Business News

ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

LPG Gas Cylinder Subsidy : ದುಬಾರಿ ದುನಿಯಾದಲ್ಲಿ ಯಾವ ಒಂದು ವಸ್ತುವಿನ ಬೆಲೆ ಕಡಿಮೆ ಆದರೂ ಕೂಡ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ತೈಲ ಕಂಪನಿಗಳ ಬೆಲೆ (price decreased) ಯನ್ನು ಇಳಿಸಿದರೆ ಅಥವಾ ನಾವು ಬಳಸುವ ಗ್ಯಾಸ್ ಸಿಲಿಂಡರ್ (gas cylinder) ಬೆಲೆ ಇಳಿಕೆ ಆದರೆ ಜನರಿಗೆ ನಿಜಕ್ಕೂ ಹೆಚ್ಚು ಸಮಾಧಾನ ಸಿಗುತ್ತದೆ.

ಹೀಗಾಗಿ ಕಳೆದ ವರ್ಷ ಗ್ಯಾಸ್ ಸಿಲೆಂಡರ್ ಮೇಲೆ ಸಬ್ಸಿಡಿ (gas cylinder subsidy) ಯನ್ನು ಸರ್ಕಾರ ಘೋಷಣೆ ಮಾಡಿದೆ. ಸಾಮಾನ್ಯ ಎಲ್ಪಿಸಿ ಸಿಲೆಂಡರ್ ಗ್ಯಾಸ್ (LPG gas cylinder) ಮೇಲೆ ಇನ್ನೂರು ರೂಪಾಯಿಗಳ ಸಬ್ಸಿಡಿ ಸರ್ಕಾರದಿಂದ ಸಿಗುತ್ತದೆ. ಹಾಗೂ ಉಜ್ವಲ ಯೋಜನೆ ಅಡಿ (pradhanmantri Ujjwala Yojana) ಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ (free gas connection) ಪಡೆದುಕೊಂಡ ಫಲಾನುಭವಿಗಳಿಗೆ 300 ರೂಪಾಯಿಗಳ ಸಬ್ಸಿಡಿ ಸಿಗುತ್ತದೆ.

Big update from the center for LPG gas cylinder users

ಚಿನ್ನ ಖರೀದಿಗೂ ಬಂತು ಹೊಸ ರೂಲ್ಸ್! ಆದಾಯ ತೆರಿಗೆಯ ಹೊಸ ನಿಯಮ

ಗ್ಯಾಸ್ ಸಿಲಿಂಡರ್ ಸಬ್ಸಿಡಿ ಫಲಾನುಭವಿಗಳ ಪಟ್ಟಿ ಬಿಡುಗಡೆ!

ಪ್ರತಿ ತಿಂಗಳು ಗೃಹ ಬಳಕೆಯ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಯಾರು ಪಡೆದುಕೊಂಡಿದ್ದಾರೋ ಆ ಫಲಾನುಭವಿಗಳ ಲಿಸ್ಟ್ ಅನ್ನು ಸರ್ಕಾರ ಬಿಡುಗಡೆ ಮಾಡುತ್ತಿದೆ. ಇಂದು ಅಕ್ರಮವಾಗಿ ಉಚಿತ ಗ್ಯಾಸ್ ಪಡೆದುಕೊಳ್ಳಲು ಪ್ರಯತ್ನಿಸಿದ ಹಲವರು ಇಂದು ರೇಷನ್ ಕಾರ್ಡ್ ರದ್ದತಿಯಿಂದಾಗಿ ಈ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನೀವು ನಿಮಗೆ ಸಬ್ಸಿಡಿ ಮಂಜೂರಾಗಿದೆಯೋ ಇಲ್ಲವೂ ಎನ್ನುವುದನ್ನು ಆನ್ಲೈನ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು..

ಪರ್ಸನಲ್ ಲೋನ್ ಬೇಕಿದ್ದರೆ ಈ ತಿಂಗಳೇ ತೆಗೆದುಕೊಳ್ಳಿ, ಫೆಬ್ರವರಿಯಿಂದ ಕಷ್ಟ

ಆನ್ಲೈನ್ ನಲ್ಲಿ ಚೆಕ್ ಮಾಡಿ! (Check online)

LPG Gas Cylinderಗ್ಯಾಸ್ ಸಿಲೆಂಡರ್ ಸಬ್ಸಿಡಿ ಪಡೆಯಲು ಅರ್ಹ ಫಲಾನುಭವಿಗಳ ಲಿಸ್ಟ್ ಬಿಡುಗಡೆ ಮಾಡಲಾಗಿದ್ದು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ mylpg.in ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಅಡಿಯಲ್ಲಿ ಇಂದು ಲಕ್ಷಾಂತರ ಕುಟುಂಬಗಳು ಉಚಿತವಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದುಕೊಂಡಿದ್ದಾರೆ. ಇಂಥವರಿಗೆ ಪ್ರತಿ ವರ್ಷ 12 ಸಿಲಿಂಡರ್ ಖರೀದಿ ಮಾಡಲು ಮೊದಲು 200 ರೂಪಾಯಿಗಳ ಸಬ್ಸಿಡಿ ನೀಡಲಾಗುತ್ತಿತ್ತು ಈಗ ಈ ಸಬ್ಸಿಡಿಯನ್ನು 300 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಹಾಗಾಗಿ ಕೇವಲ 605 ರೂಪಾಯಿಗಳಿಗೆ ಸಿಲಿಂಡರ್ ಪಡೆದುಕೊಳ್ಳುವಂತಾಗಿದೆ.

ಆಧಾರ್ ಕಾರ್ಡ್‌ನಲ್ಲಿ ಫೋಟೋ ಅಪ್ಡೇಟ್ ಮಾಡೋದು ಹೇಗೆ? ಇಲ್ಲಿದೆ ಸರಳ ಹಂತ

ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದುಕೊಳ್ಳಲು ಈಗಲೂ ಕೂಡ ಅವಕಾಶವಿದ್ದು, ಆನ್ಲೈನ್ ಮೂಲಕ ಅಥವಾ ಹತ್ತಿರದ ಗ್ಯಾಸ್ ಏಜೆನ್ಸಿ (Gas agency) ಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ಕೊಟ್ಟು ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಗೆ ಅಪ್ಲೈ ಮಾಡಿ.

https://www.mylpg.in/ ವೆಬ್ಸೈಟ್ ಗೆ ಹೋಗಿ ನೀವು ನಿಮ್ಮ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬಗ್ಗೆ ಮಾಹಿತಿ ಪಡೆಯಬಹುದು. ತೆರೆದಾಗ bharat, HP, Indian ಈ ಮೂರು ಆಯ್ಕೆಗಳು ಕಾಣಿಸುತ್ತವೆ, ನೀವು ಯಾವ ಗ್ಯಾಸ್ ಸಿಲಿಂಡರ್ ಅಡಿಯಲ್ಲಿ ಗ್ಯಾಸ್ ಪಡೆದುಕೊಂಡಿದ್ದೀರಿ ಎಂಬುದನ್ನು ನೋಡಿ ಅದನ್ನು ಆಯ್ಕೆ ಮಾಡಿ.

ಮುಂದಿನ ಹಂತದಲ್ಲಿ Ujjwala beneficiaries ಆಯ್ಕೆ ಕಾಣಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ರಾಜ್ಯ ಜಿಲ್ಲೆ ಮೊದಲಾದ ಮಾಹಿತಿಗಳನ್ನು ನೀಡಿ submit ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ಈ ತಿಂಗಳಿನಲ್ಲಿ ಬಿಡುಗಡೆ ಆದ ಉಚಿತ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಫಲಾನುಭವಿಗಳ ಲಿಸ್ಟ್ ತೋರಿಸುತ್ತದೆ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ, ನಿಮಗೂ ಕೂಡ ಸಬ್ಸಿಡಿ ಹಣ ನಿಮ್ಮ ಖಾತೆಗೆ (Bank Account) ಜಮಾ ಆಗುತ್ತದೆ.

ಚಿನ್ನದ ಬೆಲೆ ಧಿಡೀರ್ ಇಳಿಕೆ, ಬೆಳ್ಳಿ ಬೆಲೆಯೂ ಕುಸಿತ! ಇಲ್ಲಿದೆ ಚಿನ್ನ ಬೆಳ್ಳಿ ದರ ಡೀಟೇಲ್ಸ್

Gas Cylinder Subsidy List Released, Check your name

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories