Business News

ಫೋನ್ ಪೇ ಮೂಲಕವೇ ಪಡೆಯಿರಿ ಲೋನ್; ನಿಮಗೂ ಸಿಗುತ್ತಾ ಚೆಕ್ ಮಾಡಿ

PhonePe Loan : ಕೇಂದ್ರ ಸರ್ಕಾರ (Central government) ಕಪ್ಪು ಹಣದ ವಂಚನೆ ತಡೆಗಟ್ಟುವ ಸಲುವಾಗಿ ಕ್ಯಾಶ್ ಲೆಸ್ ವ್ಯವಹಾರ (cashless transaction) ವನ್ನು ಹೆಚ್ಚು ಪ್ರೋತ್ಸಾಹಿಸುತ್ತಿದೆ. ಇದಕ್ಕೆ ಜನರು ಕೂಡ ಇಂದು ಒಗ್ಗಿಕೊಂಡಿದ್ದಾರೆ. ಹಾಗಾಗಿ ನಾವು ನಮ್ಮ ಕೈಯಲ್ಲಿ ಹಣ ಇಲ್ಲದೆ ಇದ್ದರೂ ಯುಪಿಐ (UPI) ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತೇವೆ.

ಯಾವುದೇ ರೀತಿಯ ಪೇಮೆಂಟ್ (Payment) ಮಾಡಲು ಯುಪಿಐ ಬಹಳ ಉತ್ತಮವಾಗಿರುವ ಸಾಧನವಾಗಿದ್ದು ಯುಪಿಐ ಅಡಿಯಲ್ಲಿ ಕ್ಷಣಮಾತ್ರದಲ್ಲಿ ಒಬ್ಬರ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಿದೆ.

PhonePe users Can Get a loan of up to 1 lakh in just 5 minutes

ತಪ್ಪಾಗಿ PhonePe, Google Pay ಮಾಡಿದ್ರೆ ಹಣ ವಾಪಸ್ ಪಡೆಯೋ ಸುಲಭ ವಿಧಾನ

ಇನ್ನು ಈ ರೀತಿ ಹಣ ಪಾವತಿ ಮಾಡಲು ಬೇರೆ ಬೇರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ (Third party application) ಗಳನ್ನು ಬಳಸುತ್ತೇವೆ. ಅವುಗಳಲ್ಲಿ ಮುಖ್ಯವಾಗಿರುವ ಹಾಗೂ ಜನಪ್ರಿಯವಾಗಿರುವ ಪೇಮೆಂಟ್ ಅಪ್ಲಿಕೇಶನ್ ಫೋನ್ ಪೇ!

ಫೋನ್ ಪೇ, ಪೇಮೆಂಟ್ ಅಪ್ಲಿಕೇಶನ್! (PhonePe payment application)

ಹಣ ಪಾವತಿ ಮಾಡಲು ಬಿಲ್ ಪಾವತಿ ಮಾಡಲು ಹೀಗೆ ಬೇರೆ ಬೇರೆ ಕಾರಣಕ್ಕೆ ಫೋನ್ ಪೇ ಅಪ್ಲಿಕೇಶನ್ ಬಳಸಬಹುದು. ಫೋನ್ ಪೇ ದೇಶಾದ್ಯಂತ ಸುಮಾರು 50 ಕೋಟಿಗೂ ಅಧಿಕ ಬಳಕೆದಾರರನ್ನು, 3.0.7 ಕೋಟಿ ಗ್ರಾಹಕರನ್ನು ಹೊಂದಿದೆ.

ಈಗಾಗಲೇ ಗೂಗಲ್ ಪೇ (Google pay) ಅಪ್ಲಿಕೇಶನ್ ನಲ್ಲಿ ಸುಲಭವಾಗಿ ಸಾಲ ಸೌಲಭ್ಯ (loan facility) ಪಡೆಯಬಹುದಾಗಿದೆ. ಅದರಂತೆ ಈಗ ಫೋನ್ ಪೇ ವಿಶೇಷವಾಗಿ ಕ್ರೆಡಿಟ್ ಲೈನ್ (Credit line) ಪರಿಚಯಿಸಿದ್ದು, ಗ್ರಾಹಕರಿಗೆ ಕ್ಷಣಮಾತ್ರದಲ್ಲಿ ಸಾಲ ಸೌಲಭ್ಯ (Loan) ಒದಗಿಸಲು ಅಗತ್ಯ ಇರುವ ಸಾಧ್ಯತೆಗಳನ್ನು ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.

ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

PhonePe instant loanಫೋನ್ ಪೇ ಮೂಲಕವೇ ಮುಂದೆ ಸಾಲ ಪಡೆದುಕೊಳ್ಳಬಹುದು!

ಹೌದು, ಫೋನ್ ಪೇ ಇಂದು ಕೇವಲ ಪೇಮೆಂಟ್ ಅಪ್ಲಿಕೇಶನ್ ಆಗಿ ಉಳಿದಿಲ್ಲ. ಕ್ರೆಡಿಟ್ ಆಯ್ಕೆಯ ಮೂಲಕ ಸಾಲವನ್ನು ಪಡೆಯಬಹುದು. ಇದಕ್ಕಾಗಿ ಫೋನ್ ಬ್ಯಾಂಕ್ ಹಾಗೂ ಬ್ಯಾಂಕಿಂಗ್ ಅಲ್ಲದ ಎನ್ ಬಿ ಎಫ್ ಸಿ (NBFC) ಗಳ ಜೊತೆಗೆ ಚರ್ಚೆ ನಡೆಸಿದೆ ಎನ್ನಲಾಗಿದೆ.

ಫೋನ್ ಪೇ ಅಪ್ಲಿಕೇಶನ್ ನಲ್ಲಿ ನೀವು ಸಾಲ ಪಡೆದುಕೊಳ್ಳಲು ಫೋನ್ ನೇರವಾಗಿ ಸಾಲ ಸೌಲಭ್ಯ ನೀಡುವುದಿಲ್ಲ ಬದಲಾಗಿ ಬೇರೆ ಬೇರೆ ಬ್ಯಾಂಕ್ಗಳ (Banks) ಜೊತೆಗೆ ಟೈ ಅಪ್ ಮಾಡಿಕೊಂಡು ಬ್ಯಾಂಕುಗಳ ಮೂಲಕ ಸಾಲ ಒದಗಿಸುತ್ತದೆ.

ಚಿನ್ನ ಖರೀದಿಗೂ ಬಂತು ಹೊಸ ರೂಲ್ಸ್! ಆದಾಯ ತೆರಿಗೆಯ ಹೊಸ ನಿಯಮ

ಫೋನ್ ಪೇ ಸಾಲ ಸೌಲಭ್ಯ ಯಾರಿಗೆ ಸಿಗುತ್ತೆ ಗೊತ್ತಾ? (Who can get phonePe loan)

ಯಾವುದೇ ವ್ಯಕ್ತಿಯ ಸಿಬಿಲ್ ಸ್ಕೋರ್ (CIBIL score) ಉತ್ತಮವಾಗಿದ್ದರೆ, ಅಂದರೆ 750ಕ್ಕಿಂತ ಹೆಚ್ಚಿಗೆ ಇದ್ದರೆ ಸುಲಭವಾಗಿ ಫೋನ್ ಪೇ ಮೂಲಕ ಸಾಲ ಪಡೆಯಬಹುದು. ಫೋನ್ ಪೇ ಇನ್ನು ಕೇವಲ ಆರು ತಿಂಗಳ ಒಳಗೆ ಸಾಲ ನೀಡುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಿದೆ.

ಫೋನ್ ಪೇಯಲ್ಲಿ ಸಾಲ ಸೌಲಭ್ಯ ಮಾತ್ರವಲ್ಲದೆ ಇನ್ನೂ ಹಲವು ಪ್ರಯೋಜನಗಳನ್ನು ಮುಂದಿನ ದಿನಗಳಲ್ಲಿ ಗ್ರಾಹಕರು ಪಡೆಯಬಹುದು. ಇನ್ನು ಫೋನ್ ಪೇ ಮೂಲಕ ಎಷ್ಟು ಸಾಲ ಸೌಲಭ್ಯ ಪಡೆಯಬಹುದು ಎನ್ನುವುದನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು.

ಪರ್ಸನಲ್ ಲೋನ್ ಬೇಕಿದ್ದರೆ ಈ ತಿಂಗಳೇ ತೆಗೆದುಕೊಳ್ಳಿ, ಫೆಬ್ರವರಿಯಿಂದ ಕಷ್ಟ

Get Loan by PhonePe, Check you will Get or Not

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories