ನಿಮ್ಮ ಹಳೆಯ ವೋಟರ್ ಐಡಿ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಿ! ಇಲ್ಲಿದೆ ಲಿಂಕ್
ಈ ರೀತಿ ಡಿಜಿಟಲ್ ವೋಟರ್ ಐಡಿ (Digital Voter ID) ಡೌನ್ಲೋಡ್ ಮಾಡಿಕೊಳ್ಳಬಹುದು.
ನಿಮ್ಮ ಹತ್ರ ಇರುವ ವೋಟರ್ ಐಡಿ ಹಳೆಯದಾಗಿದ್ಯಾ ಅಥವಾ ವೋಟರ್ ಐಡಿ ಕಳೆದು ಹೋಗಿದ್ಯಾ? ಹೊಸದಾಗಿರುವ ಡಿಜಿಟಲ್ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಬೇಕಾ? ಹಾಗಿದ್ರೆ ಈ ಕೆಳಗೆ ಕೊಡಲಾಗಿರುವ ಸ್ಟೆಪ್ಸ್ ಅನುಸರಿಸಿ ಸುಲಭವಾಗಿ ವೋಟರ್ ಐಡಿ ಪಡೆದುಕೊಳ್ಳಿ.
ಸ್ನೇಹಿತರೆ, ನಮಗೆಲ್ಲ ತಿಳಿದಿರುವಂತೆ ಈಗ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7 ಈ ಎರಡು ದಿನಾಂಕದಂದು ನಡೆಯಲಿದೆ.
ಮತದಾನ ಮಾಡುವ ಹಕ್ಕು ಪ್ರತಿಯೊಬ್ಬರದ್ದು ಹಾಗಾಗಿ 18 ವರ್ಷ ಮೇಲ್ಪಟ್ಟವರು ನಿಮ್ಮ ವೋಟರ್ ಐಡಿ (voter ID) ಇಟ್ಟುಕೊಂಡು ಈ ಎರಡು ದಿನಗಳಲ್ಲಿ ನಿಮ್ಮ ಕ್ಷೇತ್ರದ ಮತಗಟ್ಟೆಗೆ ಹೋಗಿ ಮತದಾನ ಮಾಡುವುದನ್ನು ಮರೆಯಬೇಡಿ.
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ
ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ ನಿಮ್ಮ ವೋಟರ್ ಐಡಿ!
* ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಅಧಿಕೃತ ವೆಬ್ಸೈಟ್ (NVSP) https://voters.eci.gov.in/ ಗೆ ಭೇಟಿ ನೀಡಿ.
* E – EPIC ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ಈಗ ನಿಮ್ಮ ಯೂಸರ್ ಐಡಿ ಪಾಸ್ವರ್ಡ್ ಹಾಗೂ ಕ್ಯಾಪ್ಚ ಸಂಖ್ಯೆ ನಮೂದಿಸಿ ಲಾಗಿನ್ ಆಗಿ.
* ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿದ ತಕ್ಷಣ ನಿಮ್ಮ ಮೊಬೈಲ್ ಗೆ ಒಂದು ಓಟಿಪಿ ಕಳುಹಿಸಲಾಗುತ್ತದೆ ಅದನ್ನ ಎಂಟರ್ ಮಾಡಿ.
* ಈಗ ನಿಮ್ಮ ವೋಟರ್ ಐಡಿ ಸಂಖ್ಯೆಯನ್ನು ಹಾಕಿ ನಿಮ್ಮ ಹೆಸರನ್ನ ಚೆಕ್ ಮಾಡಿಕೊಳ್ಳಿ.
* ಈಗ ನಿಮ್ಮ ಮತದಾರರ ಚೀಟಿಯ ಎಲ್ಲಾ ಮಾಹಿತಿಗಳು ಕಾಣಿಸುತ್ತದೆ
* ಕೆಳಗೆ ಕಾಣಿಸುವ ಡೌನ್ಲೋಡ್ ಎಪಿಕ್ (Download EPIC) ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
* ಈ ರೀತಿ ಡಿಜಿಟಲ್ ವೋಟರ್ ಐಡಿ (Digital Voter ID) ಡೌನ್ಲೋಡ್ ಮಾಡಿಕೊಳ್ಳಬಹುದು.
ಬಡವರಿಗೆ ಉಚಿತ ವಸತಿ ಯೋಜನೆ! ಅರ್ಜಿ ಸಲ್ಲಿಸಲು ಲಿಂಕ್ ಜೊತೆ ಮಾಹಿತಿ ಇಲ್ಲಿದೆ
NVSP ಎಲ್ಲಿ ನೋಂದಾಯಿಸಿಕೊಳ್ಳುವುದು ಹೇಗೆ?
* ಮೊದಲಿಗೆ https://voters.eci.gov.in/ ಈ ವೆಬ್ ಸೈಟಿಗೆ ಭೇಟಿ ನೀಡಿ
* ಮೇಲ್ಭಾಗದ ಬಲ ಮೂಲೆಯಲ್ಲಿ ಕಾಣಿಸುವ ಸೈನ್ ಅಪ್ ಮೇಲೆ ಕ್ಲಿಕ್ ಮಾಡಿ.
* ಮೊಬೈಲ್ ಸಂಖ್ಯೆ ಇಮೇಲ್ ಐಡಿ ಕ್ಯಾಪ್ಚ ಸಂಖ್ಯೆ ನಮೂದಿಸಿ ಮುಂದುವರಿಸಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
* ಈಗ ನೀವು ನಿಮ್ಮ ಸ್ವಂತ ವಿವರಗಳನ್ನು ನೀಡಬೇಕು ನಂತರ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತಿದೆ ಅದನ್ನು ಇಲ್ಲಿ ನಮೂದಿಸಬೇಕು.
ಈ ರೀತಿ ಮಾಡುವುದರ ಮೂಲಕ ನೀವು ನಿಮ್ಮ ವೋಟರ್ ಐಡಿ ಪಡೆದುಕೊಳ್ಳಬಹುದು.
ಉಚಿತ ಮನೆ ಯೋಜನೆ ಫಲಾನುಭವಿಗಳ ಪಟ್ಟಿ ಬಿಡುಗಡೆ! ನೀವಿನ್ನೂ ಅರ್ಜಿ ಸಲ್ಲಿಸಿಲ್ವಾ?
Download your old Voter ID on mobile online