ಯಾವ್ಯಾವ ಕಾರಣಕ್ಕೆ ಸಿಗುತ್ತೆ ಪರ್ಸನಲ್ ಲೋನ್ ಗೊತ್ತಾ? 99% ಜನಕ್ಕೆ ಗೊತ್ತಿಲ್ಲ

ವೈಯಕ್ತಿಕ ಸಾಲಗಳಿಗೆ ಸಂಬಂಧಿಸಿದ ಎಲ್ಲಾ ಜನಪ್ರಿಯ ತಪ್ಪು ಕಲ್ಪನೆಗಳ ಬಗ್ಗೆ ತಿಳಿಯಿರಿ. ಸಾಲ ಪಡೆಯಲು ಬೇಕಾದ ಅರ್ಹತೆಗಳು, ಕ್ರೆಡಿಟ್ ಸ್ಕೋರ್ ಪ್ರಾಮುಖ್ಯತೆ ಹಾಗೂ ಇನ್ನಿತರ ವಿಚಾರಗಳ ಮಾಹಿತಿ ಇಲ್ಲಿದೆ

  • ಪರ್ಸನಲ್ ಲೋನ್ ಪಡೆಯಲು ತುರ್ತು ಪರಿಸ್ಥಿತಿ ಅಗತ್ಯವಿಲ್ಲ
  • ಉತ್ತಮ ಕ್ರೆಡಿಟ್ ಸ್ಕೋರ್ ಕಡಿಮೆ ಬಡ್ಡಿದರಕ್ಕೆ ಸಹಾಯ ಮಾಡುತ್ತದೆ
  • ಸಂಬಳಧಾರಿಗಳಷ್ಟೇ ಪರ್ಸನಲ್ ಲೋನ್ ಪಡೆಯಬಹುದಾ?

Personal Loan : ಪರ್ಸನಲ್ ಲೋನ್ ತುರ್ತು ಸಂದರ್ಭಗಳಲ್ಲಿ ಮಾತ್ರ ನೀಡಲಾಗುತ್ತದೆ ಎಂದು ಹಲವರು ತಪ್ಪಾಗಿ ಅಂದುಕೊಳ್ಳುತ್ತಾರೆ. ಆದರೆ, ವೈಯಕ್ತಿಕ ಸಾಲವು ಮದುವೆ ಖರ್ಚು, ಮನೆ ನಿರ್ವಹಣೆ, ವ್ಯವಹಾರ ಪ್ರಾರಂಭ (Own Business) ಸೇರಿದಂತೆ ವಿವಿಧ ಕಾರಣಗಳಿಗೆ ಲಭ್ಯವಿದೆ.

ನೀವು ಸಾಲವನ್ನು ಏಕೆ ಪಡೆಯುತ್ತಿದ್ದೀರಿ, ಯಾವ ಕಾರಣ? ಆ ಹಣವನ್ನು ಯಾವ ಉದ್ದೇಶಕ್ಕೆ ಬಳಸುತ್ತಿದ್ದೀರಿ ಎಂದು ಬ್ಯಾಂಕುಗಳು ಕೇಳುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಸಾಲಗಳು (Personal Loans) ಸುಲಭವಾಗಿ ಲಭ್ಯವಿದೆ. ಉತ್ತಮ ಕ್ರೆಡಿಟ್ ಸ್ಕೋರ್‌ಗಳನ್ನು ಹೊಂದಿರುವವರಿಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಬಡ್ಡಿದರ ರಿಯಾಯಿತಿಗಳನ್ನು ಘೋಷಿಸುತ್ತಿವೆ. ಇದರಿಂದಾಗಿ ಕೆಲವು ಜನರು ಅಗತ್ಯವಿರಲಿ ಅಥವಾ ಇಲ್ಲದಿರಲಿ ವೈಯಕ್ತಿಕ ಸಾಲಗಳನ್ನು ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ: ಇದೆ ಫಸ್ಟ್ ಟೈಮ್ ಕಡಿಮೆ ಬೆಲೆಗೆ ಐಫೋನ್ ಬಿಡುಗಡೆ! ಭಾರತದಲ್ಲಿ ಬೆಲೆ ಎಷ್ಟು?

ಡಿಜಿಟಲೀಕರಣದ ಪ್ರಭಾವ

Digital

ಇತ್ತೀಚಿನ ದಿನಗಳಲ್ಲಿ ಡಿಜಿಟಲೀಕರಣದ ಪ್ರಭಾವದಿಂದಾಗಿ ವೈಯಕ್ತಿಕ ಸಾಲವನ್ನು ಪಡೆಯುವುದು ಹೆಚ್ಚು ಸುಲಭವಾಗಿದೆ. ತುರ್ತು ಸಂದರ್ಭಗಳಲ್ಲಿ ಹಣದ ಅವಶ್ಯಕತೆ ಎದುರಾಗುವ ಸಂದರ್ಭದಲ್ಲಿ, ಈ ಸಾಲಗಳು ಹೆಚ್ಚು ಉಪಯುಕ್ತವಾಗುತ್ತವೆ. ಆದರೆ, ಸಾಲದ ಸುತ್ತ ಹಲವಾರು ತಪ್ಪು ಕಲ್ಪನೆಗಳು ಹರಿದಾಡುತ್ತವೆ, ಅವುಗಳ ಬಗ್ಗೆ ಸ್ಪಷ್ಟತೆ ಇರಬೇಕಾಗಿದೆ.

ಕ್ರೆಡಿಟ್ ಸ್ಕೋರ್ ಪ್ರಾಮುಖ್ಯತೆ

Credit Score

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಉತ್ತಮ ಕ್ರೆಡಿಟ್ ಸ್ಕೋರ್ (Credit Score) ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡುತ್ತವೆ. ಸಾಮಾನ್ಯವಾಗಿ 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಕಡಿಮೆ ಬಡ್ಡಿದರ, ಸಂಸ್ಕರಣಾ ಶುಲ್ಕದಲ್ಲಿ ರಿಯಾಯಿತಿ ಮುಂತಾದ ಪ್ರಯೋಜನಗಳು ದೊರೆಯುತ್ತವೆ. ಆದರೆ, 750 ಕ್ಕಿಂತ ಕಡಿಮೆ ಕ್ರೆಡಿಟ್ ಸ್ಕೋರ್ ಇರುವವರು ಕೂಡ ಸ್ಥಿರ ಆದಾಯದ ಮೂಲ ಮತ್ತು ಉತ್ತಮ ವೃತ್ತಿಜೀವನವನ್ನು ಹೊಂದಿದ್ದರೆ ಸಾಲ ಪಡೆಯಬಹುದು.

ಇದನ್ನೂ ಓದಿ: 5 ಲಕ್ಷ ಇಟ್ಟರೆ 10 ಲಕ್ಷ ಸಿಗುವ ಪೋಸ್ಟ್ ಆಫೀಸ್ ಸ್ಕೀಮ್ ಇದು! ಒನ್ ಟು ಡಬಲ್ ಆದಾಯ

ತಪ್ಪು ಕಲ್ಪನೆಗಳು

Personal Loans

ಕೆಲವರು ಈಗಾಗಲೇ ಸಾಲ ಪಡೆದಿದ್ದರೆ ಮತ್ತೊಂದು ಸಾಲಕ್ಕೆ ಅರ್ಹರಾಗಲಾರರು ಎಂದುಕೊಳ್ಳುತ್ತಾರೆ. ಆದರೆ ಅದು ತಪ್ಪು. ನೀವು ಹಿಂದಿನ ಸಾಲವನ್ನು ಸಮಯಕ್ಕೆ ತಕ್ಕಂತೆ ಮರುಪಾವತಿಸುವ (Loan Re Payment) ಆರ್ಥಿಕ ಸಾಮರ್ಥ್ಯವನ್ನು ಹೊಂದಿದ್ದರೆ, ಮತ್ತೊಂದು ಸಾಲ ಪಡೆಯುವುದು ಸಂಪೂರ್ಣ ಸಾಧ್ಯವಾಗಿದೆ. ಇಲ್ಲಿ ನಿಮ್ಮ ಸಾಲ-ಆದಾಯ ಅನುಪಾತವನ್ನು ಬ್ಯಾಂಕ್ ಪರಿಶೀಲಿಸುತ್ತದೆ. ಆದರೆ ಅಗತ್ಯವಿದ್ದಾಗ ಮಾತ್ರ ಸಾಲ ಪಡೆಯುವುದು ಬುದ್ದಿವಂತಿಕೆಯಾಗಿದೆ.

ಅರ್ಹತೆ ಮತ್ತು ಲಭ್ಯತೆ

Personal Loan

ಸಾಲ ಸಿಗುವುದು ಸಂಬಳ ಪಡೆಯುವವರಿಗಷ್ಟೇ ಎಂದು ಹಲವರು ಭಾವಿಸುತ್ತಾರೆ. ಆದರೆ, ಸ್ವಯಂ ಉದ್ಯೋಗಿಗಳು, ಉದ್ಯಮಿಗಳು, ತಂತ್ರಜ್ಞರು ಮತ್ತು ನೀವು ಕೂಡ ವೈಯಕ್ತಿಕ ಸಾಲಕ್ಕೆ (Personal Loan) ಅರ್ಹರಾಗುತ್ತೀರಿ. ಸ್ಥಿರ ಆದಾಯದ ಮೂಲ ಇರಬೇಕಾಗುತ್ತದೆ ಅಷ್ಟೇ..

ಇದನ್ನೂ ಓದಿ: ಕಡಿಮೆ ಬೆಲೆಗೆ ಸಕತ್ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇವು! ಭಾರೀ ಡಿಮ್ಯಾಂಡ್

ಕ್ರೆಡಿಟ್ ಕಾರ್ಡ್‌ / ವೈಯಕ್ತಿಕ ಸಾಲ

Credit card vs Personal Loan

ವೈಯಕ್ತಿಕ ಸಾಲಗಳು ಕ್ರೆಡಿಟ್ ಕಾರ್ಡ್ (Credit Card) ಸಾಲಗಳಿಗಿಂತ ಉತ್ತಮ ಆಯ್ಕೆಗಳಾಗಿವೆ. ಕ್ರೆಡಿಟ್ ಕಾರ್ಡ್ ಸಾಲಗಳಿಗೆ ವಾರ್ಷಿಕ 36 ರಿಂದ 45% ಬಡ್ಡಿ ವಿಧಿಸಲಾಗುತ್ತದೆ, ಆದರೆ ವೈಯಕ್ತಿಕ ಸಾಲಗಳಿಗೆ ಬಡ್ಡಿದರ ಅದಕ್ಕಿಂತ ಕಡಿಮೆಯಿರುತ್ತದೆ. ಆನ್‌ಲೈನ್ ಅಗ್ರಿಗೇಟರ್ ವೆಬ್‌ಸೈಟ್‌ಗಳ ಮೂಲಕ ಕಡಿಮೆ ಬಡ್ಡಿದರ ಹೊಂದಿರುವ ಬ್ಯಾಂಕುಗಳನ್ನು (Banks) ಹೋಲಿಸಿ, ಸೂಕ್ತ ಸಾಲವನ್ನು ಆಯ್ಕೆ ಮಾಡಬಹುದು.

Facts About Personal Loans You Should Know

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories