ಮದುವೆಯಾದ ಮಹಿಳೆಯರು ಪ್ಯಾನ್ ಕಾರ್ಡ್ ನಲ್ಲಿ ಪತಿಯ ಹೆಸರನ್ನು ಸೇರಿಸಲು ಹೀಗೆ ಮಾಡಿ

ಆನ್ಲೈನ್ ಮೂಲಕ ಪ್ಯಾನ್ ಕಾರ್ಡ್ ನಲ್ಲಿ (Pan Card) ತಿದ್ದುಪಡಿ ಮಾಡಿಕೊಳ್ಳಲು NSDL PAN website ಅಥವಾ UTIITSL PAN website ಗೆ ಭೇಟಿ ನೀಡಿ. ಈ ಪುಟ ತೆರೆದಾಗ ಸರ್ವಿಸ್ (service) ಎನ್ನುವ ಆಯ್ಕೆ ಕಾಣಿಸುತ್ತದೆ

ಪ್ಯಾನ್ ಕಾರ್ಡ್ (PAN card) ಹಾಗೂ ಆಧಾರ್ ಕಾರ್ಡ್ (Aadhaar card) ಭಾರತೀಯ ನಾಗರಿಕರ ವೈಯಕ್ತಿಕ ವಿವರಗಳನ್ನು ಹೊಂದಿರುವ ಬಹಳ ಪ್ರಮುಖವಾದ ದಾಖಲೆಯಾಗಿದೆ

ಯಾವುದೇ ಬ್ಯಾಂಕ್ ವ್ಯವಹಾರ (bank transaction) ಮಾಡುವುದಿದ್ದರು ಪ್ಯಾನ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾಗಿರುತ್ತದೆ, ನೀವು ವಾಹನ ಖರೀದಿ ಮಾಡುವುದಿದ್ದರೆ ಅಥವಾ ಯಾವುದೇ ಆಸ್ತಿ ಖರೀದಿ ಮಾಡುವುದಿದ್ದರು, ಮಾರಾಟ ಮಾಡುವುದಿದ್ದರೂ ಪ್ಯಾನ್ ಕಾರ್ಡ್ ಬೇಕೇ ಬೇಕು

ಒಂದು ವೇಳೆ ಪ್ಯಾನ್ ಕಾರ್ಡ್ ಇಲ್ಲದೆ ಇದ್ದಲ್ಲಿ ಇಂತಹ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಇನ್ನು ಸಾಮಾನ್ಯವಾಗಿ ಪ್ಯಾನ್ ಕಾರ್ಡ್ ನಲ್ಲಿ ಮದುವೆಯಾದ ಮಹಿಳೆಯರು ತಮ್ಮ ಗಂಡನ ಉಪನಾಮ (surname) ಸೇರಿಸಿಕೊಳ್ಳಲು ಬಯಸುತ್ತಾರೆ, ಒಂದು ವೇಳೆ ನೀವು ಕೂಡ ಉಪನಾಮ ಸೇರಿಸಿಕೊಳ್ಳಲು ಬಯಸಿದರೆ ಈ ಹಂತಗಳ ಮೂಲಕ ಮಾಡಬಹುದು.

ಮದುವೆಯಾದ ಮಹಿಳೆಯರು ಪ್ಯಾನ್ ಕಾರ್ಡ್ ನಲ್ಲಿ ಪತಿಯ ಹೆಸರನ್ನು ಸೇರಿಸಲು ಹೀಗೆ ಮಾಡಿ - Kannada News

ಕೇವಲ 54 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗಲಿದೆ ವರ್ಷಕ್ಕೆ 48,000 ರಿಟರ್ನ್! ಮುಗಿಬಿದ್ದ ಜನ

ಉಪನಾಮ ಸೇರಿಸುವುದು ಕಡ್ಡಾಯವೇ?

ಭಾರತೀಯ ಸಂಸ್ಕೃತಿಯ ಪ್ರಕಾರ ಮದುವೆಯಾದ ನಂತರ ಮಹಿಳೆಯ ಹೆಸರಿನ ಜೊತೆಗೆ ಗಂಡನ ಹೆಸರು ಅಥವಾ ಉಪನಾಮ ಸೇರಿಸಿಕೊಳ್ಳುವುದು ಸಂಪ್ರದಾಯ. ಹಾಗಂದ ಮಾತ್ರಕ್ಕೆ ಪ್ಯಾನ್ ಕಾರ್ಡ್ ನಲ್ಲಿ ಉಪನಾಮ ಸೇರಿಸಬೇಕು ಎನ್ನುವುದು ಕಡ್ಡಾಯ (mandatory) ನಿಯಮವಲ್ಲ.

ಆದಾಗ್ಯೂ ನಿಮಗೆ ನಿಮ್ಮ ಹೆಸರ ಜೊತೆಗೆ ಪತಿಯ ಉಪನಾಮ ಸೇರಿಸಿಕೊಳ್ಳಬೇಕು ಎಂದಿದ್ದರೆ, ಎಲ್ಲಿ ಹೋಗಿ ಈ ಕೆಲಸ ಮಾಡಿಕೊಳ್ಳಬೇಕು ಎನ್ನುವ ಗೊಂದಲ ಇರುತ್ತದೆ. ಈ ಹಿಂದೆ ಸಂಬಂಧ ಪಟ್ಟ ಕಚೇರಿಗೆ ಹೋಗಿ ಉಪನಾಮ ಸೇರಿಸಿಕೊಳ್ಳುವುದು ಅಥವಾ ಪ್ಯಾನ್ ಕಾರ್ಡ್ ನಲ್ಲಿ ಯಾವುದೇ ತಿದ್ದುಪಡಿ ಮಾಡಿಕೊಳ್ಳಬಹುದಿತ್ತು. ಆದರೆ ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಕೆಲವೇ ನಿಮಿಷಗಳಲ್ಲಿ ಈ ಕೆಲಸ ಮಾಡಬಹುದು.

ಆನ್ಲೈನ್ ಮೂಲಕ ಉಪನಾಮ ಸೇರಿಸಿಕೊಳ್ಳುವುದು ಹೇಗೆ! (Add surname through online)

Pan Cardಪ್ಯಾನ್ ಕಾರ್ಡ್ ಎನ್ನುವುದು ವ್ಯಕ್ತಿಯ ವಯಕ್ತಿಕ ವಿವರಗಳನ್ನು ಹೊಂದಿರುವ ವಿಷಯವಾಗಿದ್ದು ಇದರಲ್ಲಿ ಎಲ್ಲಾ ವಿವರಗಳು ಹಾಗೂ ನಿಮ್ಮ ಹೆಸರು ಸರಿಯಾಗಿ ಇರುವುದು ಬಹಳ ಮುಖ್ಯ. ನೀವು ಬೇರೆ ಕಡೆ ನಿಮ್ಮ ಹೆಸರಿನ ಜೊತೆಗೆ ಪತಿಯ ಉಪನಾಮ ಸೇರಿಸಿಕೊಂಡಿದ್ದರೆ ಪ್ಯಾನ್ ಕಾರ್ಡ್ ನಲ್ಲಿಯೂ ಈ ಕೆಲಸ ಮಾಡಿಕೊಳ್ಳಿ.

ಆನ್ಲೈನ್ ಮೂಲಕ ಪ್ಯಾನ್ ಕಾರ್ಡ್ ನಲ್ಲಿ (Pan Card) ತಿದ್ದುಪಡಿ ಮಾಡಿಕೊಳ್ಳಲು NSDL PAN website ಅಥವಾ UTIITSL PAN website ಗೆ ಭೇಟಿ ನೀಡಿ.
ಈ ಪುಟ ತೆರೆದಾಗ ಸರ್ವಿಸ್ (service) ಎನ್ನುವ ಆಯ್ಕೆ ಕಾಣಿಸುತ್ತದೆ ಅದರಲ್ಲಿ ಪ್ಯಾನ್ ಕಾರ್ಡ್ ತಿದ್ದುಪಡಿ (PAN Card correction) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಪ್ಯಾನ್ ಕಾರ್ಡ್ ಬಳಸುವ ಎಲ್ಲರಿಗೂ ಹೊಸ ನಿಯಮ! ಕೇಂದ್ರ ಸರ್ಕಾರ ಮಹತ್ವದ ಆದೇಶ

ನಿಮ್ಮ ಪ್ಯಾನ್ ಕಾರ್ಡ್ ಜೊತೆಗೆ ಮೊಬೈಲ್ ಸಂಖ್ಯೆ ಇ-ಮೇಲ್ ಐಡಿ ಅಡ್ರೆಸ್ ಪ್ರೂಫ್ (address proof) ಮೊದಲಾದ ಮಾಹಿತಿಗಳನ್ನು ಭರ್ತಿ ಮಾಡಿ.

ನಂತರ ನೀವು ನಿಮ್ಮ ಹೆಸರಿನಲ್ಲಿ ಯಾವ ಉಪನಾಮ ಸೇರಿಸಬೇಕು ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಉಪನಾಮವನ್ನು ಸೇರಿಸಿ.

ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

ನೀವು ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದಕ್ಕೆ ನಿಮ್ಮ ಫೋಟೋ ಅಂಟಿಸಿ ಸಹಿ ಹಾಕಿ ಅದನ್ನು ಪೋಸ್ಟ್ ಮೂಲಕ NSDL ಅಥವಾ UTIITSL ಗೆ ಕಳುಹಿಸಬೇಕು.

ನಿಮ್ಮ ಹೆಸರು ಬದಲಾವಣೆ ಆದ ನಂತರ ಆನ್ಲೈನ್ ನಲ್ಲಿ 107 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಅನಿವಾಸಿ ಭಾರತೀಯರಿಗೆ 1011 ರೂಪಾಯಿಗಳನ್ನು ಪಾವತಿ ಮಾಡಬೇಕು.

ನಂತರ ನಿಮಗೆ ನಿಮ್ಮ ಹೆಸರಿನಲ್ಲಿ ಬದಲಾವಣೆ ಆದ ಪ್ಯಾನ್ ಕಾರ್ಡ್ ಪ್ರತಿ ಇಮೇಲ್ ಐಡಿಗೆ ಬರುತ್ತದೆ. ಇದನ್ನ ನೀವು ಡೌನ್ಲೋಡ್ (Download) ಮಾಡಿಕೊಳ್ಳ ಬಹುದು.

ಅದೇ ರೀತಿ ಪೋಸ್ಟ್ ನಲ್ಲಿ ಪ್ಯಾನ್ ಕಾರ್ಡ್ ನಿಮ್ಮ ಅಡ್ರೆಸ್ ಗೆ ಬಂದು ತಲುಪುತ್ತದೆ. ಒಂದು ವಾರದ ಒಳಗೆ ನೀವು ಹೆಸರು ಬದಲಾವಣೆಯಾದ ಹೊಸ ಪ್ಯಾನ್ ಕಾರ್ಡ್ ಸ್ವೀಕರಿಸುತ್ತೀರಿ.

ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕೂಡ ಕಡ್ಡಾಯವಾಗಿದೆ.

ಇಲ್ಲವಾದಲ್ಲಿ ಆದಾಯ ತೆರಿಗೆ ಸಂಬಂಧಪಟ್ಟ ಯಾವ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ (PAN Card Aadhaar Card link) ಮಾಡಿಕೊಳ್ಳದೆ ಇದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ.

ಇದರಿಂದಾಗಿ ಆದಾಯ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಬಾರಿ ಪ್ರಮಾಣದ ದಂಡ ಕೂಡ ಪಾವತಿಸಬೇಕು. ನೀವು ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡಿದ್ದರೆ ಈಗ ಪ್ಯಾನ್ ಕಾರ್ಡ್ ನಲ್ಲಿ ಬೇಕಾಗಿರುವ ತಿದ್ದುಪಡಿಯನ್ನು ಆನ್ಲೈನ್ ಮೂಲಕವೇ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ.

ಕೇವಲ 16 ಸಾವಿರಕ್ಕೆ ಮಾರಾಟಕ್ಕಿದೆ ಬಜಾಜ್ ಬೈಕ್, 70 ಕಿ.ಮೀ ಮೈಲೇಜ್! ಬಾರೀ ಡಿಮ್ಯಾಂಡ್

ಪ್ಯಾನ್ ಕಾರ್ಡ್ ತಿದ್ದುಪಡಿಗೆ ಬೇಕಾಗಿರುವ ದಾಖಲೆಗಳು!

ವಿವಾಹ ಪ್ರಮಾಣ ಪತ್ರ (marriage certificate)
ಪತಿಯ ಆಧಾರ್ ಕಾರ್ಡ್ (husband Aadhar card) ಹಾಗೂ ಅರ್ಜಿದಾರರ ಆಧಾರ್ ಕಾರ್ಡ್
ವಿಳಾಸ (address proof)
ಇಮೇಲ್ ಐಡಿ (email ID)
ಮೊಬೈಲ್ ಸಂಖ್ಯೆ. (Mobile number)

Married women do this to add husband’s name in PAN card

Follow us On

FaceBook Google News

Married women do this to add husband's name in PAN card