ನಿಮ್ಮ ಜೇಬಿನಲ್ಲಿ 50 ಸಾವಿರವಿದ್ರೆ ಈ ಬ್ಯುಸಿನೆಸ್ ಗಳನ್ನು ಆರಂಭಿಸಿ, ಗಳಿಸಬಹುದು ಲಕ್ಷ ಲಕ್ಷ ಹಣ

Story Highlights

ನಿಮ್ಮದೇ ಆಗಿರುವ ಉದ್ಯೋಗ (own business) ಮಾಡಬೇಕು ಅಂತ ಅಂದುಕೊಂಡಿದ್ದರೆ ಕಡಿಮೆ ಬಂಡವಾಳದಲ್ಲಿಯೂ (Low Investment) ಕೂಡ ಉತ್ತಮ ಆದಾಯ (Good Earning) ತರುವ ಕೆಲಸವನ್ನು ನೀವು ಮಾಡಬಹುದು.

ನಮ್ಮ ದೇಶವು ಕೂಡ ಪ್ರಪಂಚದಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಆರ್ಥಿಕವಾಗಿ ಬಹಳ ವೇಗವಾಗಿ ಬೆಳೆಯುತ್ತಿದೆ. ನಮ್ಮಲ್ಲಿ ನಮ್ಮದೇ ಆದ ರೀತಿಯಲ್ಲಿ ಬೆಳವಣಿಗೆ ಹೊಂದಲು ಸಾಕಷ್ಟು ಅವಕಾಶಗಳು ಇವೆ.

ಉದ್ಯಮಶೀಲತೆ ಕನಸು ಹೊಂದಿರುವವರಿಗೆ ಅದನ್ನು ನನಸಾಗಿಸಿಕೊಳ್ಳಲು ಸಾಕಷ್ಟು ಪ್ಲಾಟ್ಫಾರ್ಮ್ ಗಳು ಇವೆ. ನಿಮ್ಮದೇ ಆಗಿರುವ ಉದ್ಯೋಗ (own business) ಮಾಡಬೇಕು ಅಂತ ಅಂದುಕೊಂಡಿದ್ದರೆ ಕಡಿಮೆ ಬಂಡವಾಳದಲ್ಲಿಯೂ (Low Investment) ಕೂಡ ಉತ್ತಮ ಆದಾಯ (Good Earning) ತರುವ ಕೆಲಸವನ್ನು ನೀವು ಮಾಡಬಹುದು.

ನಾವು ಈ ಲೇಖನದಲ್ಲಿ 50,000 ಕ್ಕಿಂತ ಕಡಿಮೆ ಹೂಡಿಕೆ (Investment) ಮಾಡಿ ಹೆಚ್ಚು ಲಾಭ ತಂದು ಕೊಡುವಂತಹ ಉದ್ಯಮಗಳು ಯಾವವು ಎಂಬುದನ್ನು ತಿಳಿಸುತ್ತೇವೆ. ಮುಂದೆ ಓದಿ.

ಗೃಹಲಕ್ಷ್ಮಿ ಯೋಜನೆಯನ್ನೇ ಮೀರಿಸುವ ಈ ಯೋಜನೆಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಮಹಿಳೆಯರು

ಬಟ್ಟೆ ವ್ಯಾಪಾರ: (cloth selling business)

ಒಡವೆ ವಸ್ತ್ರ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅದರಲ್ಲೂ ಭಾರತೀಯರು ಹಬ್ಬ ಹರಿದಿನ ಮದುವೆ ಮುಂಜಿ ಅಂತ ಒಂದಲ್ಲ ಒಂದು ಸಮಾರಂಭಗಳಲ್ಲಿ ತೊಡಗಿಸಿಕೊಂಡಿರುತ್ತೇವೆ. ಹಾಗಾಗಿ ಭಾರತದಲ್ಲಿ ಎಂದೂ ಮಾಸದ ಉದ್ದಿಮೆಗಳಲ್ಲಿ ಬಟ್ಟೆ ವ್ಯಾಪಾರವೂ (Business) ಕೂಡ ಒಂದು.

ನೀವು ಕೇವಲ ಐವತ್ತು ಸಾವಿರಕ್ಕಿಂತ ಕಡಿಮೆ ಹೊಡಿಕೆ ಮಾಡಿ ಸ್ವಂತ ಬಟ್ಟೆ ವ್ಯಾಪಾರ ಶುರು ಮಾಡಿಕೊಳ್ಳಬಹುದು. ನಂತರ ಲಾಭ ಬಂದ ಮೇಲೆ ಈ ಉದ್ಯಮವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಿ.

ಆಹಾರ ಮಳಿಗೆಗಳು – Food Shop Business

ಆಹಾರಕ್ಕೂ ಅಷ್ಟೇ ಬೇಡಿಕೆ ಕಡಿಮೆ ಆಗುವ ಸಾಧ್ಯತೆಗಳು ಇಲ್ಲ, ಹಾಗಾಗಿ ಕಡಿಮೆ ಹೂಡಿಕೆ ಮಾಡಿ ನೀವು ಆಹಾರ ಮಳಿಗೆಯನ್ನು ತೆರೆಯಬಹುದು. ನೂಡಲ್ಸ್ ಅಥವಾ ಜನರಿಗೆ ಇಷ್ಟವಾಗುವಂತಹ ಸ್ಟ್ರೀಟ್ ಫುಡ್ (street food) ಗಳನ್ನು ಹೊಂದಿರುವ ನಿಮ್ಮದೇ ಆಗಿರುವ ಒಂದು ಸಣ್ಣ ಫುಡ್ ಶಾಪ್ ತೆರೆದರು ಸಾಕು.

ಹೆಚ್ಚು ಸ್ವಚ್ಛತೆ ಹಾಗೂ ಸ್ವಾದಿಷ್ಟವಾದ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದಕ್ಕಾಗಿ ಅಧಿಕ ಖರ್ಚು ಮಾಡಬೇಕಾಗಿಲ್ಲ, ನೀವು ಆಹಾರ ಟ್ರಕ್ ಅಥವಾ ಮೊಬೈಲ್ ವಾಹನಗಳನ್ನು ಇರಿಸಿಕೊಂಡು ಅದರಲ್ಲಿಯೇ ವ್ಯಾಪಾರ ಮಾಡಬಹುದು. ಒಂದೇ ಸ್ಥಳದಲ್ಲಿ ಅಥವಾ ಸ್ಥಳದಿಂದ ಸ್ಥಳಕ್ಕೆ ಹೋಗಿಯೂ ವ್ಯಾಪಾರ ಮಾಡಬಹುದು.

ದೇಶದ ರೈತರಿಗೆ ಹಬ್ಬದ ಗಿಫ್ಟ್; ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ₹8000 ರೂಪಾಯಿ ಹಣ

Own Businessಇವೆಂಟ್ ಮ್ಯಾನೇಜ್ಮೆಂಟ್ – event management

ಇತ್ತೀಚಿನ ದಿನಗಳಲ್ಲಿ ಮದುವೆಯನ್ನು ಬಹಳ ಗ್ರಾಂಡ್ ಆಗಿ ಮಾಡಲಾಗುತ್ತೆ, ವಧು ವರರು ತಮ್ಮ ಕನಸಿನ ಗಳಿಕೆಯನ್ನು ಇನ್ನಷ್ಟು ಮೆಮೋರೇಬಲ್ ಆಗಿಸಿಕೊಳ್ಳಲು ಇಷ್ಟಪಡುತ್ತಾರೆ. ಈ ಕಾರಣಕ್ಕೆ ನೀವೇನಾದರೂ ಸ್ವಲ್ಪ ಕ್ರಿಯೇಟಿವ್ ಆಗಿದ್ರೆ ವೆಡ್ಡಿಂಗ್ ಪ್ಲಾನರ್ (wedding planner) ಅಥವಾ ಇವೆಂಟ್ ಮ್ಯಾನೇಜ್ಮೆಂಟ್ (event management) ಕೆಲಸ ಮಾಡಬಹುದು.

ನೀವು ನಿಮ್ಮ ಕ್ಲೈಂಟ್ ಗೆ ತಕ್ಕ ಹಾಗೆ ವೆಡ್ಡಿಂಗ್ ಪ್ಲಾನಿಂಗ್ (Wedding Planning) ಮಾಡಿ ಕೊಟ್ಟರೆ ಕೈ ತುಂಬಾ ಹಣ ಸಂಪಾದಿಸಬಹುದು. ನೀವು ದೇಶದಿಂದ ಯಾವುದೇ ಭಾಗದಲ್ಲಿ ಈ ಕೆಲಸ ಮಾಡಬಹುದು, ಅಷ್ಟೇ ಯಾಕೆ ನಿಮ್ಮ ಟ್ಯಾಲೆಂಟ್ ಅನ್ನು ವಿದೇಶದಲ್ಲಿಯೂ ತೋರಿಸಬಹುದು.

ಉಪ್ಪಿನಕಾಯಿ ವ್ಯಾಪಾರ: (pickle selling business)

ಊಟಕ್ಕೆ ಉಪ್ಪಿನಕಾಯಿ ಇಲ್ಲದೆ ಇದ್ರೆ ಭಾರತೀಯರಿಗಂತೂ ಊಟ ಸೇರುವುದೇ ಇಲ್ಲ ಬಿಡಿ! ಹಾಗಿದ್ದ ಮೇಲೆ ನೀವು ಯಾಕೆ ಉಪ್ಪಿನಕಾಯಿ ಬ್ಯುಸಿನೆಸ್ ಮಾಡಬಾರದು? ಇದರಲ್ಲಿ ಬೇಡಿಕೆಯು ಹೆಚ್ಚು ಲಾಭವೂ ಹೆಚ್ಚು

ನೀವು ಸರಿಯಾದ ರೀತಿಯಲ್ಲಿ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡಿದರೆ ಅದನ್ನ ಖರೀದಿ ಮಾಡುವ ಜನ ಇದ್ದೇ ಇರುತ್ತಾರೆ, ಅಷ್ಟೇ ಅಲ್ಲ ಈಗ ಮಾರ್ಕೆಟಿಂಗ್ ಮಾಡಿಕೊಳ್ಳಲು ಆನ್ಲೈನ್ ಪ್ಲಾಟ್ಫಾರ್ಮ್ ಗಳು ಕೂಡ ಇರುತ್ತವೆ

ಹಾಗಾಗಿ ಸುಲಭವಾಗಿ ಉಪ್ಪಿನಕಾಯಿ ಮಾರಾಟ ಮಾಡಬಹುದು. ಒಮ್ಮೆ ನೀವು ಮಾಡಿದ ಉಪ್ಪಿನಕಾಯಿಯ ರುಚಿ ಜನರ ನಾಲಿಗೆಗೆ ಇಷ್ಟವಾಯಿತು ಅಂದ್ರೆ, ಮುಗೀತು ಕೇಳಿ ಕೇಳಿ ನಿಮ್ಮಿಂದಲೇ ಉಪ್ಪಿನಕಾಯಿ ಖರೀದಿ ಮಾಡುತ್ತಾರೆ ನೋಡಿ!

ಕೈತುಂಬಾ ಲಕ್ಷ ಲಕ್ಷ ಆದಾಯ ಗಳಿಸಿ ಕೊಡುವ ಈ ಬಿಸಿನೆಸ್ ಆರಂಭಿಸಲು ಮುಗಿಬಿದ್ದ ಜನ!

ಬ್ಲಾಗಿಂಗ್/ ಯೂಟ್ಯೂಬ್: blogging/ YouTube

ಇದಂತೂ ಡಿಜಿಟಲ್ ಜಮಾನ. ಇಂದು ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ ಇದ್ರೆ ಎಲ್ಲಾ ಮಾಹಿತಿಗಳು ಅದರಲ್ಲಿಯೇ ಸಿಗುತ್ತವೆ, ಹಾಗಾಗಿ ನೀವು ಜನರ ಆಸಕ್ತಿ ಹಾಗೂ ಅಗತ್ಯಗಳನ್ನು ಅರಿತುಕೊಂಡು ನಿಮ್ಮದೇ ಆದ ರೀತಿಯಲ್ಲಿ ಕಂಟೆಂಟ್ ರಚನೆ ಮಾಡುತ್ತಾ ವಿಡಿಯೋ ಮಾಡಿ ಯುಟ್ಯೂಬ್ (YouTube) ನಲ್ಲಿ ಬಿಡುಗಡೆ ಮಾಡಿದರೆ ಇದರಿಂದ ಸಾಕಷ್ಟು ಹಣ ಗಳಿಸಲು ಸಾಧ್ಯವಿದೆ.

ಇದಕ್ಕಾಗಿ ಮುಖ್ಯವಾಗಿ ಬೇಕಾಗಿರುವುದು ನಿಮ್ಮ ಸಮಯ ಹಾಗೂ ಅಲ್ಪ ಖರ್ಚು.. ಅಂದ್ರೆ ಕ್ಯಾಮೆರಾ, ಮೈಕ್ ಹಾಗೂ ಮೊದಲಾದ ಉಪಕರಣಗಳು ಮಾತ್ರ. ನಿಮ್ಮ ಸಮಯ ಹಾಗೂ ಕೌಶಲ್ಯವನ್ನ ಖರ್ಚು ಮಾಡಲು ನೀವು ಸಿದ್ಧರಿದ್ದರೆ ಖಂಡಿತವಾಗಿಯೂ ಕೈ ತುಂಬಾ ಹಣ ಗಳಿಸಬಹುದು

ಇದರ ಜೊತೆಗೆ ನೀವು ಯಾವುದಾದರೂ ವಿಷಯದಲ್ಲಿ ಪರಿಣಿತಿ ಹೊಂದಿದ್ದರೆ ಬೋಧನಾ ತರಗತಿಯನ್ನು ಕೂಡ ಆನ್ಲೈನ್ (online teaching classes) ಮೂಲಕ ಮಾಡಬಹುದು. ಇದರಿಂದಲೂ ಪ್ರತಿ ಕ್ಲಾಸ್ ಗೆ ಇಂತಿಷ್ಟು ಎಂದು ಹಣ ಫಿಕ್ಸ್ ಮಾಡಿದರೆ ದಿನಕ್ಕೆ ಸಾವಿರಾರು ರೂಪಾಯಿ ಹಣ ಗಳಿಕೆ ಮಾಡಬಹುದು.

ಹಾಗಾದ್ರೆ ಇನ್ನೇಕೆ ತಡ ನಿಮ್ಮ ಟ್ಯಾಲೆಂಟ್ ಯಾವುದರಲ್ಲಿದೆ ಎಂಬುದನ್ನು ಗುರುತಿಸಿಕೊಂಡು ಅದನ್ನು ಸರಿಯಾಗಿ ಹೂಡಿಕೆ ಮಾಡಿ, ಅದಕ್ಕೆ ತಕ್ಕ ಲಾಭ ಗಳಿಸಿಯೇ ಗಳಿಸುತ್ತೀರಿ!

If you have 50 thousand you can start these businesses and earn lakhs of money