ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬಹುದು? ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ?

ಬ್ಯಾಂಕ್ ನಲ್ಲಿ (Bank) ಸಾಮಾನ್ಯವಾಗಿ ಎಲ್ಲರೂ ಖಾತೆ ಹೊಂದಿರುತ್ತಾರೆ, ಅದು ಉಳಿತಾಯ ಖಾತೆ (Savings Account) ಆಗಿರಬಹುದು ಅಥವಾ ಚಾಲ್ತಿ ಖಾತೆ (Current Account) ಆಗಿರಬಹುದು ಆದರೆ ಹೆಚ್ಚು ಜನ ನಿತ್ಯದ ಬಳಕೆಗೆ ಬಳಸುವುದು ಉಳಿತಾಯ ಖಾತೆಯಾಗಿದೆ.

ಈ ರೀತಿ ಬ್ಯಾಂಕಿನಲ್ಲಿ ನಿಮ್ಮದೇ ಆಗಿರುವ ಒಂದು ಖಾತೆಯನ್ನು ತೆರೆದರೆ ಅದರಿಂದ ಬ್ಯಾಂಕ್ ನ ಸಾಕಷ್ಟು ಸೇವೆಗಳು ಲಭ್ಯವಾಗುತ್ತವೆ.

ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆ, ಚಾಲ್ತಿ ಖಾತೆ (current account), ಜಂಟಿ ಖಾತೆ (joint account) ಹೀಗೆ ಬೇರೆ ಬೇರೆ ರೀತಿಯ ಖಾತೆ ತೆರೆಯಲು ಅವಕಾಶವಿರುತ್ತದೆ. ಜನರು ತಮ್ಮ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಖಾತೆಯನ್ನು ಬ್ಯಾಂಕ್ ಗಳಲ್ಲಿ (Banks) ಆಯ್ಕೆ ಮಾಡಿಕೊಳ್ಳುತ್ತಾರೆ.

ನಿಮ್ಮ ಜೇಬಿನಲ್ಲಿ 50 ಸಾವಿರವಿದ್ರೆ ಈ ಬ್ಯುಸಿನೆಸ್ ಗಳನ್ನು ಆರಂಭಿಸಿ, ಗಳಿಸಬಹುದು ಲಕ್ಷ ಲಕ್ಷ ಹಣ

ಉಳಿತಾಯ ಖಾತೆ ಹೊಂದಿರುವವರಿಗೆ ಹೊಸ ನಿಯಮ ಜಾರಿಗೆ ತಂದ ಆರ್ ಬಿ ಐ!

ಉಳಿತಾಯ ಖಾತೆ ಅಥವಾ ಸೇವಿಂಗ್ಸ್ ಅಕೌಂಟ್ (savings account) ಒಂದು ಬೇಸಿಕ್ ಖಾತೆಯಾಗಿದ್ದು ಬಹುತೇಕ ಎಲ್ಲಾ ಗ್ರಾಹಕರು ಈ ಒಂದು ಖಾತೆಯನ್ನು ಬ್ಯಾಂಕ್ ನಲ್ಲಿ ಹೊಂದಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಉಳಿತಾಯ ಖಾತೆಯಲ್ಲಿ ಗ್ರಾಹಕರು ಹಣ ಇಟ್ಟರೆ ಅದಕ್ಕೆ ದೊರೆಯುವ ಬಡ್ಡಿ ದರವು ಕೂಡ ಜಾಸ್ತಿಯಾಗಿದೆ. ಸಾಮಾನ್ಯವಾಗಿ ವ್ಯಾಪಾರಸ್ಥರು ತಮ್ಮ ವ್ಯಾಪಾರಕ್ಕೆ ಹಾಗೂ ಹಣಕಾಸು ವಹಿವಾಟಿಗೆ (transaction) ಅನುಕೂಲವಾಗಲು ಚಾಲ್ತಿ ಖಾತೆಯನ್ನು ಬ್ಯಾಂಕಿನಲ್ಲಿ ಆರಂಭಿಸುತ್ತಾರೆ.

ಇದರಲ್ಲಿ ಕನಿಷ್ಠ ಬ್ಯಾಲೆನ್ಸ್ (Minimum Balance) ಇರಬೇಕಾದ ಅಗತ್ಯವಿಲ್ಲ ಹಾಗೂ ಇದರಲ್ಲಿ ಗರಿಷ್ಠ ಎಷ್ಟು ಹಣ ಇರಬಹುದು ಎನ್ನುವ ನಿಯಮವು ಇಲ್ಲ. ಇನ್ನು ಜಂಟಿ ಖಾತೆಯನ್ನು ವ್ಯಾಪಾರಸ್ಥರು ಅಥವಾ ದಂಪತಿಗಳು ಆರಂಭಿಸುತ್ತಾರೆ. ಒಬ್ಬ ವ್ಯಕ್ತಿ ಉಳಿತಾಯ ಖಾತೆಯನ್ನು ಹೊಂದಿದ್ದರೆ, ಆ ಖಾತೆಯಲ್ಲಿ ಎ ಷ್ಟು ಹಣ ಇರಬೇಕು ಎಂದು ಆರ್ ಬಿ ಐ ತಿಳಿಸಿದೆ.

ಬಿಪಿಎಲ್ ಕಾರ್ಡ್ ಇದ್ದವರಿಗೆ ಬಂಪರ್ ಆಫರ್! ಸಿಗಲಿದೆ ಕೇಂದ್ರದಿಂದ ಉಚಿತ ಗ್ಯಾಸ್ ಸಿಲಿಂಡರ್

ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇರಬಹುದು!

Bank Accountಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇರಿಸಬಹುದು ಎನ್ನುವುದಕ್ಕೆ ಆರ್ ಬಿ ಐ ಯಾವುದೇ ನೀತಿಯನ್ನು ವಿಧಿಸಿಲ್ಲ, ಉಳಿತಾಯಕ್ಕಾಗಿ ಎಷ್ಟು ಹಣವನ್ನು ಬೇಕಾದರೂ ಇರಿಸಬಹುದು. ಆದರೆ ನೀವು ಇರಿಸಿದ ಹಣಕ್ಕೆ ಐಟಿಆರ್ (ITR) ಸಲ್ಲಿಸುವಾಗ ಖಾತೆಯ ವಿವರಗಳನ್ನು ನೀಡಬೇಕಾಗುತ್ತದೆ.

ಆದಾಯ ಇಲಾಖೆ ಮಿತಿಗಿಂತ ಹೆಚ್ಚಿನ ಹಣ ನಿಮ್ಮ ಖಾತೆಯಲ್ಲಿ ಇದ್ದರೆ ಅದಕ್ಕೆ ದಾಖಲೆಗಳನ್ನು ಕೇಳಬಹುದು, ಉದಾಹರಣೆಗೆ ಹಣಕಾಸು ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ಠೇವಣಿ ಮಾಡಿದರೆ ಆದಾಯ ಇಲಾಖೆಗೆ ದಾಖಲೆಗಳನ್ನು ನೀಡಬೇಕು. ಮ್ಯೂಚುವಲ್ ಫಂಡ್ಸ್, (mutual funds, FD ) ಎಫ್ ಡಿ, ಶೇರ್ ಗಳು ಮೊದಲಾದವುಗಳಲ್ಲಿ ಹೂಡಿಕೆ ಮಾಡಿದರೆ ಈ ನಿಯಮ ಅನ್ವಯವಾಗುತ್ತದೆ.

ದೇಶದ ರೈತರಿಗೆ ಹಬ್ಬದ ಗಿಫ್ಟ್; ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ₹8000 ರೂಪಾಯಿ ಹಣ

ಉಳಿತಾಯ ಖಾತೆಯಿಂದ ಪಡೆದ ಬಡ್ಡಿಯ ಮೇಲೆ ತೆರಿಗೆ;

ಇನ್ನು ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇರಬೇಕು ಎನ್ನುವ ಮಿತಿ ಇಲ್ಲದೆ ಇದ್ದರೂ ಉಳಿತಾಯ ಖಾತೆಯಿಂದ ಬರುವ ಬಡ್ಡಿಗೆ ನೀವು ತೆರಿಗೆ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 (income tax return section) TTA ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಉಳಿತಾಯ ಖಾತೆಯಿಂದ 10,000 ವರೆಗೆ ಬಡ್ಡಿ ಬಂದರೆ ಸಾಮಾನ್ಯರಿಗೆ ತೆರಿಗೆ ವಿಧಿಸುವುದಿಲ್ಲ ಅದಕ್ಕಿಂತ ಹೆಚ್ಚಿನ ಮೌಲ್ಯ ಸಿಕ್ಕರೆ ಆಗ ತೆರಿಗೆ ಪಾವತಿಸಬೇಕು. ಹಿರಿಯ ನಾಗರಿಕರಿಗೆ 50,000ಗಳವರೆಗೂ ತೆರಿಗೆ ಪಾವತಿಸುವ ಅಗತ್ಯವಿಲ್ಲ.

ಇನ್ನು ಉಳಿತಾಯ ಖಾತೆಯ ಮೇಲೆ ದೇಶದ ಪ್ರಮುಖ ಬ್ಯಾಂಕ್ಗಳಲ್ಲಿ 2.70% ನಿಂದ 4% ವರೆಗೆ ಬಡ್ಡಿ ನೀಡಲಾಗುವುದು. ಕೆಲವು ಹಣಕಾಸು ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆಯ ಮೇಲೆ 7% ವರೆಗೂ ಶರತ್ತು ಬದ್ಧ ಬಡ್ಡಿ ಪಡೆಯಬಹುದು.

Do you know how much money you can keep in your bank account

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories