ಆಸ್ತಿ (property rules) ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಭಾರತದಲ್ಲಿ ಸಾಕಷ್ಟು ನಿಯಮಗಳು ಇವೆ. ಒಂದೊಂದು ರೀತಿಯ ಆಸ್ತಿಯ ವಿಚಾರಕ್ಕೆ ಒಂದೊಂದು ರೀತಿಯ ಕಾನೂನು ಜಾರಿಯಲ್ಲಿ ಇವೆ
ಅದೆಷ್ಟೋ ಬಾರಿ ಜನರು ಈ ಕಾನೂನು ತಿಳಿದುಕೊಳ್ಳದೆ ನಿಯಮಗಳನ್ನು ಪಾಲಿಸದೆ ಸಮಸ್ಯೆಯನ್ನು ತಂದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು (property rights to women) ಕೊಡಬೇಕು ಹಾಗೂ ಗಂಡನ ಆಸ್ತಿಯಲ್ಲಿ ಪಾಲು ಸಿಗಬೇಕು ಎನ್ನುವ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಹಾಗೂ ಸುಪ್ರೀಂ ಕೋರ್ಟ್ (supreme court) ಕೂಡ ಈ ವಾದಗಳ ಬಗ್ಗೆ ಬೆಳಕು ಚೆಲ್ಲಿದೆ.
ಈ ಬಣ್ಣದ ಮೀನಿಗೆ ಎಲ್ಲಿಲ್ಲದ ಬೇಡಿಕೆ; ಸಾಕಾಣಿಕೆ ಮಾಡಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ
ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು!
ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಿಂದೂ ಉತ್ತರಾಧಿಕಾರಿ (Hindu uttradhikari rules) ಕಾಯ್ದೆಯ ಅನುಸಾರ ಗಂಡು ಮಗುವಿಗೆ ಇರುವಷ್ಟೇ ಸಮಾನವಾದ ಪಾಲನ್ನು ಕೊಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಇದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ, ಮಗಳನ್ನು ಮದುವೆ ಮಾಡಿಕೊಟ್ಟರು ಕೂಡ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ (inherited property) ಆ ಹೆಣ್ಣು ಮಗಳಿಗೆ ಪಾಲನ್ನು ಕೊಡಬೇಕು ಎನ್ನುವ ನಿಯಮ ಇದೆ. ಒಂದು ವೇಳೆ ಇದರ ಉಲ್ಲಂಘನೆ ಆದರೆ ಆಕೆ ಕೋರ್ಟ್ ಮೂಲಕ ತನ್ನ ಪಾಲಿನ ಆಸ್ತಿ ಪಡೆಯಬಹುದು.
ಮದುವೆಯಾದ ಮಹಿಳೆಯರು ಪ್ಯಾನ್ ಕಾರ್ಡ್ ನಲ್ಲಿ ಪತಿಯ ಹೆಸರನ್ನು ಸೇರಿಸಲು ಹೀಗೆ ಮಾಡಿ
ವಯಸ್ಸಾದ ಅತ್ತೆ ಮಾವನನ್ನು ನೋಡಿಕೊಳ್ಳುವುದು ಸೊಸೆಯ ಕರ್ತವ್ಯ!
ಇತ್ತೀಚಿಗೆ ಹೈಕೋರ್ಟ್ (High court) ನೀಡಿರುವ ತೀರ್ಪು ಒಂದನ್ನು ಸುಪ್ರೀಂ ಕೋರ್ಟ್ ಕೂಡ ಮಾನ್ಯ ಮಾಡಿದ್ದು, ಮದುವೆಯಾಗಿ ಹೋದ ನಂತರ ಆ ಹೆಣ್ಣಿನ ಗಂಡ ತೀರಿಕೊಂಡರೆ ಆಗ ಆಕೆಯನ್ನು ಮನೆಯಿಂದ ಹೊರಗೆ ಹಾಕುವಂತಿಲ್ಲ.
ಆಕೆಗೆ ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಪಾಲು ಸಿಗುತ್ತದೆ. ಒಂದು ವೇಳೆ ಸ್ವಯಾರ್ಜಿತ ಆಸ್ತಿ (free hold property) ಇಲ್ಲದೆ ಪಿತ್ರಾರ್ಜಿತ ಆಸ್ತಿ ಮಾತ್ರ ಇದ್ದರೆ ಅದರಲ್ಲಿ ಆಕೆಗೆ ಪಾಲು ಸಿಗುವುದಿಲ್ಲ. ಹಾಗಂದ ಮಾತ್ರಕ್ಕೆ ಮದುವೆಯಾಗಿ ಬಂದ ಸೊಸೆಯನ್ನು ಅತ್ತೆ ಮಾವ ಅಥವಾ ಮನೆಯ ಸದಸ್ಯರು ಪತಿ ಮರಣ ಹೊಂದಿರುವ ಕಾರಣಕ್ಕೆ ಮನೆಯಿಂದ ಆಚೆ ಹಾಕುವಂತಿಲ್ಲ.
ಅದೇ ರೀತಿ ಇತ್ತೀಚಿಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರುವ ಪ್ರಕಾರ ಮಗ ಮರಣ ಹೊಂದಿದರೆ ಆತನ ತಂದೆ ತಾಯಿಯನ್ನು ಸೊಸೆ ಮನೆಯಿಂದ ಹೊರಗೆ ಹಾಕುವಂತಿಲ್ಲ ಅಥವಾ ಮದುವೆಯಾದ ಹೆಣ್ಣು ತನಗೆ ಗಂಡನ ಜೊತೆಗೆ ಮಾತ್ರ ಜೀವಿಸಬೇಕು ಆತನ ಅಪ್ಪ ಅಮ್ಮ ನಮ್ಮ ಜೊತೆಗೆ ಇರಬಾರದು ಎಂದು ಹೇಳುವಂತಿಲ್ಲ. ಅಂದರೆ ವಯಸ್ಸಾದ ಅತ್ತೆ ಮಾವನನ್ನು ಅವರ ಮಗನಾಗಲಿ ಸೊಸೆ ಆಗಲಿ ದೂರ ಮಾಡುವಂತಿಲ್ಲ.
ಕೇವಲ 54 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗಲಿದೆ ವರ್ಷಕ್ಕೆ 48,000 ರಿಟರ್ನ್! ಮುಗಿಬಿದ್ದ ಜನ
ಗಂಡನ ಆಸ್ತಿಯಲ್ಲಿ ಸೊಸೆಗೆ ಪಾಲು!
ಆಸ್ತಿ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯ ತಂದೆ ತಾಯಿ ತೀರಿಕೊಂಡ ನಂತರ ತಂದೆಯ ಆಸ್ತಿಯಲ್ಲಿ ಆತನಿಗೂ ಆತನ ಸಹೋದರ ಸಹೋದರಿಯರಿಗೂ ಸಮಾನವಾದ ಪಾಲು ಸಿಗುತ್ತದೆ. ಇನ್ನು ಗಂಡನ ಪಾಲಿಗೆ ಬಂದಿರುವ ಆಸ್ತಿಯಲ್ಲಿ ಮಾತ್ರ ಆತನ ಹೆಂಡತಿ ಮತ್ತು ಮಕ್ಕಳಿಗೆ ಪಾಲು ಸಿಗುತ್ತದೆಯೇ ಹೊರತು ಅತ್ತೆ ಮಾವನ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿಯಲ್ಲಿ ಅಲ್ಲ. ಆಸ್ತಿಯಲ್ಲಿ ಪಾಲು ಸಿಗದೇ ಇದ್ದರೂ ಕೂಡ ಮದುವೆಯಾಗಿ ಬಂದ ಹೆಣ್ಣು ಮಕ್ಕಳನ್ನು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಹಾಕುವಂತಿಲ್ಲ.
Do you know how much property share the daughter-in-law gets in her husband’s house
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.