ಸಮಾಜದಲ್ಲಿ ಪ್ರತಿಯೊಂದು ವರ್ಗವು ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಅನುಭವಿಸಬಾರದು ಹಾಗೂ ಸರ್ಕಾರದಿಂದ (Government) ಬಿಡುಗಡೆಯಾಗುವ ಎಲ್ಲಾ ಯೋಜನೆಯ ಫಲ ಪಡೆದುಕೊಳ್ಳಬೇಕು ಎನ್ನುವುದು ಸರ್ಕಾರದ ಉದ್ದೇಶ.
ಹಾಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಬೇಕಾಗುವ ಯೋಜನೆಗಳನ್ನು (Scheme) ಬಿಡುಗಡೆ ಮಾಡುವುದರ ಮೂಲಕ ಅವರ ದೈನಂದಿನ ಜೀವನ ಸುಗಮವಾಗುವುದಕ್ಕೆ ಸಹಾಯ ಮಾಡುತ್ತದೆ.
ಎಲ್ಲಾ ವರ್ಗದ ಜನರಿಗೂ ಕೂಡ ಸರ್ಕಾರ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು ಪರಿಚಯಿಸಿದೆ, ಅದೇ ರೀತಿ ಕಾರ್ಮಿಕ ವರ್ಗದ ಜನರು ಕೂಡ ಈ ಒಂದು ಕಾರ್ಡ್ ಹೊಂದಿದ್ದರೆ ಸರ್ಕಾರದ ಹಲವಾರು ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು
ಅದರಲ್ಲೂ ಮುಖ್ಯವಾಗಿ ಒಂದೇ ಒಂದು ರೂಪಾಯಿ ಹೂಡಿಕೆಯನ್ನು ಮಾಡದೆ 2 ಲಕ್ಷ ರೂಪಾಯಿಗಳವರೆಗೆ ವಿಮೆ ಸೌಲಭ್ಯ (Insurance) ಕೂಡ ಪಡೆದುಕೊಳ್ಳಬಹುದು. ಹಾಗಾದರೆ ಸರ್ಕಾರ ಬಿಡುಗಡೆ ಮಾಡಿರುವ ಕಾರ್ಡ್ ಯಾವುದು ಇದನ್ನು ಪಡೆದುಕೊಳ್ಳುವುದು ಹೇಗೆ ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ
ಇ- ಶ್ರಮ ಕಾರ್ಡ್; (E-Shram Card)
ಇದು ಎಲ್ಲಾ ಕಾರ್ಮಿಕರಿಗೆ ಕೊಡುವಂತಹ ವಿಶಿಷ್ಟ ಗುರುತಿನ ಕಾರ್ಡ್ ಆಗಿದೆ, ಕಾರ್ಮಿಕರು (Labour) ಉದ್ಯೋಗ ಪಡೆದುಕೊಳ್ಳಲು ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಇ-ಶ್ರಮ ಕಾರ್ಡ್ (e-Shram Card) ಸಹಾಯಕವಾಗುತ್ತದೆ.
ಅದಕ್ಕಾಗಾಗಿಯೇ ಒಂದು ಪೋರ್ಟಲ್ ಕೂಡ ಆರಂಭಿಸಲಾಗಿದ್ದು ಇದರಲ್ಲಿ ನೋಂದಣಿಯಾದ ಕಾರ್ಮಿಕರ ಪ್ರತಿಯೊಂದು ವಯಕ್ತಿಕ ವಿವರ ಹಾಗೂ ಉದ್ಯೋಗದ ಬಗ್ಗೆ ಎಲ್ಲಾ ಮಾಹಿತಿಗಳು ಸಂಗ್ರಹವಾಗಿರುತ್ತದೆ.
ಯಾವುದೇ ಕಾರ್ಮಿಕರು ಈ ಶ್ರಮ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದರೆ ಭಾಗಶಃ ಅಂಗವೈಕಲ್ಯತೆ (partially handicapped) ಉಂಟಾದರೆ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ಪರಿಹಾರವಾಗಿ ಪಡೆಯಬಹುದು.
ಆಕಸ್ಮಿಕ ಮರಣ ಉಂಟಾದರೆ, ಎರಡು ಲಕ್ಷ ರೂಪಾಯಿಗಳ ಪರಿಹಾರ ಕೂಡ ಸಿಗುತ್ತದೆ. ಕಾರ್ಮಿಕರು ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡ ನಂತರ ಒಂದು ವರ್ಷದವರೆಗೆ ಪ್ರೀಮಿಯಂ ಸಿಗುತ್ತದೆ. ಸಾಮಾಜಿಕ ಭದ್ರತಾ ಯೋಜನೆಯ ಲಾಭ ಪಡೆದುಕೊಳ್ಳಲು ಸರ್ಕಾರ ಈ ಒಂದು ಯೋಜನೆಯನ್ನು ಪರಿಚಯಿಸಿದೆ.
ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ
• ಸರ್ಕಾರದ ಈ ಶ್ರಮ ಅಧಿಕೃತ ಪೋರ್ಟಲ್ ಆಗಿರುವ e-Shram @register.eshram.gov.in ನೋಂದಣಿ ಮಾಡಿಕೊಳ್ಳಬಹುದು.
• ಮುಖಪುಟ ವಿವರಗಳನ್ನು ಪರಿಶೀಲಿಸಿ ಅಲ್ಲಿ ನೀವು ನಿಮ್ಮ ಎಲ್ಲಾ ವಿವರಗಳನ್ನು ಹಾಕಿ ನೋಂದಾಯಿಸಿಕೊಳ್ಳಬೇಕು.
• ಆಧಾರ್ ಲಿಂಕ್ ಹಾಗೂ ಮೊಬೈಲ್ ನಂಬರ್ ನಮೂದಿಸಿ, ಕ್ಯಾಪ್ಚ ಕೋಡ್ ಕೂಡ ಹಾಕಬೇಕು.
• ನಂತರ EPFO/ ESIC ಆಯ್ಕೆಗೆ ಹೌದು ಅಥವಾ ಇಲ್ಲ ಎನ್ನುವುದನ್ನು ತಿಳಿಸಬೇಕು.
• ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಕಳುಹಿಸಲಾಗುತ್ತದೆ ಅದನ್ನು ನೀವು ಪೋರ್ಟಲ್ ನಲ್ಲಿ ನಮೂದಿಸಬೇಕು.
• ನಿಮ್ಮ ಎಲ್ಲಾ ಮಾಹಿತಿಗಳು ಕೂಡ ಸರಿಯಾಗಿದ್ದರೆ ಸಲ್ಲಿಸು ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ತೆಗೆದುಕೊಳ್ಳಬಹುದು.
ಈ ಶ್ರಮ ಕಾರ್ಡ್ ಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಲೇಬರ್ ಇನ್ ಹಾಗೂ ಪ್ಯಾಕಿಂಗ್ ಕಾರ್ಮಿಕರು, ಮನೆಯಲ್ಲಿಯೇ ಸಣ್ಣ ಪುಟ್ಟ ಉದ್ಯೋಗ ಮಾಡುತ್ತಿರುವವರು, ತರಕಾರಿ ಹಣ್ಣು ಮಾರಾಟಗಾರರು ,ಕಾರ್ಪೆಂಟರ್ ಗಳು, ಕೃಷಿ ಕೆಲಸಗಾರರು, ಸಣ್ಣ ರೈತರು, ಆಶಾ ಕಾರ್ಯಕರ್ತೆಯರು, ಬೀದಿ ವ್ಯಾಪಾರಿಗಳು, ಆಟೋ ಚಾಲಕರು ಮೊದಲಾದ ಕಾರ್ಮಿಕರು ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ನೋಂದಾಯಿಸಿಕೊಳ್ಳಲು ಅಗತ್ಯವಿರುವ ದಾಖಲೆಗಳು:
ಹೆಸರು ಮತ್ತು ವಿಳಾಸ
ಶೈಕ್ಷಣಿಕ ಅರ್ಹತೆ
ಕುಟುಂಬದ ವಿವರಗಳು
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಜನನ ಪ್ರಮಾಣ ಪತ್ರ
ವಿದ್ಯುತ್ ಬಿಲ್ ಪ್ರತಿ
ಆಧಾರ್ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
ಈ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇದ್ದರೆ ಆನ್ಲೈನ್ ಮೂಲಕ ಈ ಶ್ರಮ ಕಾರ್ಡ್ ಗಾಗಿ ಅಪ್ಲೈ ಮಾಡಬಹುದು. ಕಾರ್ಮಿಕರು ತಮ್ಮ ಬಳಿ ಈ ಶ್ರಮ ಕಾರ್ಡ್ ಹೊಂದಿದ್ದರೆ ಸರ್ಕಾರದ ಹಲವಾರು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು. ಇದರಲ್ಲಿ ಪಿಂಚಣಿ ವ್ಯವಸ್ಥೆ ಕೂಡ ಲಭ್ಯವಿದ್ದು ತಿಂಗಳಿಗೆ ಸಾವಿರದಿಂದ 3000 ವರೆಗೆ ಪಿಂಚಣಿ (Pension) ಪಡೆಯಬಹುದು.
E-Shram Card for Labour Benefits and Eligibility Details
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
E-Shram Card for Labour Benefits and Eligibility Details