Business News

ಜಿಯೋ, ಏರ್‌ಟೆಲ್ ಈಗ ದುಬಾರಿ! ಬಿಎಸ್ಎನ್ಎಲ್ ನೆಟ್‌ವರ್ಕ್‌ಗೆ ಪೋರ್ಟ್ ಆಗಲು ಮುಗಿಬಿದ್ದ ಜನ

ಈಗ ಎಲ್ಲೆಡೆ ಬಿ.ಎಸ್.ಎನ್. ಎಲ್ ನೆಟ್ವರ್ಕ್ ಗೆ (BSNL Network) ಬೇಡಿಕೆ ಬಂದಿದೆ. ಹೌದು, ಇದು ಅಸಲಿ ವಿಚಾರ. ಬಿ.ಎಸ್.ಎನ್. ಎಲ್ ಭಾರತದ ಸರ್ಕಾರದ ಟೆಲಿಕಾಂ ಕಂಪನಿ ಆಗಿದೆ. ಇಷ್ಟು ದಿನಗಳ ಕಾಲ BSNL ಗೆ ಹೇಳಿಕೊಳ್ಳುವಂಥ ಬೇಡಿಕೆ ಇರಲಿಲ್ಲ. ಹೆಚ್ಚಿನ ಜನರು ಜಿಯೋ (Jio), ಏರ್ಟೆಲ್ (Airtel), ವೊಡಾಫೋನ್ ಎಂದು ಬೇರೆ ನೆಟ್ವರ್ಕ್ ಮೊರೆ ಹೋಗಿದ್ದರು.

ಆದರೆ ಈಗ ಜಿಯೋ ಮತ್ತು ಏರ್ಟೆಲ್ ಎರಡು ಕೂಡ ತಮ್ಮ ರೀಚಾರ್ಜ್ ಪ್ಲಾನ್ ಗಳನ್ನು (Recharge Plans) ವಿಪರೀತ ಹೆಚ್ಚಿಸಿದೆ. ಈ ಕಾರಣಕ್ಕೆ ಜನರಿಗೂ ರೀಚಾರ್ಜ್ ಮಾಡುವುದು ಹೊರೆ ಅನ್ನಿಸುವುದಕ್ಕೆ ಶುರುವಾಗಿದೆ..

Jio, Airtel now expensive, How to Port to BSNL Network

ಹೀಗಾಗಿ ಜನರು ಜಿಯೋ, ಏರ್ಟೆಲ್, ವೊಡಾಫೋನ್ ಬಿಟ್ಟು ಬಿ.ಎಸ್.ಎನ್.ಎಲ್ ಗೆ ಕಡೆಗೆ ಬರುತ್ತಿದ್ದಾರೆ. ಹೌದು, ಈಗಿರುವ ಸಿಮ್ ಅನ್ನು BSNL ಗೆ ಪೋರ್ಟ್ ಮಾಡಿಸಿಕೊಳ್ಳುವುದಕ್ಕೆ ಜನರು ಮುಗಿಬೀಳುತ್ತಿದ್ದಾರೆ ಎಂದರೆ ತಪ್ಪಲ್ಲ.

ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಕೇಂದ್ರದಿಂದ ಸಿಗಲಿದೆ ₹20 ಲಕ್ಷ ಸಾಲ! ಅರ್ಜಿ ಸಲ್ಲಿಸಿ

ಇದಕ್ಕೆ ಕಾರಣ ಬಿ.ಎಸ್.ಎನ್.ಎಲ್ ಶೀಘ್ರದಲ್ಲೇ 4G ಲಾಂಚ್ ಮಾಡುವುದಾಗಿ ಅನೌನ್ಸ್ ಮಾಡಿದ್ದು, ಅದರ ಜೊತೆಗೆ ಬಹಳ ಬೇಗ 5G ನೆಟ್ವರ್ಕ್ ಕೂಡ ಲಾಂಚ್ ಮಾಡುವ ಭರವಸೆ ನೀಡಿದೆ. ಹಾಗೆಯೇ ಈ ನೆಟ್ವರ್ಕ್ ನಲ್ಲಿ ರೀಚಾರ್ಜ್ ಪ್ಲಾನ್ ಗಳು (Pre Paid Recharge Plans) ಕೂಡ ಬಹಳ ಕಡಿಮೆ ಹಣಕ್ಕೆ ಸಿಗುತ್ತದೆ.

ಹೌದು BSNL ನಲ್ಲಿ ಬಹಳ ಅಗ್ಗದ ಬೆಲೆಗೆ ರೀಚಾರ್ಜ್ ಪ್ಲಾನ್ ಗಳು ಇರುವ ಕಾರಣ ಹೆಚ್ಚಿನ ಜನರು ಬಿ.ಎಸ್.ಎನ್.ಎಲ್ ನೆಟ್ವರ್ಕ್ ಗೆ ಪೋರ್ಟ್ ಮಾಡಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಹಾಗೆಯೇ ರತನ್ ಟಾಟಾ ಅವರು BSNL ಜೊತೆಗೆ ಟೈ ಅಪ್ ಆಗಿರುವುದು ಕೂಡ ಇದಕ್ಕೆ ಪ್ರಮುಖ ಕಾರಣ ಆಗಿದೆ.

ಒಂದು ವೇಳೆ ನೀವು ಕೂಡ ಬಿ.ಎಸ್.ಎನ್.ಎಲ್ ನೆಟ್ವರ್ಕ್ ಪೋರ್ಟ್ ಮಾಡಿಕೊಳ್ಳಬೇಕು ಎಂದು ಬಯಸಿದರೆ, ಸುಲಭವಾಗಿ ಹೇಗೆ ಪೋರ್ಟ್ ಮಾಡಿಕೊಳ್ಳುವುದು ಎಂದು ತಿಳಿಸುತ್ತೇವೆ ನೋಡಿ..

ತಕ್ಷಣ ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಗ್ಯಾಸ್ ಸಿಲಿಂಡರ್ ಕ್ಯಾನ್ಸಲ್! ಹೊಸ ರೂಲ್ಸ್ ತಂದ ಸರ್ಕಾರ

ಪೋರ್ಟ್ ಮಾಡುವ ವಿಧಾನ;

ನಿಮ್ಮ ನೆಟ್ವರ್ಕ್ ಅನ್ನು ಇನ್ಯಾವುದೇ ನೆಟ್ವರ್ಕ್ ಗೆ ಬದಲಾಯಿಸಲು ಪೋರ್ಟ್ ಮಾಡಿಕೊಳ್ಳುವುದಕ್ಕೆ ಮುಖ್ಯವಾಗಿ ಯುನಿಕ್ ಪೋರ್ಟ್ ಕೋಡ್ (UPC) ಬೇಕಾಗುತ್ತದೆ, ಈ ಕೋಡ್ ಪಡೆಯುವುದಕ್ಕಾಗಿ ಮೊದಲಿಗೆ ನಿಮ್ಮ ಫೋನ್ ಇಂದ PORT ಎಂದು ಟೈಪ್ ಮಾಡಿ, ಒಂದು ಸ್ಪೇಸ್ ಕೊಟ್ಟು, ಪೋರ್ಟ್ ಮಾಡಬೇಕಿರುವ ಫೋನ್ ನಂಬರ್ ಹಾಕಿ, 1900 ನಂಬರ್ ಗೆ SMS ಕಳುಹಿಸಿ,

ಈಗ ನಿಮ್ಮ ಫೋನ್ ಗೆ UPC ಬರುತ್ತದೆ, ಇದು 15 ದಿನಗಳವರೆಗೂ ಪೋರ್ಟ್ ಮಾಡಿಸುವುದಕ್ಕೆ ಮಾನ್ಯವಾಗಿರುತ್ತದೆ. 15 ದಿನಗಳ ಒಳಗೆ ನಿಮ್ಮ ಹತ್ತಿರದ ಸಿಎಂ ಅಂಗಡಿಗೆ ಅಥವಾ BSNL ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ..

ಈ ಕಾರ್ಡ್ ಇದ್ರೆ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಕೆಸಿಸಿ ಲೋನ್, ಮೊದಲು ಈ ಕಾರ್ಡ್ ಮಾಡಿಸಿಕೊಳ್ಳಿ

ಇಲ್ಲಿ ನಿಮಗೆ ಬಂದಿರುವ UPC ಕೋಡ್ ತೋರಿಸಿ ಪೋರ್ಟ್ ಮಾಡಿಸಿಕೊಳ್ಳಬೇಕು ಎಂದು ಹೇಳಿ. ಅವರಿಗೆ ನೀವು ಪಾಸ್ ಪೋರ್ಟ್ ಸೈಜ್ ಫೋಟೋ ಮತ್ತು ನಿಮ್ಮ ಆಧಾರ್ ಕಾರ್ಡ್ ಕಾಪಿ ಹಾಗೂ Alternate Phone number ಕೊಡಬೇಕಾಗುತ್ತದೆ.

ಎಲ್ಲಾ ಮಾಹಿತಿ ಕೊಟ್ಟ ಬಳಿಕ, ನಿಮಗೆ ಹೊಸ BSNL ಸಿಮ್ ಕೊಡುತ್ತಾರೆ. 3 ರಿಂದ 7 ದಿನಗಳ ಒಳಗೆ ನಿಮ್ಮ ನಂಬರ್ ಪೋರ್ಟ್ ಆಗುತ್ತದೆ, ಹಳೆಯ ನೆಟ್ವರ್ಕ್ ಹೋದ ನಂತರ ಹೊಸ BSNL ಸಿಮ್ ಹಾಕಿ, ಬಿ.ಎಸ್.ಎನ್.ಎಲ್ ನೆಟ್ವರ್ಕ್ ಬಳಕೆ ಮಾಡುವುದಕ್ಕೆ ಶುರು ಮಾಡಬಹುದು.

Jio, Airtel now expensive, How to Port to BSNL Network

Our Whatsapp Channel is Live Now 👇

Whatsapp Channel

Related Stories