Business News

ಸ್ಟೇಟ್ ಬ್ಯಾಂಕ್ ಹೊಸ ರೂಲ್ಸ್! ಇನ್ಮುಂದೆ ಇಷ್ಟು ಹಣ ಮಾತ್ರ ಎಟಿಎಂನಿಂದ ವಿತ್ ಡ್ರಾ ಮಾಡಬಹುದು

ಈಗಿನ ಕಾಲದಲ್ಲಿ ಹಣ ವರ್ಗಾವಣೆಗೆ ಹೆಚ್ಚು ಜನ UPI ಬಳಕೆ ಮಾಡಿದರು ಸಹ, ಕೆಲವೊಮ್ಮೆ ಕ್ಯಾಶ್ ಅವಶ್ಯಕತೆ ಇದ್ದಾಗ, ಬ್ಯಾಂಕ್ ಗೆ ಹೋಗಬೇಕಾಗುತ್ತದೆ ಅಥವಾ ATM ಇಂದ ಹಣವನ್ನು ವಿತ್ ಡ್ರಾ ಮಾಡಬೇಕಾಗುತ್ತದೆ. ನಮ್ಮ ದೇಶದಲ್ಲಿ ಈಗ Bank ಸೌಲಭ್ಯ ಹಳ್ಳಿಗಳಲ್ಲಿ ಕೂಡ ತಲುಪಿದೆ. ಸಿಟಿ ಇಂದ ಹಿಡಿದು ಹಳ್ಳಿಯವರೆಗು ಬ್ಯಾಂಕ್ ಬ್ರಾಂಚ್ ಗಳಿದ್ದು, ಈಗ ಹಳ್ಳಿಯ ಜನರು ಕೂಡ ಬ್ಯಾಂಕ್ ವಹಿವಾಟು ನಡೆಸುವುದು, ATM ಬಳಕೆ ಮಾಡುವುದನ್ನು ಕಲಿತಿದ್ದಾರೆ.

ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದಲೇ ಸಿಗಲಿದೆ ಸಬ್ಸಿಡಿ ಹೋಮ್ ಲೋನ್! ಬಂಪರ್ ಅವಕಾಶ

Bank Account

ಸ್ಟೇಟ್ ಬ್ಯಾಂಕ್ ಹೊಸ ರೂಲ್ಸ್

ಭಾರತದಲ್ಲಿ ಹೆಚ್ಚಿನ ಜನರ ನಂಬಿಕೆ ಗಳಿಸಿರುವ ಸರ್ಕಾರಕ್ಕೆ ಸೇರಿದ ಬ್ಯಾಂಕ್ ಗಳಲ್ಲಿ SBI ಪ್ರಮುಖ ಪಾತ್ರ ವಹಿಸುತ್ತದೆ. ತಮ್ಮ ಗ್ರಾಹಕರಿಗೆ ಬಹಳಷ್ಟು ಒಳ್ಳೆಯ ಕೊಡುಗೆಗಳನ್ನು ಸಹ SBI ನೀಡುತ್ತದೆ. ಜನರು ಕೂಡ ಅಷ್ಟೇ ನಂಬಿಕೆ ಇಂದ ಈ ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಈ ಬ್ಯಾಂಕ್ ನಲ್ಲಿ ಖಾತೆ ತೆರೆಯುವವರು ಬ್ಯಾಂಕ್ ನ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದೀಗ SBI ATM ಮೂಲಕ ಹಣ ಡ್ರಾ ಮಾಡುವ ಕುರಿತಾಗಿ ಹೊಸ ನಿಯಮವನ್ನು ಜಾರಿಗೆ ತಂದಿದೆ.

State Bank Of IndiaATM ಇಂದ ದಿನಕ್ಕೆ ಇಷ್ಟೇ ಹಣ ಡ್ರಾ ಮಾಡಬೇಕು

ನಮಗೆ ಹೆಚ್ಚಿನ ಕ್ಯಾಶ್ ಅವಶ್ಯಕತೆ ಇದ್ದಾಗ, ಹತ್ತಿರದ ATM ಗೆ ಹೋಗಿ ಹಣ ಡ್ರಾ ಮಾಡುತ್ತೇವೆ. ಆದರೆ ಪ್ರತಿ ದಿನ ATM ಇಂದ ಎಷ್ಟಾದರೂ ಹಣ ಡ್ರಾ ಮಾಡಲು ಸಾಧ್ಯವಿಲ್ಲ. ಒಂದು ದಿನಕ್ಕೆ ಇಷ್ಟೇ ಹಣ ಡ್ರಾ ಮಾಡಬೇಕು ಎಂದು ನಿಯಮವನ್ನು ತರಲಾಗಿದೆ. ಪ್ರತಿ ಬ್ಯಾಂಕ್ ಗಳಲ್ಲೂ ಸಹ ಲಿಮಿಟ್ ಇದ್ದು, SBI ನಲ್ಲಿ ಗ್ರಾಹಕರು ATM ಇಂದ ಹಣ ಮಾಡಲು ಇಟ್ಟಿರುವ ಲಿಮಿಟ್ ಎಷ್ಟು ಎನ್ನುವ ಬಗ್ಗೆ ಇಂದು ತಿಳಿದುಕೊಳ್ಳೋಣ.

ಭಾರಿ ಇಳಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿ ಬೆಲೆಯೂ ಕುಸಿತ! ಇಲ್ಲಿದೆ ಚಿನ್ನ ಬೆಳ್ಳಿ ಬೆಲೆ ಡೀಟೇಲ್ಸ್

SBI ಇಟ್ಟಿರುವ Withdrawal Limit ಹೀಗಿದೆ

*ನಿಮ್ಮ ಹತ್ತಿರ SBI Classic Debit Card ಅಥವಾ Mastro Debit Card ಇರುವುದಾದರೆ, ಅವುಗಳನ್ನು ಬಳಸಿ ದಿನಕ್ಕೆ ₹40,000 ವರೆಗು ಹಣವನ್ನು ವಿತ್ ಡ್ರಾ ಮಾಡಬಹುದು.

*ನಿಮ್ಮ SBI ಅಕೌಂಟ್ ಅನ್ನು In Touch ಅಥವಾ SBI Go ಮಾಡಿಸಿದ್ದರೆ ಆಗಲು ಸಹ ದಿನಕ್ಕೆ ₹40,000 ಸಾವಿರ ರೂಪಾಯಿಗಳನ್ನು withdraw ಮಾಡಬಹುದು.

*ಒಂದು ವೇಳೆ ನಿಮ್ಮ ಬಳಿ SBI Platinum International Debit Card ಇದ್ದರೆ ಅದನ್ನು ಬಳಸಿ ಒಂದು ದಿನಕ್ಕೆ 1 ಲಕ್ಷದವರೆಗೂ Withdraw ಮಾಡಬಹುದು.

ಇದು ಪ್ರತಿ ತಿಂಗಳು 3000 ಬರುವ ಕೇಂದ್ರ ಸರ್ಕಾರದ ಹೊಸ ಯೋಜನೆ! ಇಂದೇ ಅರ್ಜಿ ಸಲ್ಲಿಸಿ

state Bank ATMWithdrawal Limit ಇಡಲು ಕಾರಣ ಏನು?

ಈಗಿನ ಕಾಲದಲ್ಲಿ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಹಾಗೆ ಹೆಚ್ಚಿನ ಫ್ರಾಡ್ ಗಳು ನಡೆಯುತ್ತಿದೆ. ಹ್ಯಾಕರ್ ಗಳು, ಸೈಬರ್ ಕಳ್ಳರು ನಿಮ್ಮ ಡೆಬಿಟ್ ಕಾರ್ಡ್ ಗೆ ಆಕ್ಸೆಸ್ ಪಡೆದು, ಅಕೌಂಟ್ ನಲ್ಲಿರುವ ಹಣವನ್ನೆಲ್ಲ ದೋಚುವ ಸಾಧ್ಯತೆ ಇರುತ್ತದೆ. ಹಾಗೆಯೇ ಒಂದು ವೇಳೆ ನಿಮ್ಮ ಡೆಬಿಟ್ ಕಾರ್ಡ್ ಕಳೆದು ಹೋದರೆ, ಆಗಲು ಸಹ ನಿಮ್ಮ ಅಕೌಂಟ್ ನಲ್ಲಿರುವ ಸಂಪೂರ್ಣ ಹಣವನ್ನು ಕಬಳಿಸಬಹುದು. ಇಂಥ ಸಮಸ್ಯೆಗಳು ಆಗಬಾರದು ಎಂದು ಹಣ Withdraw ಮಾಡಲು limit ಇಡಲಾಗಿದೆ.

State Bank New Rules, only this amount can be withdrawn from the ATM

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories