ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ₹20,000 ರೂಪಾಯಿ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ನೀವು ಹೂಡಿಕೆ ಮಾಡಲು ಬಯಸಿದರೆ, ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ಉತ್ತಮವಾದ ಆಯ್ಕೆ ಆಗಿದೆ. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ನೀವು ಇನ್ವೆಸ್ಟ್ ಮಾಡಬಹುದು, ಇದು ಫಿಕ್ಸೆಡ್ ಡೆಪಾಸಿಟ್ ಥರದ ಯೋಜನೆ ಆಗಿದ್ದು, ಇದರಲ್ಲಿ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ
ನಾವು ಎಷ್ಟೇ ಹಣ ಸಂಪಾದನೆ ಮಾಡಿದರೂ ಕೂಡ, ಅದರಲ್ಲಿ ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡುವುದರಿಂದ ಮಂದೆ ನಮ್ಮ ಭವಿಷ್ಯ ಬಹಳ ಚೆನ್ನಾಗಿರುತ್ತದೆ. ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕೆ ಸಹಾಯ ಆಗುತ್ತದೆ. ಹಾಗೆಯೇ ಕಷ್ಟಕಾಲದಲ್ಲಿ ಕೂಡ ಸಹಾಯ ಆಗುತ್ತದೆ.
ಹಾಗಾಗಿ ಹೂಡಿಕೆ ಮಾಡುವುದು ಒಳ್ಳೆಯದು, ಒಂದು ವೇಳೆ ನೀವು ಹೂಡಿಕೆ ಮಾಡುವುದಕ್ಕೆ ಆಸಕ್ತಿ ತೋರಿದರೆ, ಪೋಸ್ಟ್ ಆಫೀಸ್ (Post Office Savings Scheme) ಉತ್ತಮವಾದ ಆಯ್ಕೆ. ಇಲ್ಲಿ ಅನೇಕ ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳು ಜಾರಿಯಲ್ಲಿದೆ. ಅವುಗಳಲ್ಲಿ ನೀವು ಹೂಡಿಕೆ ಮಾಡಬಹುದು.
ಈ ಕಾರ್ಡ್ ಇದ್ರೆ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಕೆಸಿಸಿ ಲೋನ್, ಮೊದಲು ಈ ಕಾರ್ಡ್ ಮಾಡಿಸಿಕೊಳ್ಳಿ
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್:
ಹೌದು, ನೀವು ಹೂಡಿಕೆ ಮಾಡಲು ಬಯಸಿದರೆ, ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ (Time Deposit Scheme) ಉತ್ತಮವಾದ ಆಯ್ಕೆ ಆಗಿದೆ. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ನೀವು ಇನ್ವೆಸ್ಟ್ ಮಾಡಬಹುದು, ಇದು ಫಿಕ್ಸೆಡ್ ಡೆಪಾಸಿಟ್ (Fixed Deposit) ಥರದ ಯೋಜನೆ ಆಗಿದ್ದು, ಇದರಲ್ಲಿ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ.
ಈ ಯೋಜನೆಯಲ್ಲಿ ನಿಮ್ಮ ಹಣ ಕೂಡ ಡಬಲ್ ಆಗುತ್ತದೆ. ಹಾಗಿದ್ದಲ್ಲಿ, ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಹೇಗೆ ಲಾಭ ಸಿಗುತ್ತದೆ ಎಂದು ತಿಳಿದುಕೊಳ್ಳೋಣ..
ಸಿಗಲಿದೆ 4 ಮೆಚ್ಯುರಿಟಿ ಆಯ್ಕೆ:
ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ತ್ರೈಮಾಸಿಕ ಅವಧಿಗೆ ಬಡ್ಡಿ ಸಿಗುತ್ತದೆ, ಅದನ್ನು ವಾರ್ಷಿಕವಾಗಿ ಖಾತೆಗೆ ವರ್ಗಾವಣೆ ಮಾಡುತ್ತಾರೆ. ಇನ್ನು ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ 4 ಮೆಚ್ಯುರಿಟಿ ಆಯ್ಕೆಗಳು ಸಿಗುತ್ತದೆ.
ಇದರಲ್ಲಿ ನೀವು 1 ರಿಂದ 5 ವರ್ಷದ ಅವಧಿಯಲ್ಲಿ ಹೂಡಿಕೆ ಮಾಡಬಹುದು, ಇಲ್ಲಿ ನಿಮಗೆ 6.9% ಇಂದ 7.5% ವರೆಗು ವರ್ಷಕ್ಕೆ ಆದಾಯ ಬರುತ್ತದೆ. ಇಲ್ಲಿ ನೀವು ಮಿನಿಮಮ್ ₹1000 ಹೂಡಿಕೆ ಮಾಡಬಹುದು. ₹1,100 ರೂಪಾಯಿಗಳು, ₹9,900 ರೂಪಾಯಿಗಳು ಇಷ್ಟು ಮೊತ್ತವನ್ನು ನೀವು ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಬಹುದು.
ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಕೇಂದ್ರದಿಂದ ಸಿಗಲಿದೆ ₹20 ಲಕ್ಷ ಸಾಲ! ಅರ್ಜಿ ಸಲ್ಲಿಸಿ
ಸಿಗುವ ಬಡ್ಡಿದರ ಎಷ್ಟು?
ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ, 1ವರ್ಷಕ್ಕೆ 6.9%, 2 ವರ್ಷಕ್ಕೆ 7%, 3 ವರ್ಷಕ್ಕೆ 7.1%, 5 ವರ್ಷಕ್ಕೆ 7.5% ಬಡ್ಡಿ ನಿಗದಿ ಆಗಿರುತ್ತದೆ. ಇದರಲ್ಲಿ ನೀವು 1 ವರ್ಷದ ಅವಧಿಗೆ 1 ಲಕ್ಷ ಹೂಡಿಕೆ ಮಾಡಿದರೆ, ಬಡ್ಡಿ ₹7,081 ರೂಪಾಯಿ ಸಿಗಲಿದ್ದು, ಮೆಚ್ಯುರಿಟಿ ನಂತರ ₹7,07,081 ರೂಪಾಯಿ ರಿಟರ್ನ್ಸ್ ಬರುತ್ತದೆ.
3 ವರ್ಷಕ್ಕೆ ₹14,888 ಬಡ್ಡಿ ಸಿಗಲಿದ್ದು, ಮೆಚ್ಯುರಿಟಿ ನಂತರ ₹7,14,888 ರೂಪಾಯಿ ಸಿಗುತ್ತದೆ. 3 ವರ್ಷಕ್ಕೆ ₹23,507 ರೂಪಾಯಿ ಬಡ್ಡಿ ಸಿಗಲಿದ್ದು, ಮೆಚ್ಯುರಿಟಿ ನಂತರ ₹1,23,507 ರೂಪಾಯಿಗಳು ನಿಮ್ಮದಾಗುತ್ತದೆ. ಇನ್ನು 5ವರ್ಷದ ಅವಧಿಗೆ ₹44,995 ರೂಪಾಯಿ ಬಡ್ಡಿ ಸಿಗುತ್ತದೆ. ಮೆಚ್ಯುರಿಟಿ ನಂತರ ₹1,44,995 ರೂಪಾಯಿ ರಿಟರ್ನ್ಸ್ ನಿಮ್ಮದಾಗುತ್ತದೆ.
ಇದೇ ಯೋಜನೆಯಲ್ಲಿ ನೀವು ₹20,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿಮಗೆ ಎಷ್ಟು ಲಾಭ ಬರುತ್ತದೆ ಎಂದು ನೋಡುವುದಾದರೆ, 1 ವರ್ಷಕ್ಕೆ ₹1,416 ರೂಪಾಯಿ ಬಡ್ಡಿ ಸಿಗಲಿದ್ದು, ಮೆಚ್ಯುರಿಟಿ ವೇಳೆಗೆ ₹21,416 ರೂಪಾಯಿ ರಿಟರ್ನ್ಸ್ ಬರುತ್ತದೆ.
ಜಿಯೋ, ಏರ್‌ಟೆಲ್ ಈಗ ದುಬಾರಿ! ಬಿಎಸ್ಎನ್ಎಲ್ ನೆಟ್‌ವರ್ಕ್‌ಗೆ ಪೋರ್ಟ್ ಆಗಲು ಮುಗಿಬಿದ್ದ ಜನ
2 ವರ್ಷಕ್ಕೆ ₹2,978 ಬಡ್ಡಿ ಸಿಗಲಿದ್ದು, ಮೆಚ್ಯುರಿಟಿ ನಂತರ ₹22,978 ರೂಪಾಯಿ ರಿಟರ್ನ್ಸ್ ಬರುತ್ತದೆ. 3 ವರ್ಷದ ಅವಧಿಗೆ ₹4,701 ರೂಪಾಯಿ ಬಡ್ಡಿ ಸಿಗಲಿದ್ದು, ಮೆಚ್ಯುರಿಟಿ ವೇಳೆಗೆ ₹24,701 ರೂಪಾಯಿ ರಿಟರ್ನ್ಸ್ ಬರುತ್ತದೆ. 5 ವರ್ಷಕ್ಕೆ ₹8,999 ರೂಪಾಯಿ ಬಡ್ಡಿ ಸಿಗಲಿದ್ದು, ಮೆಚ್ಯುರಿಟಿ ವೇಳೆಗೆ ₹28,999 ರೂಪಾಯಿ ರಿಟರ್ನ್ಸ್ ಬರುತ್ತದೆ.
Do you know how much interest you get on your 20,000 rupees at the post office