ಇನ್ಮುಂದೆ ಈ ಕೆಲಸಕ್ಕೆ ಆಧಾರ್ ಕಾರ್ಡ್ ಅಗತ್ಯವಿಲ್ಲ! ಸರ್ಕಾರ ಅಧಿಕೃತ ಘೋಷಣೆ

Aadhaar Card : ಆಧಾರ್ ಕಾರ್ಡ್ ವಿಚಾರದಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು

Aadhaar Card : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ (UIDAI) ಮೂಲಕ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೂ ಆಧಾರ್ ಕಾರ್ಡ್ (Aadhaar Card) ವಿತರಣೆ ಮಾಡಲಾಗಿದೆ. ಆಧಾರ್ ಕಾರ್ಡ್ ಎನ್ನೋದು ಬಹಳ ಮುಖ್ಯವಾಗಿರುವ ದಾಖಲೆ ಆಗಿದ್ದು, ನಮ್ಮ ಹಣಕಾಸಿನ ವ್ಯವಹಾರಕ್ಕೆ ಹಾಗೂ ಇತರ ವೈಯಕ್ತಿಕ ಕೆಲಸಕ್ಕೆ ಆಧಾರ್ ಕಾರ್ಡ್ ಬಳಕೆ ಮಾಡಲಾಗುತ್ತದೆ.

ಶಾಲಾ ಕಾಲೇಜುಗಳಿಗೆ ಮಕ್ಕಳ ಹೆಸರು ಸೇರಿಸುವುದರಿಂದ ಹಿಡಿದು ವಿಮಾನದಲ್ಲಿ ಹಾರಾಟ ಮಾಡುವುದಕ್ಕೂ ಕೂಡ ನಾವು ಆಧಾರ್ ಕಾರ್ಡ್ ಅನ್ನು ಪ್ರಮುಖ ಗುರುತಿನ ಚೀಟಿ (identity card) ಆಗಿ ಕೊಡಬೇಕಾಗುತ್ತದೆ.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಕೊಡುಗೆ! ಹೊಸ ಫಿಕ್ಸೆಡ್ ಡೆಪಾಸಿಟ್ ಯೋಜನೆ ಶುರು

ಇನ್ಮುಂದೆ ಈ ಕೆಲಸಕ್ಕೆ ಆಧಾರ್ ಕಾರ್ಡ್ ಅಗತ್ಯವಿಲ್ಲ! ಸರ್ಕಾರ ಅಧಿಕೃತ ಘೋಷಣೆ - Kannada News

ಅಷ್ಟೇ ಅಲ್ಲದೆ ಸರ್ಕಾರದ ಕಚೇರಿಗಳಿಂದ ಯಾವುದೇ ಕೆಲಸ ಆಗಬೇಕಿದ್ದರೂ ನೀವು ಆಧಾರ್ ಕಾರ್ಡನ್ನು ದಾಖಲೆಯಾಗಿ ತೋರಿಸಲೇಬೇಕು, ಉದಾಹರಣೆಗೆ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸುವುದು, ಆಸ್ತಿ ನೋಂದಣಿ ಮಾಡಿಸುವುದು, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ವೋಟರ್ ಐಡಿ ಮೊದಲಾದ ಗುರುತಿನ ಚೀಟಿಗಳನ್ನು ಮಾಡಿಸುವುದು ಹೀಗೆ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಪ್ರಮುಖವಾಗಿ ಬೇಕಾಗಿರುವಂತಹ ಗುರುತಿನ ಐಡಿ ಎನ್ನಬಹುದು.

ಆಧಾರ್ ಕಾರ್ಡ್ ಬಳಕೆಯಲ್ಲಿ ಮಹತ್ವದ ಬದಲಾವಣೆ! (Important changes in Aadhar Card usage)

ಆಧಾರ್ ಕಾರ್ಡ್ ವಿಚಾರದಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ನಮ್ಮ ಎಲ್ಲಾ ಕೆಲಸಕ್ಕೂ ಆಧಾರ್ ಕಾರ್ಡ್ ಬೇಕು ಆದರೆ ಇನ್ನು ಮುಂದೆ ಇದೊಂದು ಕೆಲಸಕ್ಕೆ ಆಧಾರ್ ಕಾರ್ಡ್ ಮಾನ್ಯವಲ್ಲ ಎಂದು ಸರ್ಕಾರ ಘೋಷಿಸಿದೆ.

ಈ ಯೋಜನೆಯಲ್ಲಿ ಕೇವಲ ₹600 ರೂಪಾಯಿಗೆ ಸಿಗುತ್ತೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್

Aadhaar CardEPFO ಸುತ್ತೋಲೆ ಹೊರಡಿಸಿದೆ!

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ – EPFO, ಜನ್ಮ ದಿನಾಂಕವನ್ನು ಪರಿಶೀಲಿಸುವ ದಾಖಲೆಗಳ ಲಿಸ್ಟ್ ನಿಂದ ಆಧಾರ್ ಕಾರ್ಡ್ ಅನ್ನು ಅಮಾನ್ಯ ಎಂದು ಘೋಷಿಸಿದೆ. ಅಂದರೆ ಆಧಾರ್ ಕಾರ್ಡನ್ನು ಪ್ರಮುಖ ದಾಖಲೆಯಾಗಿ ಇಲ್ಲಿ ಪರಿಗಣಿಸಲಾಗುತ್ತಿಲ್ಲ. ಇಪಿಎಫ್ಓ ನಲ್ಲಿ ಜನ್ಮ ದಾಖಲೆಗೆ (DOB) ಆಧಾರ್ ಕಾರ್ಡನ್ನು ಪ್ರಮುಖ ದಾಖಲೆಯಾಗಿ ಬಳಸುವಂತಿಲ್ಲ.

ಯು ಐ ಡಿ ಎ ಐ ಪ್ರಕಾರ ಇನ್ನು ಮುಂದೆ ಜನ್ಮ ದಾಖಲೆಗೆ ಆಧಾರ್ ಬದಲು ಬೇರೆ ದಾಖಲೆಗಳನ್ನು ನೀಡಬೇಕಾಗುತ್ತದೆ. ಆಧಾರ್ ವಿಶಿಷ್ಟ ಗುರುತಿನ ಚೀಟಿ ಆಗಿದ್ದರೂ ಕೂಡ, 2016ರ ಆಧಾರ್ ನಿಯಮದ ಪ್ರಕಾರ ಜನ್ಮ ದಿನಾಂಕವನ್ನು ಗುರುತಿಸುವ ಐಡೆಂಟಿ ಕಾರ್ಡ್ ಆಧಾರ್ ಅಲ್ಲ. ಜನ್ಮ ದಿನಾಂಕವನ್ನು ಖಚಿತಪಡಿಸುವ ಮಾನದಂಡಗಳನ್ನು ಆಧಾರ್ ಕಾರ್ಡ್ ಹೊಂದಿಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.

ಯಾವುದೇ ಗ್ಯಾರಂಟಿ ಇಲ್ಲದೆ ಪಡೆಯಿರಿ 3 ಲಕ್ಷ ರೂಪಾಯಿವರೆಗೆ ಸಾಲ; ಅರ್ಜಿ ಸಲ್ಲಿಸಿ

ದೃಢಿಕರಣಕ್ಕೆ ಒಳಪಟ್ಟಿರುವ ವ್ಯಕ್ತಿಯ ಗುರುತನ್ನು ಸೂಚಿಸಲು ಆಧಾರ್ ಬಳಸಬಹುದು ಹೊರತು ಆ ಮೂಲಕ ಅದನ್ನು ಹುಟ್ಟಿದ ದಿನಾಂಕದ ಪುರಾವೆಯಾಗಿ ಬಳಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.

ಹಾಗಾಗಿ ಯುಐಡಿಎಐ ಇನ್ನು ಮುಂದೆ ಇಪಿಎಫ್ಓ, ಜನ್ಮ ದಿನಾಂಕಕ್ಕೆ ಆಧಾರ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ ಬಳಸಬಾರದು ಎಂದು ಒತ್ತಿ ಹೇಳಿದೆ. ಇದಕ್ಕೆ ಇಪಿಎಫ್ಓ ಕೂಡ ಬೆಂಬಲ ಸೂಚಿಸಿದೆ.

Aadhaar card is no longer required for this, Official announcement by Govt

Follow us On

FaceBook Google News

Aadhaar card is no longer required for this, Official announcement by Govt