ಈ ಯೋಜನೆಯಲ್ಲಿ ಕೇವಲ ₹600 ರೂಪಾಯಿಗೆ ಸಿಗುತ್ತೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್
ಉಚಿತವಾಗಿ ಗ್ಯಾಸ್ ಕನೆಕ್ಷನ್ (free gas connection) ನೀಡುವುದು ಮಾತ್ರವಲ್ಲದೆ ವರ್ಷದ 12 ತಿಂಗಳು 12 ಸಿಲಿಂಡರ್ ಪಡೆದುಕೊಳ್ಳಲು ಸಬ್ಸಿಡಿಯನ್ನು ಕೂಡ ಘೋಷಿಸಲಾಗಿದೆ.
ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ (Central government) ಹೊರತಂದಿದೆ. ಇಂದು ರಾಜ್ಯ ರಾಜ್ಯಗಳಲ್ಲಿ ಬಡ ಕುಟುಂಬಗಳು (poor family) ಕೂಡ ಸುಲಭವಾಗಿ ಅಡುಗೆ ಮಾಡಿಕೊಂಡು ಜೀವನ ನಡೆಸಲು ಪ್ರಧಾನ ಮಂತ್ರಿ ಉಜ್ವಲ ಯೋಜನೆ (Ujjwala scheme) ಸಹಾಯಕಾರಿಯಾಗಿದೆ.
ದೇಶದ ನಾಗರಿಕರಿಗೆ ಪ್ರತಿ ತಿಂಗಳು ಮೂಲಭೂತ ಅವಶ್ಯಕತೆಯಾಗಿ ಗ್ಯಾಸ್ ಸಿಲಿಂಡರ್ (gas cylinder) ಬಳಸಲೇಬೇಕು. ಆದರೆ ಗ್ಯಾಸ್ ಸಿಲಿಂಡರ್ ದರ ಏರಿಕೆ ಆದರೆ ಅದನ್ನು ಭರಿಸುವ ಶಕ್ತಿ ಬಡವರಿಗೆ ಇರುವುದಿಲ್ಲ.
ಯಾವುದೇ ಗ್ಯಾರಂಟಿ ಇಲ್ಲದೆ ಪಡೆಯಿರಿ 3 ಲಕ್ಷ ರೂಪಾಯಿವರೆಗೆ ಸಾಲ; ಅರ್ಜಿ ಸಲ್ಲಿಸಿ
ಹಾಗಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಬಡ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ (free gas connection) ನೀಡುವುದು ಮಾತ್ರವಲ್ಲದೆ ವರ್ಷದ 12 ತಿಂಗಳು 12 ಸಿಲಿಂಡರ್ ಪಡೆದುಕೊಳ್ಳಲು ಸಬ್ಸಿಡಿಯನ್ನು ಕೂಡ ಘೋಷಿಸಲಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ! (PM Ujjwala scheme)
ಸುಮಾರು 75 ಲಕ್ಷ ಕುಟುಂಬಗಳಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡುವ ಉಜ್ವಲ ಯೋಜನೆ 2.0, ಅರ್ಜಿ ಸಲ್ಲಿಕೆ ಆರಂಭವಾಗಿದೆ. ಬಡ ಕುಟುಂಬದವರು, ಹಿಂದುಳಿದ ವರ್ಗದವರು, ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಇರುವವರು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಪಡೆಯಬಹುದು. ಇದರ ಜೊತೆಗೆ 300 ರೂಪಾಯಿಗಳ ಗ್ಯಾಸ್ ಸಬ್ಸಿಡಿ (subsidy) ಕೂಡ ನೀಡಲಾಗುತ್ತದೆ. ಅಂದ್ರೆ ಕೇವಲ 600 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದು.
ಹೈನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಾಣಿಕೆಗೆ ಸಿಗುತ್ತೆ 3 ಲಕ್ಷದ ತನಕ ಸಾಲ! ಅರ್ಜಿ ಸಲ್ಲಿಸಿ
ಕೇಂದ್ರ ಸರ್ಕಾರ ತಿಳಿಸಿರುವ ಪ್ರಕಾರ ಉಜ್ವಲ ಯೋಜನೆಯ ಅಡಿಯಲ್ಲಿ 14.2ಜಿ ತೂಕದ ಎಲ್ ಪಿಜಿ ಸಿಲಿಂಡರ್ ಅನ್ನು ಇನ್ನು ಮುಂದೆ ಕೇವಲ 603 ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡಿದ್ರೆ ಸಾಕು. 300 ರೂಪಾಯಿಗಳ ಸಬ್ಸಿಡಿ ಜೊತೆಗೆ ಉಳಿದ ಹಣವನ್ನು ಸರ್ಕಾರವೇ ಭರಿಸುತ್ತದೆ.
ಯಾರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿ ಅಲ್ಲವೋ, ಅಂತವರು 903 ರೂಪಾಯಿಗಳಿಗೆ ಸಿಲಿಂಡರ್ ಖರೀದಿ ಮಾಡಬೇಕಾಗುತ್ತದೆ.
ಫೋನ್ ಪೇ ಮೂಲಕವೇ ಪಡೆಯಿರಿ ಲೋನ್; ನಿಮಗೂ ಸಿಗುತ್ತಾ ಚೆಕ್ ಮಾಡಿ
ಉಚಿತ ಗ್ಯಾಸ್ ಪಡೆಯಲು ಇಂದೇ ಅರ್ಜಿ ಸಲ್ಲಿಸಿ!
https://www.pmuy.gov.in/ ಮೊದಲು ಈ ವೆಬ್ಸೈಟ್ಗೆ ಭೇಟಿ ನೀಡಿ. ಹೊಸ ಪುಟದಲ್ಲಿ ಅನ್ವಯಿಸು (apply) ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
ಈಗ ನೀವು ಖರೀದಿ ಮಾಡಲು ಬಯಸುವ ಗ್ಯಾಸ್ ಸಿಲಿಂಡರ್ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. Bharath, HP, Indian ಈ ಮೂರಲ್ಲಿ ಯಾವುದಾದರೂ ಒಂದು ಏಜೆನ್ಸಿ (agency) ಮೇಲೆ ಕ್ಲಿಕ್ ಮಾಡಿದ್ರೆ ನೇರವಾಗಿ ಆ ಏಜೆನ್ಸಿ ವೆಬ್ಸೈಟ್ ತೆಗೆದುಕೊಳ್ಳುತ್ತದೆ. ಅಗತ್ಯ ಮಾಹಿತಿಗಳನ್ನು ನೀಡುವುದರ ಮೂಲಕ ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡಿದರೆ ನಿಮ್ಮ ಅರ್ಜಿ ಸ್ವೀಕರಿಸಿಕೊಳ್ಳುತ್ತದೆ.
ತಪ್ಪಾಗಿ PhonePe, Google Pay ಮಾಡಿದ್ರೆ ಹಣ ವಾಪಸ್ ಪಡೆಯೋ ಸುಲಭ ವಿಧಾನ
ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿ ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ. ನೀವು ಅರ್ಜಿ ಸಲ್ಲಿಸಲು ನೇರವಾಗಿ ಹತ್ತಿರದ ಗ್ಯಾಸ್ ಸಿಲಿಂಡರ್ ಏಜೆನ್ಸಿಯನ್ನು ಕೂಡ ಭೇಟಿ ಮಾಡಬಹುದು. ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಸ್ಥಳ ಪರಿಶೀಲನೆ ನಡೆಸಿ, ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ನಿಮ್ಮ ಅರ್ಜಿಯನ್ನು ಸ್ವೀಕರಿಸುತ್ತಾರೆ.
In this scheme, LPG gas cylinder is available for just 600 rupees