ಈ ಕಾರ್ಡ್ ಇದ್ರೆ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಕೆಸಿಸಿ ಲೋನ್, ಮೊದಲು ಈ ಕಾರ್ಡ್ ಮಾಡಿಸಿಕೊಳ್ಳಿ

Kisan Credit Card : ಈಗಾಗಲೇ ಕೋಟಿಗಟ್ಟಲೆ ರೈತರು ಈ ಯೋಜನೆಯ ಮೂಲಕ Loan ಪಡೆದು, ಲಾಭ ಪಡೆದಿದ್ದಾರೆ. ನೀವು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

Kisan Credit Card : ನಮಗೆಲ್ಲ ಗೊತ್ತಿರುವ ಹಾಗೆ ಕೇಂದ್ರ ಸರ್ಕಾರವು ನಮ್ಮ ದೇಶದ ಬೆನ್ನೆಲುಬು ಆಗಿರುವ ರೈತರಿಗೆ ಅನುಕೂಲ ಆಗುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈಗಲೂ ತರುತ್ತಿದೆ, ಪಿಎಮ್ ಕಿಸಾನ್ ಯೋಜನೆಯ ಮೂಲಕ ವ್ಯವಸಾಯಕ್ಕೆ ಸಹಾಯ ಮದಲಾಗುತ್ತಿದೆ, ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಮೂಲಕ ಕೂಡ ಆರ್ಥಿಕ ಸಹಾಯ ನೀಡಲಾಗುತ್ತಿದೆ.

ಅದರ ಜೊತೆಗೆ ಇದೀಗ KCC ಸಾಲವನ್ನು ಸಹ ಜಾರಿಗೆ ತರಲಾಗಿದೆ. ಈ ಒಂದು ಯೋಜನೆ ಇಂದ ರೈತರು ಸಾಲ ಪಡೆಯಬಹುದು. ಹೌದು, ವಿಶೇಷವಾಗಿ ರೈತರಿಗೆ ಆರ್ಥಿಕ ಸಹಾಯ ಆಗಬೇಕು, ಕೃಷಿಗೆ ಸಂಬಂಧಿಸಿದ ಕೆಲಸಗಳು ಮುಂದಕ್ಕೆ ಹೋಗಬಾರದು ಎನ್ನುವ ಕಾರಣಕ್ಕೆ KCC ಯೋಜನೆಯ ಮೂಲಕ ಸಾಲ ಕೊಡಲಾಗುತ್ತಿದೆ.

ಈ KCC ಸಾಲ ಪಡೆದು ವ್ಯವಸಾಯಕ್ಕೆ ಬೇಕಾಗಿರುವ ಉಪಕರಣಗಳು, ರಸಗೊಬ್ಬರ, ಬೀಜ ಇದೆಲ್ಲವನ್ನು ಕೂಡ ರೈತರು ಖರೀದಿ ಮಾಡಬಹುದು. ಈಗಾಗಲೇ ಕೋಟಿಗಟ್ಟಲೆ ರೈತರು ಈ ಯೋಜನೆಯ ಮೂಲಕ Loan ಪಡೆದು, ಲಾಭ ಪಡೆದಿದ್ದಾರೆ. ನೀವು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

Farmers will get 3 lakh loan if they have Kisan Credit card

ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನದಲ್ಲಿ 10ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ನಿಜಕ್ಕೂ ನೀವು ನಂಬೋಲ್ಲ

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಿಗಲಿದೆ 3 ಲಕ್ಷ:

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಒಂದು ಯೋಜನೆಯ ಮೂಲಕ, ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸಿ ₹3 ಲಕ್ಷ ರೂಪಾಯಿಗಳ ವರೆಗು ಸಾಲ ಪಡೆದುಕೊಳ್ಳಬಹುದು. ಈ ಸಾಲ ಸೌಲಭ್ಯದ ಬಗ್ಗೆ ವ್ಯವಸ್ಥಾಪಕರಾಗಿರುವ ಶಿವಂ ಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ, ಇವರು ನೀಡಿರುವ ಮಾಹಿತಿಯ ಅನುಸಾರ, 3 ಲಕ್ಷದವರೆಗೂ ಸಾಲವನ್ನು 4% ಬಡ್ಡಿದರಕ್ಕೆ ಕೊಡಲಾಗುತ್ತದೆ.

ಹಾಗೆಯೇ ಸಮಯಕ್ಕೆ ಸರಿಯಾಗಿ ಹಣವನ್ನು ಮರುಪಾವತಿ ಮಾಡಿದರೆ, 3% ವರೆಗೂ ಸಹಾಯಧನ ಸಿಗುತ್ತದೆ. ರೈತರು 1.60 ಲಕ್ಷದವರೆಗೂ ಸುಲಭವಾಗಿ ಸಾಲ ಪಡೆಯಬಹುದು..

ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯನ್ನು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಕಡೆಯಿಂದ ನಡೆಸಲಾಗುತ್ತಿದೆ. ರೈತರು ಈ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಆಗತ್ಯವಿರುವ ದಾಖಲೆಗಳ ಜೊತೆಗೆ ರೈತರು ಅರ್ಜಿ ಸಲ್ಲಿಸಿದರೆ, 15 ದಿನಗಳ ಒಳಗೆ ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಸಿಗುತ್ತದೆ.

ಈ ಮೂಲಕ ರೈತರು ಕಡಿಮೆ ಬಡ್ಡಿಯಲ್ಲಿ ಸರ್ಕಾರದ ಕಡೆಯಿಂದ Loan ಪಡೆದು, ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಬಹುದು.

ಕೇವಲ ₹1000 ರೂಪಾಯಿ ಬಂಡವಾಳ ಹಾಕಿ ₹30 ಸಾವಿರ ಲಾಭ ಪಡೆಯೋ ಬ್ಯುಸಿನೆಸ್‌ ಇದು! ಟ್ರೈ ಮಾಡಿ

KCC ಸಾಲ ಪಡೆಯಲು ಬೇಕಾಗುವ ಅರ್ಹತೆಗಳು:

*ನಮ್ಮ ದೇಶದ ಪ್ರಜೆ ಆಗಿರುವ ಯಾವುದೇ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯಬಹುದು

*ಪಿಎಮ್ ಕಿಸಾನ್ ಯೋಜನೆಯ ಫಲಾನುಭವಿ ಆಗಿರುವ ಯಾವುದೇ ರೈತರು ಈ ಒಂದು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

*₹3,00,000 ವರೆಗೂ ಸಾಲವನ್ನು ಕೃಷಿಗೆ ಬೇಕಾದ ಉಪಕರಣಗಳನ್ನು ಖರೀದಿ ಮಾಡುವುದಕ್ಕೆ ನೀಡಲಾಗುತ್ತದೆ.

*ಸರ್ಕಾರದ ಎಲ್ಲಾ ಬ್ಯಾಂಕ್ ಗಳಲ್ಲಿ ಈ ಒಂದು ಸೌಲಭ್ಯ ಸಿಗುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್, ಲೋನ್ ಇಎಂಐ ಸೇರಿದಂತೆ ಆಗಸ್ಟ್ 1ರಿಂದ ಹೊಸ ಹೊಸ ರೂಲ್ಸ್

Farmers will get 3 lakh loan if they have Kisan Credit card

Related Stories