ಬಿಪಿಎಲ್ ಕಾರ್ಡ್ ಇದ್ದವರಿಗೆ ಬಂಪರ್ ಆಫರ್! ಸಿಗಲಿದೆ ಕೇಂದ್ರದಿಂದ ಉಚಿತ ಗ್ಯಾಸ್ ಸಿಲಿಂಡರ್
ಇತ್ತೀಚಿಗೆ ಹಣದುಬ್ಬರ ಜಾಸ್ತಿ ಆಗಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ ಕೂಡ ಜಾಸ್ತಿ ಆಗಿದೆ. ಅದೇ ರೀತಿ ಗ್ಯಾಸ್ ಸಿಲಿಂಡರ್ (Gas Cylinder) ಬೆಲೆಯು ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಇದರಿಂದ ಗ್ರಾಹಕರಿಗೆ ಪ್ರತಿ ತಿಂಗಳು ಜೆಬಿಗೆ ಕತ್ತರಿ ಬೀಳುವಂತೆ ಆಗಿದೆ. ಆದರೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ (Central government) ಕಳೆದ ಎರಡು ತಿಂಗಳ ಹಿಂದೆ 200 ರೂಪಾಯಿಗಳ ಕಡಿತಗೊಳಿಸಿದ್ದು ಗ್ರಾಹಕರಿಗೆ ತುಸು ಸಮಾಧಾನ ಸಿಕ್ಕಿದೆ ಎನ್ನಬಹುದು.
ಗೃಹಲಕ್ಷ್ಮಿ ಯೋಜನೆಯನ್ನೇ ಮೀರಿಸುವ ಈ ಯೋಜನೆಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಮಹಿಳೆಯರು
ಪ್ರಧಾನ ಮಂತ್ರಿ ಉಜ್ವಲ ಯೋಜನೆ! (Pradhanmantri Ujjwal Yojana)
ಗ್ಯಾಸ್ ಸಿಲಿಂಡರ್ ಬೆಲೆ (gas cylinder price) ಇಳಿಕೆಯಾಗುವ ಲಕ್ಷಣ ಕಾಣುತ್ತಿಲ್ಲ, ಕೇವಲ ಇನ್ನೂರು ರೂಪಾಯಿಗಳು ಮಾತ್ರ ಎಲ್ಪಿಜಿ ಗೃಹ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ ಮಾಡಲಾಗಿದೆ.
ಆದರೆ ದೇಶದಲ್ಲಿ ವಾಸಿಸುವ ಕೆಲವು ಅರ್ಹ ಈ ಜನರಿಗೆ ಉಚಿತವಾಗಿ ಸಿಲಿಂಡರ್ ನೀಡುವ ಅಥವಾ ಸಬ್ಸಿಡಿ ಗ್ಯಾಸ್ (subsidy gas) ನೀಡುವ ಸರ್ಕಾರದ ಈ ಒಂದು ಯೋಜನೆ ಲಕ್ಷಾಂತರ ಜನರಿಗೆ ಪ್ರಯೋಜನಕಾರಿಯಾಗಿದೆ
ನೀವು ಕೂಡ ಈ ಕ್ಯಾಟಗರಿ ಒಳಗೆ ಬರುವುದಾದರೆ ಈ ಯೋಜನೆಗೆ ತಕ್ಷಣವೇ ಅರ್ಜಿ ಸಲ್ಲಿಸಿ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಸಾಕಷ್ಟು ಪ್ರಚಲಿತದಲ್ಲಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಆರಂಭವಾದ ಯೋಜನೆಯಿಂದ ಹಲವರು ಪ್ರಯೋಜನ ಪಡೆದುಕೊಂಡಿದೆ.
ಈಗಾಗಲೇ ಸರ್ಕಾರ ಇನ್ನೂರು ರೂಪಾಯಿಗಳ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡಿದೆ, ಇದರ ಜೊತೆಗೆ ಸುಮಾರು 75 ಲಕ್ಷಕ್ಕೂ ಅಧಿಕ ಹೊಸ ಗ್ಯಾಸ್ ಸಂಪರ್ಕವನ್ನು ಕೂಡ ನೀಡಲಾಗಿದೆ.
ಹೌದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 75 ಲಕ್ಷಕ್ಕೂ ಅಧಿಕ ಕುಟುಂಬಗಳು ಎಲ್ ಪಿ ಜಿ (LPG) ಉಚಿತ ಸಂಪರ್ಕ ಪಡೆದುಕೊಳ್ಳುವಂತೆ ಆಗಿದೆ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಉಜ್ವಲ ಯೋಜನೆಯ ಬೆನಿಫಿಟ್ ಸಿಗುತ್ತದೆ.
ದೇಶದ ರೈತರಿಗೆ ಹಬ್ಬದ ಗಿಫ್ಟ್; ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ₹8000 ರೂಪಾಯಿ ಹಣ
ಪಿಎಂ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಮಹಿಳೆಯರು ಕಟ್ಟಿಗೆಯ ಹೊಗೆ, ಬೆಂಕಿ ಅಪಾಯದಿಂದ ದೂರ ಉಳಿಯಬೇಕು, ಆರೋಗ್ಯಕರವಾಗಿರಬೇಕು ಎನ್ನುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು ಉಜ್ವಲ ಯೋಜನೆಯನ್ನು ಜಾರಿಗೆ ತಂದರು
ಇದರಿಂದ ಇಂದು ಸಾಕಷ್ಟು ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿದೆ. ನಿಮ್ಮ ಬಳಿ ಬಿಪಿಎಲ್ ಕಾರ್ಡ್(BPL Ration Card) ಇದ್ದು ಬಡತನ ರೇಖೆಗಿಂತ ಕೆಳಗಿನವರಾಗಿದ್ದರೆ ಈ ಯೋಜನೆಗೆ ಆನ್ಲೈನ್ (online) ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಕೈತುಂಬಾ ಲಕ್ಷ ಲಕ್ಷ ಆದಾಯ ಗಳಿಸಿ ಕೊಡುವ ಈ ಬಿಸಿನೆಸ್ ಆರಂಭಿಸಲು ಮುಗಿಬಿದ್ದ ಜನ!
*ಇದಕ್ಕಾಗಿ ಮೊದಲು https://www.pmuy.gov.in/index.aspx ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
*ವೆಬ್ಸೈಟ್ ಓಪನ್ ಆಗುತ್ತಿದ್ದಂತೆ ನೀವು HP, Indane Gas ಅಥವಾ Bharath Gas ಎನ್ನುವ ಮೂರು ಆಯ್ಕೆಗಳನ್ನು ಕಾಣುತ್ತೀರಿ. ಅಲ್ಲಿ ನಿಮಗೆ ಬೇಕಾದ ಗ್ಯಾಸ್ ವಿತರಕರನ್ನು ಆಯ್ಕೆ ಮಾಡಿಕೊಳ್ಳಬಹುದು.
*ನಂತರ ನಿಮ್ಮ ಆಧಾರ್ ನಂಬರ್ (Aadhaar Number) ಮೊಬೈಲ್ ಸಂಖ್ಯೆ (Mobile Number) ಮೊದಲಾದ ಮಾಹಿತಿಯನ್ನು ನೀಡಬೇಕಾಗುತ್ತದೆ.
*ಅರ್ಜಿ ಭರ್ತಿ ಮಾಡಿದ ನಂತರ ನೀವು ನಿಮ್ಮ ದಾಖಲೆಯ ಸಾಫ್ಟ್ ಕಾಪಿಯನ್ನು ಅಪ್ಲೋಡ್ (upload) ಮಾಡಬೇಕು.
*ದಾಖಲೆಯನ್ನು ಪರಿಶೀಲಿಸಿದ ನಂತರ ನೀವು ಅರ್ಹರಾಗಿದ್ದರೆ ನಿಮಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಸಂಪರ್ಕ (Free Gas Cylinder Connection) ಸಿಗುತ್ತದೆ.
ಈ ರೀತಿ ನೀವು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಉಚಿತ ಸಿಲಿಂಡರ್ ಸಂಪರ್ಕ ಪಡೆದುಕೊಳ್ಳಬಹುದು ಅಥವಾ ಹತ್ತಿರದ ಗ್ಯಾಸ್ ವಿತರಕರ ಬಳಿ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳನ್ನು ನೀಡಿ, ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ.
Those with BPL card will get free gas cylinder from the centre
Our Whatsapp Channel is Live Now 👇