ಸೈಟ್ ಖರೀದಿ ಮಾಡೋ ಪ್ಲಾನ್ ಇದ್ಯಾ? ಈ ಬ್ಯಾಂಕುಗಳು ನೀಡುತ್ತಿವೆ ಕಡಿಮೆ ಬಡ್ಡಿಗೆ ಲೋನ್
Loan : ಒಂದು ಸ್ವಂತ ಮನೆ (Own House) ಕಟ್ಟಿ, ತಮ್ಮ ಹಾಗೂ ತಮ್ಮ ಕುಟುಂಬದವರ ಬದುಕಿಗೆ ಆಧಾರ ಮಾಡಿಕೊಡಬೇಕು ಎನ್ನುವುದು ಎಲ್ಲಾ ಜನರ ಆಸೆ ಆಗಿರುತ್ತದೆ. ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುವುದು ಒಂದು ಸೂರು ಕಟ್ಟಿಕೊಳ್ಳುವ ಸಲುವಾಗಿಯೇ. ಆದರೆ ಈಗ ಎಲ್ಲದರ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇರುವಾಗ, ಮನೆ ಕಟ್ಟುವುದು ಸುಲಭದ ವಿಷಯ ಖಂಡಿತ ಅಲ್ಲ. ಕೋಟಿಗಟ್ಟಲೇ ಹಣ ಖರ್ಚಾಗುತ್ತದೆ.
ಸ್ಟೇಟ್ ಬ್ಯಾಂಕ್ ಹೊಸ ರೂಲ್ಸ್! ಇನ್ಮುಂದೆ ಇಷ್ಟು ಹಣ ಮಾತ್ರ ಎಟಿಎಂನಿಂದ ವಿತ್ ಡ್ರಾ ಮಾಡಬಹುದು
ಮನೆ ಕಟ್ಟಲು ಜಾಗ ಅಥವಾ ಸೈಟ್ ಮುಖ್ಯ
ನಿಮ್ಮ ಕನಸಿನ ಮನೆಯನ್ನು ಕಟ್ಟಲು ಜಾಗ ಬೇಕು, ಆ ಜಾಗ ಖರೀದಿ ಮಾಡುವುದಕ್ಕೂ ಈಗ ಬೆಲೆ ಜಾಸ್ತಿಯೇ. ಎಲ್ಲರ ಬಳಿ ಅಷ್ಟು ಹಣ ಇರುವುದಿಲ್ಲ. ಅಂಥವರು ಬ್ಯಾಂಕ್ ಇಂದ ಲೋನ್ (Bank Loan) ಪಡೆದು, ಸೈಟ್ ಖರೀದಿ ಮಾಡಿ ಮನೆಯನ್ನು ಕಟ್ಟಬೇಕು ಎಂದು ಬಯಸುತ್ತಾರೆ. ಆದರೆ ಸೈಟ್ ಗಾಗಿ ಬ್ಯಾಂಕ್ ಇಂದ ಕೊಡುವ ಲೋನ್ ಗೆ ಬಹಳಷ್ಟು ಕಂಡೀಷನ್ ಗಳಿರುತ್ತದೆ. ಬ್ಯಾಂಕ್ ನವರು ಲೋನ್ ರಿಕವರಿ ಮಾಡಬೇಕು ಎಂದರೆ, ಸೈಟ್ ಖರೀದಿ ಮಾಡಿದ ಜಾಗದಲ್ಲಿ ತಕ್ಷಣವೇ ಮನೆ ಕಟ್ಟಬೇಕು ಎಂದು ಸಹ ಹೇಳುತ್ತಾರೆ.
ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದಲೇ ಸಿಗಲಿದೆ ಸಬ್ಸಿಡಿ ಹೋಮ್ ಲೋನ್! ಬಂಪರ್ ಅವಕಾಶ
ಬ್ಯಾಂಕ್ ಲೋನ್ ಗೆ ಸಂಬಂದಿಸಿದ ಮಾಹಿತಿ
ಸೈಟ್ ಮತ್ತು ಮನೆ ಲೋನ್ ಗೆ (Home Loan) ಸಂಬಂಧಿಸಿದ ಹಾಗೆ ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆ ಕೂಡ ಆಗುತ್ತಿರುತ್ತದೆ. ಹಾಗಿದ್ದಲ್ಲಿ ಬ್ಯಾಂಕ್ ಇಂದ ಲೋನ್ ಪಡೆಯುವ ಮೊದಲು ನೀವು ಕೆಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು, ಹಾಗೆಯೇ ಯಾವ ಬ್ಯಾಂಕ್ ನಲ್ಲಿ ಲೋನ್ ಪಡೆಯುವುದು ಒಳ್ಳೆಯದು? ಈ ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿಯಲು, ಈ ಲೇಖನವನ್ನು ಪೂರ್ತಿಯಾಗಿ ಓದಿ..
Site ಖರೀದಿಗೆ ಸಿಗುವ Loan ಮೊತ್ತ ಇಷ್ಟು!
ನೀವು ಸೈಟ್ ಖರೀದಿ ಮಾಡುವುದಕ್ಕೆ ಲೋನ್ ಪಡೆಯಬೇಕು ಎಂದುಕೊಂಡರೆ, ಅದಕ್ಕಾಗಿ ಮೊದಲು ನೀವು ಸೈಟ್ ಖರೀದಿ ಮಾಡುವ ಜಾಗಕ್ಕೆ ಸರ್ಕಾರದ ಅಧಿಕೃತ ರಿಜಿಸ್ಟ್ರೇಷನ್ ಇದೆಯಾ ಎಂದು ಸರಿಯಾಗಿ ಚೆಕ್ ಮಾಡಿ, ಖಾತ್ರಿ ಪಡಿಸಿಕೊಳ್ಳಿ. ಬ್ಯಾಂಕ್ ಇಂದ ಸಹ ಈ ಪರಿಶೀಲನೆ ನಡೆಯುತ್ತದೆ. 7% ಇಂದ 10% ಬಡ್ಡಿದರದಲ್ಲಿ ಸೈಟ್ ಲೋನ್ ಸಿಗುತ್ತದೆ. ಜೊತೆಗೆ ನಿಮ್ಮ ಸೈಟ್ ಮೊತ್ತದ ಮೇಲೆ 70 ಇಂದ 80% ವರೆಗಿನ ಮೊತ್ತ ಲೋನ್ ರೂಪದಲ್ಲಿ ಸಿಗುತ್ತದೆ. ಉದಾಹರಣೆಗೆ ನಿಮ್ಮ ಸೈಟ್ ನ ಬೆಲೆ 1 ಲಕ್ಷ ಆದರೆ, 70 ರಿಂದ 80 ಸಾವಿರದವರೆಗು ಲೋನ್ ಸಿಗುತ್ತದೆ.
ಭಾರಿ ಇಳಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿ ಬೆಲೆಯೂ ಕುಸಿತ! ಇಲ್ಲಿದೆ ಚಿನ್ನ ಬೆಳ್ಳಿ ಬೆಲೆ ಡೀಟೇಲ್ಸ್
ಎಲ್ಲಿನ ಜಾಗಕ್ಕೆ ಲೋನ್ ಸಿಗುತ್ತದೆ?
ಸರ್ಕಾರಕ್ಕೆ ಸಂಬಂಧಿಸಿದ, ಸರ್ಕಾರದಿಂದ ಅಲಾಟ್ ಆಗಿರುವ ಜಾಗವನ್ನು ಖರೀದಿ ಮಾಡುವುದಕ್ಕೆ ಅಥವಾ ಈಗಾಗಲೇ ಸೈಟ್ ಇರುವ ವ್ಯಕ್ತಿಯಿಂದ ನೀವು ಸೈಟ್ ಖರೀದಿ ಮಾಡುವುದಕ್ಕೆ, ಈ ಎರಡಕ್ಕೂ ಲೋನ್ ಸಿಗುತ್ತದೆ. ಆದರೆ ನಿಮ್ಮ ಜಾಗಕ್ಕೆ ಸಂಬಂಧಿಸಿದ ಎಲ್ಲಾ ದಾಖಕೆಗಳು ಸರಿಯಾಗಿರಬೇಕು. ಆಗ ಮಾತ್ರ ಲೋನ್ ಸಿಗುತ್ತದೆ. ಇಲ್ಲದಿದ್ದರೆ ಸಿಗುವುದಿಲ್ಲ. ಸೈಟ್ ಲೋನ್ ಗೆ ಅರ್ಜಿ ಸಲ್ಲಿಸಲು ಸೈಟ್ ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಜೊತೆಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್, ಹಾಗೂ ಕೆಲವು ಪರ್ಸನಲ್ ಮಾಹಿತಿ ನೀಡಬೇಕಾಗುತ್ತದೆ.
ಯಾವೆಲ್ಲಾ ಬ್ಯಾಂಕ್ ಗಳಲ್ಲಿ ಸೈಟ್ ಲೋನ್ ಸಿಗಲಿದೆ?
* ICICI Bank
* Karnataka Bank
* LIC Housing Finance Loan
* Canara Bank
* Punjab National Bank
ಇಷ್ಟು ಬ್ಯಾಂಕ್ ಗಳಲ್ಲಿ ಸೈಟ್ ಲೋನ್ ಸಿಗಲಿದ್ದು, ಸೈಟ್ ಖರೀದಿ ಮಾಡಿ ಒಂದೆರಡು ವರ್ಷಗಳ ಒಳಗೆ ಸರಿಯಾಗಿ ಲೋನ್ ಹಣ ಮರುಪಾವತಿ ಮಾಡುತ್ತಾ ಬಂದರೆ, ಮನೆ ಕಟ್ಟುವುದಕ್ಕೂ ಲೋನ್ ನೀಡಲಾಗುತ್ತದೆ.
Do you plan to buy the site, These banks are offering low interest loans
Our Whatsapp Channel is Live Now 👇