ತಪ್ಪಾಗಿ PhonePe, Google Pay ಮಾಡಿದ್ರೆ ಹಣ ವಾಪಸ್ ಪಡೆಯೋ ಸುಲಭ ವಿಧಾನ
ಯುಪಿಐ ಪೇಮೆಂಟ್ (UPI payment) ಎನ್ನುವುದು ಅತಿ ಹೆಚ್ಚು ಜನರಿಗೆ ಹತ್ತಿರವಾಗಿರುವ ಹಾಗೂ ಹೆಚ್ಚು ಬಳಕೆ ಆಗುತ್ತಿರುವ ಒಂದು ಪಾವತಿ ವಿಧಾನವಾಗಿದೆ
ಇಂದು ಹೆಚ್ಚಾಗಿ ಯಾರೂ ಕ್ಯಾಶ್ (Cash) ಮೂಲಕ ಹಣಕಾಸಿನ ವ್ಯವಹಾರ ಮಾಡುವುದು ಇಲ್ಲ, ಯುಪಿಐ ಪೇಮೆಂಟ್ (UPI payment) ಎನ್ನುವುದು ಅತಿ ಹೆಚ್ಚು ಜನರಿಗೆ ಹತ್ತಿರವಾಗಿರುವ ಹಾಗೂ ಹೆಚ್ಚು ಬಳಕೆ ಆಗುತ್ತಿರುವ ಒಂದು ಪಾವತಿ ವಿಧಾನವಾಗಿದೆ.
ಸುಲಭವಾಗಿ ಕ್ಷಣಮಾತ್ರದಲ್ಲಿ, ಒಂದೇ ಒಂದು ಕ್ಲಿಕ್ ಮಾಡುವುದರ ಮೂಲಕ ಇಂದು ಹಣವನ್ನು ಒಬ್ಬರ ಖಾತೆಯಿಂದ ಇನ್ನೊಬ್ಬರ ಖಾತೆಗೆ ವರ್ಗಾವಣೆ ಮಾಡಬಹುದು.
ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ
ಬೇರೆಯವರ ಖಾತೆಗೆ ತಪ್ಪಾಗಿ ಹಣ ಹೋದರೆ ಏನು ಮಾಡಬೇಕು?
ಇಂದು ಆನ್ಲೈನ್ (online) ಮೂಲಕ ಹಣ ಪಾವತಿ ಮಾಡುವುದು ಎಷ್ಟು ಸುಲಭವಾಗಿದೆಯೋ ಅಷ್ಟೇ ನಾವು ಸ್ವಲ್ಪ ಯಾಮಾರಿದರು ಸಾಕು, ಹಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ.
ಅದರಲ್ಲೂ ಯುಪಿಐ ಐಡಿ ಹಾಕುವಾಗ ಒಂದು ಸಣ್ಣ ಮಿಸ್ಟೇಕ್ (mistake) ಮಾಡಿದರು ನೀವು ಯಾರ ಖಾತೆಗೆ (Bank Account) ಹಣ ಹಾಕಲು ಹೊರಟಿದ್ದೀರೋ ಅವರಿಗೆ ಆ ಹಣ ತಲುಪದೆ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗುವ ಸಾಧ್ಯತೆಗಳು ಹೆಚ್ಚು.
ಹಾಗಂದ ಮಾತ್ರಕ್ಕೆ ನೀವು ಬೇರೆಯವರ ಖಾತೆಗೆ ಹಣ ಹಾಕಿದ್ರೆ ಆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದೇನು ಇಲ್ಲ. ಖಂಡಿತವಾಗಿಯೂ ಹಿಂಪಡೆಯಬಹುದು. ಅದಕ್ಕೆ ಈ ಕೆಳಗಿನ ಕೆಲವು ಮಾರ್ಗಗಳನ್ನು ಅನುಸರಿಸಿ ಸಾಕು.
ಚಿನ್ನ ಖರೀದಿಗೂ ಬಂತು ಹೊಸ ರೂಲ್ಸ್! ಆದಾಯ ತೆರಿಗೆಯ ಹೊಸ ನಿಯಮ
ಯಾರ ಖಾತೆಗೆ ಹಣ ಹೋಗಿದ್ಯೋ ಅವರನ್ನು ಸಂಪರ್ಕಿಸಿ! (Contact the person)
ಈ ಕೆಲಸವನ್ನು ಮೊದಲು ಮಾಡಬಹುದು, ಯಾಕೆಂದರೆ ನೀವು ಯಾವ ಯುಪಿಐ ಐಡಿ ಬಳಸಿ ಯಾರ ಖಾತೆಗೆ ಹಣ ಹಾಕಿದ್ದೀರಿ ಎನ್ನುವುದು ಮೊಬೈಲ್ ನಲ್ಲಿ ಹಿಸ್ಟರಿ ಚೆಕ್ ಮಾಡಿದರೆ ತಿಳಿಯುತ್ತದೆ, ಕೂಡಲೇ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿ.
ಅದೃಷ್ಟ ಇದ್ರೆ ಖಂಡಿತವಾಗಿಯೂ ನಿಮ್ಮ ಹಣ ಅವರಾಗಿಯೇ ಮರುಪಾವತಿ ಮಾಡುವ ಸಾಧ್ಯತೆ ಇರುತ್ತದೆ . ಹಾಗಾಗಿ ತಪ್ಪಾಗಿ ನಿಮ್ಮ ಖಾತೆಗೆ ಹಣ ಬಂದಿದೆ ಎಂಬುದನ್ನು ಅವರಿಗೆ ತಿಳಿಸಿ ಹಣ ಹಿಂಪಡೆಯಲು ಪ್ರಯತ್ನಿಸಿ.
ಪರ್ಸನಲ್ ಲೋನ್ ಬೇಕಿದ್ದರೆ ಈ ತಿಂಗಳೇ ತೆಗೆದುಕೊಳ್ಳಿ, ಫೆಬ್ರವರಿಯಿಂದ ಕಷ್ಟ
ಕಸ್ಟಮರ್ ಕೇರ್ ಕರೆ ಮಾಡಿ! (Contact Customer care)
ಆರ್ ಬಿ ಐ (RBI) ಕೂಡ ಯುಪಿಐ ಪೇಮೆಂಟ್ ಬಗ್ಗೆ ಈ ವಿಚಾರವನ್ನು ಸ್ಪಷ್ಟಪಡಿಸಿದೆ, ನೀವು ಒಂದು ವೇಳೆ ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ (Money Transfer) ಮಾಡಿದ್ದರೆ ತಕ್ಷಣ ಕಸ್ಟಮರ್ ಕೇರ್ ಕರೆ ಮಾಡಿ ಮಾಹಿತಿ ನೀಡಬಹುದು.
ಯುಪಿಐ ಕಸ್ಟಮರ್ ಕೇರ್ ಅಥವಾ ನೇರವಾಗಿ ನಿಮ್ಮ ಬ್ಯಾಂಕ್ ಕಸ್ಟಮರ್ ಕೇರ್ ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಅಥವಾ ಮೇಲ್ ಕಳುಹಿಸಿ ಪೇಮೆಂಟ್ ಮಾಡಿರುವ ಸ್ಕ್ರೀನ್ಶಾಟ್ (screenshot) ಅಪ್ಲೋಡ್ ಮಾಡಿ ನಿಮ್ಮ ಕಂಪ್ಲೇಂಟ್ (complaint) ದಾಖಲಿಸಿಕೊಳ್ಳಿ.
ಈ ರೀತಿ ಮಾಡುವುದರಿಂದ 24 ರಿಂದ 48 ಗಂಟೆಗಳ ಒಳಗೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಅದರಲ್ಲೂ ನಿಮ್ಮ ಬ್ಯಾಂಕ್ (Bank) ಹಾಗೂ ಯಾರ ಖಾತೆಗೆ ಹಣ ಹಾಕಿದ್ದೀರ ಅವರ ಖಾತೆ ಇರುವ ಬ್ಯಾಂಕ್ ಒಂದೇ ಆಗಿದ್ದರೆ ಹಣ ಮರುಪಾವತಿ ಮಾಡುವುದು ಬ್ಯಾಂಕಿಗೆ ಕೂಡ ಬಹಳ ಸುಲಭವಾಗುತ್ತದೆ.
ಆಧಾರ್ ಕಾರ್ಡ್ನಲ್ಲಿ ಫೋಟೋ ಅಪ್ಡೇಟ್ ಮಾಡೋದು ಹೇಗೆ? ಇಲ್ಲಿದೆ ಸರಳ ಹಂತ
ಈ ಸಹಾಯವಾಣಿ ಸಂಖ್ಯೆಗೆ ಮಾಹಿತಿ ತಿಳಿಸಿ!
ಅನಾಮಿಕ ವ್ಯಕ್ತಿಗೆ ನೀವು ಹಣವನ್ನು ವರ್ಗಾವಣೆ ಮಾಡಿದರೆ ನಿಮ್ಮ ಹಣವನ್ನು ಹಿಂಪಡೆಯಲು ವರ್ಗಾವಣೆ ಆದ ನಂತರ ತಕ್ಷಣದಲ್ಲಿ 1800 120 1740 ಈ ಸಂಖ್ಯೆಗೆ ಕರೆ ಮಾಡಬಹುದು. ಅಥವಾ ನೇರವಾಗಿ ನಿಮ್ಮ ಬ್ಯಾಂಕ್ ನ ಶಾಖೆಗೆ ಹೋಗಿ ಮ್ಯಾನೇಜರ್ ಗೆ ವಿಷಯ ತಿಳಿಸಿ ಅವರಿಂದ ಸಹಾಯ ಪಡೆಯಬಹುದು, ನೀವು ಒಂದು ಕಂಪ್ಲೇಂಟ್ ನೀಡಿ ಬ್ಯಾಂಕ್ ನಿಂದ ಬೇರೆಯವರ ಖಾತೆಯ ಹಣ ಹಿಂಪಡೆಯಲು ಸಾಧ್ಯವಿದೆ.
ಇನ್ನು ಬ್ಯಾಂಕು ಒಂದು ವೇಳೆ ತಕ್ಷಣಕ್ಕೆ ನಿಮಗೆ ಸ್ಪಂದಿಸದೆ ಇದ್ದರೆ, ಆರ್ಬಿಐ ನ https://m.rbi.org.in//Scripts/bs_viewcontent.aspx?Id=159 ಈ ವೆಬ್ ಸೈಟ್ ನಲ್ಲಿ ದೂರು ದಾಖಲಿಸಿ.
Easy way to get back if PhonePe, Google Pay UPI Payment done by mistake