ಸಿಹಿ ಸುದ್ದಿ, ರೈತರಿಗೂ ಸಿಗುತ್ತೆ ಕ್ರೆಡಿಟ್ ಕಾರ್ಡ್! ಸಾಲದ ಮೇಲಿನ ಬಡ್ಡಿ ಕೂಡ ಸಿಕ್ಕಾಪಟ್ಟೆ ಕಡಿಮೆ
Kisan Credit Card : ರೈತರು ಕೃಷಿ ಮಾಡುವುದಕ್ಕೆ ಹಣದ ಅವಶ್ಯಕತೆ ಇರುತ್ತದೆ. ಕೃಷಿಯ ವಿವಿಧ ಹಂತದಲ್ಲಿ ರೈತರು ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ಎಲ್ಲಾ ಸಮಯದಲ್ಲಿ ಅವರ ಬಳಿ ಹಣ ಇರುವುದಿಲ್ಲ. ಹಣ ಹೊಂದಿಸುವುದಕ್ಕೆ ಕಷ್ಟಪಡುವ ರೈತರು, ಸಾಲದ (Loan) ಮೊರೆ ಹೋಗಬೇಕಾಗುತ್ತದೆ.
ಕೆಲವು ಸಾರಿ ಸಾಲ ಪಡೆಯುವುದಕ್ಕೆ ಇನ್ಯಾರನ್ನೋ ಕೇಳಿ, ಹೆಚ್ಚಿನ ಬಡ್ಡಿ ಕಟ್ಟಬೇಕಾಗಿ ಬರುತ್ತದೆ. ಅದರಿಂದ ರೈತರಿಗೆ ಸಾಲದ ಹೊರೆ ಅಂಟಿಕೊಳ್ಳುತ್ತದೆ.. ಈ ರೀತಿ ಆಗಬಾರದು ಎಂದು ಸರ್ಕಾರವೇ ರೈತರಿಗೆ ಹೊಸದೊಂದು ಸೌಲಭ್ಯವನ್ನು ಜಾರಿಗೆ ತಂದಿದೆ.
ಇದು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಆಗಿದೆ. ಈ ಒಂದು ಸೌಲಭ್ಯವನ್ನು ರೈತರು (Farmer) ಪಡೆದು, ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸಿಕೊಂಡರೆ ಅವರಿಗೆ ಕೃಷಿ ವಿಷಯಕ್ಕೆ ತುರ್ತು ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದಾಗ ಯಾರ ಬಳಿಯೂ ಹಣ ಕೇಳುವ ಅಗತ್ಯ ಬರುವುದಿಲ್ಲ. ಬದಲಾಗಿ ಕ್ರೆಡಿಟ್ ಕಾರ್ಡ್ ಬಳಸಿ Loan ಪಡೆದುಕೊಳ್ಳಬಹುದು. ಇದು ರೈತರಿಗೆ ಹೆಚ್ಚಿನ ಅನುಕೂಲ ನೀಡುತ್ತದೆ.
ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಕೊಡೋ ಬ್ಯಾಂಕ್ ಗಳಿವು! 20 ಲಕ್ಷಕ್ಕೆ ಬಡ್ಡಿ, ಎಎಂಐ ಲೆಕ್ಕಾಚಾರ ಇಲ್ಲಿದೆ
ರೈತರು ಈ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸಿಕೊಂಡು ಪಡೆಯುವ ಸಾಲಕ್ಕೆ ಬಡ್ಡಿ ಕೂಡ ಬಹಳ ಕಡಿಮೆ ಇರುತ್ತದೆ. ಇದರಿಂದ ರೈತರು ಬಡ್ಡಿ ಮತ್ತು ಸಾಲದ ಹೊರೆಯಿಂದ ಮುಕ್ತಿ ಪಡೆಯಬಹುದು. ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಸೌಲಭ್ಯವನ್ನು ರಾಷ್ಟ್ರೀಯ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ (Bank) ಶುರು ಮಾಡಿದೆ. ನಮ್ಮ ದೇಶದ ಎಲ್ಲಾ ರೈತರು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅದು ಹೇಗೆ ಎಂದು ಪೂರ್ತಿಯಾಗಿ ತಿಳಿಯೋಣ..
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು:
*ರೈತರ ಅಡ್ರೆಸ್ ಪ್ರೂಫ್
*ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ನಿಮ್ಮ ಜಮೀನಿನ ದಾಖಲೆಗಳು
*ಪಾಸ್ ಪೋರ್ಟ್ ಸೈಜ್ ಫೋಟೋ
ಇದಿಷ್ಟು ದಾಖಲೆಗಳು ಬೇಕಾಗುತ್ತದೆ. ಈ ಎಲ್ಲಾ ದಾಖಲೆಯನ್ನು ತೆಗೆದುಕೊಂಡು ಕೃಷಿ ಬ್ಯಾಂಕ್ ಗೆ ಹೋಗಿ, ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅಪ್ಲೈ ಮಾಡಬಹುದು.
ಎಟಿಎಂನಲ್ಲಿ ನಕಲಿ ನೋಟು ಅಥವಾ ಡ್ಯಾಮೇಜ್ ನೋಟ್ ಬಂದ್ರೆ ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವ ವಿಧಾನ:
ನೀವು ರೈತರಾಗಿದ್ದು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬೇಕು ಎಂದರೆ, ಈ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್ ಬ್ರಾಂಚ್ ಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಇಲ್ಲಿ ನೀವು ಕಿಸಾನ್ ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಅರ್ಜಿ ಸಲ್ಲಿಸಬೇಕಾಗುತ್ತದೆ.
ಸ್ಟೇಟ್ ಬ್ಯಾಂಕ್ ನಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗ್ತಾಯಿದೆ ಅತಿಹೆಚ್ಚು ಬಡ್ಡಿ! ಗ್ರಾಹಕರಿಗೆ ಸೂಪರ್ ಆಫರ್
ಅರ್ಜಿ ಸಲ್ಲಿಸಿ 15 ದಿನಗಳ ವೇಳೆಗೆ ನಿಮಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನಿಮ್ಮ ಕೈಸೇರುತ್ತದೆ. ಇದನ್ನು ಬಳಸಿ ತುರ್ತು ಪರಿಸ್ಥಿತಿಯಲ್ಲಿ Loan ಪಡೆಯಬಹುದು.
farmers also get credit cards, The interest on the loan is also very low