Business News

ಆನ್ಲೈನ್ ಮೂಲಕ ಆಸ್ತಿ ನೊಂದಣಿ ಮಾಡಿಕೊಳ್ಳುವ ಸುಲಭ ವಿಧಾನ; ಇಲ್ಲಿದೆ ಎಲ್ಲಾ ಡೀಟೇಲ್ಸ್

ಸದ್ಯ ಕರ್ನಾಟಕದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಮತ್ತು ಉತ್ತರಪ್ರದೇಶ ರಾಜ್ಯಗಳು ಆನ್ಲೈನ್ ಮೂಲಕ ಸರ್ಕಾರ ಆಸ್ತಿ ನೋಂದಣಿಗೆ ಅವಕಾಶ ಮಾಡಿಕೊಟ್ಟಿವೆ.

Property Registration : ನಿಮ್ಮ ಆಸ್ತಿಯ ಮೇಲಿನ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಲು ಆಸ್ತಿ ನೋಂದಣಿ ಬಹಳ ಮುಖ್ಯವಾಗಿರುತ್ತದೆ. ನಾವು ಜೀವಮಾನದಲ್ಲಿ ಮಾಡುವ ಅತಿ ದೊಡ್ಡ ಹೂಡಿಕೆ ಅಂದ್ರೆ ಅದು ಆಸ್ತಿಯ ಮೇಲೆ.

ಕಷ್ಟಪಟ್ಟು ಹಣ ದುಡಿದು ಆಸ್ತಿ ಖರೀದಿ ಮಾಡಿದ ನಂತರ ಅದನ್ನು ಸರಿಯಾದ ರೀತಿಯಲ್ಲಿ ಸೆಕ್ಯೂರ್ ಮಾಡದೆ ಇದ್ದರೆ ಅದು ನಮ್ಮ ಕೈ ತಪ್ಪಿ ಹೋಗಬಹುದು. ಹೀಗಾಗಿ ಕಾನೂನಾತ್ಮಕವಾಗಿ ಆಸ್ತಿ ನಿಮ್ಮದು ಎಂದು ಹೇಳಿಕೊಳ್ಳುವುದಕ್ಕೆ ಕಾನೂನಿನಲ್ಲಿ ಆಸ್ತಿ ನೊಂದಣಿ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಆನ್ಲೈನ್ ಮೂಲಕ ಆಸ್ತಿ ನೊಂದಣಿ ಮಾಡಿಕೊಳ್ಳುವ ಸುಲಭ ವಿಧಾನ

ದೇಶದಲ್ಲಿ ಆಸ್ತಿ ನೋಂದಣಿಗಾಗಿ ಭಾರತೀಯ ನೋಂದಣಿ ಕಾಯ್ದೆ- 1908 ಮತ್ತು ಭಾರತೀಯ ಸ್ಟಾಂಪ್ ಕಾಯಿದೆ-1889 ಮುಖ್ಯವಾಗಿರುವ ಕಾಯ್ದೆಗಳಾಗಿವೆ. ಇದರ ಅಡಿಯಲ್ಲಿ ನೀವು ನಿಮ್ಮ ಆಸ್ತಿಯನ್ನು ಕಾನೂನಾತ್ಮಕವಾಗಿ ರಿಜಿಸ್ಟರ್ ಮಾಡಿಕೊಂಡು ಸೆಕ್ಯೂರ್ ಮಾಡಿಕೊಳ್ಳಬಹುದು.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ರೂ.436 ಕಟ್ ಆಗುವ ಮುನ್ನ ಈ ರೀತಿ ಮಾಡಿ

ಆಸ್ತಿ ನೊಂದಣಿ ಮಾಡಿಕೊಳ್ಳುವುದು ಹೇಗೆ?

ನೀವು ಆನ್ಲೈನ್ (Online) ಮತ್ತು ಆಫ್ ಲೈನ್ (Offline) ಮೂಲಕ ಆಸ್ತಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

* ಆನ್ಲೈನಲ್ಲಿ ಮಾಡಿಕೊಳ್ಳಲು ಮೊದಲು, ಆಸ್ತಿ ಮೌಲ್ಯಮಾಪನ ಸರ್ಕಲ್ ದರವನ್ನು ನಿರ್ಧರಿಸಿ ನಂತರ ಆಸ್ತಿ ಮೌಲ್ಯ ಮಾಡಿ.

* ಸ್ಟ್ಯಾಂಪ್ ಡ್ಯೂಟಿ ಹಾಗೂ ಇತರ ನೋಂದಣಿ ಶುಲ್ಕವನ್ನು ಆಸ್ತಿ ಮೌಲ್ಯಮಾಪನ ಮಾಡಿದ ನಂತರ ನಿರ್ಧರಿಸಲಾಗುವುದು

* ನಾನ್ ಜುಡಿಶಿಯಲ್ ಪೇಪರನ್ನು ಮಾರಾಟಗಾರರಿಂದ ಖರೀದಿಸಿ

* ನೋಂದಾಯಿತ ವಕೀಲರಿಂದ ಮಾರಾಟ ಪತ್ರವನ್ನು ತೆಗೆದುಕೊಳ್ಳಬೇಕು. ಇದಕ್ಕೆ ಎರಡು ಪಕ್ಷದವರು ಅಂದರೆ ಮಾರಾಟಗಾರರು ಮತ್ತು ಖರೀದಿ ಮಾಡುವವರು ಒಟ್ಟಿಗೆ ಸಹಿ ಹಾಕಬೇಕು

* ನಂತರ ಸಬ್ ರಿಜಿಸ್ಟರ್ ಕಚೇರಿಗೆ ಹೋಗಿ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಬಯೋಮೆಟ್ರಿಕ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು.

* ಬಳಿಕ ನೋಂದಣಿ ಶುಲ್ಕವನ್ನು ಪಾವತಿಸಬೇಕು

* ನಂತರ ದಾಖಲೆಗಳನ್ನು ಪರಿಶೀಲನೆ ಮಾಡಿ ನೋಂದಣಿ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು

* 7ರಿಂದ 15 ದಿನಗಳಲ್ಲಿ ನಿಮ್ಮ ಆಸ್ತಿ ನೋಂದಣಿ ಆಗುತ್ತದೆ.

HDFC ಬ್ಯಾಂಕ್ ನಲ್ಲಿ 11 ಲಕ್ಷ ಸಾಲಕ್ಕೆ ಎಷ್ಟು EMI ಕಟ್ಟಬೇಕು? ಇಲ್ಲಿದೆ ಡೀಟೇಲ್ಸ್

ಆನ್ಲೈನ್ ನಲ್ಲಿ ಹೀಗೆ ರಿಜಿಸ್ಟರ್ ಮಾಡಿ

* ಮೊದಲನೆಯದಾಗಿ ಆನ್ಲೈನ್ ರಿಜಿಸ್ಟರ್ ಪೋರ್ಟಲ್ ಗೆ ಭೇಟಿ ನೀಡಿ

* ಸ್ಟ್ಯಾಂಪ್ ಡ್ಯೂಟಿ ಮೊತ್ತವನ್ನು ಲೆಕ್ಕಾಚಾರ ಮಾಡಿಕೊಳ್ಳಿ

* ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿ ಮಾಡಬಹುದು

* ನಂತರ ಬಯೋಮೆಟ್ರಿಕ್ ಗಾಗಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಿ

* ಬಯೋಮೆಟ್ರಿಕ್ ಗೆ ನೀವು ಆನ್ಲೈನ್ ನಲ್ಲಿ ಅಪ್ಲೈ ಮಾಡಿದ ಅರ್ಜಿ ಫಾರಂ ಹಾಗೂ ಆಸ್ತಿಗೆ ಸಂಬಂಧ ಪಟ್ಟ ಎಲ್ಲಾ ದಾಖಲೆಗಳನ್ನು ತೋರಿಸಬೇಕು.

ಸದ್ಯ ಕರ್ನಾಟಕದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಮತ್ತು ಉತ್ತರಪ್ರದೇಶ ರಾಜ್ಯಗಳು ಆನ್ಲೈನ್ ಮೂಲಕ ಆಸ್ತಿ ನೋಂದಣಿಗೆ ಅವಕಾಶ ಮಾಡಿಕೊಟ್ಟಿವೆ.

ಆಸ್ತಿ ನೋಂದಣಿ ಮಾಡಿಕೊಳ್ಳುವುದರಿಂದ ಕಾನೂನಾತ್ಮಕ ಮಾಲೀಕತ್ವವನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ ಯಾವುದೇ ರೀತಿಯ ವಂಚನೆ ಆಗದಂತೆ ನೋಡಿಕೊಳ್ಳಬಹುದು.

Easy way to register property online

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories