ಪ್ರತಿ ತಿಂಗಳು 300 ಯೂನಿಟ್ ಉಚಿತ ಕರೆಂಟ್ ನೀಡಲು ನಿರ್ಧಾರ! ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ಕೇಂದ್ರ ಸರ್ಕಾರ ಸುಮಾರು 1 ಕೋಟಿ ಮನೆಗಳಿಗೆ ಸೂರ್ಯ ಘರ್ ಯೋಜನೆಯ ಮೂಲಕ ಉಚಿತ ವಿದ್ಯುತ್ ನೀಡುವ ಯೋಜನೆ ಹೊಂದಿದೆ.

Bengaluru, Karnataka, India
Edited By: Satish Raj Goravigere

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 3ನೇ ಬಾರಿ ದೇಶದ ಪ್ರಧಾನಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ. ನಮ್ಮ ದೇಶದ ಬೆಳವಣಿಗೆಗಾಗಿ ಮೋದಿ ಅವರು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರ ಮತ್ತೊಂದು ಪ್ಲಾನ್ ಸೂರ್ಯ ಘರ್ ಯೋಜನೆಯ (Surya Ghar Muft Bijli Yojana) ಮೂಲಕ 300 ಯೂನಿಟ್ ಕರೆಂಟ್ (Free Electricity) ಒದಗಿಸುವುದಾಗಿದೆ. ಈ ಯೋಜನೆಯನ್ನು ಲೋಕಸಭಾ ಎಲೆಕ್ಷನ್ ಗಿಂತ ಮೊದಲು ಜಾರಿಗೆ ತರುವುದಾಗಿ ಪಿಎಮ್ ಮೋದಿ ಅವರು ತಿಳಿಸಿದ್ದರು.

ಗೂಗಲ್ ಪೇ, ಫೋನ್ ಪೇ ಸೇರಿದಂತೆ UPI ಬಳಕೆದಾರರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ಇನ್ನಷ್ಟು ಬೆನಿಫಿಟ್

Decision to give 300 units of free electricity every month by PM Surya Ghar Muft Bijli Yojana

ಪಿಎಮ್ ಸೂರ್ಯ ಘರ್ ಯೋಜನೆಗಾಗಿ ₹75,000 ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಡಲಾಗಿದೆ. ಈ ಮೊತ್ತದಲ್ಲಿ ಎಲ್ಲರಿಗೂ 300 ಯೂನಿಟ್ ವರೆಗು ಉಚಿತ ವಿದ್ಯುತ್ ನೀಡುವ ಪ್ಲಾನ್ (Solar Electricity) ಹೊಂದಿದ್ದಾರೆ. ಇದೀಗ ಮೋದಿ ಅವರು ಎಲೆಕ್ಷನ್ ನಲ್ಲಿ ಮೇಲುಗೈ ಸಾಧಿಸಿ, ಪಿಎಮ್ ಆಗಿ ಆಯ್ಕೆಯಾದ ಬಳಿಕ ಅವರು ಸೂರ್ಯ ಘರ್ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದರಿಂದ ದೇಶದ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ.

Solar electricity, Solar Panelಕೇಂದ್ರ ಸರ್ಕಾರದಿಂದ ಹೊಸ ಘೋಷಣೆ

ಕೇಂದ್ರ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ವಿಚಾರದಿಂದ ದೇಶದ ಜನತೆಗೆ ಸಂತೋಷವಾಗಿದೆ. ಸುಮಾರು 1 ಕೋಟಿ ಮನೆಗಳಿಗೆ ಸೂರ್ಯ ಘರ್ ಯೋಜನೆಯ ಮೂಲಕ ಉಚಿತ ವಿದ್ಯುತ್ ನೀಡುವ ಯೋಜನೆ ಹೊಂದಿದೆ.

ಈ ಯೋಜನೆಗೆ ನೀವು ಅಪ್ಲೈ ಮಾಡಿ, ಸೌಲಭ್ಯ ಪಡೆದರೆ ನಿಮ್ಮ ಮನೆಗೆ ಸೌರಫಲಕಗಳನ್ನು ಅಳವಡಿಸಲಾಗುತ್ತದೆ. ನಿಮಗೆ ಅಗತ್ಯ ಇರುವಷ್ಟು ವಿದ್ಯುತ್ ಅನ್ನು ಬಳಸಿ, ಉಳಿದಿದ್ದನ್ನು ಮಾರಾಟ ಮಾಡಬಹುದು. ಈ ಯೋಜನೆಯ ಸೌಲಭ್ಯ ಪಡೆಯುವುದಕ್ಕಿಂತ ಮೊದಲು ಕೆಲವು ವಿಚಾರಗಳು ನಿಮಗೆ ತಿಳಿದಿರಲಿ..

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನೀವು ಹೂಡಿಕೆ ಮಾಡೋ ಹಣಕ್ಕೆ ಸಿಗಲಿದೆ 10 ಲಕ್ಷ ರೂಪಾಯಿ!

ಕೇಂದ್ರ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ

ಕೇಂದ್ರ ಸರ್ಕಾರದ ಪ್ಲಾನ್ ಏನು ಎಂದರೆ, ಸೂರ್ಯ ಘರ್ ಯೋಜನೆಯ ಮೂಲಕ ನಿಮಗೆ 300 ಯೂನಿಟ್ ವರೆಗು ಉಚಿತ ವಿದ್ಯುತ್ ಸಿಗಲಿದೆ. ಒಂದು ಸೆಳೆ ಹೊರಗಿನಿಂದ ನಿಮ್ಮ ಮನೆಯಲ್ಲಿ ಸೌರಫಲಕ (Solar Panels) ಅಳವಡಿಸಿದರೆ, 1 ಕಿಲೋವ್ಯಾಟ್ ಗೆ ₹90 ಸಾವಿರ, 2 ಕಿಲೋವ್ಯಾಟ್ ಗೆ 1.5 ಲಕ್ಷ ಹಾಗೆಯೇ 3 ಕಿಲೋವ್ಯಾಟ್ ಗೆ ₹2 ಲಕ್ಷ ರೂಪಾಯಿ ಆಗಿದೆ.

Solar Free Electricityನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೌರಫಲಕಗಳನ್ನು ಅಳವಡಿಸಲಾಗುತ್ತದೆ. ಆದರೆ ನೀವು ಸೂರ್ಯಘರ್ ಯೋಜನೆಯ ಮೂಲಕ ಸೌರಫಲಕ ಅಳವಡಿಸಿಕೊಂಡರೆ, 1 ಕಿಲೋವ್ಯಾಟ್ ಗೆ ₹18 ಸಾವಿರ, 2 ಕಿಲೋವ್ಯಾಟ್ ₹30 ಸಾವಿರ, 3 ಕಿಲೋವ್ಯಾಟ್ ಗೆ ₹78 ಸಾವಿರ ಆಗಿದೆ.

ಕೇಂದ್ರದ ಯೋಜನೆಯ ಮೂಲಕ ನಿಮಗೆ ಹೆಚ್ಚು ಸಬ್ಸಿಡಿ ಸಿಗಲಿದೆ. ಸಬ್ಸಿಡಿ ಪಡೆಯಲು ಲೋಡ್ 85% ಗಿಂತ ಕಡಿಮೆ ಇರಬೇಕು. ಒಮ್ಮೆ ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಸೌರಫಲಕ ಅಳವಡಿಸಿದರೆ ಬಹಳಷ್ಟು ವರ್ಷಗಳ ಕಾಲ ಇದರ ಉಪಯೋಗ ಪಡೆದುಕೊಳ್ಳಬಹುದು.

ಚಿನ್ನದ ಬೆಲೆ ಕ್ರಮೇಣ ಇಳಿಕೆ, ಶನಿವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿತ; ಇಲ್ಲಿದೆ ಫುಲ್ ಡೀಟೇಲ್ಸ್

1 ಗಂಟೆಗೆ 1 ಕಿಲೋವ್ಯಾಟ್ ಇಂದ 128 ಕಿಲೋವ್ಯಾಟ್ ವರೆಗು ವಿದ್ಯುತ್ ಉತ್ಪಾದನೆ ಮಾಡಬಹುದು. ಒಂದು ವೇಳೆ ನಿಮ್ಮ ಮನೆಗೆ 3 ಕಿಲೋವ್ಯಾಟ್ ಸೋಲಾರ್ ಪ್ಯಾನೆಲ್ ಹಾಕಿಸಿಕೊಂಡರೆ, ವರ್ಷಕ್ಕೆ ₹30,240 ರೂಪಾಯಿ ಉಳಿತಾಯ ಮಾಡುತ್ತೀರಿ. ಸರ್ಕಾರದಿಂದ ನಿಮಗೆ ಸಿಗುವ ಸಬ್ಸಿಡಿ, ಇಲ್ಲಿ ಉಳಿತಾಯ ಮಾಡುವ ಹಣ ಎಲ್ಲವೂ ನಿಮಗೆ ಲಾಭದಾಯಕ ಆಗಿದೆ.

Decision to give 300 units of free electricity every month by PM Surya Ghar Muft Bijli Yojana