ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಕೇಂದ್ರದಿಂದ ಸಿಗಲಿದೆ ₹20 ಲಕ್ಷ ಸಾಲ! ಅರ್ಜಿ ಸಲ್ಲಿಸಿ
Mudra Loan : ನಮ್ಮ ದೇಶದಲ್ಲಿ ಸಣ್ಣ ಉದ್ಯಮಗಳು ಬೆಳೆಯಬೇಕು, ಜನರು ಸ್ವಂತ ಉದ್ಯೋಗವನ್ನು (Own Business) ಮಾಡಲಿ, ಸಣ್ಣ ಕೈಗಾರಿಕೋದ್ಯಮಗಳು ಬೆಳೆದು, ದೇಶ ಇನ್ನು ಮುಂದುವರಿಯಬೇಕು ಎಂದು ಪಿಎಮ್ ಮೋದಿ ಅವರು ದೇಶದ ಬೆಳವಣಿಗೆಯ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ.
ಇದಕ್ಕಾಗಿ ಜನರನ್ನು ಪ್ರೋತ್ಸಾಹಿಸುವುದಕ್ಕಾಗಿ ಅನೇಕ ಯೋಜನೆಗಳನ್ನು ಕೂಡ ಜಾರಿಗೆ ತಂದಿದ್ದಾರೆ. ಅಂಥ ಯೋಜನೆಗಳಲ್ಲಿ ಪಿಎಮ್ ಮುದ್ರಾ ಯೋಜನೆ (Loan Scheme) ಕೂಡ ಒಂದು. ಈ ಒಂದು ಯೋಜನೆಯ ಮೂಲಕ ನೀವು ಸಾಲ ಪಡೆಯಬಹುದು..
ನಿಮ್ಮ ಸ್ವಂತ ಉದ್ಯಮ ಶುರು ಮಾಡುವುದಕ್ಕೆ, ಸ್ವಂತ ಬ್ಯುಸಿನೆಸ್ ಮಾಡುವುದಕ್ಕೆ ಕೇಂದ್ರ ಸರ್ಕಾರವು ಮುದ್ರಾ ಯೋಜನೆಯನ್ನು ಜಾರಿಗೆ ತಂದಿದೆ. ಸಣ್ಣ ಉದ್ಯಮ, ದೊಡ್ಡ ಉದ್ಯಮ ಎರಡನ್ನು ಶುರು ಮಾಡುವಷ್ಟು ಸಾಲ ಸೌಲಭ್ಯ (Loan Facility) ನಿಮಗೆ ಈ ಒಂದು ಯೋಜನೆಯ ಮೂಲಕ ಸಿಗುತ್ತದೆ.
ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸರ್ಕಾರವು ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು, ಬ್ಯುಸಿನೆಸ್ ಮಾಡಬೇಕೆನ್ನುವ ಕನಸು ಹೊಂದಿರುವ ಯಾರೇ ಆದರೂ ಮುದ್ರಾ ಯೋಜನೆಯ ಮೂಲಕ ಸರ್ಕಾರದ ಸಹಾಯ ಪಡೆಯಬಹುದು.
ಈ ಕಾರ್ಡ್ ಇದ್ರೆ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಕೆಸಿಸಿ ಲೋನ್, ಮೊದಲು ಈ ಕಾರ್ಡ್ ಮಾಡಿಸಿಕೊಳ್ಳಿ
ಪಿಎಂ ಮುದ್ರಾ ಯೋಜನೆ: Loan
ಕೇಂದ್ರ ಸರ್ಕಾರ 2015ರಲ್ಲಿ ಜಾರಿಗೆ ತಂದಿರುವ ಈ ಒಂದು ಯೋಜನೆಯ ಅಡಿಯಲ್ಲಿ ನಿಮಗೆ ಹೆಚ್ಚಿನ ಅನುಕೂಲಗಳು ಇದೆ. ಈ ಮೊದಲು ಮುದ್ರಾ ಯೋಜನೆಯ ಮೂಲಕ ಸ್ವಂತ ಉದ್ಯಮ ಶುರು ಮಾಡಲು 10 ಲಕ್ಷದವರೆಗೂ ಸಾಲ ಕೊಡಲಾಗುತ್ತಿತ್ತು, ಆದರೆ ಈಗ 2024ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಿಎಮ್ ಮುದ್ರಾ ಯೋಜನೆಗಾಗಿ ಕೊಡುವ ಸಾಲವನ್ನು ಹೆಚ್ಚಿಸಿದ್ದು, ಬ್ಯುಸಿನೆಸ್ ಮಾಡುವುದಕ್ಕೆ 20 ಲಕ್ಷದವರೆಗೂ ಸಾಲ ಸೌಲಭ್ಯ ಸಿಗುತ್ತದೆ..
ಯಾರೆಲ್ಲಾ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು:
ಜನರಿಗೆ ಬಹಳ ಉಪಯುಕ್ತ ಆಗುತ್ತಿರುವಂಥ ಯೋಜನೆ ಮುದ್ರಾ ಯೋಜನೆ ಆಗಿದೆ, ಇದರ ಮೂಲಕ ನೀವು 20 ಲಕ್ಷದವರೆಗೂ ಸಾಲ ಪಡೆದು, ಬ್ಯುಸಿನೆಸ್ ಶುರು ಮಾಡಬಹುದು. 21 ರಿಂದ 70 ವರ್ಷದ ಒಳಗಿರುವ ಯಾವುದೇ ಭಾರತದ ಪ್ರಜೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್, ಅಡ್ರೆಸ್ ಪ್ರೂಫ್ ಇದಿಷ್ಟು ದಾಖಲೆಗಳು ಬೇಕಾಗುತ್ತದೆ. ಇದೆಲ್ಲವನ್ನು ನೀಡಿ, ಪಿಎಮ್ ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸಬಹುದು..
ತಕ್ಷಣ ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಗ್ಯಾಸ್ ಸಿಲಿಂಡರ್ ಕ್ಯಾನ್ಸಲ್! ಹೊಸ ರೂಲ್ಸ್ ತಂದ ಸರ್ಕಾರ
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
*ಪಿಎಮ್ ಮುದ್ರಾ ಯೋಜನೆಯಲ್ಲಿ ಸಾಲ ಪಡೆಯಲು ಬ್ಯಾಂಕ್ ನಲ್ಲಿ ನಿಮ್ಮ ಬ್ಯುಸಿನೆಸ್ ಬಗ್ಗೆ ಪೂರ್ತಿ ಮಾಹಿತಿಯನ್ನು ದಾಖಲೆಗಳ ಸಮೇತ ನೀಡಬೇಕು.
*ನಿಮ್ಮ ಬ್ಯುಸಿನೆಸ್ ಗೆ ಸಂಬಂಧಿಸಿದ ಮಾಹಿತಿಯ ಆಧಾರದ ಮೇಲೆ ಬ್ಯಾಂಕ್ ಇಂದ 10 ಲಕ್ಷದವರೆಗೂ ಸಾಲ ಸಿಗುತ್ತದೆ.
*ಬ್ಯುಸಿನೆಸ್ ಗಾಗಿ ನೀವು 25% ವೆಚ್ಚ ಭರಿಸಿದರೆ ಸಾಕು, 75% ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.
*ಸಣ್ಣ ಕೈಗಾರಿಕೋದ್ಯಮ ಶುರು ಮಾಡಬೇಕು ಎಂದುಕೊಂಡಿರುವವರಿಗೆ ಮುದ್ರಾ ಯೋಜನೆ ಸಹಾಯಕಾರಿ ಆಗಿರಲಿದೆ.
* mudra.org.in ಈ ವೆಬ್ಸೈಟ್ ಇಂದ ಅಪ್ಲಿಕೇಶನ್ ಫಾರ್ಮ್ ಡೌನ್ಲೋಡ್ ಮಾಡಿ, ಅದನ್ನು ಫಿಲ್ ಮಾಡಿ, ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಬಳಿಕ ನಿಮಗೆ ಸಾಲ ಮಂಜೂರಾಗುತ್ತದೆ.
ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್, ಲೋನ್ ಇಎಂಐ ಸೇರಿದಂತೆ ಆಗಸ್ಟ್ 1ರಿಂದ ಹೊಸ ಹೊಸ ರೂಲ್ಸ್
Those who have to do their own business will get a loan of 20 lakh