೂಲಕ ರೈತರು ಕೃಷಿ ಉತ್ಪನ್ನ ತೆಗೆಯುವ ಹಾಗೂ ವಿತರಿಸುವ ಸಂದರ್ಭದಲ್ಲಿ ಕಂಡು ಬಂದ ಆರ್ಥಿಕ ಸಮಸ್ಯೆ ನಿವಾರಣೆಗೆ ಈ ಯೋಜನೆ ಬಹಳ ಸಹಕಾರಿ ಆಗಿದೆ. ಇದರಲ್ಲಿ ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಉಳುಮೆ ಮಾಡುವ ರೈತರು ಕೂಡ ಸೇರಿಕೊಂಡಿದ್ದಾರೆ ಎನ್ನಬಹುದು.

*ಕೋಳಿ ಸಾಕಾಣಿಕೆ ಮಾಡುವವರು.
*ಪಶುಸಂಗೋಪನೆ ಮಾಡಿ ದನ, ಆಡು, ಮೇಕೆ , ಕುರಿ ಸಾಕುವುದು.
*ಹಂದಿ ಹಾಗೂ ಮೊಲ ಸಾಕಾಣಿಕೆ ಮಾಡುವವರು.
*ಡೈರಿ ಮಾಡಿ ಜೀವನ ಸಾಗಿಸುವವರು.
*ಜಲಚರ ಮೀನು , ಏಡಿ, ಸಿಗಡಿ ಮಾಡುವವರು ಈ ಯೋಜನೆಗೆ ಮೂಲಕವೇ ಸಾಲ ಪಡೆಯಬಹುದು.

ಪತಿಯ ಮರಣದ ನಂತರ ಹೆಂಡತಿಗೆ ಆತನ ಆಸ್ತಿಯ ಮೇಲೆ ಯಾವುದೇ ಹಕ್ಕು ಇಲ್ಲ! ಹೊಸ ನಿಯಮ

Kisan Credit Cardಎಷ್ಟು ಸಾಲ ಸಿಗಲಿದೆ?

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಡೆಯುವ ಸಾಲಕ್ಕೂ ಒಂದು ನಿರ್ದಿಷ್ಟ ಮಿತಿ ಇದೆ. ನೀವು ನಿಮ್ಮ ಬೆಳೆ, ಕಟಾವು, ಸಾಗಾಟ ಇತರ ಖರ್ಚು ಹಾಗೂ ಅಗತ್ಯಕ್ಕೆ ತಕ್ಕಂತೆ 10,000 ದಿಂದ 50,000ದ ತನಕ ಸಾಲ ಸೌಲಭ್ಯ (Loan Facility) ಪಡೆಯಬಹುದು.

ಇದರ ಮೂಲಕ ATM ನಿಂದಲೇ ಹಣ ಪಡೆಯಲು ಕೂಡ ನಿಮಗೆ ಅವಕಾಶ ಲಭ್ಯವಾಗಲಿದೆ. ಈ ಒಂದು ಸಾಲವನ್ನು ಮರುಪಾವತಿ (Loan Re Payment) ಮಾಡಲು 12 ತಿಂಗಳು ಅಂದರೆ 1 ವರ್ಷದ ತನಕವು ಅವಕಾಶ ನೀಡಲಾಗುತ್ತಿದ್ದು ನಿಮ್ಮ ಮರು ಪಾವತಿ ಆಧಾರದ ಮೇಲೆ ಸಾಲದ ಮಿತಿ ಕೂಡ ವಿಸ್ತಾರ ಆಗುವ ಸಾಧ್ಯತೆ ಇದೆ.

ಒಂದು ವೇಳೆ ಮರುಪಾವತಿ ಮಾಡುವಾಗಲೇ ಬೆಳೆ ಹಾನಿ ಹಾಗೂ ಪ್ರಾಕೃತಿಕ ವಿಕೋಪ ಆದರೆ ಹೆಚ್ಚುವರಿ ಸಮಯಾವಕಾಶ ನೀಡಲಾಗುವುದು ಇಲ್ಲವಾದರೆ ಕೆಲವೊಮ್ಮೆ ಸಾಲ ಮನ್ನ ಕೂಡ ಆಗುವ ಸಾಧ್ಯತೆ ಇದೆ ಎನ್ನಬಹುದು.

ನಿಮ್ಮ PhonePe ಅಕೌಂಟ್ ಬಳಸಿಕೊಂಡು ದಿನಕ್ಕೆ 500 ರಿಂದ 1000 ಗಳಿಸುವ ಟ್ರಿಕ್ಸ್ ಇಲ್ಲಿದೆ

ಎಷ್ಟು ಸಮಯ ಬಳಕೆ ಮಾಡಬಹುದು

ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು 3 ವರ್ಷದ ತನಕ ಬಳಕೆ ಮಾಡಬಹುದು. 3 ವರ್ಷದ ಬಳಿಕ ಹೊಸದಾಗಿ ಮಾನ್ಯತೆ ಪಡೆಯಬೇಕು. ಅಷ್ಡು ಮಾತ್ರವಲ್ಲದೆ ಇದರಿಂದಾಗಿ ಅಪಘಾತ ವಿಮೆ ಪಡೆಯಲು ಸಹಕಾರಿ‌. ನಿಮ್ಮ ಕೃಷಿ ಆರ್ಥಿಕ ನಷ್ಟ ಉಂಟು ಮಾಡುತ್ತಿದೆ ಎಂದರೆ ಅಂತಹ ಸಂದರ್ಭದಲ್ಲಿ ಪರಿಹಾರ ಪಡೆಯಲು ಇದು ಬಹಳ ಸಹಕಾರಿ ಎನ್ನಬಹುದು.

ಈ ಕಿಸಾನ್ ಕ್ರೆಡಿಟ್ ಕಾರ್ಡ್ ಜೊತೆಗೆ ವಿಮೆಗಾಗಿ ಒಂದು ವರ್ಷದ ಪಾಲಿಸಿಗೆ 15 ರೂಪಾಯಿ ಹಾಗೂ ಮೂರು ವರ್ಷಕ್ಕೆ 45 ರೂಪಾಯಿ ನೀಡಬೇಕು. ಅಂತಹ ರೈತರು ಅಪಘಾತ ಆದರೆ ಕಾಲು ಊನ ಆದರೆ, ಕಣ್ಣು ಹಾನಿ ಆದರೆ 50,000 ದ ತನಕ ಶಾಶ್ವತ ಪರಿಹಾರ ಸಿಗುತ್ತದೆ.

ತಿಂಗಳಿಗೆ 50 ಸಾವಿರದಿಂದ 1 ಲಕ್ಷ ಆದಾಯ; ಈ ತಳಿ ಮೇಕೆ ಸಾಕಾಣಿಕೆ ಮಾಡೋದ್ರಿಂದ ಕೈತುಂಬಾ ದುಡ್ಡು

ಎಲ್ಲಿ ಅರ್ಜಿ ಸಲ್ಲಿಸಬೇಕು?

ಹಿಂದೆಲ್ಲ ಕಚೇರಿ ಅಲೆಯಬೇಕಿತ್ತು ಆದರೆ ಈಗ KCC ಅಂದರೆ kisan credit card ಪಡೆಯಲು ಇದಕ್ಕೆ ಕೆಲವೊಂದು ಬ್ಯಾಂಕಿನ ವೆಬ್‌ಸೈಟ್‌ ಇರಲಿದೆ ಅದಕ್ಕೆ ಭೇಟಿ ನೀಡಿ. ಆಫ್ಲೈನ್ ಮೂಲಕ ಅರ್ಜಿ ಹಾಕಲು ನೇರವಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಎಲ್ಲ ಅಗತ್ಯ ವೈಯಕ್ತಿಕ ಹಾಗೂ ಕೃಷಿ ಸಂಬಂಧ ಪಟ್ಟ ದಾಖಲೆ ನೀಡಿದರೆ ಯೋಜನೆಗೆ ಮಾನ್ಯರಾಗುತ್ತೀರಿ.

Credit card facility for the farmers, Get easy loan up to 50,000

Our Whatsapp Channel is Live Now 👇

Whatsapp Channel

Related Stories