ಯಾವುದೇ ಗ್ಯಾರಂಟಿ ಇಲ್ಲದೆ ಪಡೆಯಿರಿ 3 ಲಕ್ಷ ರೂಪಾಯಿವರೆಗೆ ಸಾಲ; ಅರ್ಜಿ ಸಲ್ಲಿಸಿ

Story Highlights

Loan Scheme : ಮೊದಲ ಹಂತದಲ್ಲಿ 1 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ ಅದನ್ನು ಮರುಪಾವತಿ (Loan Re Payment) ಮಾಡಿದ ತಕ್ಷಣ ಮತ್ತೆ 2 ಲಕ್ಷ ಸಿಗುತ್ತದೆ

Loan Scheme : ಅಗಸ್ಟ್ 17, 2023 ಕೇಂದ್ರ ಸರ್ಕಾರ (Central government) ಒಂದು ಅತ್ಯುತ್ತಮ ಯೋಜನೆಗೆ ಚಾಲನೆ ನೀಡಿದೆ. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರ ನೇತೃತ್ವದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದ್ದು ಸಾಕಷ್ಟು ಜನ ವ್ಯಾಪಾರಸ್ಥರಿಗೆ ಇದರಿಂದ ಹೆಚ್ಚು ಪ್ರಯೋಜನ ಸಿಗಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಸಾಂಪ್ರದಾಯಕ ಕುಲಕಸುಬು ಅಥವಾ ಪಾರಂಪರಿಕವಾಗಿ ಮಾಡಿಕೊಂಡು ಬಂದಿರುವ ಕಸುಬು ಹೆಚ್ಚು ಅಭಿವೃದ್ಧಿ ಹೊಂದಲು ಹಾಗೂ ಇಂತಹ ಕಸುಬುಗಳು ಉಳಿಸಿಕೊಳ್ಳಲು, ಬಹಳ ಪ್ರಮುಖವಾಗಿರುವ ಯೋಜನೆಯನ್ನು ಘೋಷಿಸಿದ್ದಾರೆ. ಅದುವೇ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ.

ಹೈನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಾಣಿಕೆಗೆ ಸಿಗುತ್ತೆ 3 ಲಕ್ಷದ ತನಕ ಸಾಲ! ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ! (PM Vishwakarma Yojana)

ಈ ಯೋಜನೆಯ ಅಡಿಯಲ್ಲಿ ಕೌಶಲ್ಯ ತರಬೇತಿಯ (training) ಜೊತೆಗೆ 3 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ (loan facility) ಪಡೆಯಬಹುದಾಗಿದೆ. ನರೇಂದ್ರ ಮೋದಿಜಿ ಅವರ ಜನ್ಮ ದಿನದಂದು ಈ ಯೋಜನೆಗೆ ಚಾಲನೆ ನೀಡಲಾಯಿತು. ಮೂರು ಲಕ್ಷ ರೂಪಾಯಿಗಳವರೆಗೆ ವ್ಯಾಪಾರ (business Loan) ಮಾಡಲು ಹಣಕಾಸಿನ ಸಹಾಯವನ್ನು ಸರ್ಕಾರದಿಂದ ಪಡೆಯಬಹುದು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಯೋಜನಗಳು!

PMVY ಯೋಜನೆಗೆ 2024ರಲ್ಲಿ ಹೆಚ್ಚು ಯುವಕ ಯುವತಿಯರಿಂದ ನೋಂದಣಿ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಾಕಷ್ಟು ವೃತ್ತಿಪರ ಉದ್ಯಮ ಮಾಡುವವರಿಗೆ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ, ತರಬೇತಿಯ ಸಂದರ್ಭದಲ್ಲಿ ಭತ್ಯೆ ಕೂಡ ನೀಡಲಾಗುವುದು.

ಫೋನ್ ಪೇ ಮೂಲಕವೇ ಪಡೆಯಿರಿ ಲೋನ್; ನಿಮಗೂ ಸಿಗುತ್ತಾ ಚೆಕ್ ಮಾಡಿ

Loan Scheme ಮಾತ್ರವಲ್ಲದೇ ತರಬೇತಿ ಅವಧಿ ಮುಗಿದ ನಂತರ 15,000ಗಳನ್ನು ಟೂಲ್ ಕಿಟ್ (tool kit) ಖರೀದಿ ಮಾಡಲು ನೀಡಲಾಗುವುದು. ಇನ್ನು ಈ ಯೋಜನೆಯ ಪ್ರಮುಖ ಗುರಿ ಹಾಗೂ ಪ್ರಯೋಜನ ಏನೆಂದರೆ, ಯಾವುದೇ ವ್ಯಾಪಾರ ಮಾಡುವ ಜನರು ತಮ್ಮ ಉತ್ಪನ್ನದ ಬ್ರಾಂಡಿಂಗ್, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಈ ಎಲ್ಲದಕ್ಕೂ ಕೂಡ ಕೇಂದ್ರ ಸರ್ಕಾರವೇ ಸಹಾಯ ಮಾಡಲಿದೆ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಮಾಣ ಪತ್ರವನ್ನು ಕೂಡ ಫಲಾನುಭವಿಗಳಿಗೆ ನೀಡಲಾಗುವುದು.

ತಪ್ಪಾಗಿ PhonePe, Google Pay ಮಾಡಿದ್ರೆ ಹಣ ವಾಪಸ್ ಪಡೆಯೋ ಸುಲಭ ವಿಧಾನ

ಯಾರು ಈ ಯೋಜನೆಯ ಪ್ರಯೋಜನ ಪಡೆಯಬಹುದು?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಕಮ್ಮಾರರು, ಚಮ್ಮಾರರು, ಶಿಲ್ಪ ಕಲೆ ಕೆಲಸ ಮಾಡುವವರು, ಮೀನು ಹಿಡಿಯುವವರು, ಬೋಟ್ ನಿರ್ಮಾಣ ಮಾಡುವವರು, ಅಗಸ, ಚಿನ್ನದ ಕೆಲಸ ಮಾಡುವವರು ಹೀಗೆ ಹಲವಾರು ಕುಲಕಸುಬು ಮುಂದುವರೆಸಿಕೊಂಡು ಬಂದ ಜನರು ಅರ್ಜಿ ಸಲ್ಲಿಸಬಹುದು.

ಇನ್ನು ಈ ಯೋಜನೆಯ ಅಡಿಯಲ್ಲಿ ಮೂರು ಲಕ್ಷ ರೂಪಾಯಿಗಳನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ ಅದನ್ನು ಮರುಪಾವತಿ (Loan Re Payment) ಮಾಡಿದ ತಕ್ಷಣ ಮತ್ತೆ ಎರಡು ಲಕ್ಷ ರೂಪಾಯಿಗಳನ್ನು ಕೊಡಲಾಗುತ್ತದೆ.

ಈ ಸಾಲಕ್ಕೆ ಮೀಸಲಾದ ಬಡ್ಡಿದರ (rate of interest) ಕೇವಲ ಐದು% ಮಾತ್ರ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಆನ್ಲೈನ್ ನಲ್ಲಿ ಅವಕಾಶವಿದೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಪ್ರತಿ ಪಾಸ್ಪೋರ್ಟ್ ಅಳತೆಯ ಫೋಟೋ, ವ್ಯಾಪಾರಸ್ಥರು ಎನ್ನುವುದಕ್ಕೆ ದೃಢೀಕರಣ ಪ್ರಮಾಣ ಪತ್ರ ಒದಗಿಸಬೇಕು.

ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

Get loan upto 3 lakh rupees without any guarantee

Related Stories