ಅಜ್ಜನ ಆಸ್ತಿಯಲ್ಲಿ ನಿಜಕ್ಕೂ ಮೊಮ್ಮಕ್ಕಳಿಗೆ ಪಾಲಿದೆಯಾ, ಇಲ್ವಾ? ಏನನ್ನುತ್ತೆ ಕಾನೂನು ತಿಳಿಯಿರಿ
ಪಿತ್ರಾರ್ಜಿತ (inheritance) ಆಸ್ತಿಯಲ್ಲಿ ಎಲ್ಲಾ ಮಕ್ಕಳಿಗೂ ಸಮಾನವಾದ ಹಕ್ಕು ನೀಡಲಾಗುವುದು ಇನ್ನೂ ಅಜ್ಜನ ಆಸ್ತಿಯಲ್ಲಿ (Grandfather) Property) ಮೊಮ್ಮಕ್ಕಳಿಗೆ ಪಾಲಿದೆಯಾ ಎನ್ನುವ ಪ್ರಶ್ನೆ ಮೂಡಿದರೆ ಇಲ್ಲಿದೆ ಉತ್ತರ
ಭಾರತದಲ್ಲಿ ಆಸ್ತಿ (property) ಹಂಚಿಕೆ ಹಾಗೂ ಆಸ್ತಿ ಪಡೆದುಕೊಳ್ಳುವ ವಿಚಾರದಲ್ಲಿ ಸಾಕಷ್ಟು ತಕರಾರುಗಳು ನಡೆಯುತ್ತವೆ ಹಾಗೂ ಆಸ್ತಿಗೆ ಸಂಬಂಧಪಟ್ಟ ಹಾಗೆ ಹಲವು ಬೇರೆ ಬೇರೆ ಕಾನೂನುಗಳು (law) ಕೂಡ ಚಾಲ್ತಿಯಲ್ಲಿ ಇವೆ.
ನಾವು ನಮ್ಮ ಪಾಲಿಗೆ ಸಲ್ಲುವ ಆಸ್ತಿ ಪಡೆದುಕೊಳ್ಳಲು ಮೊದಲನೆಯದಾಗಿ ಯಾವ ಕಾನೂನು ಯಾವ ಆಸ್ತಿ ವಿಚಾರಕ್ಕೆ ಸಂಬಂಧಿಸಿದೆ ಎಂಬುದನ್ನ ತಿಳಿದುಕೊಳ್ಳಬೇಕು.
ಉದಾಹರಣೆಗೆ ಹಿಂದೂ ಉತ್ತರಾಧಿಕಾರಿ ಕಾಯ್ದೆಯನ್ನು (Hindu uttradhikari rules) 2005ರಲ್ಲಿ ತಿದ್ದುಪಡಿ ಮಾಡಲಾಗಿದ್ದು ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ (father’s property) ಸಮಾನವಾದ ಹಕ್ಕು ಇದೆ ಎಂಬುದನ್ನ ನಮೂದಿಸಲಾಗಿದೆ.
ಅದೇ ರೀತಿ ಪಿತ್ರಾರ್ಜಿತ (inheritance) ಆಸ್ತಿಯಲ್ಲಿ ಎಲ್ಲಾ ಮಕ್ಕಳಿಗೂ ಸಮಾನವಾದ ಹಕ್ಕು ನೀಡಲಾಗುವುದು ಇನ್ನೂ ಅಜ್ಜನ ಆಸ್ತಿಯಲ್ಲಿ (Grandfather) Property) ಮೊಮ್ಮಕ್ಕಳಿಗೆ ಪಾಲಿದೆಯಾ ಎನ್ನುವ ಪ್ರಶ್ನೆ ಮೂಡಿದರೆ ಇಲ್ಲಿದೆ ಉತ್ತರ!
ನಿಮ್ಮ ಡ್ರೈವಿಂಗ್ ಲೈಸೆನ್ಸ್ ಗೂ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು! ಇಲ್ಲಿದೆ ಸುಲಭ ವಿಧಾನ
ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿದೆ ಸ್ವಯಾರ್ಜಿತ ಆಸ್ತಿಯಲ್ಲಿ ಅಲ್ಲ!
ಪಿತ್ರಾರ್ಜಿತ ಆಸ್ತಿ ಎನ್ನುವುದು ನಾಲ್ಕು ತಲೆಮಾರುಗಳಿಂದ ಸಂದಾಯವಾಗುವಂಥದ್ದು, ಮುತ್ತಜ್ಜನಿಂದ ಅಜ್ಜನಿಗೆ ಬರುವ ಆಸ್ತಿ, ಅಜ್ಜನಿಂದ ತನ್ನ ಮಗನಿಗೆ ಸೇರುತ್ತದೆ ಹಾಗೂ ಮಗನಿಂದ ಮೊಮ್ಮಕ್ಕಳಿಗೆ ಸೇರುತ್ತದೆ.
ಹೀಗಿರುವಾಗ ಅಜ್ಜನ ಆಸ್ತಿಯಲ್ಲಿ ಮೊಮ್ಮಗನಿಗೆ ಪಾಲಿದೆಯಾ? ಎಂಬುದನ್ನ ನೋಡಬೇಕು. ಅಜ್ಜ ಸ್ವಯಾರ್ಜಿತ ಆಸ್ತಿ ಮಾಡಿಟ್ಟರೆ ಅದರಲ್ಲಿ ಮೊಮ್ಮಗ ಹಕ್ಕು ಕೇಳಲು ಸಾಧ್ಯವಿಲ್ಲ. ಅಜ್ಜ ಮನಸಾರೆ ಮೊಮ್ಮಕ್ಕಳಿಗೆ ಕೊಟ್ಟರೆ ಸರಿ, ಇಲ್ಲವಾದರೆ ಇದಕ್ಕಾಗಿ ಯಾವುದೇ ರೀತಿಯ ಕಾನೂನು ಫೈಟ್ (Law fight) ಮಾಡಲು ಸಾಧ್ಯವಿಲ್ಲ.
ಆದರೆ ಪಿತ್ರಾರ್ಜಿತ ಆಸ್ತಿ ಹಾಗಲ್ಲ ಅಜ್ಜನಿಂದ ಮೊಮ್ಮಗನಿಗೆ ಬರಲೇಬೇಕು. ಒಬ್ಬ ವ್ಯಕ್ತಿ ಉಯಿಲು ಬರೆಯದೆ ತೀರಿಹೋಗಿದ್ದರೆ, ಆಗ ಆತನ ತಂದೆಯ ಆಸ್ತಿ ಅಂದರೆ ಅಜ್ಜನ ಆಸ್ತಿ ಮೊಮ್ಮಕ್ಕಳಿಗೆ ಸೇರುತ್ತದೆ ಆದರೆ ಅಪ್ಪ ಬದುಕಿದ್ದಾಗ ಮೊಮ್ಮಕ್ಕಳಿಗೆ ಅಜ್ಜನ ಆಸ್ತಿ ಸಿಗುವುದಿಲ್ಲ.
ಈ ಬ್ಯಾಂಕುಗಳಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್! ಇನ್ಮುಂದೆ ಈ ಸೌಲಭ್ಯಕ್ಕೆ ಯಾವುದೇ ಶುಲ್ಕ ಇಲ್ಲ
ಕಾನೂನು ಸಲಹೆ ಪಡೆದುಕೊಳ್ಳಿ!
ಪಿತ್ರಾರ್ಜಿತ ಆಸ್ತಿಯನ್ನು ಅಜ್ಜ ಮೊಮ್ಮಕ್ಕಳಿಗೆ ನೇರವಾಗಿ ಕೊಡುವಂತಿಲ್ಲ. ಅಂದರೆ ತಂದೆ ಬದುಕಿರುವಾಗ ಮೊಮ್ಮಕ್ಕಳಿಗೆ ಆ ಆಸ್ತಿ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ತಂದೆ ತೀರಿಕೊಂಡ ನಂತರ ಅಥವಾ ತಂದೆ ಮರಣ ಹೊಂದಿದ ನಂತರವಷ್ಟೇ ಯಾವುದೇ ರೀತಿಯ ಉಯಿಲು ಬರೆಯದೆ ಇದ್ದರೂ ಕೂಡ ಪಿತ್ರಾರ್ಜಿತ ಆಸ್ತಿ ಮೊಮ್ಮಕ್ಕಳ ಪಾಲಾಗುತ್ತದೆ.
ಕೇವಲ ₹16 ಸಾವಿರಕ್ಕೆ ಮಾರಾಟಕ್ಕಿದೆ ಹೀರೊ ಬೈಕ್, ಸಿಂಗಲ್ ಓನರ್, 70Km ಮೈಲೇಜ್
ಇನ್ನು ಆಸ್ತಿಗೆ ಸಂಬಂಧಪಟ್ಟ ಹಾಗೆ ಕಾನೂನು ಸಲಹೆಗಳನ್ನು ಪಡೆದುಕೊಳ್ಳುವುದು ಬಹಳ ಮುಖ್ಯ. ಭೂಮಿ ಅಥವಾ ಇತರ ಯಾವುದೇ ಆಸ್ತಿಗೆ (Property Rules) ಸಂಬಂಧಪಟ್ಟ ಹಾಗೆ ಯಾವುದೇ ರೀತಿಯ ಹಕ್ಕನ್ನು ಪಡೆದುಕೊಳ್ಳಲು ಕಾನೂನು ರೀತಿಯ ಹೋರಾಟವನ್ನೇ ಮಾಡಬೇಕು.
ಕಾನೂನು ಬದ್ಧವಾಗಿ ನಿಮ್ಮ ಪಾಲಿನ ಆಸ್ತಿ ನಿಮಗೆ ಸಂದಾಯವಾದರೆ ಅದನ್ನು ಮತ್ತೆ ಯಾರು ಪ್ರಶ್ನಿಸುವಂತಿಲ್ಲ ಹಾಗಾಗಿ ಯಾವುದೇ ರೀತಿಯ ಕಾನೂನು ಹೋರಾಟಕ್ಕೆ ಇಳಿಯುವುದಕ್ಕೂ ಮುಂಚೆ ಸೂಕ್ತ ಸಲಹೆಗಾರರ (lawyer) ಸಲಹೆಗಳನ್ನು ಪಡೆದುಕೊಳ್ಳಿ ಇಲ್ಲವಾದರೆ ಆಸ್ತಿ (Land) ವಿಚಾರದಲ್ಲಿ ಮುಂದೆ ಸಮಸ್ಯೆ ಉಂಟಾಗಬಹುದು.
Do grandchildren have a share in grandfather’s property, Know the law
Follow us On
Google News |