ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದಲೇ ಸಿಗಲಿದೆ ಸಬ್ಸಿಡಿ ಹೋಮ್ ಲೋನ್! ಬಂಪರ್ ಅವಕಾಶ

ಈ ಯೋಜನೆಯ ಮೂಲಕ ಮನೆಕಟ್ಟಲು ಕಡಿಮೆ ಬಡ್ಡಿಯಲ್ಲಿ ಸಾಲ (Home Loan) ಕೊಡುವುದರ ಜೊತೆಗೆ, ಸಬ್ಸಿಡಿ ಕೂಡ ದೊರೆಯಲಿದೆ.

ಇತ್ತೀಚೆಗೆ ಲೋಕಸಭಾ ಎಲೆಕ್ಷನ್ ಮುಗಿದು, ಫಲಿತಾಂಶ ಕೂಡ ಹೊರಬಿದ್ದಿದೆ. ನರೇಂದ್ರ ಮೋದಿ ಅವರು ಮೂರನೇ ಸಾರಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನವನ್ನು ಕೂಡ ಸ್ವೀಕರಿಸಿದ್ದಾರೆ. ಈ ಸಿಹಿ ಸುದ್ದಿಯ ಜೊತೆಗೆ ಸ್ವಂತ ಮನೆ (Own House) ಇಲ್ಲದವರಿಗೆ ಸರ್ಕಾರ ಇದೀಗ ಒಂದು ಗುಡ್ ನ್ಯೂಸ್ ನೀಡಿದೆ.

ಈಗಿನ ಕಾಲದಲ್ಲಿ ಒಂದೊಂದು ವಸ್ತುವಿನ ಬೆಲೆ ಎಷ್ಟಿದೆ ಎಂದು ಗೊತ್ತೇ ಇದೆ. ಬೆಲೆ ಏರಿಕೆ ಮತ್ತು ಇನ್ನಿತರ ಸಮಸ್ಯೆಗಳ ನಡುವೆ ಸ್ವಂತ ಮನೆ ಕಟ್ಟಿಕೊಳ್ಳುವುದು ಬಹಳ ಕಷ್ಟದ ವಿಷಯ ಎಂದರೆ ತಪ್ಪಲ್ಲ..

ಭಾರಿ ಇಳಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿ ಬೆಲೆಯೂ ಕುಸಿತ! ಇಲ್ಲಿದೆ ಚಿನ್ನ ಬೆಳ್ಳಿ ಬೆಲೆ ಡೀಟೇಲ್ಸ್

Kannada News

ಸಾಮಾನ್ಯ ವರ್ಗದ ಜನರು ತಮಗೆ ಬರುವ ಸಂಬಳದಲ್ಲಿ ಜೀವನ ಸಾಗಿಸುವುದೇ ಕಷ್ಟ, ಹಾಗಿದ್ದಾಗ ಸ್ವಂತ ಮನೆ (Own House) ಮಾಡಿಕೊಳ್ಳುವುದು ಕನಿಸಿನ ವಿಷಯವೇ ಆಗಿರುತ್ತದೆ. ಕೆಲವರು ಸ್ವಂತ ಮನೆ ಮಾಡಿಕೊಳ್ಳುವ ಸಲುವಾಗಿ ಬ್ಯಾಂಕ್ ಲೋನ್ (Bank Loan) ಮೊರೆ ಹೋಗುತ್ತಾರೆ. ಆದರೆ ಅದಕ್ಕೆ ಬಡ್ಡಿದರ ಹೆಚ್ಚಾಗಿರುತ್ತದೆ. ಈ ಕಾರಣಗಳಿಂದ ಎಲ್ಲರೂ ಕೂಡ ಸ್ವಂತ ಮನೆ ಮಾಡಲು ಸಾಧ್ಯ ಆಗುವುದಿಲ್ಲ. ಅಂಥವರಿಗೆ ಕೇಂದ್ರ ಸರ್ಕಾರವು ಸ್ವಂತ ಮನೆ ಕೊಡುವುದಕ್ಕೆ ಮುಂದಾಗಿದೆ..

ಪಿಎಮ್ ಆವಾಸ್ ಯೋಜನೆ

PM Aawas Yojanaಜನರಿಗೆ ಸ್ವಂತ ಮನೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಸಹಾಯ ಮಾಡುತ್ತಿರುವುದು ಪಿಎಮ್ ಆವಾಸ್ ಯೋಜನೆಯ ಮೂಲಕ. ಈ ಯೋಜನೆಯನ್ನು ಕೇಂದ್ರ ಸರ್ಕಾರವು 2015ರಲ್ಲಿ ಜಾರಿಗೆ ತಂದಿತು. ನಮ್ಮ ದೇಶದಲ್ಲಿ ಬಡತನದಲ್ಲಿರುವ ಎಲ್ಲರೂ ತಮ್ಮ ಕನಸಿನ ಸ್ವಂತ ಮನೆಯನ್ನು ಮಾಡಿಕೊಳ್ಳಲಿ ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯ ಮೂಲಕ ಮನೆಕಟ್ಟಲು ಕಡಿಮೆ ಬಡ್ಡಿಯಲ್ಲಿ ಸಾಲ (Home Loan) ಕೊಡುವುದರ ಜೊತೆಗೆ, ಸಬ್ಸಿಡಿ ಕೂಡ ದೊರೆಯಲಿದೆ. ಹಾಗಿದ್ದಲ್ಲಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯೋಣ..

ಇದು ಪ್ರತಿ ತಿಂಗಳು 3000 ಬರುವ ಕೇಂದ್ರ ಸರ್ಕಾರದ ಹೊಸ ಯೋಜನೆ! ಇಂದೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಬೇಕಿರುವ ಅರ್ಹತೆ

Home Loan*18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
*ಅರ್ಜಿದಾರರು ಭಾರತ ವಾಸಿಯೇ ಆಗಿರಬೇಕು
*ಅರ್ಜಿದಾರರ ಬಳಿ ಸ್ವಂತ ಮನೆ ಇರಬಾರದು ಹಾಗೆಯೇ ಮನೆಗಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಬೇರೆ ಯೋಜನೆಗಳ ಸೌಲಭ್ಯ ಪಡೆಯುತ್ತಿರಬಾರದು
*ಈ ಯೋಜನೆಯ ಸೌಲಭ್ಯವನ್ನು ಒಂದು ಸಾರಿ ಮಾತ್ರ ಪಡೆಯಬಹುದು

*ಟ್ಯಾಕ್ಸ್ ಮತ್ತು GST ಕಟ್ಟುವವರು ಅರ್ಜಿ ಸಲ್ಲಿಸುವ ಹಾಗಿಲ್ಲ
*ಸಿಟಿ ಅಥವಾ ಹಳ್ಳಿಯಲ್ಲಿ ಸ್ವಂತ ಮನೆ ಇದ್ದರೆ ಅಂಥವರು ಅರ್ಜಿ ಸಲ್ಲಿಸುವ ಹಾಗಿಲ್ಲ
*ಅರ್ಜಿದಾರರು ಅಥವಾ ಅವರ ಮನೆಯವರು ಸರ್ಕಾರಿ ಕೆಲಸಗಾರರಾಗಿದ್ದರೆ ಅಂಥವರು ಅರ್ಜಿ ಸಲ್ಲಿಸುವ ಹಾಗಿಲ್ಲ.
*ಈ ಯೋಜನೆಯಲ್ಲಿ ಎರಡೂವರೆ ಲಕ್ಷದವರೆಗು ಸಬ್ಸಿಡಿ ಸಾಲ (Subsidy Loan) ಪಡೆಯಬಹುದು

ಸ್ವಂತ ಬಿಸಿನೆಸ್ ಪ್ಲಾನ್ ಇರೋರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ 2 ಲಕ್ಷ! ಈಗಲೇ ಅರ್ಜಿ ಸಲ್ಲಿಸಿ

ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಒಂದು ವೇಳೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ಮೊದಲಿಗೆ ನೀವು ಈ https://pmaymis.gov.in/ ಲಿಂಕ್ ಗೆ ಭೇಟಿ ನೀಡಿ. ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳಿಗೆ ಸರಿಯಾಗಿ ಉತ್ತರ ನೀಡಿ, ಅಗತ್ಯವಿರುವ ದಾಖಲೆಗಳನ್ನು ಅಪ್ಡೇಟ್ ಮಾಡಿ, ಅರ್ಜಿ ಸಲ್ಲಿಸಬಹುದು.

You will get a subsidy home loan from the government to build your own house

Follow us On

FaceBook Google News