ಹೈನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಾಣಿಕೆಗೆ ಸಿಗುತ್ತೆ 3 ಲಕ್ಷದ ತನಕ ಸಾಲ! ಅರ್ಜಿ ಸಲ್ಲಿಸಿ

ಇದೊಂದು ಕಾರ್ಡ್ (Card) ನಿಮ್ಮ ಬಳಿ ಇದ್ದರೆ ಹೈನುಗಾರಿಕೆ (dairy farming) ಮೀನುಗಾರಿಕೆ ಮೊದಲಾದ ಕಸುಬುಗಳಿಗೆ ಮೂರು ಲಕ್ಷದವರೆಗೆ ಸಿಗುತ್ತೆ ಸಾಲ

ರೈತರು ಕೇವಲ ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯುವುದನ್ನು ಮಾತ್ರ ನಂಬಿಕೊಂಡು ಇದ್ರೆ, ಜೀವನ ಸಾಗಿಸುವುದು ಕಷ್ಟ. ಹಾಗಾಗಿ ಬೆಳೆ ಬೆಳೆಯುವ ಸಮಯದಲ್ಲಿ ಬೆಳೆ ಬೆಳೆದು ಫಸಲಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಕೆಲವು ಉಪಕಸುಬುಗಳನ್ನು ಮಾಡಿಕೊಳ್ಳಬಹುದು. ಇದರಿಂದ ವಾರ್ಷಿಕ ಆದಾಯವು (yearly income) ಕೂಡ ಹೆಚ್ಚಾಗುತ್ತದೆ. ರೈತರು ನೆಮ್ಮದಿಯಿಂದ ಜೀವನ ಸಾಗಿಸಲು ಕೂಡ ಸಾಧ್ಯವಾಗುತ್ತದೆ.

ರೈತರು ಕೆಲವು ಉಪಕಸುಬು ಆಯ್ದುಕೊಂಡರೆ ಅಂತಹ ಆಯ್ದ ಕಸಬುಗಳಿಗೆ ಸರ್ಕಾರದಿಂದ ಸಾಲ ಸೌಲಭ್ಯ (loan facility) ಕೂಡ ಸಿಗುತ್ತದೆ, ಅತಿ ಕಡಿಮೆ ಬಡ್ಡಿ (less interest) ದರದಲ್ಲಿ ಸುಮಾರು ಮೂರು ಲಕ್ಷ ರೂಪಾಯಿಗಳವರೆಗೆ ಸಾಲ (Loan) ಪಡೆದುಕೊಂಡು ಹೈನುಗಾರಿಕೆ, ಮೀನುಗಾರಿಕೆ (fishing), ಪಶು ಸಂಗೋಪನೆ ಮೊದಲಾದ ಉಪಕಸಬುಗಳನ್ನು ಮಾಡಬಹುದು.

ಫೋನ್ ಪೇ ಮೂಲಕವೇ ಪಡೆಯಿರಿ ಲೋನ್; ನಿಮಗೂ ಸಿಗುತ್ತಾ ಚೆಕ್ ಮಾಡಿ

ಹೈನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಾಣಿಕೆಗೆ ಸಿಗುತ್ತೆ 3 ಲಕ್ಷದ ತನಕ ಸಾಲ! ಅರ್ಜಿ ಸಲ್ಲಿಸಿ - Kannada News

ಪಶು ಕಿಸಾನ್ ಕ್ರೆಡಿಟ್ ಕಾರ್ಡ್! (Pashu Kisan credit card -KCC)

ಇದನ್ನು ವಿಶೇಷವಾಗಿ ರೈತರಿಗಾಗಿಯೇ ಸರ್ಕಾರ ಬಿಡುಗಡೆ ಮಾಡಿದ್ದು ಈ ಕಾರ್ಡ್ ಇರುವ ರೈತರು (farmers ) ಸರ್ಕಾರದಿಂದ ಸುಲಭವಾಗಿ ಸಾಲ ಸೌಲಭ್ಯವನ್ನು ಅತಿ ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ.

ಹೈನುಗಾರಿಕೆ ಮಾತ್ರವಲ್ಲದೆ ಮೀನುಗಾರಿಕೆ ಹಾಗೂ ಪಶು ಸಂಗೋಪನೆಯನ್ನು ಕೂಡ ರೈತರ ಕೃಷಿಗೆ ಪೂರಕ ಎಂದು ಗುರುತಿಸಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಈ ಕಸುಬುಗಳಿಗೂ ವಿಸ್ತರಣೆ ಮಾಡಲಾಗಿದೆ.

2019- 20ನೇ ಸಾಲಿನಲ್ಲಿ ದೇಶದಲ್ಲಿ ವಾಸಿಸುವ ರೈತರ ಹಿತ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯ ಅಡಿಯಲ್ಲಿ ಹಸು ಸಾಕಾಣಿಕೆ, ಎಮ್ಮೆ ಸಾಕಾಣಿಕೆ, ಕುರಿ ಕೋಳಿ ಸಾಕಾಣಿಕೆ, ಮೀನುಗಾರಿಕೆ ಹೀಗೆ ಬೇರೆ ಬೇರೆ ರೀತಿಯ ಕಸುಬುಗಳಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ರೆ ಯಾವುದೇ ಗ್ಯಾರಂಟಿ ಇಲ್ಲದೆ ರೈತರು ಪಶು ಸಂಗೋಪನೆಗೆ ಸಾಲ ಸೌಲಭ್ಯ ಪಡೆಯಬಹುದು.

ತಪ್ಪಾಗಿ PhonePe, Google Pay ಮಾಡಿದ್ರೆ ಹಣ ವಾಪಸ್ ಪಡೆಯೋ ಸುಲಭ ವಿಧಾನ

Kisan credit card schemeಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಸಾಲ!

ಕೇಂದ್ರ ಸರ್ಕಾರ (central government), ಹರಿಯಾಣ (Haryana) ರಾಜ್ಯದಲ್ಲಿ ಮೊದಲ ಬಾರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಆರಂಭಿಸಿತು ಇದು ಈಗ ಪ್ರತಿಯೊಂದು ರಾಜ್ಯಕ್ಕೂ ಕೂಡ ವಿಸ್ತರಿಸಲಾಗಿದೆ.

ರೈತರು ಎರಡರಿಂದ ಮೂರು ಲಕ್ಷ ರೂಪಾಯಿಗಳನ್ನು ಈ ಕಾರ್ಡ್ ಅಡಿಯಲ್ಲಿ ಸಾಲವಾಗಿ ಪಡೆಯಬಹುದು. ಕಾರ್ಡ್ ಯೋಜನೆಯ ಅಡಿಯಲ್ಲಿ ಅರ್ಜಿದಾರರು 4% ದರದಲ್ಲಿ ಸಾಲ ಪಡೆಯಬಹುದು 3% ನಷ್ಟು ಸರ್ಕಾರ ಬ್ಯಾಂಕರ್ ಗಳಿಗೆ ಬಡ್ಡಿ ಒದಗಿಸುತ್ತದೆ.

ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

ಪಶುಸಂಗೋಪನೆಗೆ ಸಿಗುವ ಸಾಲದ ಮೊತ್ತ!

ಎಮ್ಮೆ ಸಾಕಾಣಿಕೆ – 60,249 ರೂಪಾಯಿಗಳು

ಹಸು ಸಾಕಾಣಿಕೆ – 40,783 ರೂಪಾಯಿಗಳು

ಮೊಟ್ಟೆ ಇಡುವ ಕೋಳಿಗೆ ಪ್ರತಿ ಕೋಳಿಗೆ 720 ರೂಪಾಯಿಗಳು

ಕುರಿ ಅಥವಾ ಮೇಕೆ ಸಾಕಾಣಿಕೆ – 4063 ರೂಪಾಯಿಗಳು

ಪರ್ಸನಲ್ ಲೋನ್ ಬೇಕಿದ್ದರೆ ಈ ತಿಂಗಳೇ ತೆಗೆದುಕೊಳ್ಳಿ, ಫೆಬ್ರವರಿಯಿಂದ ಕಷ್ಟ

1.6 ಲಕ್ಷ ರೂಪಾಯಿಗಳವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಅಧಿಕೃತ ವೆಬ್ಸೈಟ್ಗೆ ಹೋಗಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ ಅಥವಾ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಅಗತ್ಯ ದಾಖಲೆಗಳನ್ನು ನೀಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

Loans up to 3 lakhs for dairy farming, sheep-goat-chicken farming

Follow us On

FaceBook Google News