ಕಳೆದು ಹೋದ ಪ್ಯಾನ್ ಕಾರ್ಡ್ ಅನ್ನು ಕ್ಷಣಮಾತ್ರದಲ್ಲಿ ಡೌನ್ಲೋಡ್ ಮಾಡಿಕೊಳ್ಳಿ!

Pan Card : ಪ್ಯಾನ್ ಕಾರ್ಡ್ ಕಳೆದು ಹೋದರೆ ಕ್ಷಣಮಾತ್ರದಲ್ಲಿ ಆನ್ಲೈನ್ ಮೂಲಕ ಡುಪ್ಲಿಕೇಟ್ ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ

Download Pan Card : ಪ್ಯಾನ್ ಕಾರ್ಡ್ ಅಂದ್ರೆ ಪರ್ಮನೆಂಟ್ ಅಕೌಂಟ್ ನಂಬರ್ (Permanent Account Number) ಇದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕೈಯಲ್ಲಿ ಇರಲೇಬೇಕು. ಮಾಡುವವರಾಗಿದ್ದರೆ ಪ್ಯಾನ್ ಕಾರ್ಡ್ (PAN Card) ಇಲ್ಲದೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಲು ಸಾಧ್ಯವಿಲ್ಲ

ಒಂದು ವೇಳೆ ಪಾನ್ ಕಾರ್ಡ್ ಇಲ್ಲದೆ ಅಥವಾ ನಕಲಿ ಪ್ಯಾನ್ ಕಾರ್ಡ್ (duplicate PAN card) ಹೊಂದಿದ್ದು ಆದಾಯ ತೆರಿಗೆ ಇಲಾಖೆಗೆ ಮೋಸ ಮಾಡಲು ಪ್ರಯತ್ನಿಸಿದರೆ ಭಾರಿ ಪ್ರಮಾಣದಲ್ಲಿ ದಂಡ ತೆರಬೇಕಾಗುತ್ತದೆ.

ಇನ್ಮುಂದೆ ಈ ಕೆಲಸಕ್ಕೆ ಆಧಾರ್ ಕಾರ್ಡ್ ಅಗತ್ಯವಿಲ್ಲ! ಸರ್ಕಾರ ಅಧಿಕೃತ ಘೋಷಣೆ

ಕಳೆದು ಹೋದ ಪ್ಯಾನ್ ಕಾರ್ಡ್ ಅನ್ನು ಕ್ಷಣಮಾತ್ರದಲ್ಲಿ ಡೌನ್ಲೋಡ್ ಮಾಡಿಕೊಳ್ಳಿ! - Kannada News

ಪ್ಯಾನ್ ಕಾರ್ಡ್ ಇರಲಿ ಅಥವಾ ಆಧಾರ್ ಕಾರ್ಡ್ ಇರಲಿ ಯಾವುದೇ ಮುಖ್ಯ ದಾಖಲೆಗಳನ್ನು ನಾವು ಬಹಳ ಕೇರ್ ಫುಲ್ ಆಗಿ ಇಟ್ಟುಕೊಳ್ಳುವುದು ಮುಖ್ಯ. ಎಷ್ಟೇ ಮುತುವರ್ಜಿಯಿಂದ ಇದ್ದರೂ ಕೂಡ ಕೆಲವೊಮ್ಮೆ ನಮ್ಮ ಬಳಿ ಇರುವ ಇಂತಹ ದಾಖಲೆಗಳು ಕಳೆದು ಹೋಗಬಹುದು ಅಥವಾ ಯಾರಾದರೂ ಕದ್ದು ಬಿಡಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಬಳಿ ಗುರುತಿನ ಚೀಟಿ ಇಲ್ಲದೆ ಇದ್ರೆ ಏನು ಮಾಡುತ್ತೀರಿ?

ಚಿಂತೆ ಬೇಡ, ನಿಮ್ಮ ಪಾನ್ ಕಾರ್ಡ್ ಕಳೆದು ಹೋಗಿದ್ದರೆ ಆನ್ಲೈನ್ ಮೂಲಕ ಸುಲಭವಾಗಿ ಮತ್ತೊಂದು ಪ್ರತಿಯನ್ನು ಡೌನ್ಲೋಡ್ (download) ಮಾಡಿಕೊಳ್ಳ ಬಹುದು. ಆನ್ಲೈನ್ (online) ಮೂಲಕ ಹೇಗೆ ಪಾನ್ ಕಾರ್ಡ್ ಅನ್ನು ಹಿಂಪಡೆಯಬಹುದು ಎಂಬುದನ್ನು ನೋಡೋಣ.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಕೊಡುಗೆ! ಹೊಸ ಫಿಕ್ಸೆಡ್ ಡೆಪಾಸಿಟ್ ಯೋಜನೆ ಶುರು

ಡುಪ್ಲಿಕೇಟ್ ಪ್ಯಾನ್ ಕಾರ್ಡ್ ಪಡೆಯಲು ದಾಖಲೆಗಳು (Documents to get duplicate PAN card)

ಆಧಾರ್ ಕಾರ್ಡ್
ಜನ್ಮ ದಿನಾಂಕ
ಮೂಲ PAN ಕಾರ್ಡ್ ದೃಢೀಕರಣದ ಪತ್ರ
ಮೊಬೈಲ್ ಸಂಖ್ಯೆ

ಪ್ಯಾನ್ ಕಾರ್ಡ್ ಡುಪ್ಲಿಕೇಟ್ ಪ್ರತಿ ಪಡೆಯುವುದು ಹೇಗೆ! (How to get duplicate PAN card)

Pan Card*ಅಕಸ್ಮಾತ್ ಆಗಿ ನೀವು ನಿಮ್ಮ ಒರಿಜಿನಲ್ ಪಾನ್ ಕಾರ್ಡ್ (original PAN card) ಕಳೆದುಕೊಂಡಿದ್ದರೆ, ಅದರ ನಕಲಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಮೊದಲು https://www.pan.utiitsl.com/ ಈ ವೆಬ್ಸೈಟ್ಗೆ ಹೋಗಿ ಅಥವಾ ಈ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

*ಈಗ ಹೊಸ ಪುಟ ತೆರೆದುಕೊಳ್ಳುತ್ತದೆ, ಮೊದಲೇ ತಿಳಿಸಿರುವ ನೀತಿ ನಿಯಮಗಳನ್ನು ಓದಿಕೊಂಡು, ನಕಲಿ ಪಾನ್ ಕಾರ್ಡ್ ಪ್ರತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

*ಈಗ ನಿಮ್ಮ PAN ಸಂಖ್ಯೆ ಜನ್ಮ ದಿನಾಂಕ ಹಾಗೂ ಕೆಳಭಾಗದಲ್ಲಿ ಕೊಟ್ಟಿರುವ ಕ್ಯಾಪ್ಚ ಸಂಖ್ಯೆಯನ್ನು ನಮೂದಿಸಿ ಸಬ್ಮಿಟ್ ಎಂದು ಕೊಡಿ.

ಈ ಯೋಜನೆಯಲ್ಲಿ ಕೇವಲ ₹600 ರೂಪಾಯಿಗೆ ಸಿಗುತ್ತೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್

*ಅಗತ್ಯ ಇರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಸಬ್ಮಿಟ್ ಎಂದು ಕ್ಲಿಕ್ ಮಾಡಿ.

*ಈಗ ನೀವು ಪಾವತಿ ಮಾಡುವ ಪುಟಕ್ಕೆ ಹೋಗುತ್ತೀರಿ. ಅಂದರೆ ಡುಬ್ಲಿಕೇಟ್ ಪ್ಯಾನ್ ಕಾರ್ಡ್ ಪಡೆದುಕೊಳ್ಳಲು 110 ರೂಪಾಯಿಗಳ ಶುಲ್ಕ ಪಾವತಿಸಬೇಕು.

ಆನ್ಲೈನ್ ನಲ್ಲಿ ಯಾವ ಮೆಥಡ್ ಅನುಸರಿಸುತ್ತಿರೋ ಆ ಮೂಲಕ ಪೇಮೆಂಟ್ ಮಾಡಬೇಕು.

*ಪೇಮೆಂಟ್ ಆದ ಬಳಿಕ ಪ್ಯಾನ್ ಕಾರ್ಡ್ ಮರು ಮುದ್ರಣಕ್ಕೆ, ಅರ್ಜಿ ಸ್ವೀಕಾರವಾಗುತ್ತದೆ. ಹಾಗೂ ನಿಮಗೆ ಸ್ವೀಕೃತಿ ಸಂಖ್ಯೆಯನ್ನು ನೀಡಲಾಗುತ್ತದೆ.

Download lost PAN card online instantly

Follow us On

FaceBook Google News

Download lost PAN card online instantly