Business News

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಕೊಡುಗೆ! ಹೊಸ ಫಿಕ್ಸೆಡ್ ಡೆಪಾಸಿಟ್ ಯೋಜನೆ ಶುರು

SBI Fixed Deposit : ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಗ್ರಾಹಕರಿಗೆ ಅನುಕೂಲವಾಗುವಂತಹ ಬೇರೆ ಬೇರೆ ಯೋಜನೆಗಳನ್ನು ಪರಿಚಯಿಸುವುದರಿಂದ, ಇಂದು ದೇಶದ ಹೆಸರಾಂತ ಬ್ಯಾಂಕ್ಗಳಲ್ಲಿ ಮುಂಚೂಣಿಯಲ್ಲಿ ಇದೆ. ಈ ಬ್ಯಾಂಕ್ (Bank) ನಲ್ಲಿ ಖಾತೆ ಹೊಂದಿರುವವರಿಗೆ ಹೊಸ ವರ್ಷಕ್ಕೆ ವಿಶೇಷ ಕೊಡುಗೆ ಒಂದನ್ನು ಎಸ್ ಬಿ ಐ ಘೋಷಿಸಿದೆ.

ಫೋನ್ ಪೇ ಮೂಲಕವೇ ಪಡೆಯಿರಿ ಲೋನ್; ನಿಮಗೂ ಸಿಗುತ್ತಾ ಚೆಕ್ ಮಾಡಿ

ಎಸ್‌ಬಿಐ ಬ್ಯಾಂಕ್ ಅಕೌಂಟ್ ಇರುವ ಗ್ರಾಹಕರಿಗೆ ಗುಡ್ ನ್ಯೂಸ್, ವಿಶೇಷ FD ಯೋಜನೆ ಗಡುವು ವಿಸ್ತರಣೆ

ಎಸ್ ಬಿ ಐ ನ Green Rupee Term Deposit (SBI SGRTD)

ಎಸ್ ಬಿ ಐ ಈವರೆಗೆ ಉತ್ತಮ ಎಫ್ ಡಿ ಯೋಜನೆ (SBI FD schemes) ಗಳನ್ನು ಪರಿಚಯಿಸಿದೆ. ಹೆಚ್ಚು ಬಡ್ಡಿ ದರವನ್ನು ಒದಗಿಸುವ ಬ್ಯಾಂಕ್ ಇದಾಗಿದ್ದು, ಇಲ್ಲಿ ಹೂಡಿಕೆ (investment) ಮಾಡಿದರೆ ಗ್ಯಾರಂಟಿ ಆದಾಯವು ಕೂಡ ಸಿಗುತ್ತದೆ ಎನ್ನಬಹುದು. ವಿಶೇಷ ಠೇವಣಿ ಯೋಜನೆ ಆಗಿರುವ, ಗ್ರೀನ್ ರೂಪಿ ಟರ್ಮ್ ಡೆಪಾಸಿಟ್ (green rupee term deposit) , ಹೆಚ್ಚು ಲಾಭದಾಯಕವಾದ ಠೇವಣಿ ಯೋಜನೆ ಆಗಿದೆ. ಪರಿಸರ ಸ್ನೇಹಿ ಅಥವಾ ಈ ಪ್ರಾಜೆಕ್ಟ್ ಮಾಡಲು ಬಯಸುವ ಯುವಕ ಯುವತಿಯರಿಗೆ ಯೋಜನೆ ಹೆಚ್ಚು ಸಹಾಯಕ ಅಗಲಿದೆ.

ಈ ಯೋಜನೆಯಲ್ಲಿ ಕೇವಲ ₹600 ರೂಪಾಯಿಗೆ ಸಿಗುತ್ತೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್

Green Rupee Term Deposit ನಲ್ಲಿ ಹೂಡಿಕೆ ಮಾಡುವುದು ಹೇಗೆ?

SGRTD ಮೂರು ಹೂಡಿಕೆ ಆಯ್ಕೆಗಳನ್ನು ನೀಡಲಾಗಿದೆ. ಅವುಗಳೆಂದರೆ, 36 ತಿಂಗಳುಗಳು (1,111 ದಿನಗಳು), 48 ತಿಂಗಳುಗಳು (1,777 ದಿನಗಳು) ಹಾಗೂ 72 ತಿಂಗಳುಗಳು (2,222 ದಿನಗಳು).

State Bank Of Indiaಹೂಡಿಕೆಗೆ ಸಿಗುವ ಬಡ್ಡಿ ದರ! (Rate of interest)

Green Rupee Term Deposit ನಲ್ಲಿ ಸಿಗುವ ಬಡ್ಡಿದರ ನೋಡುವುದಾದರೆ, 5.90% ನಿಂದ 7.40% ವರೆಗೆ. ಹಿರಿಯ ನಾಗರಿಕರಿಗೆ ಗರಿಷ್ಠ ಮೊತ್ತದ ಬಡ್ಡಿ ನೀಡಲಾಗುವುದು. ಇದರ ಯೋಜನೆಗಳಿಗೆ ಹೋಲಿಸಿದರೆ ಈ ಹೂಡಿಕೆ ಯೋಜನೆಯ ಬಡ್ಡಿದರ ತುಸು ಕಡಿಮೆ ಎನ್ನಬಹುದು.

36 ತಿಂಗಳು ಹಾಗೂ 48 ತಿಂಗಳುಗಳ ಹೂಡಿಕೆಗೆ 6.65% ನಷ್ಟು ಬಡ್ಡಿ ಸಿಗುತ್ತದೆ. 72 ತಿಂಗಳುಗಳು ಹೂಡಿಕೆಯ ಮೇಲೆ 6.40% ಬಡ್ಡಿ ಪಡೆಯುತ್ತೀರಿ. ಹಿರಿಯ ನಾಗರಿಕರಿಗೆ ಕ್ರಮವಾಗಿ 7.15% ಹಾಗೂ 7.40% ಬಡ್ಡಿದರ ನೀಡಲಾಗುವುದು.

ಯಾವುದೇ ಗ್ಯಾರಂಟಿ ಇಲ್ಲದೆ ಪಡೆಯಿರಿ 3 ಲಕ್ಷ ರೂಪಾಯಿವರೆಗೆ ಸಾಲ; ಅರ್ಜಿ ಸಲ್ಲಿಸಿ

ಎಸ್ ಬಿ ಐ ನ ಹೊಸ ಯೋಜನೆ ಇದಾಗಿದ್ದು, ಇದರಲ್ಲಿ ಹೂಡಿಕೆ ಮಾಡಲು ಗ್ರಾಹಕರನ್ನು ಕೇಳಿಕೊಳ್ಳುತ್ತಿದೆ. ಈ ಯೋಜನೆಯ ಇತರ ಬೆನಿಫಿಟ್ ಬಗ್ಗೆ ತಿಳಿದುಕೊಳ್ಳಲು ನೀವು ನೇರವಾಗಿ ಎಸ್ ಬಿ ಐ ಶಾಖೆಗೆ ಭೇಟಿ ನೀಡಬಹುದು ಅಥವಾ ಆನ್ಲೈನ್ ನಲ್ಲಿ ಎಸ್‌ಬಿಐ ಅಧಿಕೃತ ವೆಬ್ಸೈಟ್ ಮೂಲಕ ತಿಳಿಯಬಹುದು.

New State Bank Of India fixed deposit scheme launched

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories