ಬ್ಯಾಂಕ್ ಖಾತೆಯಲ್ಲಿ 1 ರೂಪಾಯಿ ಇಲ್ಲದೆ ಇದ್ರೂ, 15 ಸಾವಿರವರೆಗೆ ಗೂಗಲ್ ಪೇ ಮಾಡಬಹುದು! ಹೇಗೆ ಗೊತ್ತಾ?
ನೀವು ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಇದ್ದಾಗಲೂ ಕೂಡ ವೈಯಕ್ತಿಕ ಸಾಲವನ್ನು (Personal Loan) ಜಿಪೇ ಮೂಲಕ ಪಡೆದುಕೊಳ್ಳಬಹುದಾಗಿದೆ.
ಇನ್ನು ಮುಂದೆ ಸಾಲಕ್ಕಾಗಿ ಬ್ಯಾಂಕ್ನಿಂದ ಬ್ಯಾಂಕ್ ಗೆ (Bank) ಅಲೆದಾಡಬೇಕಿಲ್ಲ. ಹೆಚ್ಚು ದಾಖಲೆಗಳನ್ನು ಕೊಟ್ಟು ಸಾಲಕ್ಕಾಗಿ ಪರಿತಪಿಸಬೇಕಿಲ್ಲ. ನಿಮ್ಮ ಖಾತೆಯಲ್ಲಿ ಒಂದು ರೂಪಾಯಿ ಇಲ್ಲದೆ ಇದ್ದರೂ 15 ಸಾವಿರ ರೂಪಾಯಿಗಳವರೆಗೆ ಸಾಲ ಸೌಲಭ್ಯ (Loan) ಪಡೆಯಬಹುದು. ಯುಪಿಐ (UPI) ಮೂಲಕ.
ಡಿಜಿಟಲೀಕರಣದತ್ತ ಭಾರತ!
ಇಂದು ನಾವು ಯಾವುದೇ ಹಣಕಾಸಿನ ವ್ಯವಹಾರ (financial transaction) ಮಾಡುವುದಿದ್ದರೂ ನಗದು ವ್ಯವಹಾರಕ್ಕಿಂತಲೂ ಹೆಚ್ಚಾಗಿ ಆನ್ಲೈನ್ (online) ಮೂಲಕವೇ ಹಣಕಾಸಿನ ವಹಿವಾಟು ನಡೆಸುತ್ತೇವೆ.
ಅಂಗಡಿಗಳಲ್ಲಿ ಮಾಡುವ ಪೇಮೆಂಟ್ (payment) ನಿಂದ ಹಿಡಿದು ದೊಡ್ಡ ದೊಡ್ಡ ವಸ್ತುಗಳ ಖರೀದಿಗೆ ಪಾವತಿ ಮಾಡುವುದು ಕೂಡ ಆನ್ಲೈನ್ ಮೂಲಕವೇ ಆಗುತ್ತದೆ. ಗೂಗಲ್ ಪೇ (Google pay) , ಫೋನ್ ಪೇ (phonePe) , ಪೇಟಿಎಂ (Paytm) ಮೊದಲಾದ ಯುಪಿಐ ಪೇಮೆಂಟ್ ಗಳು ನಮ್ಮ ಎಲ್ಲಾ ಹಣಕಾಸು ವ್ಯವಹಾರವನ್ನು ಸುಲಭವಾಗಿಸಿವೆ.
ಈ ಕೋಳಿ ಸಾಕಿದ್ರೆ ತಿಂಗಳಿಗೆ ಲಕ್ಷ ಆದಾಯ ಫಿಕ್ಸ್! ಈ ಕೋಳಿಯ ಒಂದು ಮೊಟ್ಟೆ 100 ರೂಪಾಯಿ
ಯುಪಿಐ ನಲ್ಲಿ ಪಡೆದುಕೊಳ್ಳಿ ಸಾಲ!
ನೀವು ಗೂಗಲ್ ಪೇ ಅಥವಾ ಇತರ UPI ಮೂಲಕ ಹಣಕಾಸು ವ್ಯವಹಾರ ನಡೆಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ನೀವು ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಇದ್ದಾಗಲೂ ಕೂಡ ವೈಯಕ್ತಿಕ ಸಾಲವನ್ನು (Personal Loan) ಜಿಪೇ ಮೂಲಕ ಪಡೆದುಕೊಳ್ಳಬಹುದಾಗಿದೆ. DMI finance ಜೊತೆಗೆ ಕೈಜೋಡಿಸಿರುವ ಗೂಗಲ್ ಪೇ ಈಗ ತನ್ನ ಗ್ರಾಹಕರಿಗೆ ಹಣಕಾಸು ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.
ಗೂಗಲ್ ಪೇ ನಿಂದ ಪಡೆಯಿರಿ 15,000
ಗೂಗಲ್ ಪೇ ಭಾರತದ ಇತರ ಹಲವು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಯೊಂದಿಗೆ ಕೈಜೋಡಿಸಿದ್ದು ಸುಲಭವಾಗಿ ಸಾಲ ಸೌಲಭ್ಯ ನೀಡುವ ಪರಿಪಾಠ ಆರಂಭಿಸಿದೆ. ಸಣ್ಣ ವ್ಯಾಪಾರಿಗಳು ಈ ಸಾಲ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು.
ಸ್ಯಾಚೆಟ್ ಸಾಲವನ್ನು (sachet loan) ಗೂಗಲ್ ಪೇ ನೀಡುತ್ತಿದೆ. ಹದಿನೈದು ಸಾವಿರ ರೂಪಾಯಿಗಳ ಸಾಲ ಪಡೆದುಕೊಂಡರೆ ಪ್ರತಿ ತಿಂಗಳು ಕೇವಲ 111 ರೂಪಾಯಿಗಳ EMI ಕಟ್ಟಬೇಕು.
ವೈಯಕ್ತಿಕ ಸಾಲವನ್ನು ನೀಡಲು ಗೂಗಲ್ ಪೇ ಆಕ್ಸಿಸ್ ಬ್ಯಾಂಕ್ (Axis Bank) ನ ಜೊತೆಗೂ ಕೈಜೋಡಿಸಿದೆ. ಹಾಗಾಗಿ ಆಕ್ಸೆಸ್ ಬ್ಯಾಂಕ್ ನ ಗ್ರಾಹಕರು ಕೂಡ ಸುಲಭವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಬ್ಯಾಂಕ್ ನಲ್ಲಿ 50,000 ಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡುವ ಎಲ್ಲರಿಗೂ ಹೊಸ ರೂಲ್ಸ್
ಇಂದು ಗೂಗಲ್ ಪೇ ಮಾತ್ರ ಅಲ್ಲದೆ ಪೇಟಿಎಂ ನಂತಹ ಕಂಪನಿಗಳು ಕೂಡ ಗ್ರಾಹಕರಿಗೆ ಅನುಕೂಲವಾಗುವಂತಹ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ. ಇನ್ನು ಈ ರೀತಿ ವ್ಯಾಪಾರ ಮಾಡಲು ಪಡೆದುಕೊಳ್ಳುವ ಈ ವೈಯಕ್ತಿಕ ಸಾಲವನ್ನೂ ಆನ್ಲೈನ್ ಮೂಲಕ ಒಂದೇ ಒಂದು ಕ್ಲಿಕ್ ನಿಂದ ಪಡೆದುಕೊಳ್ಳಬಹುದು. ನೀವು ಕೊಡುವ ಮಾಹಿತಿಗಳು ಸರಿಯಾಗಿದ್ದರೆ ಕ್ಷಣಮಾತ್ರದಲ್ಲಿ ನಿಮ್ಮ ಖಾತೆಗೆ ಸಾಲದ ಹಣ ಜಮಾ ಆಗುತ್ತದೆ.
ಪೇ ಲೇಟರ್ ಸೌಲಭ್ಯ
ವ್ಯಾಪಾರಿಗಳು ಬಂಡವಾಳದ ಅವಶ್ಯಕತೆ ಇರುವಾಗ ePayLater ಸಹಭಾಗಿತ್ವದಲ್ಲಿ, Google Pay ವ್ಯಾಪಾರಿಗಳಿಗೆ ಕ್ರೆಡಿಟ್ ಲೈನ್ ಸೌಲಭ್ಯವನ್ನು ನೀಡುತ್ತಿದೆ. ವ್ಯಾಪಾರಿಗಳು ತಮ್ಮ ಸ್ಟಾಕ್ ಮತ್ತು ಸರಬರಾಜುಗಳನ್ನು ಖರೀದಿಸಲು ಆನ್‌ಲೈನ್ ಮತ್ತು ಆಫ್‌ಲೈನ್ ವಿತರಕರಲ್ಲಿ ಇದನ್ನು ಬಳಸಬಹುದು.
Even if you don’t have 1 rupee in your bank account, you can Google Pay up to 15 thousand