ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆಗೆ ಎಷ್ಟು ಬಾರಿ ಅವಕಾಶ ಇದೆ ಗೊತ್ತಾ?

Story Highlights

ಅದೆಷ್ಟೋ ಸರ್ಕಾರಿ ಕೆಲಸಗಳಿಗೆ ಆಧಾರ್ ಕಾರ್ಡ್ ಪರಿಶೀಲನೆ (Aadhaar Card verification) ಎನ್ನುವುದು ಪ್ರಮುಖ ದಾಖಲೆಯಾಗಿ ಪರಿಣಮಿಸಿದೆ.

ಆಧಾರ್ ಕಾರ್ಡ್ (Aadhaar Card) ಎನ್ನುವುದು ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಬಹಳ ಮುಖ್ಯವಾಗಿರುವ ಐಡೆಂಟಿಟಿ ಪ್ರೂಫ್ (identity proof) ಆಗಿದೆ. ಯಾವುದೇ ಕೆಲಸವು ಸುಲಭವಾಗಿ ಆಗಬೇಕು ಅಂದ್ರೆ ಕೈಯಲ್ಲಿ ಆಧಾರ್ ಕಾರ್ಡ್ ಇರುವುದು ಬಹಳ ಮುಖ್ಯ.

ಅದೆಷ್ಟೋ ಸರ್ಕಾರಿ ಕೆಲಸಗಳಿಗೆ ಆಧಾರ್ ಕಾರ್ಡ್ ಪರಿಶೀಲನೆ (Aadhaar Card verification) ಎನ್ನುವುದು ಪ್ರಮುಖ ದಾಖಲೆಯಾಗಿ ಪರಿಣಮಿಸಿದೆ. ಇನ್ನು ಆಧಾರ್ ಕಾರ್ಡ್ ಅನ್ನು ನೀವು ಬಹಳ ವರ್ಷಗಳ ಹಿಂದೆ ಪಡೆದುಕೊಂಡಿದ್ದರೆ ಅದರಲ್ಲಿ ಮುಖ್ಯವಾಗಿರುವ ಬದಲಾವಣೆಗಳನ್ನು ಮಾಡಿಕೊಂಡು ಕೂಡ ಕಡ್ಡಾಯ.

ಸ್ವಂತ ಉದ್ಯಮ ಆರಂಭಿಸಲು ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂ.! ಅರ್ಜಿ ಸಲ್ಲಿಸಿ

ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ! (Name changes in Aadhaar card)

ಸಾಮಾನ್ಯವಾಗಿ ಕೆಲಸಕ್ಕಾಗಿ ಅಥವಾ ಇತರ ಕಾರಣಕ್ಕೆ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಜೀವನ ನಡೆಸುವುದು ಅಥವಾ ಒಂದು ಮನೆಯಿಂದ ಬೇರೆ ಮನೆಗೆ ಶಿಫ್ಟ್ ಆಗುವುದು ಸಹಜ. ಇಂತಹ ಸಂದರ್ಭದಲ್ಲಿ ನೀವು ಆಧಾರ್ ಕಾರ್ಡ್ ನಲ್ಲಿ ಪ್ರತಿ ಬಾರಿ ನಿಮ್ಮ ವಿಳಾಸ ಬದಲಾದಾಗ ಆ ಹೊಸ ವಿಳಾಸವನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಈ ರೀತಿ ವಿಳಾಸ ಬದಲಾವಣೆಗೆ ಯಾವುದೇ ರೀತಿಯ ಮಿತಿ ಹೇರಿಕೆಮಾಡಿಲ್ಲ ಸರ್ಕಾರ.

ಯು ಎ ಡಿ ಎ ಐ (UADAI) ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬ ನಾಗರಿಕನಿಗೂ ನೀಡಿದ ಮೇಲೆ ಅದಕ್ಕೆ ಅದರದೇ ಆದ ರೂಲ್ಸ್ ಅನ್ನು ಕೂಡ ನಿಗದಿ ಪಡಿಸಿದೆ. ಅದನ್ನು ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು. ಉದಾಹರಣೆಗೆ ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ನಮ್ಮ ಹೆಸರು ಅಥವಾ ವಿಳಾಸ ಬದಲಾಯಿಸಬಹುದು ಎನ್ನುವುದನ್ನು ನಾವು ತಿಳಿದುಕೊಂಡಿದ್ದರೆ ಒಳ್ಳೆಯದು.

ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಉಳಿತಾಯ ಮಾಡಿ 35 ಲಕ್ಷ ನಿಮ್ಮದಾಗಿಸಿಕೊಳ್ಳಿ

Aadhaar Cardಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ಹೆಸರು ಬದಲಾಯಿಸಬಹುದು?

ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಹುಟ್ಟಿದಾಗಲೇ ಇರುವ ಹೆಸರನ್ನು ಮತ್ತೆ ಮತ್ತೆ ಬದಲಾಯಿಸುವುದಿಲ್ಲ. ಕೆಲವೊಂದು ಅನಿವಾರ್ಯ ಸಂದರ್ಭವನ್ನು ಹೊರತುಪಡಿಸಿ, ಮತ್ತೆ ಮತ್ತೆ ಹೆಸರಿನ ಬದಲಾವಣೆ ಆಗುತ್ತಿರುವುದಿಲ್ಲ.

ಹಾಗಾಗಿ ಆಧಾರ್ ಕಾರ್ಡ್ ನಲ್ಲಿಯೂ ಕೂಡ ನೀವು ವಿಳಾಸವನ್ನು ಬದಲಾಯಿಸಿದಂತೆ ಹೆಸರು ಬದಲಾವಣೆ ಮಾಡಲು ಸಾಧ್ಯವಿಲ್ಲ. UADAI ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆಗೆ ಎರಡು ಬಾರಿ ಮಾತ್ರ ಅವಕಾಶ ನೀಡಿದೆ.

ಬ್ಯಾಂಕ್ ಖಾತೆಯಲ್ಲಿ ಇನ್ಮುಂದೆ ಇದಕ್ಕಿಂತ ಹೆಚ್ಚು ಹಣ ಇಡುವಂತಿಲ್ಲ; ಹೊಸ ನಿಯಮ

ಆನ್ಲೈನ್ ಮೂಲಕವೂ ಕೂಡ ಹೆಸರು ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಎರಡಕ್ಕಿಂತ ಹೆಚ್ಚು ಬಾರಿ ಹೆಸರು ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆ ಬಂದರೆ ಸೂಕ್ತ ಕಾರಣ ಹಾಗೂ ದಾಖಲೆಗಳ ಜೊತೆಗೆ ಆಧಾರ್ ಕೇಂದ್ರಕ್ಕೆ ಹೋಗಿ ತಿದ್ದುಪಡಿ ಮಾಡಿಕೊಂಡು ಬರಬಹುದು.

ಎರಡಕ್ಕಿಂತ ಹೆಚ್ಚು ಬಾರಿ ಹೆಸರು ಬದಲಾಯಿಸಲು ಅರ್ಜಿ ಸಲ್ಲಿಸಿದರೆ ಅರ್ಜಿ ಅಪ್ರುವಲ್ ಆಗಲು 30 ದಿನಗಳ ಅವಕಾಶ ಬೇಕು. ಇದಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗಾಗಿ 1947 ಸಂಖ್ಯೆಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಿ.

Do you know how many times you are allowed to change name in Aadhaar card

Related Stories