ರೈತರಿಗೆ ಪ್ರಧಾನಮಂತ್ರಿಯಿಂದ ಬಂಪರ್ ಗಿಫ್ಟ್! ಇಂದೇ ಬೆಳೆ ವಿಮೆ ಹಣ ಖಾತೆಗೆ ಜಮೆ - Crop Insurance
ಪ್ರಧಾನಮಂತ್ರಿ ಫಸಲ್ ಬಿಮೆ ಯೋಜನೆ ಅಡಿ 30 ಲಕ್ಷ ರೈತರಿಗೆ ₹3,200 ಕೋಟಿ ಕ್ಲೈಮ್ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿದೆ. ತ್ವರಿತ ಪಾವತಿಗೆ ಹೊಸ ಕ್ರಮ, ಬಾಕಿ ರಾಜ್ಯಗಳಿಗೆ ದೊಡ್ಡ ನೆರವು.
- ಬೆಳೆ ಬಿಮೆ (Crop Insurance) ಅಡಿ ₹3,200 ಕೋಟಿ ರೈತರಿಗೆ
- 30 ಲಕ್ಷ ರೈತರ ಖಾತೆಗೆ ನೇರ ಹಣ ವರ್ಗಾವಣೆ
- ತಡವಾದರೆ 12% ದಂಡ ನಿಯಮ ಜಾರಿಯಲ್ಲಿ
Crop Insurance : ಕೇಂದ್ರ ಸರ್ಕಾರ ದೇಶದ 30 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (Pradhan Mantri Fasal Bima Yojana) ಅಡಿ ₹3,200 ಕೋಟಿ ಮೊತ್ತವನ್ನು ನೇರವಾಗಿ ಖಾತೆಗೆ ಜಮೆ ಮಾಡಲು ನಿರ್ಧರಿಸಿದೆ.
ಈ ಕುರಿತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರಾಜಸ್ಥಾನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಘೋಷಿಸಿದರು. ಈ ಸಂದರ್ಭದಲ್ಲಿ ರಾಜ್ಯ ಮುಖ್ಯಮಂತ್ರಿ ಭಜನ್ಲಾಲ್ ಶರ್ಮ, ಕೇಂದ್ರ ಸಹಾಯ ಸಚಿವ ಭಗೀರಥ್ ಚೌಧರಿ ಹಾಗೂ ರಾಜ್ಯ ಕೃಷಿ ಸಚಿವ ಕಿರೋರಿ ಲಾಲ್ ಮೀನಾ ಹಾಜರಿದ್ದರು.
ಇದನ್ನೂ ಓದಿ: 10 ಸಾವಿರ ರೇಷನ್ ಕಾರ್ಡ್ ರದ್ದು, ನಿಮ್ಮ ಹೆಸರು ಲಿಸ್ಟ್‌ನಲ್ಲಿದೆಯೇ? ನೋಡಿಕೊಳ್ಳಿ
ಕೇಂದ್ರದಿಂದ ಬಿಡುಗಡೆಯಾಗುವ ಮೊತ್ತದಲ್ಲಿ ಮಧ್ಯಪ್ರದೇಶಕ್ಕೆ ₹1,156 ಕೋಟಿ, ರಾಜಸ್ಥಾನಕ್ಕೆ ₹1,121 ಕೋಟಿ, ಛತ್ತೀಸ್‌ಗಢಕ್ಕೆ ₹150 ಕೋಟಿ ಹಾಗೂ ಉಳಿದ ರಾಜ್ಯಗಳಿಗೆ ₹773 ಕೋಟಿ ಹಂಚಿಕೆ ಆಗಲಿದೆ.
ರೈತರಿಗೆ ತ್ವರಿತ ನೆರವು ನೀಡುವ ಉದ್ದೇಶದಿಂದ, ಸರ್ಕಾರ ಹೊಸ ಸರಳ ಕ್ಲೈಮ್ ಪ್ರಕ್ರಿಯೆಯನ್ನು ಜಾರಿಗೆ ತಂದಿದ್ದು, ರಾಜ್ಯ ಸರ್ಕಾರ ಪ್ರೀಮಿಯಂ ಪಾವತಿಯಲ್ಲಿ ವಿಳಂಬ ಮಾಡಿದರೂ ಕೇಂದ್ರದಿಂದಲೇ ನೆರವು ದೊರೆಯುವಂತೆ ವ್ಯವಸ್ಥೆ ಮಾಡಿದೆ.
2025ರ ಖರೀಫ್ ಹಂಗಾಮಿನಿಂದ ಬೆಳೆ ವಿಮೆ ಪಾವತಿಯಲ್ಲಿ ತಡವಾದರೆ 12% ಬಡ್ಡಿ ದಂಡವನ್ನು ವಿಧಿಸುವ ನಿಯಮವನ್ನು ಜಾರಿಗೊಳಿಸಲಾಗುತ್ತದೆ. ಇದೇ ನಿಯಮವನ್ನು ವಿಮೆ ಕಂಪನಿಗಳಿಗೂ ಅನ್ವಯಿಸಲಾಗುತ್ತದೆ. 2016ರಲ್ಲಿ ಈ ಯೋಜನೆ ಪ್ರಾರಂಭವಾದ ನಂತರ ರೈತರು ಒಟ್ಟು ₹35,864 ಕೋಟಿ ಪ್ರೀಮಿಯಂ ಪಾವತಿಸಿದರೆ, ಸರ್ಕಾರ ಇದುವರೆಗೆ ₹1.83 ಲಕ್ಷ ಕೋಟಿ ಮೌಲ್ಯದ ಕ್ಲೈಮ್‌ಗಳನ್ನು ಪರಿಹರಿಸಿದೆ.
ಇದನ್ನು ಓದಿ:ಆಧಾರ್, ಪ್ಯಾನ್ ಕಾರ್ಡ್ ಇದ್ರೆ ನಿಮಿಷಗಳಲ್ಲೇ ಲೋನ್ ಸಿಗುತ್ತೆ! ಮೊಬೈಲ್‌ನಲ್ಲೇ
ಬೆಲೆ ವಿಮೆ ರೈತರಿಗೆ ಆರ್ಥಿಕ ಭದ್ರತೆ ನೀಡುವ ಪ್ರಮುಖ ಯೋಜನೆ. ಮಳೆ ಕೊರತೆ, ಪ್ರವಾಹ, ಬರ ಅಥವಾ ಇತರೆ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದಾಗ, ರೈತರು ಕಡಿಮೆ ಪ್ರೀಮಿಯಂ ಪಾವತಿಸಿ ಹೆಚ್ಚಿನ ಪರಿಹಾರ ಪಡೆಯಬಹುದು.
ಸರ್ಕಾರ ರಾಜ್ಯಗಳೊಂದಿಗೆ ಸಹಕಾರದಲ್ಲಿ ಈ ನೆರವು ಶೀಘ್ರವಾಗಿ ತಲುಪುವಂತೆ ಕ್ರಮ ತೆಗೆದುಕೊಂಡಿದೆ. ಈ ಬಾರಿ ನಡೆಯುತ್ತಿರುವ ದೊಡ್ಡ ಮೊತ್ತದ ಕ್ಲೈಮ್ ವಿತರಣೆ ರೈತರ ಜೀವನಮಟ್ಟವನ್ನು ಸುಧಾರಿಸಲು ಸಹಾಯಕವಾಗಲಿದೆ.
Crop Insurance Payout to 3 Million Farmers




