ತಕ್ಷಣ ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಗ್ಯಾಸ್ ಸಿಲಿಂಡರ್ ಕ್ಯಾನ್ಸಲ್! ಹೊಸ ರೂಲ್ಸ್ ತಂದ ಸರ್ಕಾರ
ಈ ಒಂದು ಯೋಜನೆ ಹಳ್ಳಿಗಳಲ್ಲಿ ಇರುವ ಜನರಿಗೆ ಕೂಡ LPG Gas Cylinder ಸೌಲಭ್ಯವನ್ನು ಕೊಡುತ್ತಿದೆ. ಕೇಂದ್ರ ಸರ್ಕಾರ ಈ ಯೋಜನೆಯ ಮೂಲಕ ಜನರಿಗೆ ಅನುಕೂಲ ತಂದಿರುವುದೇನೋ ನಿಜ, ಅದರ ಜೊತೆಗೆ ಈಗ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಇದೀಗ ಹೊಸದೊಂದು ನಿಯಮವನ್ನು ಕೂಡ ಜಾರಿಗೆ ತರಲಾಗಿದೆ.
ಕೇಂದ್ರ ಸರ್ಕಾರವು ನಮ್ಮ ದೇಶದ ಸಾಮಾನ್ಯ ಜನರಿಗೆ ಅನುಕೂಲ ಅಗುವಂಥ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಜಾರಿ ಆಗಿರುವ ಯೋಜನೆಗಳಿಂದ ಜನರಿಗೆ ಅನುಕೂಲ ಆಗಿದ್ದು, ಅವುಗಳು ಮುಂದುವರೆದುಕೊಂಡು ಹೋಗುತ್ತಿದೆ.
ಆ ಯೋಜನೆಗಳ ಪೈಕಿ ಪಿಎಮ್ ಉಜ್ವಲಾ ಯೋಜನೆ ಕೂಡ ಒಂದು. ಈ ಯೋಜನೆಯ ಅಡಿಯಲ್ಲಿ ನಮ್ಮ ದೇಶದ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ (Free Gas Connection) ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ. ಈಗಾಗಲೇ 1ಕೋಟಿಗಿಂತ ಹೆಚ್ಚಿನ ಜನರು ಪಿಎಮ್ ಉಜ್ವಲಾ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆದುಕೊಂಡಿದ್ದಾರೆ..
ಈ ಒಂದು ಯೋಜನೆ ಹಳ್ಳಿಗಳಲ್ಲಿ ಇರುವ ಜನರಿಗೆ ಕೂಡ LPG Gas Cylinder ಸೌಲಭ್ಯವನ್ನು ಕೊಡುತ್ತಿದೆ. ಕೇಂದ್ರ ಸರ್ಕಾರ ಈ ಯೋಜನೆಯ ಮೂಲಕ ಜನರಿಗೆ ಅನುಕೂಲ ತಂದಿರುವುದೇನೋ ನಿಜ, ಅದರ ಜೊತೆಗೆ ಈಗ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಇದೀಗ ಹೊಸದೊಂದು ನಿಯಮವನ್ನು ಕೂಡ ಜಾರಿಗೆ ತರಲಾಗಿದೆ. ಈ ಒಂದು ನಿಯಮವನ್ನ ಪಾಲಿಸದೇ ಹೋದರೆ, ಅಂಥವರ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.
ಈ ಕಾರ್ಡ್ ಇದ್ರೆ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಕೆಸಿಸಿ ಲೋನ್, ಮೊದಲು ಈ ಕಾರ್ಡ್ ಮಾಡಿಸಿಕೊಳ್ಳಿ
ಉಜ್ವಲಾ ಮತ್ತು ಪಹಲ್ ಯೋಜನೆಯ ಫಲಾನುಭವಿಗಳಿಗೆ ಮುಖ್ಯವಾದ ಸುದ್ದಿ;
ಜನರಿಗೆ ಉಚಿತವಾಗಿ LPG ಕನೆಕ್ಷನ್ ಕೊಡುತ್ತಿರುವ ಯೋಜನೆ ಉಜ್ವಲಾ ಯೋಜನೆ, ಇನ್ನು ಪಹಲ್ ಯೋಜನೆಯ ಮೂಲಕ ಬಡತನದಲ್ಲಿರುವ ಮಹಿಳೆಯರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕೊಟ್ಟು, 14.2 ಕೆಜಿಯ 12 ಗ್ಯಾಸ್ ಸಿಲಿಂಡರ್ ಗಳ ಮರುಬಳಕೆಗೆ ₹300 ರೂಪಾಯಿಯ ಸಬ್ಸಿಡಿ ಕೊಡಲಾಗುತ್ತಿದೆ.
ಈ ಯೋಜನೆಗಳ ಫಲಾನುಭವಿಗಳಿಗೆ ಇದೀಗ ಸರ್ಕಾರ ಹೊಸದೊಂದು ರೂಲ್ಸ್ ಮಾಡಿದ್ದು, ಇವರೆಲ್ಲರು ಆಧಾರ್ ದೃಢೀಕರಣ ಮಾಡಿಸಬೇಕು. ಆಧಾರ್ ದೃಢೀಕರಿಸಿದರೆ, ಅದರಿಂದ ಯಾರಿಗೆ ಯಾವ್ಯಾವ ಯೋಜನೆಯ ಸೌಲಭ್ಯ ಸಿಗುತ್ತಿದೆ, ಅರ್ಹರಿಗೆ ಯೋಜನೆ ತಲುಪುತ್ತಿದೆಯಾ ಎನ್ನುವುದು ಕೂಡ ಗೊತ್ತಾಗುತ್ತದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಪ್ರಮುಖ ಯೋಜನೆಗಳಾದ ಪಹಲ್ ಯೋಜನೆ ಮತ್ತು ಉಜ್ವಲಾ ಯೋಜನೆ ಎರಡು ಯೋಜನೆಗಳ ಫಲಾನುಭವಿಗಳು ಕೂಡ ಆಧಾರ್ (Aadhaar Card) ದೃಢೀಕರಣ ಮಾಡಿಸಬೇಕು.
ಆಗಸ್ಟ್ ತಿಂಗಳಿನಲ್ಲಿ 14 ದಿನಗಳ ಕಾಲ ಬ್ಯಾಂಕ್ ರಜೆ, ಎಲ್ಲಾ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳಿ!
ಇದನ್ನು ಸರ್ಕಾರವೇ ಸಕ್ರಿಯಗೊಳಿಸಿದ್ದು, ಈ ಒಂದು ಕೆಲಸ ಮಾಡಿಸುವುದು ಈಗ ಕಡ್ಡಾಯ ಆಗಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಆಧಾರ್ ದೃಢೀಕರಣಕ್ಕಾಗಿ ಆಪ್ ಲಾಂಚ್ ಮಾಡಿದ್ದು, ಅವುಗಳ ಮೂಲಕ ಆಧಾರ್ ದೃಢೀಕರಣ ಮಾಡಿಕೊಳ್ಳಬಹುದು. ಎಲ್ಲರೂ ಬೇಗ ಈ ಕೆಲಸವನ್ನು ಮಾಡಬೇಕು.
ನಿಮ್ಮ ಫೋನ್ ನಲ್ಲೇ ಈ ಆಧಾರ್ ದೃಢೀಕರಣ ಮಾಡಿಕೊಳ್ಳುವುದು ಸುಲಭ. ಒಂದು ವೇಳೆ ಈ ಕೆಲಸ ಮಾಡಲು ಸಾಧ್ಯವಾಗದೇ ಹೋದರೆ, ನಿಮ್ಮ ಮನೆಗೆ ಸಿಲಿಂಡರ್ ವಿತರಣೆಗೆ ಬರುವ ಕಂಪನಿಯ ಕೆಲಸಗಾರರ ಬಳಿ ಬಯೋಮೆಟ್ರಿಕ್ ಮೂಲಕ ಆಧಾರ್ ದೃಢೀಕರಣ ಮಾಡಿಸಿಕೊಳ್ಳಬಹುದು.
ಅಥವಾ ನಿಮ್ಮ ಸಿಲಿಂಡರ್ ಕಂಪನಿಯ ಆಫೀಸ್ ಗೆ ಹೋಗಿ ಕೂಡ ಈ ಒಂದು ಕೆಲಸ ಮಾಡಬಹುದು. ಯಾವುದಾದರೂ ಒಂದು ಬಗೆಯಲ್ಲಿ ಈ ಒಂದು ಕೆಲಸವನ್ನು ಮಾಡಿಕೊಂಡರೆ, ನಿಮಗೆ ಒಳ್ಳೆಯದು. ಇಲ್ಲದಿದ್ದರೆ, ನಿಮ್ಮ LPG ಸಿಲಿಂಡರ್ ಕನೆಕ್ಷನ್ ಕ್ಯಾನ್ಸಲ್ ಆಗುತ್ತದೆ.
Government brought new rules on LPG Gas Cylinder